HomeUncategorizedಹನಿ ಟ್ರ್ಯಾಪ್ (ಮಧುಪಾಶ) ಎಂದರೇನು: ಬೈ ಡೇಟಾಮ್ಯಾಟಿಕ್ಸ್

ಹನಿ ಟ್ರ್ಯಾಪ್ (ಮಧುಪಾಶ) ಎಂದರೇನು: ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

‘ಕೊಲೆಯಲ್ಲವೀ ಬಲೆಯು ಮೈಮೇಲಿನ ಕಲೆಯು’

ಈ ವಾರದ ನಾಡಿನ ಮೂರ್ಖರ ಪೆಟ್ಟಿಗೆಯ ಮುಂದೆ ಕೂತ ಹಿರಿ ಕಿರಿಯರನ್ನೆಲ್ಲಾ ಮೋಡಿ ಮಾಡಿದ ಸುದ್ದಿ ಹನಿ ಟ್ರ್ಯಾಪಿನದ್ದು.

ಹಂಗಾರ ಏನಿದು? ಇಲ್ಲಿರೋ ಪ್ರಶ್ನೆ ನಮ್ಮ ರಾಜ್ಯದಾಗ ಆಗಿದ್ದು ಏನು ಅಂತ ಅಲ್ಲಾ. ಯಾಕಂದರ ಅದರಾಗ ತಪ್ಪು ಮಾಡಿದವರು ಇತರರ ವಿರುದ್ಧ ಕೋರ್ಟಿಗೆ ಹೋಗಿ ತಮ್ಮ ಹೆಸರು ತಗೀಬಾರದು ಅಂತ ತಡೆಯಾಜ್ಞೆ ತಂದಾರ.

ನಾವು ಇಲ್ಲಿ ನೋಡಬೇಕಾಗಿರೋದು ಮಧುಪಾಶ ಅಂದರ ಏನೂಂತ, ಅದರ ಇತಿಹಾಸ ಎಷ್ಟು ವರ್ಣರಂಜಿತ ಅನ್ನೋದನ್ನ.

ಇದು ಸಾವಿರಾರು ವರ್ಷಗಳಿಂದ ನಡಕೊಂಡು ಬಂದಿರೋ ಪದ್ಧತಿ. ಇದನ್ನು ಸರಕಾರಗಳು, ಮಿಲಿಟರಿ ಆಡಳಿತಗಾರರು, ಸರ್ವಾಧಿಕಾರಿಗಳು, ಸೈನಿಕರು, ಪೊಲೀಸರು, ಹೋಗಲಿ ಹೊಡದಾಡಿಕೊಳ್ಳೋ ಅಣ್ಣಾ ತಮ್ಮಾ ಸಹಿತ ಮಾಡಿಕೊಂಡು ಬಂದಾರ.

2010ರಾಗ ಬ್ರಿಟಿಷ ಸರಕಾರ ತಮ್ಮಲ್ಲಿನ ಅಧಿಕಾರಿಗಳಿಗೆ, ಸೈನಿಕರಿಗೆ, ವ್ಯಾಪಾರಸ್ಥರಿಗೆ, ಯೂನಿವರ್ಸಿಟಿ ಶಿಕ್ಷಕರಿಗೆ ಎಲ್ಲಿರಿಗೆ ಒಂದು ನೋಟಿಸು ಕೊಟ್ಟಿತು. ಚೈನಾದ ಬೇಹುಗಾರರು ಬಂದು ನಿಮ್ಮನ್ನು ಪ್ರೇಮ ಪಾಶದೊಳಗ ಕೆಡವಬಹುದು. ನಿಮ್ಮಿಂದ ಸರಕಾರಿ ರಹಸ್ಯಗಳನ್ನ ಪಡಕೊಳ್ಳಿಕ್ಕೆ ಪ್ರಯತ್ನ ಮಾಡಬಹುದು. ಇದರಿಂದ ನೀವು ದೂರ ಇರಿ. ಅಂತ ಅದರಾಗ ಬರದಿತ್ತು. “ಅವತ್ತಿನಿಂದ ಸದ್ ಗ್ರಹಸ್ಥರು ಅನ್ನಿಸಿಕೊಂಡವರು ಏಷಿಯಾದ ಹೆಣ್ಣುಮಕ್ಕಳನ್ನು ಕಂಡರೆ ಓಡಲಿಕ್ಕೆ ಶುರುಮಾಡಿದರು” ಅಂತ ಅಲ್ಲಿನ ನಿಯತಕಾಲಿಕ ಒಂದು ವರದಿ ಮಾಡಿತ್ತು.

ಅಬಲೆಯರನ್ನ ಒಳಗೆ ಹಾಕಿಕೊಂಡು ದೇಶದ ರಹಸ್ಯ ಕದಿಯೋ ಜೇಮ್ಸ್ ಬಾಂಡನ್ನ ಜಗತ್ತಿಗೆ ಪರಿಚಯ ಮಾಡಿದ ಇಂಗ್ಲಂಡಿನೊಳಗ ತಮ್ಮ ಮ್ಯಾಲೆ ಪ್ರೇಮ ಪಾಶದಿಂದ ರಹಸ್ಯ ಕದಿಯೋರು ಬಂದಾರ ಅನ್ನೋ ಸುದ್ದಿಯೇ ಸ್ಪೋಟಕವಾಗಿತ್ತು.

ಹಂಗಂತ ಇದರಾಗ ಬರೇ ಹೆಣ್ಣುಮಕ್ಕಳು ಇರೋದಿಲ್ಲ. ಹಿರಿಯ ಮಹಿಳಾ ಅಧಿಕಾರಿಗಳ ಹತ್ತಿರ ರಹಸ್ಯ ಮಾಹಿತಿ ಕದಿಯಲಿಕ್ಕೆ ಅಂತ ಪೂರ್ವ ಜರ್ಮನಿಯವರು ಪಶ್ಚಿಮ ಜರ್ಮನಿಗೆ ಸುಂದರಾಂಗರನ್ನ ಕಳಿಸಿದರಂತ. ಅದರಲ್ಲಿ ಒಬ್ಬ ಕಸಬುದಾರ ಒಬ್ಬ ಮಹಿಳಾ ಅಧಿಕಾರಿಯನ್ನು ಪ್ರೇಮಿಸೋ ನಾಟಕ ಮಾಡಿದ. ಅದು ಎಷ್ಟು ನೈಜವಾಗಿತ್ತು ಅಂದರ ಆತ ಬೇಹುಗಾರ, ನಿನ್ನನ್ನು ಮೋಸ ಮಾಡಿದ್ದಾನೆ ಅಂತ ಸಾಕ್ಷಿ ಸಮೇತ ತೋರಿಸಿದ ಮ್ಯಾಲೆ ಸಹ ಆ ಮಹಿಳೆ ಅದು ಸಾಧ್ಯವೇ ಇಲ್ಲ. ಆತ ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಅಂತ ವಾದಿಸಿದಳಂತ.

ಮಾತಾ ಹರಿ
ಜಾಗತಿಕ ಮಿಲಿಟರಿ ಇತಿಹಾಸದೊಳಗ ಅತಿ ಕುಖ್ಯಾತ ಬೇಹುಗಾರ್ತಿ ಮಾತಾ ಹರಿ. ಹೆಸರು ನೋಡಿದರ ನಮ್ಮ ಓಣಿ ಮುತೈದಿಗತೆ ಕಾಣೋ ಇಕಿಗೂ ಭಾರತಕ್ಕೂ ಯಾವ ಸಂಬಂಧನೂ ಇಲ್ಲ.

 

ಇಕಿ ನೆದರಲ್ಯಾಂಡಿನಕಿ. ಜಾವಾದೊಳಗ ನೃತ್ಯಗಾರ್ತಿ ಆಗಿದ್ಲು. ಫ್ರಾನ್ಸ್‌ ದೇಶದ ರಹಸ್ಯಗಳನ್ನ ಜರ್ಮನಿಗೆ ಮಾರಲಿಕ್ಕೆ ಇಕಿಗೆ ಸ್ಪೇನಿನೊಳಗಿನ ಅಧಿಕಾರಿಯೊಬ್ಬ ರೊಕ್ಕ ಕೊಡತಿದ್ದಾ ಅಂತ ಹೇಳಿ ಇಕಿನ್ನ ಜರ್ಮನಿಯವರು ದಸ್ತಗಿರಿ ಮಾಡಿದರು. ಒಂದು ವಾಕ್ಯದೊಳಗ ನಾಲ್ಕು ದೇಶಗಳನ್ನು ಹರಾಜು ಹಾಕಿದ ಇಕಿ ಅಪ್ರತಿಮ ದೇಶಭಕ್ತೆ. ಯಾವ ದೇಶದ್ದು ಅನ್ನೋದಕ್ಕ ಮೇಲಿನ ಸಾಲನ್ನು ಇನ್ನೊಮ್ಮೆ ಓದರಿ. ಆದರೆ ಅಕಿ ವಿರುದ್ಧ ಆ ಯಾವ ನಾಲ್ಕು ದೇಶಗಳಿಗೂ ಸಾಕ್ಷಿ ಸಿಗಲಿಲ್ಲ. ನಿನ್ನ ತಪ್ಪಿರಲಿಕ್ಕಿಲ್ಲ. ಆದರ ನಿನ್ನಂಗ ಯಾರೂ ಆಗಬಾರದು ಅಂತ ಅಕಿನ್ನ ಗುಂಡು ಹಾಕಿ ಕೊಂದರು. ಬಾಟಲಿ ತಗದು ಹಾಕೋದಲ್ಲ. ಟ್ರಿಗರ್ ಒತ್ತಿ ಹಾಕೋದು. ಅಂದರ ಮಧು ಪಾಶ ಅನ್ನೋದು ಎಷ್ಟು ಡೇಂಜರೋ, ಅದರಂಗ ಕಾಣೋದೆಲ್ಲಾ ಅಷ್ಟೇ ಡೇಂಜರು.

ವನೂನು

ಇವನ್ಯಾವನು ಅಂತ ಡೌಟು ಬರೋ ಅಂಥಾ ಹೆಸರಿನ ಮರಡೋಚಿ ವನೂನು ಅನ್ನೋ ಇಸ್ರೇಲಿ ವಿಜ್ಞಾನಿ ತನ್ನ ದೇಶದ ಅಣು ಬಾಂಬಿನ ತಯಾರಿಕೆ ಕಾರ್ಖಾನೆಯ ಫೋಟೋ ತೊಗೊಂಡು ಬ್ರಿಟನ್ನಿನ ಪತ್ರಿಕೆಗಳಿಗೆ ಕೊಟ್ಟ. ಅವು ಖರೇನೋ ಸುಳ್ಳೋ ಅನ್ನೋದನ್ನ ಅವರು ಪತ್ತೇ ಮಾಡೋ ತನಕಾ ಅವನಿಗೆ ಅವರು ಒಂದು ಹೊಟೆಲಿನೊಳಗ ಗುಪ್ತವಾಗಿ ಇಟ್ಟು ತಮ್ಮ ಖರ್ಚಿನೊಳಗ ಊರು ಸುತ್ತಾಡಿಸಿದರು. ಹಂಗ ಸೈಟ್ ಸೀಯಿಂಗ್ ಹೋದಾಗ ಅವನಿಗೆ ಒಂದು ಸೈಟಿಂಗ್ ಆತು. ಅಕಿ ಹೆಸರು ಸಿಂಡೀ. ಅವಳ ಜೊತೆ ನಾನು ನಾಕು ದಿವಸ ರೋಮಿಗೆ ಹೋಗತೇನಿ ಅಂತ ಆತ ಪತ್ರಿಕೆ ಸಂಪಾದಕರಿಗೆ ಹೇಳಿ ಹೋದ. ಹೋದವನನ್ನ ಇಸ್ರೇಲಿನ ಬೇಹು ಸಂಸ್ಥೆ ಮೊಸಾದ್‍ನ ಏಜೆಂಟರು ನಾಕು ಬಿಗಿದು ಸುಮ್ಮ ಇರು ಅಂದರ ಏನೇನೋ ಮಾಡತೀಯಾ ವನೂನು ಅಂತ ಇಸ್ರೇಲಿಗೆ ಕರಕೊಂಡು ಹೋಗಿ 18 ವರ್ಷ ಜೈಲಿನ್ಯಾಗ ಇಟ್ಟರು. ಆಮ್ಯಾಲೆ ಅವ ಹೊರಗ ಬಂದ. ಸಿಂಡೀ ಅನ್ನೋಕಿನೂ ಮೊಸಾದ್ ಏಜೆಂಟ್ ಅನ್ನೋ ವಿಚಾರ ಅವನಿಗೆ ಇನ್ನೂ ಹೊಸಾದು, ಪಾಪ.

ಇನ್ನೊಬ್ಬ ಇವನಾವ್
ಅರವತ್ತರ ದಶಕದಾಗ ಯೂಜೆನಿ ಇವನಾವ್ ಅಂತ ಒಬ್ಬ ರಷಿಯನ್ ಮಿಲಿಟರಿ ಅಧಿಕಾರಿ ಇಂಗ್ಲಂಡಿನಲ್ಲಿ ಮಾರು ವೇಷದಿಂದ ಇದ್ದ. ಹಂಗಂತ ಅವ ವೇಷ ಬದಲಿಸಿಗೊಳ್ಳೋ ಅಷ್ಟು ಅಸಹ್ಯ ಇರಲಿಲ್ಲ. ಖರೇ ಅಂದರ ಅವ ಎಷ್ಟು ಚಂದ ಇದ್ದಾ ಅಂದರ ಆತ ಬೀದಿಯಲ್ಲಿ ನಡೆದರೆ ನೆಲ ಎದ್ದು ಅವನನ್ನು ಚುಂಬಿಸುತ್ತಿತ್ತು ಅಂತ ಕೆಲವು ಪತ್ರಿಕೆಗಳು ಬರೆದವು. ಅವನು ಸ್ಟೀಫನ್ ವಾರ್ಡ್ ಅನ್ನೋ ಸಾಹುಕಾರನ ಪಾರ್ಟಿಗೆ ಹೋದ. ಅಲ್ಲಿ ಕ್ರಿಸ್ಟೀನ್ ಕೀಲರ್ ಅನ್ನೋ ಹುಡಿಗಿ ಅವನ ಕಿಲ್ಲರ್ ಇನಸ್ಟಿಂಕ್ಟ್ ಅನ್ನ ನೋಡಿ ಅವನ ಬಲಿಗೆ ಬಿದ್ಲು. ತನ್ನ ಗೆಣೆಯನಾಗಿದ್ದ ಬ್ರಿಟನ್ನಿನ ರಕ್ಷಣಾ ಖಾತೆ ಸಚಿವ ಜಾನ್ ಪೋಫೂಮೋ ಅನ್ನೋ ಮನುಷ್ಯನಿಗೆ ಕೈ ಕೊಟ್ಟಳು. ಈ ರಷಿಯನ್ನಿನ ನಸುಗೆಂಪು ಕೈ ಹಿಡದ್ಲು.

ಆ ಪೋಫೂಮೋ ಅನ್ನೋ ಪ್ರಾಣಿ ತನ್ನ ಕೆಲಸಾ ಬಿಟ್ಟು ಅಮೇರಿಕಾದ ಕ್ಷಿಪಣಿಗಳನ್ನ ಜರ್ಮನಿಗೆ ಮಾರಾಟ ಮಾಡಿಸೋ ದಲ್ಲಾಳಿ ಕೆಲಸ ಮಾಡಲಿಕ್ಕೆ ಹತ್ತಿದ್ದ. ಈ ಕೀಲರ್ ಅನ್ನೋ ಮಂತ್ರಿಯ ಗೆಣತಿ ಅವನ್ಯಾವನೋ ರಷಿಯನ್ನನ ಹಿಂದೆ ಬಿದ್ದಾಳ ಅನ್ನೋದನ್ನ ಬ್ರಿಟಿಷ್‌ ಪತ್ರಿಕೆಗಳು ತಮ್ಮ ಮುಖಪುಟಕ್ಕಿಂತ ದೊಡ್ಡ ಅಕ್ಷರಗಳಲ್ಲಿ ಬರದವು. ಮಂತ್ರಿಯ ಹೆಂಡತಿ ಅವನಿಗೆ ಬೈದಳು, ಕಣ್ಣೀರು ಹಾಕಿದ್ಲು, ಆದರ ಬಿಟ್ಟು ಹೋಗಲಿಲ್ಲ. ಮಂತ್ರಿ ಮಹಾಷಯರು ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಸಂಗತೆ ರಾಜೀ ಮಾಡಿಕೊಳ್ಳಬೇಕಾತು. ಅವನಾವ್‍ನನ್ನು ಅವನಾವ ಊರಿಂದಾ ಬಂದಿದ್ದನೋ ಅಲ್ಲಿಗೆ ವಾಪಸ್ ಕಳಿಸಲಾಯಿತು. ಆದರ ಕೀಲರಮ್ಮಾ ಅವನ್ಯಾವನಿಗೋ ಕ್ಷಿಪಣಿ ರಹಸ್ಯಗಳನ್ನ ಕೈಮುಚ್ಚಿ ಕೊಟ್ಟಳು ಅಂತ ಹೇಳಲಿಕ್ಕೆ ಸರಕಾರಕ್ಕ, ಪತ್ರಿಕೆಗಳಿಗೆ ಸಾಕ್ಷಿನ ಸಿಗಲಿಲ್ಲ.

ತೋಳ ಹೋತು ತೋಳ

ಮಾಸ್ಕೋದಲ್ಲಿನ ಬ್ರಿಟಿಷ್ ಪತ್ರಕರ್ತ ಜೆರೆಮಿ ವೋಲ್ಫೆನ್‍ಡನ್ ಸಲಿಂಗಕಾಮಿ ಅನ್ನೋದು ರಷಿಯಾ ಸರಕಾರಕ್ಕೆ ಗೊತ್ತಾತು. ಅವರು ಅವನ ಮ್ಯಾಲೆ ತೋಳ ಬಿದ್ದಂಗ ಬಿದ್ದರು. ಅವನು ಹೋಗುತ್ತಿದ್ದ ಕಟಿಂಗ್ ಸಲೂನಿನಲ್ಲಿನ ಹುಡುಗನ ಜೊತೆ ಅವನು ಪ್ರೇಮ ಪಾಶಕ್ಕ ಬೀಳೋಹಂಗ ಮಾಡಲಾಯಿತು. ಅವನು ಮೈಮರೆತಾಗ ಫೋಟೋ ತಗದು ಅವನನ್ನು ಬ್ಲಾಕ್ ಮೇಲ್ ಮಾಡಲಾಯಿತು. ನಮ್ಮ ದೇಶದಲ್ಲಿರೋ ನಿಮ್ಮ ದೇಶದ ಜನರ ಮೇಲೆ ಬೇಹುಗಾರಿಕೆ ಮಾಡು. ಇಲ್ಲಾಂದರ ಪೇಪರಿನ್ಯಾಗ ನಿನ್ನ ಫೋಟೋ ನೋಡು ಅಂತ ಹೇಳಿ ಅವನಿಗೆ ಹೆದರಿಕೆ ಹಾಕಿದರು. ಅವನು ಓಡಿ ಹೋಗಿ ಇಂಗ್ಲೆಂಡಿನ ಸರಕಾರಕ್ಕ ಅವರು ನನಗ ಹಿಂಗಿಂಗ ಮಾಡ್ಯಾರ ಅಂತ ಛಾಡಿ ಹೇಳಿದ. ಇರಲಿ, ಅವರಿಗೆ ಒಂದಿಷ್ಟು ಉಪಯೋಗ ಇಲ್ಲದ ಮಾಹಿತಿ ತೊಗೊಂಡು ಕೊಡು. ಆದರ ಅವರ ಮಾಹಿತಿ ತೊಗೊಂಡು ನಮಗ ಕೊಡು. ಇಲ್ಲಾಂದರ ನೋಡು. ನಿನ್ನ ರಷಿಯಾದ ಕರಾಮತ್ತಿನ ಫೋಟೋ ಇಂಗ್ಲೆಂಡಿನೊಳಗ ಬರತದ ಅಂತ ಹೇಳಿ ಹೆದರಿಸಿದರು. ಎರಡೂ ಕಡೆ ಸಿಕ್ಕೊಂಡು ಆತ ಕುಡುದು ಕುಡುದು 31 ವರ್ಷಕ್ಕ ಸತ್ತ.

ಮತ್ತೊಂದು ತೋಳ

ಮಾರ್ಕಸ್ ವೂಲ್ಫ್ ಅನ್ನೋ ಪೂರ್ವ ಜರ್ಮನಿಯ ಸೇನಾಧಿಕಾರಿ ಪಶ್ಚಿಮ ಜರ್ಮನಿ ಸರಕಾರದಲ್ಲಿ ಮದುವೆಯಾಗದೇ ಉಳಿದ ಮಧ್ಯ ವಯಸ್ಸಿನ ಮಹಿಳೆಯರ ಗೆಳೆತನ ಮಾಡಲು ಯುವ ತರುಣರ ಒಂದು ತಂಡವನ್ನೇ ಕಟ್ಟಿದ. ಅದರ ಹೆಸರು ರೋಮಿಯೋ ಕ್ಲಬ್. ಬಹುಶಃ ಇವರನ್ನು ನೋಡಿಯೇ ನಮ್ಮ ಆದಿತ್ಯನಾಥರು ರೋಮಿಯೋ ವಿರೋಧಿ ಪಡೆ ಮಾಡಿರಬೇಕು.

ಅವರು ನೂರಾರು ಮಹಿಳೆಯರ ಸ್ನೇಹ ಮಾಡಿದರು. ಹಲವಾರು ಜನ ಮದುವೆಯಾಗಿ ಪಶ್ಚಿಮ ಜರ್ಮನಿಯಲ್ಲಿ ಸಂಸಾರ ನಡೆಸಿದರು. ಅವರು ಸೈನ್ಯದ, ಸರಕಾರದ ವಿವಿಧ ಅಂಗಗಳ ರಹಸ್ಯಗಳನ್ನು ಹತ್ತಾರು ವರ್ಷ ವಿಲೇವಾರಿ ಮಾಡಿದರು. ಕೊನೆಗೆ ಎರಡೂ ಜರ್ಮನಿಗಳು ಒಂದಾದಾಗ ಇವರೆಲ್ಲ ಸೆರೆ ಸಿಕ್ಕರು. ಇವರ ವಿಚಾರಣೆಯಲ್ಲಿ ಇವರು ಈಗ ನಮ್ಮ ಪ್ರಜೆಗಳು. ಇವರ ಮೇಲೆ ದೇಶದ್ರೋಹದ ಆರೋಪ ಹೊರಿಸುವುದು ಹೇಗೆ ಅಂತ ಅನೇಕರನ್ನು ಬಿಟ್ಟರು. ಮಾರ್ಕಸ್ ವೂಲ್ಫ್‌ನನ್ನು ತೋಳ ಬಂದೇ ಇಲ್ಲ, ಎಲ್ಲಾ ಸುಳ್ಳೇ ಅನ್ನೋ ಹಂಗ ಎರಡೇ ವರ್ಷ ಜೈಲಿಗೆ ಹಾಕಿದರು. ಆ ಪುಣ್ಯಾತ್ಮ ಹೊರಗ ಬಂದು ಮುಖವಿಲ್ಲದ ಮನುಷ್ಯನ ಕತೆ ಅಂತ ಕಾದಂಬರಿ ಬರದು ಲಕ್ಷಾಧೀಶನಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ಬೆದರಿಕೆ: ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಕರೆ ಮಾಡಿ ಅಸಭ್ಯವಾಗಿ ನಿಂದಿಸಿ,...

ಭೀಮಾ ಕೋರೆಗಾಂವ್ ಪ್ರಕರಣ: ನಾಲ್ಕು ವರ್ಷಗಳ ನಂತರ ಇಬ್ಬರಿಗೆ ಬಾಂಬೆ ಹೈಕೋರ್ಟ್‌ನಿಂದ ಜಾಮೀನು

ಎಲ್ಗರ್ ಪರಿಷತ್ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಾಲ್ಕು ವರ್ಷಗಳ ನಂತರ, ಸಾಮಾಜಿಕ ಕಾರ್ಯಕರ್ತರಾದ ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಈಗಾಗಲೇ ಬಿಡುಗಡೆಯಾದ...

‘ಗುಜರಾತ್‌ನಂತೆಯೇ ಕೇರಳವೂ ಈಗ ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದೆ’: ಪ್ರಧಾನಿ ನರೇಂದ್ರ ಮೋದಿ 

ತಿರುವನಂತಪುರಂ: ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಿರುವನಂತಪುರಂ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ವಿಜಯವನ್ನು "ಬದಲಾವಣೆಗೆ ಮಹತ್ವದ ಜನಾದೇಶ" ಎಂದು ಶ್ಲಾಘಿಸಿದ್ದಾರೆ.  ಇದೇ ವೇಳೆ "ಜನಪರ ಮತ್ತು...

ರಾಜಸ್ಥಾನ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ನಡುವೆ ಪ್ರೀತಿ: ಮದುವೆಗಾಗಿ ಪೆರೋಲ್ ಮೇಲೆ ಹೊರ ಬಂದ ಕೊಲೆ ಅಪರಾಧಿಗಳು

ಜೈಪುರದ ಸಂಗನೇರ್ ಓಪನ್ ಜೈಲಿನಲ್ಲಿ(ಮುಕ್ತ ಜೈಲು) ಪ್ರಾರಂಭವಾದ ಇಬ್ಬರು ಕೊಲೆ ಅಪರಾಧಿಗಳ ನಡುವಿನ ಪ್ರಣಯವು ಸಾರ್ವಜನಿಕ ಜೀವನಕ್ಕೂ ಕಾಲಿರಿಸಿದೆ. ಕೊಲೆ ಪ್ರಕರಣಗಳಲ್ಲಿ ಜೀವಾವಧಿಗೆ ಒಳಗಾಗಿರುವ ಇಬ್ಬರು ಕೈದಿಗಳು ಮದುವೆಯಾಗಲು ಪೆರೋಲ್ ಮೇಲೆ ಹೊರಬಂದಿದ್ದಾರೆ. ಅಪರಾಧ...

‘ಅತ್ಯಾಚಾರ-ಕೊಲೆ ಸಣ್ಣ ಘಟನೆ’: ಸಂಸದ ರಾಜಶೇಖರ್ ಹಿಟ್ನಾಳ್ ವಿವಾದಾತ್ಮಕ ಹೇಳಿಕೆ: ಸಂಸದರ ಹೇಳಿಕೆಗೆ ವ್ಯಾಪಕ ಖಂಡನೆ 

ಕೊಪ್ಪಳ: ಒಂದು ವರ್ಷದ ಹಿಂದೆ ಸಾಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ವ್ಯಕ್ತಿಯ ಕೊಲೆ ಪ್ರಕರಣ ಸಣ್ಣದಾಗಿದ್ದರೂ ಮಾಧ್ಯಮಗಳು ವೈಭವೀಕರಿಸಿದ್ದರಿಂದ ಪ್ರವಾಸೋದ್ಯಮಕ್ಕೆ ವ್ಯಾಪಕ ಪೆಟ್ಟು ಬಿದ್ದಿದೆ ಎಂದು ಸಂಸದ ರಾಜಶೇಖರ...

ರಾಹುಲ್ ಕಡೆಗಣನೆ ಆರೋಪ: ಅಸಮಾಧಾನಗೊಂಡ ಶಶಿ ತರೂರ್, ಕೇರಳ ಕಾಂಗ್ರೆಸ್ ಕಾರ್ಯತಂತ್ರದ ಸಭೆಗೆ ಗೈರಾಗುವ ಸಾಧ್ಯತೆ!

ನವದೆಹಲಿ: ಕೇರಳ ಕಾಂಗ್ರೆಸ್ ಘಟಕದಲ್ಲಿ ಹೊಸ ಬಿಕ್ಕಟ್ಟು ಉಂಟಾಗಿದ್ದು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ಕಡೆಗಣಿಸಿದ್ದರಿಂದ ಅಸಮಾಧಾನಗೊಂಡಿರುವ ಹಿರಿಯ ಸಂಸದ ಶಶಿ ತರೂರ್, ಚುನಾವಣಾ...

ಒಡಿಶಾ| ಮದುವೆ ಪ್ರಸ್ತಾಪ ತಿರಸ್ಕರಿಸಿದ ಮಹಿಳೆ ಮೇಲೆ ಸೇಡು; ನಕಲಿ ಖಾತೆ ತೆರೆದು ಜಗನ್ನಾಥ ದೇಗುಲ ಸ್ಪೋಟಿಸುವ ಬೆದರಿಕೆ

ಮಹಿಳೆಯ ಹೆಸರಿನಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಖಾತೆಯನ್ನು ರಚಿಸಿ ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ...

ಬೈಕ್ ಟ್ಯಾಕ್ಸಿ ನಿಷೇಧ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ಪರ್ಮಿಟ್ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಜನವರಿ 23 ರಂದು ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಮತಿ ನೀಡಿದ್ದು, ಬೈಕ್ ಟ್ಯಾಕ್ಸಿ ಸಂಗ್ರಾಹಕರು, ವೈಯಕ್ತಿಕ ಬೈಕ್ ಟ್ಯಾಕ್ಸಿ ಮಾಲೀಕರು ಮತ್ತು ಇತರರು ಸಲ್ಲಿಸಿದ ಮೇಲ್ಮನವಿಗಳನ್ನು ಅಂಗೀಕರಿಸಿದೆ. ಮುಖ್ಯ...

ಮಧ್ಯಪ್ರದೇಶ: ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 22 ಮಂದಿ ಅಸ್ವಸ್ಥ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ ಕನಿಷ್ಠ 22 ಜನರು ಅಸ್ವಸ್ಥರಾಗಿದ್ದಾರೆ. ಕೆಲವೇ ವಾರಗಳ ಹಿಂದೆ ಕಲುಷಿತ ನೀರಿನಿಂದ ಹರಡುವ ರೋಗಗಳಿಂದ ಕನಿಷ್ಠ 23 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಆಸ್ಪತ್ರೆಗೆ ದಾಖಲಾಗಿದ್ದರು....

ರಾಜ್ಯಪಾಲರ ಭಾಷಣ ಪದ್ಧತಿ ಕೊನೆಗೊಳಿಸುವ ಸಮಯ ಬಂದಿದೆ: ಮುಖ್ಯಮಂತ್ರಿ ಸ್ಟಾಲಿನ್

ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಹೆಹ್ಲೋಟ್ ಸದನವನ್ನು ಉದ್ದೇಶಿಸಿ ಸಂಪೂರ್ಣ ಸಾಂಪ್ರದಾಯಿಕ ಭಾಷಣವನ್ನು ಓದದೆ ವಿಧಾನಸಭೆಯಿಂದ ನಿರ್ಗಮಿಸಿರುವುದು ಇದೀಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ...