Homeಕರ್ನಾಟಕಈ ಹೊತ್ತಿನಲ್ಲಿ ʼಹಳ್ಳಿ ಮಕ್ಕಳʼ ಕುರಿತು: ಒಂದು ರಚನಾತ್ಮಕ ಆಲೋಚನೆ - ಕೆ.ಪಿ.ಸುರೇಶ

ಈ ಹೊತ್ತಿನಲ್ಲಿ ʼಹಳ್ಳಿ ಮಕ್ಕಳʼ ಕುರಿತು: ಒಂದು ರಚನಾತ್ಮಕ ಆಲೋಚನೆ – ಕೆ.ಪಿ.ಸುರೇಶ

ಕೊರೊನಾ ಲಾಕ್‌ಡೌನ್‌ನ ಕಾರಣಕ್ಕೆ ಹಳ್ಳಿ ಮಕ್ಕಳು ಅಭದ್ರತೆಯಿಂದ ಊರ ಕಡೆ ಹೊರಟಾಗಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಏನೆಂದು ಊಹಿಸಿ ಈಗಲೇ ಕಾರ್ಯಪ್ರವೃತ್ತರಾಗದಿದ್ದರೆ, ಮೂರು ತಿಂಗಳ ನಂತರ ಎದುರಿಸಬೇಕಾಗುವ ಸಮಸ್ಯೆಗಳನ್ನು ತಡೆಗಟ್ಟಲಾಗದು..

- Advertisement -
- Advertisement -

ಪ್ರಿಯ ಓದುಗರೇ,

ನಮ್ಮ ಕೃಷಿಯಲ್ಲಿ ಅಷ್ಟೊಂದು ಕಡಿಮೆ ಆದಾಯವಿದ್ದರೂ ಗ್ರಾಮೀಣ ಭಾಗ ಹೇಗೆ ಬದುಕುತ್ತಿದೆ ಎಂಬುದಕ್ಕೆ ಇದ್ದ ಮೂರ್ನಾಲ್ಕು ಉತ್ತರಗಳಲ್ಲಿ ಒಂದು ʼನಗರಗಳಲ್ಲಿ ದುಡಿಯುವ ಹಳ್ಳಿ ಮಕ್ಕಳು ಹಳ್ಳಿಗಳಿಗೆ ಹಣ ಕಳಿಸಿ ಕ್ರಾಸ್‌ ಸಬ್ಸಿಡೈಸ್‌ ಮಾಡುವುದರ ಮುಖಾಂತರʼ ಎಂಬುದೂ ಒಂದು. ಈಗ ಆ ಹಳ್ಳಿ ಮಕ್ಕಳು ಊರಿನ ಕಡೆಗೆ ಮುಖ ಮಾಡಿದ್ದಾರೆ. ಇದರ ಪರಿಣಾಮವೇನಾಗಬಹುದು ಎಂದಷ್ಟೇ ಚರ್ಚೆ ಮಾಡದೇ, ಪರಿಹಾರವೇನಿರಬಹುದು ಎಂಬುದನ್ನೂ ಹುಡುಕಬೇಕಿದೆ. ಇಂಥದ್ದರ ಬಗ್ಗೆಯೇ ತಲೆ ಕೆಡಿಸಿಕೊಂಡು ತಳಮಟ್ಟದಲ್ಲಿ ಪ್ರಾಯೋಗಿಕವಾದ ಸಲಹೆಗಳನ್ನು ಮುಂದಿಡುವುದರಲ್ಲಿ ಕೆ.ಪಿ.ಸುರೇಶ ಅವರು ಸದಾ ಮುಂದು.

ಅವರ ಈ ಬರಹದೊಂದಿಗೆ ಆರಂಭಿಸಿ ಇದನ್ನೊಂದು ರಚನಾತ್ಮಕ ಆಂದೋಲನವನ್ನಾಗಿ ಮಾಡುವ ಕುರಿತು ನಾನುಗೌರಿ.ಕಾಂ ಗಂಭೀರವಾಗಿ ಆಲೋಚಿಸಿದೆ. ನೀವೆಲ್ಲರೂ ಕೈ ಜೋಡಿಸಬೇಕೆಂದು ತಮ್ಮಲ್ಲಿ ಮನವಿ. ಹೇಗೆ ಮುಂದುವರೆಯಬಹುದು ಎಂಬುದರ ಕುರಿತು ಕೆಲವು ಸಂಗತಿಗಳು ನಿಮಗೆ ಇದನ್ನು ಓದಿದರೆ ಸ್ಪಷ್ಟವಾಗುತ್ತವೆ. ಮುಖ್ಯವಾಗಿ ಈ ಚರ್ಚೆಯನ್ನು ಬೆಳೆಸುವುದು ಮತ್ತು ಅದು ಕ್ರಿಯಾಶೀಲತೆಗೆ ದಾರಿ ಮಾಡಿಕೊಡುವುದು ಆಗಬೇಕು. ನಿಮ್ಮ ಪ್ರತಿಕ್ರಿಯೆಗಳನ್ನು 9353666821 ಅಥವಾ [email protected]ಗೆ ಕಳಿಸಬಹುದು.

                                                    • ಸಂಪಾದಕ

ಕೊರೊನಾ ಸಂದರ್ಭದಲ್ಲಿ ವಲಸೆಯೆಂಬ ವಿದ್ಯಮಾನ

ನಮ್ಮ ಗ್ರಾಮಾಂತರದಲ್ಲಿ ಭೀಕರ ಅಕಾಲಿಕ ರಿವರ್ಸ್ ವಲಸೆ ನಿಜವಾಗಿದೆ.  ಲಕ್ಷಾಂತರ ಯುವಕರು ಮರಳಿ ಹುಟ್ಟೂರಿಗೆ ಬಂದಿದ್ದಾರೆ. ಇದು ಸೃಷ್ಟಿಸಿರುವ ಬಿಕ್ಕಟ್ಟು ದೀರ್ಘಕಾಲಿಕವಾದರೆ ಅದನ್ನು ನಿಭಾಯಿಸುವುದು ಹೇಗೆ?

ಮೂಲತಃ ಅಸಂಘಟಿತ ನಗರ ಕಾರ್ಮಿಕರಾಗಿದ್ದ ಇವರು ನಿಗದಿತವಾಗಿ ಊರಿಗೆ ಹಣ ಕಳಿಸುತ್ತಿದ್ದರು. ಈಗ ಬರಬೇಕಾದ ಹಣವೂ ಇಲ್ಲದೇ ಹಠಾತ್ ಉದ್ಯೋಗ ಅಂತ್ಯವಾಗಿ ಮರಳುವ ಅವರ ಮಾನಸಿಕ ಸ್ಥಿತಿ ಬಗ್ಗೆ ಯೋಚಿಸಬೇಕಿದೆ.  ಒಂದು ಹಳ್ಳಿಯ ಸಶಕ್ತ ಯುವ ಪಡೆ ಇದು. ತಕ್ಕ ಮಟ್ಟಿಗೆ ಬುದ್ಧಿಶಾಲಿಗಳು ಕೂಡಾ. (ಹೀಗಿದ್ದವರಷ್ಟೇ ನಗರದಲ್ಲಿ ಏಗಬಹುದಷ್ಟೇ!).

 ಹಳ್ಳಿಯ ತಮ್ಮ ತಮ್ಮ ಕುಟುಂಬಗಳಿಗೆ ಅನ್ನದಾತರಾಗಿದ್ದವರು ಈಗ ತಾವೇ ಅವಲಂಬಿತರಾಗುವ ಸನ್ನಿವೇಶ ಇದೆ.

ರಜಾಕ್ಕೆ ಬಂದಾಗ ಬಹುತೇಕ ಓಡಾಡಿಕೊಂಡೇ ರಿಲಾಕ್ಸ್ ಆಗುತ್ತಿದ್ದ ಇಂಥಾ ಯುವಕರನ್ನು ನಾನು ನೋಡಿದ್ದೇನೆ.  ತೇಜಸ್ವಿಯವರ ಕತೆಯಲ್ಲಿ ಬರುವಷ್ಟು ಕ್ಯಾರಿಕೇಚರ್ ಅಲ್ಲದಿದ್ದರೂ ಕೃಷಿ ಕೆಲಸಕ್ಕೆ ಒಲಿಯುವ ಹಂತ  ದಾಟಿದ್ದಾರೆ.

ಕನಿಷ್ಠ ಮುಂದಿನ ಆರು ತಿಂಗಳ ಕಾಲ (ಪವಾಡದ ಹೊರತಾಗಿ) ಈ ಯುವಕರಿಗೆ ನಗರದ ಉದ್ಯೋಗ ಲಭ್ಯವಾಗುವುದು ಕಷ್ಟವೇ.  ಈ ಕಟು ವಾಸ್ತವದ ಹಿನ್ನೆಲೆಯಲ್ಲಿ ದಿನಗಳೆದಂತೆ ಅವರ  ಮನೆಯಲ್ಲಿ ಅವರ ಪಾತ್ರ  ಏನಾಗುತ್ತದೆ?  ಕುಟುಂಬದ ಆದಾಯದ ಮೂಲ ಬತ್ತುತ್ತಾ ಕೃಷಿ ಹಂಗಾಮಿನ ಕೆಲಸಗಳಿಗೆ ಬಂಡವಾಳ ಹೂಡಲೇಬೇಕಾದ ಒತ್ತಡದಲ್ಲಿ ಇವರ ಉಪಯುಕ್ತತೆಯನ್ನು ಹೆಚ್ಚಿಸದಿದ್ದರೆ ಇವರೆಲ್ಲಾ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುವ ಸಾಧ್ಯತೆ ಇದೆ.

ಹಾಗಾದರೆ ಏನು ಮಾಡಬಹುದು?

ಆದರೆ ಈ ಸದ್ಯೋಸ್ಥಿತಿಯಲ್ಲಿ ಒಂದು ಆಶಾಕಿರಣವೂ ಇದೆ. ಈ ಯುವಕರು ನಗರ ನೋಡಿದವರು. ಸುಮಾರಾಗಿ ಹೊಸ ತಂತ್ರೋಪಕರಣ, ಜ್ಞಾನವನ್ನು ಬಳಸುವ ಕೌಶಲ್ಯ ಅಷ್ಟಿಷ್ಟಾದರೂ ಬೆಳೆಸಿಕೊಂಡವರು.

ಇವರಿಗಿರುವ ಕೌಶಲ್ಯವನ್ನು ಬಳಸಿಕೊಂಡು ಗ್ರಾಮಗಳ ಸ್ವಾವಲಂಬೀ ಕೊಡು-ಕೊಳು ವಸ್ತು ಉತ್ಪಾದನೆಗೆ  ಸಹಾಯವಾಗಬಹುದು. ಮಿಶ್ರ ಬೆಳೆಯ ಆಹಾರೋತ್ಪಾದನೆಯ ಬೇಸಾಯದಿಂದ ಹಿಡಿದು ಸಣ್ಣ ಮಟ್ಟಿನ ಮೌಲ್ಯವರ್ಧನೆ, ಯಂತ್ರೋಪಕರಣ ರಿಪೇರಿ ಇವನ್ನೆಲ್ಲಾ ಸಾಧ್ಯಗೊಳಿಸಬಹುದು. ಈ ಲಾಕ್‌ಡೌನ್ ಇನ್ನೊಂದು ತಿಂಗಳು ಮುಂದುವರೆದರೂ ಹಳ್ಳಿಗಳಲ್ಲಿ ಕೃಷಿ ಸಂಬಂಧೀ ಜೀವನೋಪಾಯಗಳ ಬಗ್ಗೆ ವಿಚಾರ ವಿನಿಮಯದ ಸಭೆಗಳನ್ನು ಮಾಡುವುದೂ ತ್ರಾಸದಾಯಕ. ಆದರೆ ಒಂದಷ್ಟು ಗ್ರಾಮಾಭಿವೃದ್ಧೀ- ಕೃಷಿಯಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ವ್ಯಕ್ತಿಗಳು ಏನು ಮಾಡಬಹುದು ಎಂಬುದನ್ನು  ವಿಡಿಯೋ ಮುಖಾಂತರ ವಾಟ್ಸಪ್ ನಂಬರ್‌ಗೆ (9353666821) ಮೂಲಕ ಹಂಚಿಕೊಳ್ಳಬಹುದು.

ಇನ್ನೂ ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ.

  1. ಸಣ್ಣ ರೈತರಿಗೆ ಈ ಬಾರಿ ಆಹಾರದ ಸ್ವಾವಲಂಬಿತನ ಮುಖ್ಯ ಎಂಬುದನ್ನು ಒತ್ತಿ ಹೇಳಬೇಕಿದೆ. ಇದಕ್ಕೆ ದೊಡ್ಡ ಮಟ್ಟಿನ ಒಳಸುರಿಗಳ ಅಗತ್ಯವೂ ಇಲ್ಲ.  ತನಗಿರುವ ಜಮೀನಿನ ಅರ್ಧಾಂಶದಲ್ಲಾದರೂ ಶೇ.60 ಆಹಾರ ಬೆಳೆ, ಶೇ.20 ದ್ವಿದಳ ಧಾನ್ಯ ಉಳಿದ ಶೇ.20ರಲ್ಲಿ ತರಕಾರಿ ಇತ್ಯಾದಿ ಬೆಳೆಸುವ ಬೆಳೆ ವಿನ್ಯಾಸವನ್ನು ರೈತರಿಗೆ ಹೇಳಬೇಕಿದೆ.
  2. ಇದಕ್ಕೆ ಬೇಕಾದ ಬೀಜ ಲಭ್ಯತೆಯನ್ನು ಒದಗಿಸುವುದು ಸವಾಲೇ ಸರಿ. ಆದರೆ  ಒಂದಷ್ಟು ಕೆಲಸ ಮಾಡಿದರೆ ಈ  ಬೀಜದ ಕೊಡು-ಕೊಳು ಕಷ್ಟವಲ್ಲ.
  3. ಕೆಲವು ಸರಳ ದ್ರವ ಗೊಬ್ಬರಗಳನ್ನು ತಯಾರಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ಮಾಡುವುದು ಕಷ್ಟವಲ್ಲ( ಉದಾ: ಪಂಚಗವ್ಯ ಇತ್ಯಾದಿ)
  4. ಸ್ವಸಹಾಯ ಸಂಘದ ಮಹಿಳೆಯರು  ಈ ಬಾರಿಯ ಬೇಸಾಯದ ಬೆಳೆಗಳ ಆದ್ಯತೆ ಏನು ಎಂಬುದನ್ನು ನಿರ್ಧರಿಸುವಂತಾಗಬೇಕು. ಬಂಡವಾಳವೂ ಅವರಿಂದಲೇ ಬರಬೇಕಷ್ಟೇ!!
  5. ಇದರೊಂದಿಗೇ ಈ ಬೇಸಿಗೆಯಲ್ಲಿ ಲಭ್ಯವಿರುವ ಉತ್ಪನ್ನಗಳ ಸಣ್ಣ ಪ್ರಮಾಣದ ಪ್ರಾಥಮಿಕ ಮೌಲ್ಯ ವರ್ಧನೆಗೆ ಎಲ್ಲೆಲ್ಲಿ ಅವಕಾಶ ಇದೆ ಅಲ್ಲೆಲ್ಲಾ ಮಾಡುವಂತೆ ಪ್ರೇರೇಪಿಸಬೇಕಿದೆ (ಉದಾ: ತೊಕ್ಕು, ಉಪ್ಪಿನಕಾಯಿ ಇತ್ಯಾದಿ)  ಈ ಉತ್ಪನ್ನಗಳಿಗೆ ನೆರೆ-ಕರೆ; ಅಕ್ಕಪಕ್ಕದ ಸಣ್ಣ ಹೋಬಳಿಗಳಲ್ಲೂ ಬೇಡಿಕೆ ಕುದುರುವುದು ಖಂಡಿತ . (ಈ ಲಾಕ್‌ಡೌನ್ ಕಾರಣದಿಂದ ಇಂಥಾ ವಸ್ತುಗಳ ಸಪ್ಲೈ ಚೈನ್ ಪೂರಾ ಕುಸಿದಿದೆ)
  6. ಯಂತ್ರೋಪಕರಣ ರಿಪೇರಿ ಇತ್ಯಾದಿಗೆ ಈ ವಾಪಾಸು ಬಂದ ಯುವಕರ ಕೌಶಲ್ಯವನ್ನೇ ಇಟ್ಟುಕೊಂಡು ಸಮುದಾಯ ಮಟ್ಟದ ಸಹಕಾರೀ ರಿಪೇರಿ ಮೈಂಟೈನೆನ್ಸ್  ಸಾಧ್ಯವಾದರೆ ಪಟ್ಟಣಗಳಿಗೆ ಹೋಗುವ ಪರದಾಟ ನಿಂತೀತು.

ಇಂಥಾ ಹತ್ತಾರು ವಿಚಾರಗಳನ್ನು ಇತರರೂ ತಮ್ಮ ತಮ್ಮ ಗ್ರಾಮದ ಸ್ಥಿತಿಗನುಗುಣವಾಗಿ ರೂಪಿಸಬಹುದು.

 ಈ ಯುವಕರು ವಾಪಾಸು ಬಂದಿದ್ದು ನಮ್ಮ ಗ್ರಾಮಕ್ಕೆ ವರ ಎಂಬ ಭಾವವನ್ನು ನಮ್ಮ ಗ್ರಾಮಸ್ಥರು ಬೆಳೆಸದಿದ್ದರೆ ಕೌಟುಂಬಿಕ ಮಟ್ಟದಲ್ಲೂ ಖಿನ್ನತೆ ವಿಷಮಗೊಂಡೀತು.

ರೈತರ ಜೊತೆ ಕೆಲಸ ಮಾಡುತ್ತಿರುವ ಒಂದಷ್ಟು ಸಂಸ್ಥೆಗಳ ಗೆಳೆಯರ ಜೊತೆ ಚರ್ಚಿಸಿದ ಅಂಶಗಳನ್ನು ಇಲ್ಲಿ ಬರೆಹ ರೂಪಕ್ಕಿಳಿಸಿದ್ದೇನೆ. ಈಗ ಇದನ್ನೊಂದು ಅಭಿಯಾನವನ್ನಾಗಿ ಮಾಡುವುದು ನಿಮ್ಮೆಲ್ಲರಿಗೆ ಬಿಟ್ಟಿದ್ದು. ನಾನುಗೌರಿ.ಕಾಂ ಅವರು ಇದಕ್ಕೊಂದು ವೇದಿಕೆ ಕಲ್ಪಿಸಿದ್ದು ಒಳ್ಳೆಯದು. ಆದರೆ ಇದನ್ನು ಎಲ್ಲರೂ ಮಾಡಬೇಕು ಮತ್ತು ಸರ್ಕಾರದ ನೀತಿ ನಿರ್ಧಾರಕ ಸ್ಥಾನಗಳಲ್ಲಿರುವವರಿಗೂ ಇದನ್ನು ಟ್ಯಾಗ್‌ ಮಾಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...