ಮೇ ತಿಂಗಳಲ್ಲೇ ಅಮರಿಂದರ್‌ ಪರವಾಗಿ ಕೆಲಸ ಪ್ರಾರಂಭಿಸಲಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್‌‌ ಕಿಶೋರ್ | ನಾನುಗೌರಿ

ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸುಮಾರು ಒಂದು ವರ್ಷ ಮುಂಚಿತವಾಗಿ, ಸಿಎಂ ಅಮರಿಂದರ್ ಸಿಂಗ್ ಅವರ ಪ್ರಧಾನ ಸಲಹೆಗಾರರಾಗಿ ನೇಮಕಗೊಂಡಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಮೇ ತಿಂಗಳಿನಿಂದ ತಮ್ಮ ತಂಡದೊಂದಿಗೆ ರಾಜ್ಯದಲ್ಲಿ ಉಳಿಯುವ ಸಾಧ್ಯತೆ ಇದೆ.

ಕಿಶೋರ್ ಮತ್ತು ಅವರ ತಂಡವು ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಂಡು, ಆಡಳಿತ ಪಕ್ಷದ ಶಾಸಕರ ಕಳೆದ ಐದು ವರ್ಷಗಳ ವರದಿ ಕಾರ್ಡ್ ಸಿದ್ಧಪಡಿಸುವ ಸಾಧ್ಯತೆಯಿದೆ.

ಕೆಲವು ದಿನಗಳ ಹಿಂದೆ ಕಿಶೋರ್ ಅವರು ಆಡಳಿತಾರೂಢ ಕಾಂಗ್ರೆಸ್‌‌ನಿಂದ ಮೊದಲ ಬಾರಿಗೆ ಶಾಸಕರಾದವರು ಮತ್ತು ಪಕ್ಷದ ಹಿರಿಯ ಶಾಸಕರನ್ನು ಭೇಟಿಯಾದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸರ್ಕಾರ ರಚಿಸಲು ಸೀಟುಗಳು ಕೊರತೆಯಾದರೆ ಬಿಜೆಪಿ ಮತ್ತು ಟಿಎಂಸಿ ಕೈಜೋಡಿಸುತ್ತದೆ: ಸಿಪಿಐ(ಎಂ)

ಕಿಶೋರ್ ಅವರು ಜನರು ಅತೃಪ್ತರಾಗಿರುವ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪ್ರತಿಕ್ರಿಯೆ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ಚುನಾವಣೆಯಲ್ಲಿ ಮಾಜಿ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ಪ್ರಮುಖ ಪಾತ್ರ ವಹಿಸಬೇಕೆಂದು ಕಿಶೋರ್‌ ಬಯಸಿದ್ದಾರೆ ಎಂದು ನಂಬಲಾಗಿದೆ. ಕಳೆದ ಕೆಲವು ಸಮಯದಿಂದ ಸಿಧು ಅವರು ರಾಜಕೀಯದಲ್ಲಿ ಸಕ್ರಿಯರಾಗದೆ ಹೊರಗುಳಿದಿದ್ದಾರೆ.

ಪ್ರಶಾಂತ್ ಕಿಶೋರ್‌ ಇತ್ತೀಚೆಗೆ ಮುಖ್ಯಮಂತ್ರಿ ಅಮರಿಂದರ್ ಅವರನ್ನು ಭೇಟಿಯಾದರು ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಯ ನಿವಾಸದ ಪಕ್ಕದ ಬಂಗಲೆಯಲ್ಲಿ ವಾಸಿಸುವ ಕಿಶೋರ್ ಅವರೊಂದಿಗೆ ಸಮನ್ವಯ ಸಾಧಿಸಲು ಅಮರಿಂದರ್ ತಮ್ಮ ರಾಜಕೀಯ ಕಾರ್ಯದರ್ಶಿ ಸಂದೀಪ್ ಸಿಂಗ್ ಸಂಧು ಮತ್ತು ಅವರ ಮೊಮ್ಮಗ ನಿರ್ವಾನ್ ಸಿಂಗ್ ಅವರನ್ನು ನಿಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೊತೆಗೆ ಐಎಎಸ್ ಅಧಿಕಾರಿಯೊಬ್ಬರಿಗೆ ಕಿಶೋರ್‌‌ ಅವರೊಂದಿಗೆ ಸಮನ್ವಯ ಸಾಧಿಸಲು ತಿಳಿಸಲಾಗಿದೆ. ಕಿಶೋರ್ ಅವರ ತಂಡವು 2017 ರ ಸಮಯದಲ್ಲಿದ್ದ ತಂಡಕ್ಕಿಂತಲೂ ದೊಡ್ಡದಾಗಿದ್ದು, ಪ್ರಸ್ತುತ ತಂಡದಲ್ಲಿ ಸುಮಾರು 250 ಜನರು ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅತ್ಯಾಚಾರಿ ಕುಲದೀಪ್ ಸೆಂಗಾರ್‌ ಪತ್ನಿಗೆ ಜಿಲ್ಲಾ ಪಂಚಾಯತ್ ಟಿಕೆಟ್ ನೀಡಿದ ಬಿಜೆಪಿ

LEAVE A REPLY

Please enter your comment!
Please enter your name here