ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅನೇಕ ಮನವಿಗಳ ನಂತರ ಆಗಸ್ಟ್ 14 ರಿಂದ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ವಿಧಾನಸಭೆ ಅಧಿವೇಶನಕ್ಕೆ ಅನುಮೋದನೆ ನೀಡಿದ ನಂತರ, ಹರಿಯಾಣದಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರು ತಾವು ಶಾಸನಸಭೆಗೆ ಹಾಜರಾಗುವುದಾಗಿ ಹೇಳಿದ್ದಾರೆ.
ಸಚಿನ್ ಪೈಲಟ್ ಮತ್ತು 18 ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷದೊಂದಿಗೆ ಸಂಬಂಧ ಮುರಿದ ನಂತರ ಮೊದಲ ಬಾರಿಗೆ ಜೈಪುರಕ್ಕೆ ಮರಳಲು ರಕ್ಷಣೆ ಕೋರಿ ಚರ್ಚಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಅಧಿವೇಶನಕ್ಕೆ ಹಾಜರಾಗುವಿರಾ ಎಂದು ಕೇಳಿದಾಗ ಬಂಡಾಯ ಶಾಸಕರೊಬ್ಬರು, “ಖಂಡಿತ, ನಾವು ಹಾಜರಾಗುತ್ತೇವೆ” ಎಂದು ಎನ್‌ಡಿಟಿವಿಗೆ ಹೇಳಿದ್ದಾರೆ.
ಆದರೆ ಜೈಪುರಕ್ಕೆ ಮರಳಲು ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ. ಒಂದು ವೇಳೆ ಅಧಿವೇಶನಕ್ಕೆ ಹಾಜರಾಗದಿದ್ದರೆ ಸ್ವಯಂಚಾಲಿತವಾಗಿ ಅನರ್ಹರಾಗುತ್ತಾರೆ. ಪ್ರಸ್ತುತ ಅವರನ್ನು ಅನರ್ಹಗೊಳಿಸುವ ಸ್ಪೀಕರ್ ಸಿಪಿ ಜೋಶಿ ವಿರುದ್ಧ ಹೋರಾಡುತ್ತಿದ್ದಾರೆ.
ಜೂನ್ 15 ರಂದು ತಮಗೆ ನೀಡಿರುವ ಅನರ್ಹತೆ ನೋಟಿಸ್‌ಗಳನ್ನು ಪ್ರಶ್ನಿಸಿ ಪೈಲಟ್ ಬೆಂಬಲಿಗರ ತಂಡ ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.
200 ಸದಸ್ಯರಿರುವ ರಾಜಸ್ಥಾನ ವಿಧಾನಸಭೆಯಲ್ಲಿ 102 ಶಾಸಕರ ಬೆಂಬಲವಿದೆ ಎಂದು ಮುಖ್ಯಮಂತ್ರಿ ಗೆಹ್ಲೋಟ್ ಹೇಳಿಕೊಂಡಿದ್ದಾರೆ. ಇದನ್ನು ಸುಳ್ಳು ಮಾಡಲು ಅತೃಪ್ತ ಶಾಸಕರು ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.
ತಮ್ಮ ಬಳಿ ಸುಮಾರು 30 ಶಾಸಕರು ಇದ್ದಾರೆಂದು ಅವರು ಹೇಳಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ಕೇವಲ 19 ಮಂದಿ ಮಾತ್ರ ದೃಢಪಟ್ಟಿದ್ದಾರೆ.
ಅಧಿವೇಶನಕ್ಕೆ ಹಾಜರಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ, ಅಶೋಕ್ ಗೆಹ್ಲೋಟ್ ಭಾರಿ ತೊಂದರೆಯಲ್ಲಿ ಸಿಲುಕಲಿದ್ದಾರೆ.
ಇದನ್ನೂ ಓದಿ: ಅನ್‌ಲಾಕ್ 3: ಕರ್ಫ್ಯೂ ಅಂತ್ಯ, ಆಗಸ್ಟ್ ತಿಂಗಳು ಶಾಲೆ ಬಂದ್; ಜಿಮ್, ಯೋಗ ಸಂಸ್ಥೆ ಓಪನ್


