“ವಯನಾಡ್ ಇಬ್ಬರು ಸಂಸದರನ್ನು ಹೊಂದಲು ಸಜ್ಜಾಗಿದೆ, ಅವರಲ್ಲಿ ಒಬ್ಬರು ಅನಧಿಕೃತ, ಕ್ಷೇತ್ರದ ಹಿತಾಸಕ್ತಿಗಳನ್ನು ರಕ್ಷಿಸಲು ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಹೇಳಿದ್ದಾರೆ.
ಮುಂಬರುವ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು. ಈ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರಗಳನ್ನು ಗೆದ್ದು ನಂತರ, ತಮ್ಮ ತಾಐಇ ಪ್ರತಿನಿಧಿಸುತ್ತಿದ್ದ ಸ್ಥಾನವನ್ನು ಉಳಿಸಿಕೊಳ್ಳಲು ನಿರ್ಧರಿಸಿದರು. ಆ ಮೂಲಕ ವಯನಾಡಿನಲ್ಲಿ ಉಪಚುನಾವಣೆಗೆ ದಾರಿ ಮಾಡಿಕೊಟ್ಟರು. ರಾಹುಲ್ ಗಾಂಧಿಯವರು 2019-2024ರ ವರೆಗೆ ಲೋಕಸಭೆಯಲ್ಲಿ ವಯನಾಡನ್ನು ಪ್ರತಿನಿಧಿಸಿದ್ದರು.
ತಮ್ಮ ಸಹೋದರಿಗೆ ಬೆಂಬಲ ಕೋರಿದ ಲೋಕಸಭೆಯ ವಿರೋಧ ಪಕ್ಷದ ನಾಯಕ, “ನಾನು ವಯನಾಡಿನ ಜನರೊಂದಿಗೆ ಹಂಚಿಕೊಳ್ಳುವ ಸಂಬಂಧವನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ವಯನಾಡ್ ನನಗಾಗಿ ಏನು ಮಾಡಿದೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲಾಗುವುದಿಲ್ಲ. ಭಾವನೆಗಳು ನಿಜವಾಗಿಯೂ ಆಳವಾದಾಗ ಅವುಗಳನ್ನು ವ್ಯಕ್ತಪಡಿಸುವ ಏಕೈಕ ಮಾರ್ಗವೆಂದರೆ ಕ್ರಿಯೆ” ಅವರು ಹೇಳಿದರು.
“ಇಬ್ಬರು ಸಂಸದರನ್ನು ಹೊಂದಿರುವ ದೇಶದ ಏಕೈಕ ಕ್ಷೇತ್ರ ವಯನಾಡ್ ಎಂದು ನಾನು ನಿಮಗೆ ನೆನಪಿಸಲು ಬಯಸುತ್ತೇನೆ. ಆದರೆ, ಒಬ್ಬರು ಅಧಿಕೃತ, ಇನ್ನೊಂದು ಅನಧಿಕೃತ, ವಯನಾಡ್ ಜನರ ಹಿತಾಸಕ್ತಿಗಳನ್ನು ರಕ್ಷಿಸಲು ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದರು.
“ನಾನು ಆಕೆಯ ಸ್ನೇಹಿತರು ಮತ್ತು ಕುಟುಂಬದ ಬಗ್ಗೆ ಏಕೆ ಹೇಳುತ್ತಿದ್ದೇನೆ ಎಂದು ನೀವು ಆಶ್ಚರ್ಯ ಪಡುತ್ತಿರಬೇಕು. ಕಾರಣ, ಪ್ರಿಯಾಂಕಾ ವಯನಾಡಿನ ಜನರನ್ನು ತನ್ನ ಕುಟುಂಬವೆಂದು ಪರಿಗಣಿಸುತ್ತಾರೆ” ಎಂದು ಅವರು ಹೇಳಿದರು.

“ಆಕೆ ಕಟ್ಟಿದ ಈ ರಾಖಿ ನನ್ನ ಕೈಯಲ್ಲಿದೆ, ಅದು ಮುರಿಯುವವರೆಗೂ ನಾನು ಅದನ್ನು ತೆಗೆಯುವುದಿಲ್ಲ. ಇದು ಸಹೋದರನ ರಕ್ಷಣೆಯ ಸಂಕೇತವಾಗಿದೆ, ಇದು ತನ್ನ ಸಹೋದರಿಯ ರಕ್ಷಣೆಯ ಸಂಕೇತವಾಗಿದೆ. ನಾನು ವಯನಾಡಿನ ಜನತೆಯಲ್ಲಿ ವಿನಂತಿಸುತ್ತೇನೆ, ನನ್ನ ಸಹೋದರಿಯನ್ನು ನೋಡಿಕೊಳ್ಳಿ, ನನ್ನ ಸಹೋದರಿಯನ್ನು ರಕ್ಷಿಸಿ” ಎಂದು ಅವರು ಮನವಿ ಮಾಡಿದರು.
“ವಯನಾಡಿನ ಜನರನ್ನು ನೋಡಿಕೊಳ್ಳಲು ಅವಳು ತನ್ನ ಸಂಪೂರ್ಣ ಶಕ್ತಿಯನ್ನು ಹಾಕುತ್ತಾಳೆ. ನಾನು ಅನಧಿಕೃತ ಸಂಸದ ಎಂಬುದನ್ನು ಮರೆಯಬೇಡಿ, ಹಾಗಾಗಿ ಇಲ್ಲಿಗೆ ಬಂದು ಮಧ್ಯಪ್ರವೇಶಿಸಲು ನನಗೆ ಅನುಮತಿ ಇದೆ” ಎಂದು ರಾಹುಲ್ ಗಾಂಧಿ ಹೇಳಿದರು.
“ಕಳೆದ 35 ವರ್ಷಗಳಿಂದ ಚುನಾವಣಾ ಪ್ರಚಾರದಲ್ಲಿದ್ದಾರೆ. ಆದರೆ, ತನಗಾಗಿ ಮತ ಕೇಳುತ್ತಿರುವುದು ಇದೇ ಮೊದಲು” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.
“ನನ್ನ ತಂದೆ (ಮಾಜಿ ಪ್ರಧಾನಿ ರಾಜೀವ್ ಗಾಂಧಿ) ಪರ ಪ್ರಚಾರ ಮಾಡುವಾಗ ನನಗೆ 17 ವರ್ಷ. ನಂತರ ನಾನು ನನ್ನ ತಾಯಿ, ಸಹೋದರ ಮತ್ತು ನನ್ನ ಅನೇಕ ಸಹೋದ್ಯೋಗಿಗಳಿಗಾಗಿ ಪ್ರಚಾರ ಮಾಡಿದ್ದೇನೆ. 35 ವರ್ಷಗಳಿಂದ ನಾನು ವಿವಿಧ ಚುನಾವಣೆಗಳಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಆದರೆ, ನಾನು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಪ್ರಚಾರ ಮಾಡುವುದು ಮತ್ತು ನನಗೆ ನಿಮ್ಮ ಬೆಂಬಲವನ್ನು ಕೋರುವುದು ತುಂಬಾ ವಿಭಿನ್ನವಾದ ಭಾವನೆ” ಎಂದು ಅವರು ಹೇಳಿದರು “ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ, ನೀವು ನನಗೆ ಅವಕಾಶ ನೀಡಿದರೆ ನಿಮ್ಮನ್ನು ಪ್ರತಿನಿಧಿಸುವುದು ನನ್ನ ಗೌರವ” ಎಂದರು.
ಇದನ್ನೂ ಓದಿ; ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ಸಿಪಿ ಯೋಗೇಶ್ವರ್; ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ


