ಪಂಜಾಬಿನ ದಂತ ವೈದ್ಯಕೀಯ ವಿದ್ಯಾರ್ಥಿ ಸಂಘದಿಂದ ರೈತ ಹೋರಾಟಕ್ಕೆ ಬೆಂಬಲ

ಕೇಂದ್ರದ ಜನವಿರೋಧಿ ನೀತಿಗಳ ವಿರುದ್ದ ಅಖಿಲ ಭಾರತ ಮುಷ್ಕರಕ್ಕೆ ರೈತ ಹಾಗೂ ಕಾರ್ಮಿಕ ಸಂಘಟನೆಗಳು ಸೇರಿದಂತೆ ದೇಶ ವಿರೋಧ ಪಕ್ಷಗಳು ಬೆಂಬಲ ನೀಡಿ ಯಶಸ್ವಿ ಮುಷ್ಕರ ನಡೆಯುತ್ತಿದೆ. ದೆಹಲಿಯಲ್ಲಿ ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ರೈತರು ಹಮ್ಮಿಕೊಂಡಿದ್ದ ”ದೆಹಲಿ ಚಲೋ’’ ಪ್ರತಿಭಟನೆಗೆ ತೆರಳುತ್ತಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲಪಿರಂಗಿ ದಾಳಿ ನಡೆಸಿ ಅವರನ್ನು ಗಡಿಯಲ್ಲಿಯೇ ತಡೆದು ಬಂದಿಸುತ್ತಿರುವುದರ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ, “ದೆಹಲಿ ಬಳಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಚಿತ್ರಗಳನ್ನು ನೋಡಿ ಕಳವಳಗೊಂಡದ್ದೇನೆ. ರೈತರನ್ನು ಗೌರವದಿಂದ ಕಾಣುವಂತೆ, ದಯವಿಟ್ಟು ಅವರೊಂದಿಗೆ ತೊಡಗಿಸಿಕೊಂಡು, ಅವರ ಮಾತುಗಳನ್ನು ಕೇಳಿ ಎಂದು ಕೇಂದ್ರ ಸರ್ಕಾರವನ್ನು ಕೋರುತ್ತೇನೆ. ಪೊಲೀಸ್ ಪಡೆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ದೆಹಲಿ ಚಲೋ: ಗಡಿಯಲ್ಲಿಯೇ ರೈತರನ್ನು ತಡೆದ ಪೊಲೀಸರು; ಮೇಧಾ ಪಾಟ್ಕರ್ ಸೇರಿ ಹಲವು ರೈತರ ಬಂಧನ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮೋದಿ ಸರ್ಕಾರದ ಕ್ರೌರ್ಯದ ವಿರುದ್ಧ ದೇಶದ ರೈತ ದೃಡವಾಗಿ ನಿಂತಿದ್ದಾನೆ” ಎಂದು ಟ್ವೀಟ್ ಮಾಡಿದ್ದಾರೆ.

“ಅನ್ನದಾತರಿಗೆ ಅಶ್ರವಾಯು ಮತ್ತು ನೀರಿನ ಫಿರಂಗಿಗಳು. ಆದರೆ ಸರ್ಕಾರ ಕ್ರೌರ್ಯ ಮತ್ತು ವಿವೇಚನಾರಹಿತ ಶಕ್ತಿಯ ಮೂಲಕ ರೈತ-ಕಾರ್ಮಿಕರ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ!” ಸಿಪಿಐಎಂ ಹೇಳಿದೆ.

ಕಾಂಗ್ರೆಸ್ ಪಕ್ಷವು, “ಕೆಲವು ಸರ್ಕಾರಗಳು ‘ಜನರಿಂದ, ಜನರಿಗಾಗಿ, ಜನರದ್ದೇ’ ಇತರರು ಸರ್ಕಾರಗಳು ಕೇವಲ ‘ಜನರ ವಿರುದ್ಧ'” ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ದೆಹಲಿ ಚಲೋ: ರೈತರ ಮೇಲೆ ಅಶ್ರುವಾಯು ದಾಳಿ ಮಾಡಿದ ಪೊಲೀಸರು; ಇಲ್ಲಿದೆ ವೀಡಿಯೋ!

“ರೈತ ವಿರೋಧಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಗೆ ಮೆರವಣಿಗೆ ಮಾಡುವುದನ್ನು ತಡೆಯಲು ಹರಿಯಾಣ, ಯುಪಿ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರಗಳು ಭಾರಿ ದಬ್ಬಾಳಿಕೆ ನಡೆಸುತ್ತಿದೆ. ನೂರಾರು ಜನರನ್ನು ಬಂಧಿಸಲಾಗಿದೆ. ಇಂತಹ ದಾಳಿಗಳಿಂದ ಪ್ರತಿಭಟನೆಯ ದನಿಗಳನ್ನು ನಿಗ್ರಹಿಸಲು ಸಾಧ್ಯವಿಲ್ಲ” ಕಿಸಾನ್ ಸಭಾ ಹೇಳಿದೆ.

“ಕರಾಳ ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಲು ದೆಹಲಿಗೆ ಮೆರವಣಿಗೆ ನಡೆಸುತ್ತಿರುವ ನಮ್ಮ ಅನ್ನದಾತರ ಜೊತೆ ನಾವು ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ. ಬಿಜೆಪಿ ಸರ್ಕಾರ ರೈತರ ಧ್ವನಿಯನ್ನು ಅವರ ಕ್ರೌರ್ಯ ಮತ್ತು ವಿವೇಚನಾರಹಿತ ಶಕ್ತಿಯಿಂದ ನಿಗ್ರಹಿಸಲು ಸಾಧ್ಯವಿಲ್ಲ.” ಎಂದು ಚತ್ತೀಸ್‌ಗಡ್‌ ಸಚಿವರಾದ ಟಿಎಸ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:  ದೆಹಲಿ ಚಲೋ: ರೈತರನ್ನು ತಡೆದ ಪೊಲೀಸರು; ಬ್ಯಾರಿಕೇಡ್‌ಗಳನ್ನು ನದಿಗೆಸೆದ ರೈತರು!

 

ದನ್ನೂ ಓದಿ:  ಕಿಸಾನ್ ಮುಕ್ತಿ ಮಾರ್ಚ್ ‘ದೆಹಲಿ ಚಲೋ’

LEAVE A REPLY

Please enter your comment!
Please enter your name here