Homeಮುಖಪುಟನಾವು ಯಾವುದನ್ನು ಮಾಡಬಾರದು? ಯೋಗೇಂದ್ರ ಯಾದವ್

ನಾವು ಯಾವುದನ್ನು ಮಾಡಬಾರದು? ಯೋಗೇಂದ್ರ ಯಾದವ್

- Advertisement -
- Advertisement -

ಹರಿಯಾಣ ರಾಜ್ಯದ ಯೋಗೇಂದ್ರ ಯಾದವ್ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿರುತ್ತಲೇ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದರು. ಆದರೆ, ಅವರ ರಾಜಕೀಯ ಶಾಸ್ತ್ರದ ಪರಿಣಿತಿ ಅವರನ್ನು ದೆಹಲಿಗೆ, ಅಲ್ಲಿನ ಸಿಎಸ್‍ಡಿಎಸ್, ಟಿವಿ ಚರ್ಚೆ ಮತ್ತು ಅಂತಿಮವಾಗಿ ನೇರ ರಾಜಕಾರಣಕ್ಕೇ ಎಳೆದು ತಂದಿತು. ರೈತರ ಸಂಕಷ್ಟದ ನಿವಾರಣೆಗೆ ದೇಶಾದ್ಯಂತ ಓಡಾಡಿ ಸಂಘಟಿಸಿದ ಬೃಹತ್ ಹೋರಾಟದ ರೂವಾರಿ ಅವರು. ಇದೀಗ ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷರು.

ಭಾರತವೆಂಬ ಪರಿಕಲ್ಪನೆಯೇ ಹಿಂದೆಂದೂ ಕಾಣದಂತಹ ಸವಾಲನ್ನು ಎದುರಿಸುತ್ತಿದೆ. 2019ರ ಫಲಿತಾಂಶದ ನಂತರದಲ್ಲಿ ಭಾರತದ ಗಣತಂತ್ರವನ್ನು ಕೆಡವುವುದ ತಪ್ಪಿಸುವುದೇ ನಮ್ಮ ಕಾಲದ ಅತ್ಯಂತ ಜರೂರಿಯಾದ ಕಾರ್ಯವಾಗಿದೆ. ಇದು ನಮ್ಮ ಯುಗಧರ್ಮ. ಈ ತನಕ ಈ ಸವಾಲನ್ನು ಎದುರಿಸುತ್ತಿರುವ ರೀತಿಯಲ್ಲಿ ಒಂದೋ ಬೌದ್ಧಿಕ ಆಲಸ್ಯ, ರಾಜಕೀಯ ಪಕ್ಷಪಾತ ಅಥವಾ ಕೇವಲ ಮೋದಿ ವಿರೋಧದ ಗೀಳುಗಳು ಎದ್ದು ಕಾಣುತ್ತಿವೆ.

ಮೋದಿ ಸರಕಾರಕ್ಕೆ ಎದುರಾಗಿರುವ ವಿರೋಧದ ದೊಡ್ಡ ಸಮಸ್ಯೆಯೆಂದರೆ, ಈ ವಿರೋಧಿಗಳಲ್ಲಿ ಹೊಸ ಆಡಳಿತವು ಯಾವ ಮಟ್ಟಿಗೆ ಸವಾಲೊಡ್ಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವೇ ಇಲ್ಲ. ಈ ಪರಿವಾರದ ಆಳವಾದ ಬೇರುಗಳನ್ನು ಗುರುತಿಸದೆ, ತಕ್ಷಣದ ಪರಿಹಾರಗಳನ್ನು ಹುಡುಕುವುದರಾಚೆ ತಲೆ ಕೆಡಿಸಿಕೊಳ್ಳದಿರುವ ಸಮಸ್ಯೆ ಗಾಢವಾಗಿದೆ. ಇದುವರೆಗೆ, ಮೋದಿ ಆಡಳಿತಕ್ಕೆ ಬಂದಿರುವ ಪ್ರತಿಕ್ರಿಯೆಗಳು ಮುಂಚೆಯೇ ಊಹಿಸಬಹುದಾದಂಥವು ಮಾತ್ರವೇ ಆಗಿದೆ: ಮೋದಿ ಗುಳ್ಳೆ ತನ್ನಂತೆ ತಾನೇ ಒಡೆದು ಹೋಗಲಿ ಎಂದು ಬಯಸಿ ಕಾಯುವುದು; ಮೋದಿಯನ್ನು ವಿರೋಧಿಸುವುದಕ್ಕಾಗಿ ವಿರೋಧ ಎಂದು ತೋರುವಂತೆ ಪ್ರತಿಕ್ರಿಯಿಸುವುದು; ಅವರು ಯಾವುದರಲ್ಲಿ ಪ್ರಬಲರೋ ಅದೇರೀತಿಯಲ್ಲಿ ಎದುರಿಸುವ ಪ್ರಯತ್ನ; ಜನರ ಕಣ್ಣಲ್ಲಿ ಅಮಾನ್ಯರಾಗಿರುವ ಬಿಜೆಪಿ ವಿರೋಧಿ ಪಕ್ಷಗಳ ಮಹಾಕೂಟ ರಚಿಸುವುದು. ಇವ್ಯಾವುವೂ ಯಶಸ್ವಿಯಾಗುವ ಸಾಧ್ಯತೆಗಳಿಲ್ಲ. ಬಿಜೆಪಿ ವಿರೋಧಿ ಪಕ್ಷಗಳ ಮರ್ಯಾದೆ ಎಷ್ಟು ಹೋಗಿದೆ ಎಂದರೆ, ಈ ತನಕ ಇವರ ಯಾವುದೇ ಮೈತ್ರಿ ಯಶಸ್ವಿಯಾಗಿಲ್ಲ; ಇನ್ನೆಂದಿಗೂ ಯಶಸ್ವಿಯಾಗುವ ಸಾಧ್ಯತೆ ಇಲ್ಲ.

ನರೇಂದ್ರ ಮೋದಿ ಕುರಿತಾದ ಗೀಳಿನಲ್ಲಿ, ಆತನ ಟೀಕಾಕಾರರು, ಆತನನ್ನು ಇನ್ನೂ ದೊಡ್ಡವನನ್ನಾಗಿ ಮಾಡುತ್ತಾರೆ. ಸಕಾರಾತ್ಮಕವಾದ ಏನೇ ಕಂಡರೂ, ಅದರ ಹಿರಿಮೆಯನ್ನು ತನಗೇ ಆರೋಪಿಸಿಕೊಳ್ಳುವ ಮೋದಿಯನ್ನು ವಿರೋಧಿಸುವ ಭರದಲ್ಲಿ ಇವರೇನು ಮಾಡುತ್ತಿದ್ದಾರೆ ಗೊತ್ತೇ? ಕಂಡ ಸಮಸ್ಯೆಗಳಿಗೆಲ್ಲಾ ಮೋದಿಯೇ ಕಾರಣ ಎಂದು ಗೂಬೆ ಕೂರಿಸುತ್ತಾರೆ. ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಗುಂಪು ಹತ್ಯೆ ಇರಲಿ, ಕೃಷಿ ನೀತಿಯ ವೈಫಲ್ಯ ಇರಲಿ, ಯಾವುದೇ ಸಮತೋಲನ, ಲೆಕ್ಕಾಚಾರ ಇಲ್ಲದ ಬಜೆಟ್ ಇರಲಿ- ಪ್ರತಿಯೊಂದನ್ನೂ ಪ್ರಧಾನಮಂತ್ರಿಯ ಮೇಲೆ ಹೇರಲಾಗುತ್ತಿದೆ. ಮೋದಿಗೆ ಆತನ ಭಕ್ತರು ಕೊಡುವಷ್ಟೇ ಪ್ರಚಾರವನ್ನು ಆತನ ಟೀಕಾಕಾರರು ಕೊಡುತ್ತಿದ್ದಾರೆ.

ಎರಡನೆಯದಾಗಿ, ಮೋದಿ ವಿರೋಧಿಗಳು ತಕ್ಷಣದ ಪ್ರತಿಕ್ರಿಯೆ (knee-jerk ರಿಯಾಕ್ಷನ್) ನೀಡುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವುದೇ ನೀತಿ ಅಥವಾ ಧೋರಣೆಯು ಅವರ ಸರ್ಕಾರಕ್ಕೇ ಸಂಬಂಧಿಸಿದ್ದಾದ್ದರಿಂದ ನಾವು ಅದನ್ನು ವಿರೋಧಿಸಲೇಬೇಕು. ಆದರೆ, ಈಗ ಅವರ ಸರ್ಕಾರದ ನೀತಿಗಳ ವಿರುದ್ಧ ಬರುತ್ತಿರುವ ವಿಮರ್ಶೆಯು ಆ ನೀತಿಗಳ ವಿರೋಧಕ್ಕಿಂತ ಮೋದಿ ಸರ್ಕಾರದ ಅಡಿಯಲ್ಲಿ ಈ ನೀತಿಗಳು ಬಂದಿವೆ ಎನ್ನುವ ಕಾರಣಕ್ಕೇ ಬರುತ್ತಿದೆ ಎಂದು ನನಗನ್ನಿಸುತ್ತದೆ. ಅಂದರೆ, ಮೋದಿ ಏನೋ ಒಂದನ್ನು ಮಾಡಿದರೆ ನಾವು ವಿಮರ್ಶೆ ಮಾಡುತ್ತೇವೆ. ಒಂದು ವೇಳೆ ಅದನ್ನು ಮಾಡದಿದ್ದರೆ ಇನ್ನೂ ತೀವ್ರವಾಗಿ ವಿಮರ್ಶೆ ಮಾಡುತ್ತೇವೆ. ಇಂತಹ ವಿರೋಧದಿಂದ ಆಗುವ ಸಮಸ್ಯೆಯೇನೆಂದರೆ, ಈ ವಿರೋಧವನ್ನು ಜನಸಾಮಾನ್ಯರು ಒಪ್ಪುವುದಿಲ್ಲ. ಇದು ವಿರೋಧದ ಸಲುವಾಗಿ ವಿರೋಧ ಎಂದು ಸಹಜವಾಗಿಯೇ ಭಾವಿಸುತ್ತಾರೆ.

ಮೂರನೆಯ ಮತ್ತು ಮುಖ್ಯವಾದ ಸಂಗತಿಯೆಂದರೆ, ಮೋದಿ ವಿರೋಧಿಗಳು ನಿರಾಕರಣೆಯ ಭಾವದಲ್ಲಿ ಬದುಕುತ್ತಾರೆ. ಅವರು ಮೋದಿ ಅತ್ಯಂತ ಜನಪ್ರಿಯರು ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ ಮತ್ತು ಹಾಗಾಗಿ ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. 2019ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಮುಂಗಾಣುವುದರಲ್ಲಿನ ವೈಫಲ್ಯವು ಅದಕ್ಕೆ ದೊಡ್ಡ ಉದಾಹರಣೆ. 2018ರ ಉತ್ತರಾರ್ಧದಲ್ಲಿ ಮೋದಿಯ ಜನಪ್ರಿಯತೆ ಕುಗ್ಗಿದ್ದೇನೋ ನಿಜ. ಆದರೆ, ಪುಲ್ವಾಮಾ ಮತ್ತು ಬಾಲಾಕೋಟ್ ನಂತರ ಎಲ್ಲಾ ವಿರೋಧಿ ನಾಯಕರ ಒಟ್ಟು ಜನಪ್ರಿಯತೆಗಿಂತ ಎಷ್ಟೋ ಪಟ್ಟು ಮೋದಿಯ ಜನಪ್ರಿಯತೆ ಹೆಚ್ಚಾಗಿತ್ತು. ಆ ನಂತರ ಚುನಾವಣೆಯಲ್ಲಿ ಸ್ಪರ್ಧೆ ಎಂದೇ ಇರಲಿಲ್ಲ. ಆದರೆ, ಮೋದಿ ವಿರೋಧಿಗಳು ಈ ವಾಸ್ತವಕ್ಕೆ ಹತ್ತಿರವಿರಲಿಲ್ಲ. ಚುನಾವಣಾ ಫಲಿತಾಂಶದ ನಂತರವೂ ಅವರು ನಿರಾಕರಣೆಯಲ್ಲೇ ಇದ್ದಾರೆ. ಬಿಜೆಪಿಯು ಗೆದ್ದಿದೆ ಎಂಬುದನ್ನು ಒಪ್ಪಿಕೊಳ್ಳದೇ, ಜನರು ಮೋದಿಗೆ ಮತ್ತೊಂದು ಅವಕಾಶ ಕೊಡಲು ಬಯಸಿದ್ದಾರೆ ಎನ್ನುವುದಕ್ಕಿಂತ ಇವಿಎಂ ತಿರುಚಿದ್ದರಿಂದಲೇ ಗೆದ್ದಿರುವುದು ಎಂದು ಅವರು ನಂಬುತ್ತಾರೆ.

ಮೋದಿಯ ಜನಪ್ರಿಯತೆ ವಾಸ್ತವ ಎಂಬುದನ್ನು ಒಪ್ಪಿಕೊಳ್ಳುವುಲ್ಲಿನ ಈ ಪ್ರಮಾಣದ ವೈಫಲ್ಯವು ಅದಕ್ಕಿರುವ ಕಾರಣಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಜನಸಾಮಾನ್ಯ ಮತದಾರರು ಒಳ್ಳೆಯ ಕಾರಣಗಳಿಂದಲೇ ಅವರಿಗೆ ಮತ ಹಾಕಿರಬಹುದೆಂಬುದನ್ನು ಒಪ್ಪಿಕೊಳ್ಳಲು ಇವರಿಗೆ ಸಾಧ್ಯವೇ ಇಲ್ಲ. ಅಮೆರಿಕಾದ ಉದಾರವಾದಿಗಳು ಟ್ರಂಪ್‍ಗೆ ಜನರು ಮತ ಹಾಕುವುದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಬಗೆದಿರುವುದು ಹೇಗೋ, ಇಲ್ಲಿಯೂ ಸಾಮಾನ್ಯ ಭಾರತೀಯ ಮತದಾರರ ಇಂಗಿತವನ್ನು ಅರ್ಥೈಸಲೂ ಇಂಥವರಿಗೆ ಆಗುತ್ತಿಲ್ಲ. ಮೋದಿ ವಿರೋಧಿಗಳು ಸಮಾಜದ ಇತರರಿಂದ ಪ್ರತ್ಯೇಕಿಸಲ್ಪಟ್ಟು ಚಿಕ್ಕದಾದ ಮತ್ತು ಚಿಕ್ಕದಾಗುತ್ತಿರುವ ವರ್ತುಲದಲ್ಲೇ ಇರುತ್ತಾರೆ. ಇದರ ಫಲಿತವೆಂದರೆ ಅವಿಶ್ವಾಸ, ಆತಂಕ, ಕೋಪ ಮತ್ತು ನಿಷ್ಕ್ರಿಯತೆ. ರಾಜಕೀಯ ಪಕ್ಷವಾತಕ್ಕೆ ಇದು ದಾರಿ ಮಾಡಿಕೊಡುತ್ತದೆ.

ನಾವು ಹೊಸದಾಗಿಯೇ ಆರಂಭಿಸಬೇಕು. ನಾವು ಹೊಸ ರಾಜಕೀಯ ಯುಗವನ್ನು ಪ್ರವೇಶಿಸಿದ್ದೇವೆನ್ನುವುದನ್ನು ಒಪ್ಪಿಕೊಳ್ಳಬೇಕು. ನಾವು ಗುರುತಿಸಲಾಗದಷ್ಟು ಪ್ರಮಾಣಕ್ಕೆ ಜನರ ಆದ್ಯತೆಗಳು, ಅಭಿರುಚಿ ಮತ್ತು ಮಾನದಂಡಗಳು ಬದಲಾಗಿವೆ ಎಂಬುದನ್ನು ಗುರುತಿಸಬೇಕು. ನಮ್ಮ ಹಳೆಯ ಪರಿಭಾಷೆಗಳು ಹೊಸ ಪೀಳಿಗೆಯೊಂದಿಗೆ ಕೆಲಸ ಮಾಡುವುದಿಲ್ಲ ಎಂಬುದನ್ನು ಗಮನಿಸಿದರೆ, ನಮ್ಮೆಲ್ಲಾ ತಂತ್ರಗಳು ಆ ಪೀಳಿಗೆಯ ಮುಂದೆ ಬಕ್ಕಾಬೋರಲು ಮಲಗುತ್ತಿರುವುದು ಗೊತ್ತಾಗುತ್ತದೆ. ಈ ಹೊಸ ಪೀಳಿಗೆ ಅಸ್ತಿತ್ವದಲ್ಲಿರುವುದು ವಾಸ್ತವ ಮತ್ತು ನಾವು ಅದನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿಕೊಳ್ಳಲಾಗದು. ಹಾಗಾಗಿ ಉಳಿದಿರುವುದು ಒಂದೇ ದಾರಿ. ಅಪಾಯದ ಆಳ ಮತ್ತು ಅದೊಡ್ಡುತ್ತಿರುವ ಸವಾಲನ್ನು ಸರಿಯಾಗಿ ಅಂದಾಜಿಸಿ, ದೀರ್ಘಕಾಲದ ಮುನ್ನೋಟದೊಂದಿಗೆ ಅಲ್ಪಕಾಲೀನ ಮತ್ತು ಮಧ್ಯಕಾಲೀನ ವ್ಯೂಹತಂತ್ರವನ್ನೊಳಗೊಂಡ ಮಾರ್ಗನಕ್ಷೆಯನ್ನು ತಯಾರಿಸುವುದು. ವಿನೂತನ ಉಪಾಯಗಳು ಮತ್ತು ಸ್ಮಾರ್ಟ್ ಆದ ಸಂವಹನದೊಂದಿಗೆ ನಡೆಸಬೇಕಿರುವ ಸಾಂಸ್ಕೃತಿಕ ಸಂಗ್ರಾಮವದು ಎಂದು ಕಡೆಯದಾಗಿ ಹೇಳಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...