ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸಿಲಿಗುರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ದಾಳಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಸಂಸದ ಮತ್ತು ರಾಷ್ಟ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ, “ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗಿದೆ” ಎಂದು ಕಿಡಿ ಕಾರಿದ್ದಾರೆ.
“ಶಾಂತಿಯುತ ಪ್ರತಿಭಟನೆಯಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗಿದೆ ಎಂದು ತೇಜಸ್ವಿ ಸೂರ್ಯ” ಎಂದು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
“ಬಿಜೆಪಿ ಅನಗತ್ಯವಾಗಿ ಹಿಂಸೆಯನ್ನು ಪ್ರಚೋದಿಸುತ್ತದೆ. ಅವರು ಶಾಂತಿಯುತ ಪ್ರತಿಭಟನೆ ನಡೆಸಬಹುದಿತ್ತು” ಎಂದು ಟಿಎಂಸಿ ಸಂಸದ ಪ್ರೊಫೆಸರ್ ಸೌಗತಾ ರಾಯ್ ತಿಳಿಸಿದ್ದಾರೆ.
ಇದನ್ನೂ ಓದಿ: ಝೀ ನ್ಯೂಸ್, ರಿಪಬ್ಲಿಕ್ ಟಿವಿ ಮತ್ತು ಆಜ್‌ತಕ್ ಚಾನೆಲ್‌ಗಳನ್ನು ’ಗೋದಿ ಮೀಡಿಯಾ’ ಎಂದ ರೈತರು!
Siliguri: Police use tear gas shells&water cannon on BJP Yuva Morcha workers protesting against West Bengal govt, at Tinbatti
"Many BJP workers injured during their peaceful protest. Democracy being murdered in West Bengal," says MP& National Pres, BJP Yuva Morcha, Tejasvi Surya pic.twitter.com/Sn3mizM3xu
— ANI (@ANI) December 7, 2020
ಇದನ್ನೂ ಓದಿ: ದೆಹಲಿ ಚಲೋ: ರೈತರ ಮೇಲೆ ಅಶ್ರುವಾಯು ದಾಳಿ ಮಾಡಿದ ಪೊಲೀಸರು; ಇಲ್ಲಿದೆ ವೀಡಿಯೋ!
ಈ ಕುರಿತು ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, “ಎಲ್ಲಾ ಸ್ವಯಂ ಘೋಷಿತ ಸಾಂವಿಧಾನಿಕ ನೈತಿಕವಾದಿಗಳೇ ಮತ್ತು ಸಾಂವಿಧಾನಿಕ ದೇಶಪ್ರೇಮಿಗಳೇ: ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗುತ್ತಿದೆ. ಶಾಂತಿಯುತ ರ್ಯಾಲಿಯಲ್ಲಿ ಪೊಲೀಸರು ಕಲ್ಲು ಬೀಸುತ್ತಿದ್ದಾರೆ. ಅಶ್ರುವಾಯು ಮತ್ತು ದೇಶೀ ಬಾಂಬ್‌ಗಳನ್ನು ಹಾರಿಸುತ್ತಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಬಿಜೆಪಿ ಹೋರಾಡುತ್ತಿದೆ. ನೀವೆಲ್ಲರೂ ಎಲ್ಲಿ ಅಡಗಿದ್ದೀರಿ?” ಎಂದು ಟ್ವೀಟ್ ಮಾಡಿದ್ದಾರೆ.
All self-proclaimed Constitutional Moralists & Constitutional Patriots:
This is how democracy is being murdered in WB.
Police are pelting stones at peaceful rally, shooting tear gas & country bombs.
BJP is fighting to save democracy & Constitution.
Where are you all hiding? pic.twitter.com/1eFokXPRB1
— Tejasvi Surya (@Tejasvi_Surya) December 7, 2020
ತೇಜಸ್ವಿ ಸೂರ್ಯ ಅವರ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ಮತ್ತು ಟೀಕೆ ವ್ಯಕ್ತವಾಗಿದ್ದು, “ಕಳೆದ 12 ದಿನಗಳಿಂದ ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿ ದಾಳಿ ಮಾಡಿದಾಗ ಈತ ಒಂದೂ ಮಾತನಾಡಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಬಿಜೆಪಿ ಸರ್ಕಾರ-ಭಾರಿ ವಿರೋಧ
ಈ ಹಿಂದೆಯೂ ತೆಜಸ್ವಿ ಸೂರ್ಯ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಪಶ್ಚಿಮ ಬಂಗಾಳ ಪೊಲೀಸರು ದಾಳಿ ಮಾಡಿದ್ದಾಗ ಇದೇ ರೀತಿಯ ಹೇಳಿಕೆ ನೀಡಿ ಟ್ರೋಲ್‌ಗೆ ಒಳಗಾಗಿದ್ದರು.
ಆಗ “ಒದಿಕಿ ಬಿದ್ದಾಗಲೇ ಇವರಿಗೆ ಸಂವಿಧಾನ, ಪ್ರಜಾಪ್ರಭುತ್ವ ನೆನಪಿಗೆ ಬರುತ್ತದೆ” ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.
ಇದನ್ನೂ ಓದಿ: ದೆಹಲಿ ಚಲೋ: ರೈತರನ್ನು ತಡೆದ ಪೊಲೀಸರು; ಬ್ಯಾರಿಕೇಡ್‌ಗಳನ್ನು ನದಿಗೆಸೆದ ರೈತರು!


