ಶನಿವಾರ ರಾತ್ರಿಯಿಂದ ರಾಜ್ಯದ ಆಯ್ದ ಜಿಲ್ಲಾ ಕೇಂದ್ರಗಲ್ಲಿ ಕೊರೊನಾ ನೈಟ್ ಕರ್ಫ್ಯೂ ಅನ್ನು ರಾಜ್ಯ ಸರ್ಕಾರ ಹೇರಿದ್ದು, ಇದನ್ನು ಆಧರಿಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ. ಇದರಿಂದ ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಮುಂದಿನ ದಿನಗಳಲ್ಲಿ ಇದನ್ನು ರಾಜ್ಯಕ್ಕೆ ವಿಸ್ತರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬೆಂಗಳೂರು, ಮೈಸೂರು, ಮಂಗಳೂರು, ಕಲಬುರ್ಗಿ, ಬೀದರ್, ತುಮಕೂರು, ಉಡುಪಿ ಮತ್ತು ಮಣಿಪಾಲ್ ನಗರದಲ್ಲಿ ಎಪ್ರಿಲ್ 10 ಶನಿವಾರದಿಂದ ಎಪ್ರಿಲ್ 20 ರವರೆಗೆ ರಾತ್ರಿ 10 ರಿಂದ ಬೆಳೆಗ್ಗೆ 5 ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ಈ ಸಮಯದಲ್ಲಿ ಅಗತ್ಯ ಸೇವೆಗಳು ಲಭ್ಯವಿರುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಸ್ಕಿ: ಒಂದು ಕಡೆ ಜೆಡಿಎಸ್ ಶಾಸಕ ವೆಂಕಟಪ್ಪ ನಾಯಕ್, ಇನ್ನೊಂದು ಕಡೆ ಅದೇ ಪಾರ್ಟಿ…
“ಸರ್ಕಾರವು ಲಾಕ್‌ಡೌನ್ ಮಾಡುತ್ತಿಲ್ಲ, ಜನರು ಕೊರೊನಾ ಹರಡದಂತೆ ಸಹಕರಿಸಬೇಕು. ರಾಜ್ಯದ ಜನರು ಇದನ್ನು ಕಟ್ಟು ನಿಟ್ಟಗಿ ಪಾಲಿಸಬೇಕು. ನೈಟ್ ಕರ್ಫ್ಯೂದಿಂದ ನಿಯಂತ್ರಣಕ್ಕೆ ಬರದೆ ಇದ್ದರೆ ಇದನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಹೇಳಿದ್ದೇನು?►► ವಿಡಿಯೋ ನೋಡಿ
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರವನ್ನು ಮುರಿಯಲು ಪ್ರಯತ್ನಿಸುತ್ತಿರುವ ಸರ್ಕಾರ?; ಗೃಹ ಸಚಿವ ಹೇಳಿದ್ದೇನು?


