Homeಮುಖಪುಟಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

ಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

- Advertisement -
- Advertisement -

-1-

’ಇಲ್ಲೇ ಹತ್ತಿರದಲ್ಲಿ ಒಂದು ಗುಡಿ ಇದೆ. ಅದರ ಮುಂದೆ ವಾಕಿಂಗ್ ಮಾಡುವಷ್ಟು ಜಾಗವಿದೆ. ಇವತ್ತು ಸಂಜೆ ಅಲ್ಲಿಗೆ ಹೋಗೋಣ’ ಅಂತ ಮಂಜುಗೆ ಗಂಟುಬಿದ್ದಿದ್ದೆ. ಆಫೀಸ್‌ನಿಂದ ಬಂದ ಕೂಡಲೇ ಆಕೆ ’ಹೋಗೋಣ ಬನ್ನಿ’ ಅಂದಳು. ಹೊರಟೆವು. ಅಲ್ಲಿ ಅಕ್ಕತಂಗಿಯರ ಹೆಸರಿನಲ್ಲಿ ಎರಡು ಗುಡಿಗಳಿದ್ದವು. ಅವು ಗುಡಿಯ ಹೆಸರಿನಂತೆ ಸಣ್ಣದಾಗೇನು ಇರಲಿಲ್ಲ. ಮೊದಲು ಸಣ್ಣಾಕಿಯ ಗುಡಿಯೊಳಗೆ ಹೋದೆವು. ಸ್ಪೀಕರ್‌ಗಳಲ್ಲಿ ಮಾರ್ದನಿಸುವ ’ಶಿಷ್ಟ’ ರಾಗದ ಸ್ತುತಿಗಳು ಅಪ್ಪಳಿಸಲಿಲ್ಲ. ಯಾವುದೇ ಸಂಸ್ಕೃತ ಮಂತ್ರಗಳಿರಲಿಲ್ಲ. ಗರ್ಭಗುಡಿಯೊಳಗೆ ಸಣ್ಣ ಹುಡುಗನೊಬ್ಬ ಪೂಜಾರಿಯಂತೆ ಕೂತಿದ್ದ. ಅವನಿಗೇನು ಕೆಲಸವಿದ್ದಂತೆ ಕಾಣಲಿಲ್ಲ. ಬರುತ್ತಿದ್ದ ಭಕ್ತರೆಲ್ಲರೂ ಸೀದಾ ಗರ್ಭಗುಡಿಯ ಒಳಗೇ ಹೋಗಿ ನಮಸ್ಕರಿಸುತ್ತಿದ್ದರು. ನಾವಿಬ್ಬರು ’ಇಂತಹ ದೊಡ್ಡ ಆಲಯದಲ್ಲಿ ಇಷ್ಟು ಸ್ವಾತಂತ್ರ್ಯವಿದೆಯಲ್ಲ?’ ಅಂಥ ದಂಗಾದೆವು. ಗರ್ಭಗುಡಿಯೊಳಗೆ ಬಗ್ಗಿ ನೋಡಿದೆವು. ಐದಾರು ಜನ ಹೆಂಗಸರು ಅಪ್ಪಣೆ ಕೇಳುವಂತೆ ಕೂತಿದ್ದರು. ಕೆಲವರು ಬೇಡಿಕೆಯಿಟ್ಟು ಧ್ಯಾನಸ್ಥರಾಗಿದ್ದರು. ನಾನು ’ಇಲ್ಲಿ ಸಾಕು ಬಾ. ದೊಡ್ಡಾಕಿಯ ಗುಡಿಯೊಳಗೆ ಹೋಗೋಣ’ ಅಂದೆ. ದೊಡ್ಡಾಕಿಯ ಗರ್ಭಗುಡಿಯೊಳಗೆ ಹೆಂಗಸರು ಗಂಡಸರು ಹೀಗೆ ಹತ್ತಾರು ಜನ ಕೂತ್ತಿದ್ದರು. ಅವರಲ್ಲಿ ಬೇಡಿಕೊಳ್ಳುವಂತೆ ಕೈಮುಗಿದು ಕೂತವರಿದ್ದರು. ಮೊಣಕಾಲೂರಿ ನಮಸ್ಕರಿಸುತ್ತಿದ್ದವರಿದ್ದರು. ದೇವಿಯನ್ನೇ ದಿಟ್ಟಿಸಿ ನೋಡುತ್ತಾ ಏನೇನೋ ಕೇಳುವವರಿದ್ದರು. ಹೀಗೆ ಡೈರಕ್ಟಾಗಿ ದೇವಿ ಮತ್ತು ಭಕ್ತರ ನಡುವೆ ಸಂಭಾಷಣೆ ನಡೆಯುತ್ತಿತ್ತು. ಇವರ ನಡುವೆ ನಮಗೆ ಅದ್ಭುತವೊಂದು ಕಾಣಿಸಿತು! ಬುರ್ಖಾಧಾರಿ ಹೆಣ್ಣು ಮಗಳೊಬ್ಬಳು ತನ್ನ ಕೂಸು ಮತ್ತು ತಾಯಿಯೊಂದಿಗೆ ಒಳಗಿದ್ದಳು. ಆಕೆಯ ತಾಯಿ ಮಗು ಆಡಿಸುತ್ತಿದ್ದಳು. ಅವಳು ದೇವಿಯ ಮುಂದಿದ್ದ ಕಟ್ಟಿಗೆಯಿಂದ ಮಾಡಿದ ಪೆಟ್ಟಿಗೆಗೆ ನಮಸ್ಕರಿಸಿ, ಎತ್ತುತ್ತಾ ಇಳಿಸುತ್ತಾ, ಪುನಃ ನಮಸ್ಕರಿಸುವಲ್ಲಿ ತಲ್ಲೀನಳಾಗಿದ್ದಳು. ಆಕೆಯನ್ನು ಮಾತಾಡಿಸಬೇಕೆಂದುಕೊಂಡೆವು. ಆದರೆ ಆಕೆಯ ಭಕ್ತಿಗೇಕೆ ಅಡ್ಡಿಪಡಿಸಬೇಕೆಂದು ಸುಮ್ಮನಾದೆವು.

ನಾವು ಹಿಂದೆಲ್ಲಾ ನೋಡಿದಂತಹ ದೇವಸ್ಥಾನಗಳಲ್ಲಿ, ದೇಹಕ್ಕೆ ತೊಟ್ಟ ಮೇಲ್ಭಾಗದ ವಸ್ತ್ರವನ್ನು ತೆಗೆದು ಬಗಲಲ್ಲಿ ಇಟ್ಟುಕೊಂಡು ಹೋಗುವುದು; ನಡು ಬಗ್ಗಿಸಿ ಗರ್ಭಗುಡಿಯ ಮುಂದೆ ನಿಂತು ದೇವರ ದರ್ಶನ ಮಾಡಿಕೊಳ್ಳುವುದು; ಅರ್ಥವಾಗದ ಶ್ಲೋಕಗಳನ್ನು ಉಚ್ಚರಿಸುತ್ತಾ ತೀರ್ಥಕೊಡುವ ಅರ್ಚಕನ ಆರತಿ ತಟ್ಟಗೆ ಚಿಲ್ಲರೆ ಹಾಕುವಂತಹದ್ದು ಸಾಮಾನ್ಯವಾಗಿರುತ್ತದೆ. ಹಾಗಾಗಿಯೋ ಏನೋ ಬುರ್ಖಾಧಾರಿ ಮಹಿಳೆಯೊಬ್ಬಳನ್ನು ದೇವಿಯ ಗರ್ಭಗುಡಿಯೊಳಗೆ ನೋಡಿದ್ದು ನಮಗೆ ಅದ್ಭುತವಾಗಿ ಕಂಡಿತು. ಆದರೆ ದೇವಿಯ ಗರ್ಭಗುಡಿಯಲ್ಲಿದ್ದ ಸ್ಥಳೀಯರಿಗೆ ಅದು ಸಹಜವಾಗಿಯೇ ಇತ್ತು. ನಮ್ಮ ಸುತ್ತಲೂ ಇಂತಹ ಸಹಜ ಬದುಕನ್ನು ಸಹಿಸದವರು ಇರುವುದರಿಂದಲೇ ಗುಡಿಯಿರುವ ಊರು, ಗುಡಿಯ ಹೆಸರನ್ನು ಇಲ್ಲಿ ಬರೆಯಲಾಗಲಿಲ್ಲ.

-2-

ಇದರ ನಡುವೆ ಮತ್ತೊಂದು ಘಟನೆ ನೆನಪಾಗುತ್ತಿದೆ. ನ್ಯೂಸ್ ಚಾನೆಲ್ ಬಿತ್ತರಿಸಿದ್ದ 59 ಸೆಕೆಂಡಿನ ವಿಡಿಯೋವನ್ನು ನನ್ನ ಗೆಳೆಯರು ವಾಟ್ಸಪ್ ಸ್ಟೇಟಸ್‌ಗೆ ಹಾಕೊಂಡಿದ್ದರು. ಅದು ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸಂಬಂಧಿಸಿತ್ತು. ಇವರು ಮೊನ್ನೆಯ ಏಕಾದಶಿಯಂದು ಇಹಲೋಕ ತ್ಯಜಿಸಿದರು. ಅವರಲ್ಲಿ ದೇವರನ್ನು ಕಂಡಂತಹ ಜನಸಾಮಾನ್ಯರು ಸುತ್ತಮುತ್ತಲಿನ ಹಳ್ಳಿಗಳಿಂದಲೂ ದೂರದೂರುಗಳಿಂದಲೂ ದೇಹ ದರ್ಶನಕ್ಕಾಗಿ ಹರಿದುಬರುತ್ತಿದ್ದರು. ಆ ಜನರಲ್ಲಿ ಬೇರೆ ಧರ್ಮದವರೂ ಇದ್ದರು. ಸದಾ ಧರ್ಮದ ಹೆಸರಲ್ಲಿ ಉರಿವ ಬೆಂಕಿಗೆ ತುಪ್ಪ ಸುರಿವ ಮಾಧ್ಯಮಗಳ ಪ್ರತಿನಿಧಿಗಳು ಅಲ್ಲಿ ಕಾಣುತ್ತಿದ್ದ ’ಬೇರೆ ಧರ್ಮ’ದವರನ್ನೇ ಕರೆದು ಮಾತನಾಡಿಸುತ್ತಿದ್ದರು. ಅಂತಹವರಲ್ಲಿ ಸ್ಥಳೀಯ ರಹೀಂನಗರದ ಹಿರಿಜೀವವೂ ಒಂದಾಗಿತ್ತು. ಇವರಿಗೆ ಮಾಧ್ಯಮ ಪ್ರತಿನಿಧಿಯೊಬ್ಬ ’ಶ್ರೀಗಳು ಇವತ್ತು ನಮ್ಮ ಜೊತೆಗಿಲ್ಲ, ತಾವೊಬ್ಬ ಬೇರೆ ಧರ್ಮವರಾಗಿ ಶ್ರೀಗಳ ದರ್ಶಕ್ಕೆ ಬಂದಿದ್ದೀರಿ, ಯಾವ ರೀತಿ ಪ್ರಭಾವ ಬೀರಿದ್ದರು?’ ಎಂಬ ಪ್ರಶ್ನೆ ಕೇಳುತ್ತಾನೆ. ಇದನ್ನು ಕೇಳಿಸಿಕೊಂಡ ಕೂಡಲೇ ಆ ಜೀವ ದುಃಖಿಸುತ್ತಾ, ಬಿಕ್ಕಳಿಸುತ್ತದೆ. ಇದರ ನಡುವೆ ಮಾಧ್ಯಮ ಪ್ರತಿನಿಧಿ ಮತ್ತೆ ’ಹೋಗುತ್ತಿದ್ರಾ, ಶ್ರೀಗಳ ಭಾಷಣಕ್ಕೆ? ಮಠಕ್ಕೆ ಹೋಗುತ್ತಿದ್ರಾ?’ ಅಂಥ ಕೇಳುತ್ತಾನೆ. ಆ ಹಿರಿಜೀವ ’ಏ… ಮಠಕ್ಕೆ ಹೋಗಿಲ್ಲ. ಹೋಗ್ಬೇಕಂತ್ಹೇಳಿ ವಿಚಾರ ಬಾಳ್ ಸರಿ ಬಂದಿತ್ತು ಖರೆ. ಅಲ್ಲಿ ಬಿಡಾಂಗಿಲ್ಲ, ಅದಾಗುತೈತಿ, ಹಂಗಾ ಹಿಂಗಾ ಅನ್ನಾಣ…. ಅಂಥ ಬಿಟ್ಬಿಟ್ಟೇವು. ಹೋಗೋ ವಿಚಾರ ಇಟ್ಟಿದ್ದೇವು. ಅಷ್ಟರಲ್ಲಿ ಹಿಂಗಾತು. ದೈವವಿಲ್ಲ’ ಅಂತ ಉತ್ತರಿಸಿದ ಮಾತುಗಳು ನನ್ನನ್ನು ಕೊರೆಯಲಾರಂಭಿಸಿದವು. ಒಮ್ಮೆಯಾದರೂ ’ನಡೆದಾಡುವ ದೇವರು’ ಬದುಕಿದ್ದಾಗ ಮಠದಲ್ಲಿ ಕಾಣಬಹುದಾಗಿದ್ದ ಹಂಬಲವನ್ನಷ್ಟೇ ಆ ಜೀವ ತೋಡಿಕೊಂಡಿದೆ.

ಜನ ತಮ್ಮಿಚ್ಛೆಯಂತೆ ತಮ್ಮ ಕಷ್ಟಕ್ಕೆ ನೆರವಾಗುವ, ನಂಬುವ, ಪೂಜಿಸುವ ದೇವರನ್ನು ಹೇಗೆಲ್ಲಾ ಬಂಧಿಸಿಟ್ಟಿದ್ದೇವಲ್ಲ? ಆ ಬುರ್ಖಾಧಾರಿ ಹೆಣ್ಣು ಮಗಳ ಸಂಕಟವನ್ನು ಆಲಿಸುವಂತಹ ಹಲವಾರು ಹೆಣ್ಣುದೇವರನ್ನು ದೂರವಿಟ್ಟಿದ್ದೇವಲ್ಲ? ಒಳಿತನ್ನು ಉಪದೇಶಿಸುವ ವ್ಯಕ್ತಿಯನ್ನು ಕಾಣಲು ಹೋದರೆ ’ಏನಾಗಬಹುದೋ’ ಎಂಬ ವಾತಾವರಣವನ್ನು ನಿರ್ಮಿಸಿದ್ದೇವಲ್ಲ? ’ಅಲ್ಲಿ ಬಿಡಾಂಗಿಲ್ಲ, ಅದಾಗುತೈತಿ, ಹಂಗಾಹಿಂಗಾ’ ಎಂಬುದರಲ್ಲಿ ಭಯ ಆತಂಕವೇನೂ ಕಾಣಿಸದು. ಈ ಮಾತುಗಳಲ್ಲಿ ’ನಮ್ಮಿಂದ ಏಕೆ ತೊಂದರೆ ಆಗಬೇಕು? ದೇವರಂತ ಮನುಷ್ಯನ ಮಾತುಗಳನ್ನು ಅಲ್ಲಿಇಲ್ಲಿ ಕೇಳಿಸಿಕೊಂಡರಾತು. ಯಾವ ಸಮಸ್ಯೆಯಾಗದಂತೆ ಎಂದಾದರೊಮ್ಮೆ ಕಂಡರಾತು’ ಎಂಬ ಕಳಕಳಿ ತುಂಬಿದೆ. ಇಷ್ಟೇ ಅಲ್ಲದೆ ನನಗೆ ಆ ಹಿರಿಜೀವದ ಮಾತುಗಳು ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದವರನ್ನು ಕಾಣುವುದಕ್ಕೆ ಅವಕಾಶವನ್ನೇ ಇಲ್ಲವಾಗಿಸಿದವರನ್ನು ಅಣಕಿಸುವಂತೆ ಅನುರಣಿಸುತ್ತಿವೆ. ಛೇ…! ಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

ಡಾ. ರವಿ ಎಂ

ಡಾ. ರವಿ ಎಂ
ಶಿವಮೊಗ್ಗದ ಸಿದ್ಲಿಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ’ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಅಧ್ಯಯನಕ್ಕೆ ಪಿಎಚ್.ಡಿ. ಪದವಿ. ’ಪರ್ಯಾಯ’, ’ಪಿ. ಲಂಕೇಶ್’, ’ಶಾಸನ ಓದು’ ಪ್ರಕಟಿತ ಕೃತಿಗಳು. ಹಳಗನ್ನಡ ಸಾಹಿತ್ಯ ರವಿಯವರ ಆಸಕ್ತಿ ಕ್ಷೇತ್ರವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...