HomeಮುಖಪುಟExplained : ಏನಿದು 'ಡಿಜಿಟಲ್ ಅರೆಸ್ಟ್' ವಂಚನೆ?

Explained : ಏನಿದು ‘ಡಿಜಿಟಲ್ ಅರೆಸ್ಟ್’ ವಂಚನೆ?

ಕಳೆದ ಜನವರಿಯಿಂದ ಏಪ್ರಿಲ್ ನಡುವೆ ಡಿಜಿಟಲ್ ಅರೆಸ್ಟ್‌ ವಂಚನೆಯ ಮೂಲಕ ₹120 ಕೋಟಿ ಕಳೆದುಕೊಂಡಿರುವ ಭಾರತೀಯರು

- Advertisement -
- Advertisement -

‘ಡಿಜಿಟಲ್ ಬಂಧನ ಅಥವಾ ಡಿಜಿಟಲ್ ಅರೆಸ್ಟ್‌’ ಕೆಲ ದಿನಗಳಿಂದ ಭಾರೀ ಚರ್ಚೆಯಲ್ಲಿರುವ ವಿಷಯ. ಕಳೆದ ಭಾನುವಾರ (ಅ.27) 115ನೇ ಸಂಚಿಕೆಯ ‘ಮನ್‌ ಕಿ ಬಾತ್’ (ಮನದ ಮಾತು) ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ವಿಚಾರವನ್ನು ಉಲ್ಲೇಖಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರವಾಗಿರುವಂತೆ ದೇಶದ ಜನರಿಗೆ ಸಲಹೆ ನೀಡಿದ್ದರು.

ಬರೋಬ್ಬರಿ 140 ಕೋಟಿಗೂ ಅಧಿಕ ಜನಸಂಖ್ಯೆಯೊಂದಿಗೆ ಮೊದಲ ಸ್ಥಾನದಲ್ಲಿರುವ ಭಾರತದಲ್ಲಿ, ಡಿಜಿಟಲ್ ಸಾಧನಗಳ ಬಳಕೆ ದುಪ್ಪಟ್ಟಿದೆ. ಡಿಜಿಟಲ್ ಸಾಧನಗಳ ಬಳಕೆ ಹೆಚ್ಚಾದಂತೆ ಡಿಜಿಟಲ್ ಅಪರಾಧಗಳ ಅಥವಾ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೊಸ ಹೊಸ ಸೈಬರ್ ಅಪರಾಧಗಳು ನಡೆಯುತ್ತಿವೆ. ಅವುಗಳನ್ನು ಪತ್ತೆಹಚ್ಚಿ ಜನರಿಗೆ ಪರಿಹಾರ ಕೊಡುವುದು ಕಾನೂನು ಪಾಲಕರಿಗೂ ಸವಾಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿವಿಧ ಸಂಸ್ಥೆಗಳ ಅಧಿಕಾರಿಗಳಂತೆ ಸೋಗು ಹಾಕಿ ಆಡಿಯೋ, ವಿಡಿಯೋ ಮೂಲಕ ಭಯ ಹುಟ್ಟಿಸಿ ಹಣ ಕಸಿಯುವ ಹೊಸ ಡಿಜಿಟಲ್ ವಂಚನೆ ಹೆಚ್ಚಾಗುತ್ತಿದೆ. ಈ ಬಗ್ಗೆ ಮನ್‌ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ್ದ ಪ್ರಧಾನಿ, ಕಾನೂನಿನಲ್ಲಿ ಡಿಜಿಟಲ್ ಬಂಧನದಂತಹ ವ್ಯವಸ್ಥೆ ಇಲ್ಲ. ಆ ಹೆಸರಿನಲ್ಲಿ ಯಾರಾದರು ನಿಮ್ಮನ್ನು ಸಂಪರ್ಕಿಸಿದರೆ, ಅದು ಖಂಡಿತವಾಗಿಯೂ ವಂಚನೆಯಾಗಿರುತ್ತದೆ ಎಂದಿದ್ದಾರೆ.

ಏನಿದು ಡಿಜಿಟಲ್ ಅರೆಸ್ಟ್‌?

ಸೈಬರ್ ವಂಚಕರು ಸಿಬಿಐ,ಇಡಿ, ನಾರ್ಕೋಟಿಕ್ಸ್ ಬ್ಯೂರೋ ಅಥವಾ ಕಸ್ಟಮ್ಸ್‌ ಅಧಿಕಾರಿಗಳಂತಹ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ ವಾಟ್ಸಾಪ್, ಸ್ಕೈಪ್‌ನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಆಡಿಯೋ-ವಿಡಿಯೋ ಬಳಸಿಕೊಂಡು ಜನರನ್ನು ಸಂಪರ್ಕಿಸಿ ಅವರಿಂದ ಹಣ ಸುಲಿಗೆ ಮಾಡುವ ಪ್ರಕ್ರಿಯೇ ಡಿಜಿಟಲ್ ಅರೆಸ್ಟ್‌. ಇಲ್ಲಿ ವಂಚಕರು ನಿಷೇಧಿಗಳ ವಸ್ತುಗಳ ಸಾಗಾಟ, ಮಾದಕ ವಸ್ತುಗಳ ವ್ಯವಹಾರ, ಹಣ ಅಕ್ರಮ ವರ್ಗಾವಣೆಯಂತಹ ಸುಳ್ಳು ಆರೋಪಗಳನ್ನು ಜನರ ಮೇಲೆ ಹೊರಿಸಿ, ಅವರನ್ನು ಬೆದರಿಸಿ ಹಣ ಪಡೆಯುತ್ತಾರೆ. ಇದಕ್ಕಾಗಿ ಮುಖ್ಯವಾಗಿ ಆಧಾರ್ ಕಾರ್ಡ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಡಿಜಿಟಲ್ ಅರೆಸ್ಟ್‌ ಮೂಲಕ ಹಣ ಸುಲಿಗೆ ಮಾಡುವ ವಂಚಕರು, ಸರ್ಕಾರಿ ಅಧಿಕಾರಿಗಳಂತೆ ಜನರನ್ನು ನಂಬಿಸಲು ಸಮವಸ್ತ್ರ, ಕಚೇರಿ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ. ಇಲ್ಲದಿದ್ದರೆ ಡೀಪ್‌ಫೇಕ್‌ನಂತಹ ಪರಿಕರಗಳನ್ನು ಬಳಸಿಕೊಂಡು ವಿಡಿಯೋ ಕರೆಗಳನ್ನು ಮಾಡುತ್ತಾರೆ. ಒಂದು ಸಲ ಬಲಿಪಶು ವಂಚಕರ ಜೊತೆ ಮಾತನಾಡಿದರೆ, ಅವರು ಮನೆ ಬಿಟ್ಟು ಹೋಗದಂತೆ, ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಪ್ರತ್ಯೇಕವಾಗಿರುವಂತೆ ವಂಚಕರು ನೋಡಿಕೊಂಡಿರುತ್ತಾರೆ. ಒಂದು ರೀತಿಯಲ್ಲಿ “ನಾನು ಏನೋ ತಪ್ಪು ಮಾಡಿದ್ದೇನೆ, ಬಂಧನದಲ್ಲಿದ್ದೇನೆ” ಎಂಬ ಭಾವನೆಯನ್ನು ಬಲಿಪಶುಗಳ ಮನಸ್ಸಿನಲ್ಲಿ ಮೂಡಿಸುತ್ತಾರೆ.

ಸುಳ್ಳು ತನಿಖೆ, ಜೈಲು ಇತ್ಯಾದಿ ವಿಚಾರಗಳನ್ನು ವಿಡಿಯೋ, ಆಡಿಯೋ ಕರೆಗಳ ಮೂಲಕವೇ ಮಾಡುವ ವಂಚಕರು, ಬಲಿಪಶು ಇರುವ ಜಾಗದ ಮೇಲೆ ನಿಗಾ ಇಟ್ಟು ಅವರಲ್ಲಿ ಭಯ ಮೂಡಿಸುತ್ತಾರೆ. ನಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿಯದ ಅಮಾಯಕ ಜನರು ವಂಚಕರು ಹೇಳಿದಂತೆ ಕೇಳಲು ಶುರು ಮಾಡುತ್ತಾರೆ. ತಾನು ಅನುಭವಿಸುತ್ತಿರುವ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಇದರ ಲಾಭ ಪಡೆಯುವ ವಂಚಕರು ಹಣ ಸುಲಿಗೆ ಮಾಡುತ್ತಾರೆ.

ವಂಚಕರು ತಮ್ಮನ್ನು ನಂಬುವಂತೆ ಮಾಡಲು ನಕಲಿ ಬಂಧನ ವಾರೆಂಟ್, ನ್ಯಾಯಾಲಯದ ಆದೇಶ ಪ್ರತಿಗಳನ್ನು ತೋರಿಸುತ್ತಾರೆ. ಅದನ್ನು ಬಲಿಪಶುವಿನ ಮೊಬೈಲ್‌ಗೆ ಕಳುಹಿಸಿಕೊಡುತ್ತಾರೆ. ಕೆಲವೊಮ್ಮೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಕಲಿ ನ್ಯಾಯಾಲಯದ ಕಲಾಪಗಳನ್ನು ನಡೆಸುತ್ತಾರೆ.

ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಪ್ರಕಾರ, ಭಾರತದಲ್ಲಿ 2024ರಲ್ಲಿ ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡಿದೆ. ಮೊದಲ ತ್ರೈಮಾಸಿಕವೊಂದರಲ್ಲೇ ಭಾರತೀಯರು ಡಿಜಿಟಲ್ ವಂಚನೆಗಳಿಂದ 120.3 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ಹೆಚ್ಚಿನವು ಡಿಜಿಟಲ್ ಬಂಧನ ಪ್ರಕರಣಗಳಾಗಿವೆ.

ಇತ್ತೀಚಿನ ಒಂದು ಘಟನೆಯಲ್ಲಿ, ವರ್ಧಮಾನ್ ಗ್ರೂಪ್ ಅಧ್ಯಕ್ಷ ಎಸ್‌ಪಿ ಓಸ್ವಾಲ್ ಅವರನ್ನು ಎರಡು ದಿನಗಳ ಕಾಲ ಸ್ಕೈಪ್ ಕಣ್ಗಾವಲಿನಲ್ಲಿ ಇರಿಸಿದ್ದ ವಂಚಕರು “ಡಿಜಿಟಲ್‌ನಲ್ಲಿ ಅರೆಸ್ಟ್‌” ಎಂದು ಹೆದರಿಸಿ ಅವರಿಂದ ಬರೋಬ್ಬರಿ 7 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದ್ದರು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನಕಲಿ ಕಲಾಪ ಸೃಷ್ಟಿಸಿದ್ದ ವಂಚಕರು, ಮುಖ್ಯನ್ಯಾಮೂರ್ತಿ ಡಿವೈ ಚಂದ್ರಚೂಡ್ ಅವರ ಹೆಸರಿನಲ್ಲಿ ಆದೇಶಗಳನ್ನೂ ನೀಡಿದ್ದರು.

ಅದೇ ರೀತಿ, ಹೈದರಾಬಾದ್‌ನ ಟೆಕ್ಕಿಯೊಬ್ಬರು ಅಕ್ಟೋಬರ್ 27ರಂದು 30 ಗಂಟೆಗಳ ಕಾಲ ಅಗ್ನಿಪರೀಕ್ಷೆಯನ್ನು ಎದರಿಸಿದ್ದರು. ಈ ಸಮಯದಲ್ಲಿ ಸೈಬರ್ ಅಪರಾಧಿಗಳು ಅವರ ಆಧಾರ್‌ ಕಾರ್ಡ್‌ಗೆ ಹಣ ಅಕ್ರಮ ವರ್ಗಾವಣೆಯ ಸುಳ್ಳು ಆರೋಪದ ಸಂಬಂಧ ಕಲ್ಪಿಸಿ ಲಾಡ್ಜ್‌ನಲ್ಲಿ ಉಳಿಯುವಂತೆ ಒತ್ತಾಯಿಸಿದ್ದರು. ಕೊನೆಗೂ ವಂಚಕರ ಕೈಯಿಂದ ತಪ್ಪಿಸಿಕೊಂಡಿದ್ದ ಟೆಕ್ಕಿ ಸೈಬರ್ ಕ್ರೈಮ್ ಅಧಿಕಾರಿಗಳ ಸಹಾಯ ಕೋರಿದ್ದರು.

ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ವಂಚಕರು ಜನರನ್ನು ಮಾನಸಿಕವಾಗಿ ಭಯಪಡಿಸುವ ಮತ್ತು ತುರ್ತು, ಗಂಭೀರ ಪರಿಸ್ಥಿಗಳನ್ನು ಸೃಷ್ಟಿಸುತ್ತಾರೆ. ಬಲಿಪಶುಗಳಿಗೆ ಅನುಸರಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂಬಂತೆ ಅನಿಸಬೇಕು ಆ ರೀತಿ ಮಾಡುತ್ತಾರೆ. ಹಾಗಾಗಿ, ಜನರು ಒಂದು ಕ್ಷಣ ನಿಂತು, ಯೋಚಿಸಿ ನಂತರ ಮುಂದಿನ ಹೆಜ್ಜೆಯಿಡಬೇಕು. ಆಗ ಮಾತ್ರ ಡಿಜಿಟಲ್ ಭದ್ರತೆ ಸಾಧ್ಯ ಎಂದು ಪ್ರಧಾನಿ ಮೋದಿ ಮನ್‌ ಕಿ ಬಾತ್‌ನಲ್ಲಿ ಹೇಳಿದ್ದಾರೆ.

“ನಿಮಗೆ ಅಪರಿಚಿತ ಕರೆ ಬಂದ ತಕ್ಷಣ ನಿಂತು ಯೋಚಿಸಿ, ಗಾಬರಿಯಾಗಬೇಡಿ, ಶಾಂತವಾಗಿರಿ, ಯಾವುದೇ ಆತುರದ ಕ್ರಮಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಾಧ್ಯವಾದರೆ ಬಂದಿರುವ ಕರೆಯ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ. ಯಾವುದೇ ಸರ್ಕಾರಿ ಸಂಸ್ಥೆಯು ನಿಮಗೆ ಡಿಜಿಟಲ್ ಅರೆಸ್ಟ್‌ ಎಂದು ಬೆದರಿಕೆ ಹಾಕುವುದಿಲ್ಲ. ಏನಾದರು ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಬಂದರೆ ಏನೋ ಮೋಸ ನಡೆಯುತ್ತಿದೆ ಎಂದು ತಿಳಿಯಿರಿ” ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.

ನಿಮಗೆ ಏನಾದರು ಅನುಮಾನಾಸ್ಪದ ಕರೆಗಳು ಬಂದರೆ, ರಾಷ್ಟ್ರೀಯ ಸೈಬರ್ ಸಹಾಯವಾಣಿ 1930, ಅಥವಾ cybercrime.gov.in ಗೆ ಮಾಹಿತಿ ನೀಡಿ. ಆ ಬಗ್ಗೆ ನಿಮ್ಮ ಕುಟುಂಬ ಮತ್ತು ಪೊಲೀಸರ ಗಮನಕ್ಕೆ ತನ್ನಿ. ಸಾಕ್ಷ್ಯಗಳನ್ನು ಸಂಗ್ರಹಿಸಲು ಮರೆಯದಿರಿ ಎಂದಿದ್ದಾರೆ.

ಇದನ್ನೂ ಓದಿ : ಓಲಾ ಕಂಪನಿ ಸೇರುವಂತೆ ಭವಿಶ್ ಅಗರ್ವಾಲ್ ಕೊಟ್ಟ ಆಫರ್ ಒಪ್ಪಿಕೊಂಡ ಕುನಾಲ್ ಕಮ್ರಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....