Homeಚಳವಳಿ'ನಾವೂ ರೈತ ಕುಟುಂಬದವರೇ': ರೈತರ ಹೋರಾಟಕ್ಕೆ ಧುಮುಕಿದ ವೈದ್ಯರು!

‘ನಾವೂ ರೈತ ಕುಟುಂಬದವರೇ’: ರೈತರ ಹೋರಾಟಕ್ಕೆ ಧುಮುಕಿದ ವೈದ್ಯರು!

ರೈತ ಪ್ರತಿಭಟನೆಯಲ್ಲಿ ಭಾಗವಹಿಸುವವರು ಕೇವಲ ರೈತರೇ ಆಗಿರಬೇಕಿಲ್ಲ. ನಾವೆಲ್ಲರೂ ರೈತರ ಕುಟುಂಬಕ್ಕೆ ಸೇರಿದವರು.

- Advertisement -
- Advertisement -

ರೈತರು ಕರೆ ನಿಡಿರುವ ಭಾರತ್ ಬಂದ್‌ಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ದೆಹಲಿ ಗಡಿಗಳಲ್ಲ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ವೈದ್ಯರು, ಪ್ಯಾಷನ್ ಡಿಸೈನರ್‌ ಕೂಡ ಸಾಥ್ ನೀಡಿದ್ದಾರೆ. ಅಲ್ಲದೆ ರೈತ ಪ್ರತಿಭಟನೆಯಲ್ಲಿ ಭಾಗವಹಿಸುವವರು ಕೇವಲ ರೈತರೇ ಆಗಿರಬೇಕಿಲ್ಲ ಎಂದು ಹೇಳಿದ್ದಾರೆ. ಈಗ ನಾವುಗಳು ಯಾವ ಕೆಲಸ ಮಾಡುತ್ತಿದ್ದೀವಿ ಎಂಬುದು ಮುಖ್ಯವಲ್ಲ ನಾವೆಲ್ಲರೂ ರೈತ ಕುಟುಂಬಗಳಿಗೆ ಸೇರಿದವರು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಿಂಗೂ ಗಡಿಯಲ್ಲಿ ರೈತರೊಂದಿಗೆ ಧರಣಿ ಕುಳಿತ್ತಿದ್ದ ಲೂಧಿಯಾನಾದ ಡಾ.ಹರ್ಕನ್ವಾಲ್ ಸಿಂಕೂನ್ ಮತ್ತು ವಸ್ತ್ರ ವಿನ್ಯಾಸಕಿ ಸಂದೀಪ್ ಗ್ರೆವಾಲ್ ನಾವು ರೈತ ಕುಟುಂಬದವರು, ಕೇಂದ್ರ ಸರ್ಕಾರ ರೈತರ ಮಾತುಗಳನ್ನು ಕೇಳಬೇಕು ಎಂದಿದ್ದಾರೆ.

ಇದನ್ನೂ ಓದಿ: ’ಈ ಹೋರಾಟ ಕೇವಲ ರೈತರದ್ದಲ್ಲ, ಎಲ್ಲಾ ದೇಶವಾಸಿಗಳದ್ದು’: ಭಾರತ್ ಬಂದ್ ಬೆಂಬಲಿಸಿದ ಆಪ್

“ಇದೀಗ ನಿಮ್ಮ ವೃತ್ತಿ ಏನು ಎಂಬುದು ಮುಖ್ಯವಲ್ಲ, ನಾವೆಲ್ಲರೂ ರೈತರ ಕುಟುಂಬಕ್ಕೆ ಸೇರಿದವರು. ನಮಗೆಲ್ಲರಿಗೂ ಕೃಷಿಯ ಹಿನ್ನೆಲೆ ಇದೆ. ನನ್ನ ರಾಜ್ಯದ ಜನರನ್ನು ಬೆಂಬಲಿಸಲು ನಾನು ಇಲ್ಲಿದ್ದೇನೆ. ರೈತರ ನೀತಿ ಮತ್ತು ನೈತಿಕತೆಯೇ ಅವರನ್ನು ಇಲ್ಲಿಗೆ ಒಟ್ಟುಗೂಡಿಸಿದೆ’ ಎಂದು ವೈದ್ಯೆ ಡಾ.ಹರ್ಕನ್ವಾಲ್ ಸಿಂಕೂನ್ ಹೇಳುತ್ತಾರೆ.

ರೈತರನ್ನು ಬೆಂಬಲಿಸಿ ಅನೇಕ ವೈದ್ಯರು ಈಗಾಗಲೇ ಪ್ರತಿಭಟನಾ ಸ್ಥಳದಲ್ಲಿ ಇದ್ದು, ರೈತರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಪ್ರತಿಭಟನೆ ಕೇವಲ ರೈತರದಲ್ಲ, ಇಡೀ ದೇಶವಾಸಿಗಳದ್ದು ಎಂಬ ಭಾವನೆ ನಮ್ಮಲ್ಲಿ ಮೂಡಿದೆ ಎನ್ನುತ್ತಾರೆ.

ರೈತರನ್ನು ಖಲಿಸ್ತಾನಿಗಳು, ರಾಷ್ಟ್ರವಿರೋಧಿಗಳು ಎನ್ನುತ್ತಿದ್ದ ಕೆಲವು ಸಂಘಟನೆಗಳು ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ದುಡಿದ ವೈದ್ಯರನ್ನು ಹಾಗೆನ್ನಲು ಸಾಧ್ಯವೇ? ಎಂದು ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್, ಬಹುಜನ ಸಮಾಜವಾದಿ ಪಾರ್ಟಿ, ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಟಿಆರ್‌ಎಸ್‌, ಡಿಎಂಕೆ, ಅಕಾಲಿ ದಳ, ಸಮಾಜವಾದಿ ಪಕ್ಷ, ಸಿಪಿಐ, ಸಿಪಿಐ(ಎಂ) ಸೇರಿದಂತೆ ಬಿಜೆಪಿಯೇತರ ಪಕ್ಷಗಳು ರೈತರಿಗೆ ಬೆಂಬಲ ಸೂಚಿಸಿವೆ.


ಇದನ್ನೂ ಓದಿ: ದೇಶಾದ್ಯಂತ ಸರಕು ಸಾಗಣೆ ನಿಲ್ಲಿಸಿ ಭಾರತ್‌ ಬಂದ್‌ಗೆ ಬೆಂಬಲ ನೀಡಲಿರುವ ಸರಕು ಸಾರಿಗೆ ಸಂಘಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...