Homeಚಳವಳಿಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ

ಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ

ಲಾಕ್‌ ಡೌನ್‌ ಕಾಲದಲ್ಲಿ ನಗರಗಳೇ ಎಲ್ಲರ ಗಮನ ಸೆಳೆದಿದ್ದವು. ಆದರೆ ಇದೇ ಹೊತ್ತಿನಲ್ಲಿ ನಗರಗಳಲ್ಲಿರುವವರೂ ಹೋಗಲು ಬಯಸುತ್ತಿದ್ದ ಹಳ್ಳಿಗಳ ಕಥೆ ಏನಾಗಿತ್ತು? ಇದನ್ನು ಸಾಕ್ಷಾತ್‌ ಅಲ್ಲೇ ಇದ್ದವರೇ ಬರೆಯಬೇಕೆಂದು, ಹಲವರಿಗೆ ಬೆನ್ನು ಹತ್ತಿದ್ದು ಕೆ.ಪಿ.ಸುರೇಶ್.‌ ಅಂತಹ ಒಂದು ಸ್ವಾರಸ್ಯಕರವಾದ ಆದರೆ ವಿಷಾದವನ್ನೂ ಹುಟ್ಟಿಸುವ ಬರಹವನ್ನು ಲೋಕೇಶ್‌ ಬರೆದಿದ್ದಾರೆ.

- Advertisement -
- Advertisement -

ಯುಗಾದಿ ಹಬ್ಬದ ಹಿಂದು ಮುಂದಿನ ರಾತ್ರಿಗಳು ಸಾಮಾನ್ಯವಾಗಿ ನಮಗೆ ನಿದ್ರಾರಹಿತ ರಾತ್ರಿಗಳು. ನಮ್ಮೂರು ದೋಣಕುಪ್ಪೆ. ಅದು ರಾಜ್ಯ ಹೆದ್ದಾರಿ 86 ರ ಪಕ್ಕದಲ್ಲಿ ಬರುವುದರಿಂದಲೂ, ಹೆದ್ದಾರಿಗೆ ನಮ್ಮ ಮನೆ ಹೊಂದಿಕೊಂಡಿರುವುದರಿಂದಲೂ, ಮಾಗಡಿ ದನಗಳ ಜಾತ್ರೆಗೆ ಮಂಡ್ಯ, ಮದ್ದೂರಿನ ಕಡೆ ರೈತರು ನಮ್ಮ ಮನೆ ಮುಂದೆ ರಸ್ತೆಯಲ್ಲೇ ಮಾಗಡಿ ಜಾತ್ರೆಗೆ ಹೋಗುತ್ತಾರೆ. ಬೇಸಿಗೆಯ ಬಿಸಲ ಬೇಗೆಗೆ ದನ ಬಳಲಿದಾವು ಎಂದು ರಾತ್ರಿ ಪ್ರಯಾಣ ಮಾಡುತ್ತಾರೆ. ರಾತ್ರಿ ಪೂರ ಲಾಳ ಕಟ್ಟಿದ ಗೊರಸುಗಳು ಡಾಂಬರು ರಸ್ತೆಗೆ ತಾಗಿ ಬರುವ ಶಬ್ದವೇ ತಾಳ; ಕೊರಳಿಗೆ ಕಟ್ಟಿದ ಘಂಟೆಗಳ ಸದ್ದೇ ಮೇಳ. ಒಟ್ಟಿನಲ್ಲಿ ದನಗಳ ಯಾತ್ರೆಯೇ ಸಂಗೀತದಂತಿದ್ದ ನಮ್ಮ ರಸ್ತೆಯಲ್ಲಿ ಈ ವರ್ಷ ಕಾರು, ಬೈಕುಗಳ ಮೊರೆತ, ಹಾರ್ನುಗಳ ಕರ್ಕಶ ದನಿಯ ಪರಿಣಾಮ ಕಣ್ಣುಗಳಿಂದ ನಿದ್ದೆ ಹಾರಿಹೋಯಿತು.

ಲಾಕ್‌ ಡೌನ್
ಸಾಂದರ್ಭಿಕ ಚಿತ್ರ

ರೂಢಿಯಂತೆ ಯುಗಾದಿಗೆ ಊರಿಗೆ ಬರುವವರಿದ್ದರೂ, ಈ ವರ್ಷ ಮೊದಲ ಬಾರಿಗೆ ಯುಗಾದಿಗೆ 21 ದಿನಗಳ ರಜೆ ಕೊಟ್ಟು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ ಪರಿಣಾಮ ಬೆಂಗಳೂರಿನಲ್ಲೇ ಹೆಂಡತಿ ಮಕ್ಕಳೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದವರು, ಹಳ್ಳಿಗೆ ಹೋದರೆ ತಮ್ಮ ಘನತೆಗೆ ಕುಂದೆಂದು ಭಾವಿಸುತ್ತಿದ್ದವರೂ ಕೂಡ 21 ದಿನಗಳು ಹೊರಗೆಲ್ಲೂ ಹೋಗದೆ, ಬೆಂಗಳೂರಿನ ಕಿಷ್ಕಿಂಧೆಯಂತಹ ಮನೆಯಲ್ಲೂ ಇರಲಾರದೆ ಗಂಟು ಮೂಟೆ ಕಟ್ಟಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಹಳ್ಳಿಗೆ ದೌಡಾಯಿಸಿದ ಪರಿಣಾಮ ಸತತ 2-3 ದಿನ ನಮ್ಮೂರಿನ ರಸ್ತೆ ಗಿಜಿಗುಡುವಂತಾಯಿತು.

ಎರಡು ದಿನಗಳ ನಂತರ ಎಲ್ಲವೂ ಸ್ತಬ್ಧವಾಯಿತು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ತುಂಬಾ ದಿನಗಳಿಂದ ಬರೀ ಮುದಿಜೀವಗಳೇ ಇದ್ದು ಕಳೆಗುಂದಿದ್ದ ಕೆಲವು ಮನೆಗಳಲ್ಲಿ ಮೊಮ್ಮಕ್ಕಳ ಹೆಜ್ಜೆ ಸಪ್ಪಳ ಮೂಡಿ, ಕೊನೆದಿನಗಳ ಎಣಿಸುವವರ ಕೊನೆಯಾಸೆ ತೀರಿತು. ಹಿರಿಜೀವಗಳು ತೃಪ್ತಿಗೊಂಡು ಕರೋನಾಗೆ ಮನದಲ್ಲೇ ನಮಿಸಿದವು.

ಎರಡು ದಿನಗಳು ಯುಗಾದಿ, ಕರಿ ಹಬ್ಬಗಳೆಂದು ಸಡಗರದಲ್ಲಿದ್ದ ನಮಗೆ ಮುಂಬರಲಿರುವ ಭೀಕರತೆಗಳ ಪರಿವೆಯೇ ಇರಲಿಲ್ಲ. ಹಲವು ವರ್ಷಗಳ ನಂತರ ಸಂಧಿಸಿದ್ದರಿಂದ ಆನಂದ ಪರವಶರಾಗಿ ಸುಖಸಾಗರದಲ್ಲಿ ತೇಲುತ್ತಲಿದ್ದವರಿಗೆ ಮುಂಬರುವ ಸುನಾಮಿಗೆ ತಾವು ಕೊಚ್ಚಿ ದಡ ಸೇರುವ ದಿನಗಳು ಇನ್ನೆರಡೇ ಎಂಬುವುದು ತಿಳಿದಿರಲಿಲ್ಲ.


ಹಬ್ಬ ಮುಗಿಯಿತು, ಒಣ ಬೇಸಾಯ ಮಾಡುವ ನಮ್ಮಂತವರಿಗೇನು ಚಿಂತೆಯಿಲ್ಲ, ಜಾನುವಾರುಗಳಿಗೆ ಇನ್ನೂ 2-3 ತಿಂಗಳಿಗಾಗುವಷ್ಟು ರಾಗಿ ಹುಲ್ಲು ಬಣವೆಯಲ್ಲಿತ್ತು. ಮಳೆ ಬರುವವರೆಗೂ ನೆಮ್ಮದಿಯ ಜೀವನ. ಆದರೆ ಸುಮಾರು ವರ್ಷಗಳ ಉಳಿತಾಯದ ಹಣದಲ್ಲೋ, ಸಾಲ ಮಾಡಿಯೋ ಕೊಳವೆ ಬಾವಿ ಕೊರೆಸಿ ಹಣ್ಣು ತರಕಾರಿಗಳನ್ನು ಬೆಳೆದವರಿಗೆ ಸಂಕಷ್ಟ ಶುರುವಾಯಿತು. ನಮ್ಮ ದೊಡ್ಡಪ್ಪನ ಮಗ ನಟರಾಜ ಒಂದು ಎಕರೆಯಲ್ಲಿ ತಿಂಗಳುರುಳಿಕಾಯಿ ಬೆಳೆದಿದ್ದ. ಒಳ್ಳೆಯ ಇಳುವರಿ ಬಂದಿತ್ತು. ಯಾವಾಗಲೂ ಎದುರಿಸುತ್ತಿದ್ದ ಕಾರ್ಮಿಕರ ಸಮಸ್ಯೆ ಇರಲಿಲ್ಲ. ಬೆಂಗಳೂರಿನಿಂದ ಬಂದಿದ್ದ ಅಕ್ಕಂದಿರು, ಅವರ  ಮಕ್ಕಳೆಲ್ಲ ಸೇರಿ ತುಂಬಾ ಘಾಸಿಯಲ್ಲದ ಕಾಯಿಬಿಡಿಸುವ ಕೆಲಸವನ್ನು ಮಾಡಿದ್ದರು. ಮಾರುಕಟ್ಟೆಗೆ ಸಾಗಿಸಲು ಸಾರಿಗೆ ವ್ಯವಸ್ಥೆ ಇಲ್ಲವೇ ಇಲ್ಲ. ಕಾಡಿ, ಬೇಡಿ, ದುಬಾರಿ ಬಾಡಿಗೆಗೆ ಲಗೇಜು ಆಟೋವೊಂದನ್ನು ಗೊತ್ತುಪಡಿಸಿಕೊಂಡು ಮಧ್ಯರಾತ್ರಿಗೇ ರಾಮನಗರ ಮಾರುಕಟ್ಟೆಗೆ ಕೊಂಡೊಯ್ದ. ಆದರೆ ಹುರುಳಿಕಾಯಿ ಕೇಳುವವರೇ ದಿಕ್ಕಿಲ್ಲ. ಬೆಳಗಿನ ಜಾವದವರೆಗೂ ಕಾದು ಇನ್ನು ಇಲ್ಲೇ ಇದ್ದರೆ ನಾತಂದ ಕಾಯನ್ನೇ ಮನೆಗೆ ಒಯ್ಯಬೇಕೆಂದು ಅರಿತು ಅದೇ ಆಟೋದಲ್ಲಿ ಬೆಂಗಳೂರು ಕೃಷ್ಣರಾಜ ಮಾರುಕಟ್ಟೆಗೆ ತಂದ. ಹಬ್ಬದ 2 ದಿನ ರಜೆ ತೆಗೆದುಕೊಂಡಿದ್ದರಿಂದ ಇದ್ದಬದ್ದದ್ದನ್ನೆಲ್ಲ ಒಂದೇ ದಿನ ಮಾರುಕಟ್ಟೆಗೆ ತಂದಿದ್ದಾರೆ ರೈತರು. ಆದರೆ ಕೊಳ್ಳುವ ಗಿರಾಕಿಗಳೇ ಇಲ್ಲ.

ಬೇರೆ ರಾಜ್ಯಕ್ಕೆ ತರಕಾರಿ ಕಳಿಸುವ ವ್ಯಾಪಾರಸ್ಥರು ಸಾಗಿಸಲು ಅವಕಾಶ ಇದೆಯೋ ಇಲ್ಲವೋ ಎಂಬ ಅನುಮಾನದಿಂದ ಕೊಳ್ಳಲು ಮುಂದೆ ಬರುತ್ತಿಲ್ಲ. ಪೊಲೀಸರು ವ್ಯಾಪಾರಕ್ಕೆ ಅವಕಾಶ ಕೊಡುತ್ತಾರೋ ಇಲ್ಲವೋ ಎಂದು ಚಿಲ್ಲರೆ ವ್ಯಾಪಾರಿಗಳು ಹೆಚ್ಚು ತರಕಾರಿಗಳಿಗೆ  ಬಂಡವಾಳ ಹೂಡಲು ಹೆದರಿದರು. ಈ ನಡುವೆ ಜನರ ಗುಂಪು ಸೇರಿದ್ದರಿಂದ ಪೊಲೀಸರು ಲಾಠಿ ಬೀಸಿದರು. ತರಕಾರಿ ಬೆಳದಿದ್ದಕ್ಕೆ ಬೋನಸ್ ಎಂಬಂತೆ ಬಾಸುಂಡೆಗಳು ಉಚಿತವಾಗಿ ದೊರಕಿದವು. ಪ್ರತಿ ವರ್ಷ ಈ ಸಮಯದಲ್ಲಿ ಮಣಕ್ಕೆ 800- 1000 ರೂಪಾಯಿಗಳಿರುತ್ತಿದ್ದ ಹುರುಳಿಕಾಯನ್ನು 250ಕ್ಕೆ ಮಾರಿ ಪೊಲೀಸರು ಹೊಡೆದಿದ್ದ ಕಾಲನ್ನು ಎಳೆಯುತ್ತಾ ಮನೆಗೆ ಬಂದ.

ಲಾಕ್‌ ಡೌನ್
ಎರಡು ಮೂರು ದಿನಗಳಲ್ಲಿ ತರಕಾರಿ ಮತ್ತು ಕೃಷಿ ಉತ್ಪನ್ನಗಳ ಸಾಗಣೆ ಮತ್ತು ವ್ಯಾಪಾರಕ್ಕೆ ಯಾವುದೇ ನಿರ್ಬಂಧವಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದ ನಂತರ ತರಕಾರಿ ಬೆಳೆದವರು ನಿಟ್ಟುಸಿರುಬಿಟ್ಟರು. ನಟರಾಜ ನಂತರದ ದಿನಗಳಲ್ಲಿ ರಾಮನಗರದಲ್ಲೇ ಮಣಕ್ಕೆ 500-600 ರೂಗಳಂತೆ ಹುರುಳಿಕಾಯನ್ನು ಮಾರಿದ.

ತರಕಾರಿಯದು ಒಂದು ಹಂತಕ್ಕೆ ಬರುತ್ತಿದ್ದಂತೆ ಹಾಲಿನ ಸಮಸ್ಯೆ ಶುರುವಾಯಿತು, ಉತ್ಪಾದನೆಯಾದ ಹಾಲಿನ ಬಹುಪಾಲು ವ್ಯಾಪಾರವಾಗದೆ ಉಳಿಯುತ್ತಿದ್ದುದರಿಂದ ಮತ್ತು ಅಷ್ಟೊಂದು ಹಾಲನ್ನು ಪುಡಿಮಾಡುವ ವ್ಯವಸ್ಥೆ ಇಲ್ಲದ ಕಾರಣ ಹಾಲು ಮಹಾಮಂಡಳಿಯವರು ಹಾಲಿನ ಶೇಖರಣೆ ನಿಲ್ಲಿಸುವರೆಂಬ ಸುದ್ದಿ ಕೇಳಿ, ಇಡೀ ಊರಿಗೂರೇ ದಂಗುಬಡಿದಂತಾಯಿತು. ಸುಮಾರು ರೈತರ ಅನ್ನಮಾರ್ಗವಾಗಿರುವ ಹಾಲು ಶೇಖರಣೆಯನ್ನು ನಿಲ್ಲಿಸಿದರೆ ರೈತರು ಘನಘೋರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನರಿತ ಸರ್ಕಾರ ಉಚಿತ ಹಾಲು ವಿತರಣೆ ಯೋಜನೆಯ ಮೂಲಕ ರೈತರ ಹಿತ ಕಾಯ್ದದ್ದನ್ನು ಸ್ಮರಿಸಲೇಬೇಕು.‌

ಲಾಕ್‌ ಡೌನ್

ಇತ್ತ ನಮ್ಮಪ್ಪ ಮಾವಿನ ತೋಟವನ್ನು ವ್ಯಾಪರಿಯೊಬ್ಬನಿಗೆ ಮಾರಿ ಆಗಲೇ 3 ತಿಂಗಳಾಗಿತ್ತು. ಆಗಲೇ ಒಂದೆರಡು ಸೇಂದುರ ಮರದ ಕಾಯಿಗಳನ್ನು ಲಾಕ್ ಡೌನ್‌ಗಿಂತ ಮೊದಲೇ ಕಿತ್ತುಕೊಂಡಿದ್ದ. ಈಗ ಅವನನ್ನು ಸ್ವಲ್ಪ ಮುಂಗಡ ಹಣ ಕೇಳಿದರೆ ಲಾಕ್ ಡೌನ್ ಮುಗಿಯಲಿ ಕೊಡುತ್ತೇನೆ ಎನ್ನುತ್ತಾನೆ. ಲಾಕ್ ಡೌನ್ ಮುಗಿಯದೆ ವ್ಯಾಪಾರ ಕಷ್ಟವಾಗುವ ಸಂದರ್ಭ ಬಂದರೆ ನಷ್ಟ ಅನುಭವಿಸಲು ತಯಾರಿಲ್ಲದ ಅವನು ಒಪ್ಪಂದ ರದ್ದುಗೊಳಿಸುವ ಇರಾದೆಯಲ್ಲಿದ್ದಾನೆ. ಆದರೆ ಎಲ್ಲವೂ ಸರಿಹೋಗಿ ವ್ಯಾಪಾರ ಸುಗಮವಾದರೆ? ತೋಟ ಬಿಟ್ಟು ಬರುವ ಲಾಭಕ್ಕೆ ಕಲ್ಲು ಹಾಕಿಕೊಳ್ಳುವುದಕ್ಕೆ ಇಷ್ಟವಿಲ್ಲದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾನೆ. ಅವನ ಮಾತುಗಳಿಂದ ಗೊಂದಲಕ್ಕೊಳಗಾದ ನಮ್ಮಪ್ಪ ಮಾತ್ರ ತೋಟವನ್ನು ಬೇರೆ ವ್ಯಾಪಾರಿಗೂ ಮಾರದಂತಹ, ಇವನನ್ನು ನಂಬಿ ಸುಮ್ಮನೆಯೂ ಕೂರದಂತಹ ಎರಡಲುಗಿನ ಕತ್ತಿಗೆ ಕುತ್ತಿಗೆಯೊಡ್ಡಿದ್ದಾರೆ.


ಇದನ್ನೂ ಓದಿ: ವಲಸೆ ಕಾರ್ಮಿಕರು ಊರಿಗೆ ಹೋಗದಂತೆ ತಡೆಯುತ್ತಿರುವುದೇಕೆ?


ಯುಗಾದಿ ಹಬ್ಬ, ಮದುವೆ ಲಗ್ನ ಕಾಲದಲ್ಲಿ ನಡೆಯುವ ಮದುವೆ ಮುಂಜಿ, ಊರ ಹಬ್ಬ, ಜಾತ್ರೆ, ದೇವರ ಉತ್ಸವಗಳನ್ನು ನಂಬಿಕೊಂಡು ಎಕರೆಗಟ್ಟಲೇ ಹೂ ಬೆಳೆದ ನನ್ನ ಇಬ್ಬರು ಸ್ನೇಹಿತರ ಪರಿಸ್ಥಿತಿಯಂತೂ ಯಾರಿಗೂ ಬೇಡ. ಲಾಕ್ ಡೌನ್ ಪರಿಣಾಮವಾಗಿ ಯಾವ ಸಂಭ್ರಮದ ಕಾರ್ಯಕ್ರಮವೂ ಬೇಡ, ಹೆಣದ ಮೇಲೆ ಹಾಕುವುದಕ್ಕೂ ಯಾರೂ ತೆಗೆದುಕೊಂಡು ಹೋಗುತ್ತಿಲ್ಲ. ನಷ್ಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರೆ ಅವರದ್ದೇ ಹೆಣ ಶೃಂಗರಿಸುವುದಕ್ಕೆ ಮಾತ್ರ ಅವುಗಳ ಉಪಯೋಗ.
ನಮ್ಮೂರಿನ ಈ ಕತೆಗಳ ಮುಂದುವರಿಕೆಯಾಗಿ ಕೇವಲ ಒಂದೇ ವಾರಕ್ಕೆ ಕೆಲವರಿಗೆ ಹಳ್ಳಿ ಬೇಸರವಾಗತೊಡಗಿತು. ಬೆಂಗಳೂರಿನ ಟ್ರಾಫಿಕ್, ಮಾಲಿನ್ಯದಿಂದ ಬೇಸತ್ತವರಿಗೆ ಹಳ್ಳಿ ಆಪ್ತವಾಗತೊಡಗಿತು. ಕೃಷಿಯೋ, ಹೈನುಗಾರಿಕೆಯೋ ಮತ್ತೊಂದೋ ಮಾಡಿಕೊಂಡು ಊರಲ್ಲೇ ಬೇರು ಬಿಡುವ ಮಾನಸ್ಸಾಯಿತು ಕೆಲವರಿಗೆ. ಆದರೆ ಹಳ್ಳಿಯಲ್ಲಿ ಮಕ್ಕಳಿಗೆ ಸೂಕ್ತ ಶಿಕ್ಷಣ ವ್ಯವಸ್ಥೆ ಇಲ್ಲವೆಂಬುದು ಕೆಲವು ನಾರಿಯರ ಗೊಣಗಾಟ. ಸಣ್ಣ ಪುಟ್ಟ ಕೆಲಸ ಮಾಡಿ ತಮ್ಮ ದೇಹದ ಬಲಾಬಲ ಕಂಡ ಕೆಲವರಿಗೆ  ಕೊಬ್ಬುತುಂಬಿದ ತಮ್ಮ ದೇಹ ಕೃಷಿ ಕೆಲಸಗಳಿಗೆ ಸಹಕರಿಸುವುದಿಲ್ಲ ಎಂಬುದನ್ನು ಅರಿತವರು ಕೆಲವರು.. ಇಲ್ಲಿಯೇ ಉಳಿಯಬೇಕೆಂಬ ಅದಮ್ಯ ಆಸೆ ಹೊಂದಿದ ಕೆಲವರಿಗೆ ತಮ್ಮ ಬೈಕು, ಕಾರುಗಳ EMIಗಳು ದುಃಸ್ವಪ್ನವಾದವು. ಕೆಲವರಿಗೆ ಭೂಮಿ ಇಲ್ಲದಿರುವುದು ನುಂಗಲಾರದ ತುತ್ತಾಯಿತು. ಹಣದ ಹಿಂದೆ ಬಿದ್ದವರಿಗೆ, ಹಣವೊಂದೇ ಧ್ಯೇಯವಾದವರಿಗೆ ಹಳ್ಳಿಇನ್ನೂ ಅಸ್ಪೃಷ್ಯವಾಗಿಯೇ ಇದೆ.. ಒಟ್ಟಿನಲ್ಲಿ ನಗರದಿಂದ ಬಂದವರು ಹಳ್ಳಿಗಳಿಗೆ ಕೆಲವು ದಿನಗಳ ನಂತರ ವಿದಾಯ ಹೇಳುವುದು ಖಚಿತ, ಹಳ್ಳಿಗಳು ಮತ್ತೆ ಭಣಗುಡುವುದು ಖಾತರಿ.

ಲೇಖಕರು: ಲೋಕೇಶ್‌ ದೋಣಕುಪ್ಪೆ

ಸರಣಿ ಸಂಪಾದಕರು: ಕೆ.ಪಿ ಸುರೇಶ್‌


ಇದನ್ನೂ ಓದಿ: ಲಾಕ್‌ ಡೌನ್‌ ನಂತರದ ಪ್ರಥಮ ಆದ್ಯತೆ ಏನಾಗಿರಬೇಕು? ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹೀಗೆ ಹೇಳುತ್ತಾರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BREAKING NEWS: ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ‘ತಾಂತ್ರಿಕ’ ಅಂತ್ಯ: 1777 ಎಕರೆ ಡಿನೋಟಿಫೈಗೆ ಒಪ್ಪಿದ ಸಚಿವ ಸಂಪುಟ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಹೋರಾಟಕ್ಕೆ ಅಂತಿಮವಾಗಿ ತಾಂತ್ರಿಕ ಜಯವೂ ಸಿಕ್ಕಿದೆ. ಡಿಸೆಂಬರ್ 4, ಗುರುವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ...

ಲೈಂಗಿಕ ಕಿರುಕುಳ ಆರೋಪ: ಪಾಲಕ್ಕಾಡ್ ಶಾಸಕನ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರದ ಬೆನ್ನಲ್ಲೇ, ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್ 

ತಿರುವನಂತಪುರಂ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ಕೇರಳ ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.  ರಾಹುಲ್ ಮಮ್‌ಕೂಟತಿಲ್ ತಮ್ಮ ಶಾಸಕ...

ದಲಿತರು ಒಗ್ಗಟ್ಟಾಗದೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ದಲಿತರು ಒಗ್ಗಟ್ಟಾಗದೆ ಇದ್ದರೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ; ನಾವು ನೂರಿನ್ನೂರು ಜನ ಪ್ರತ್ಯೇಕ ಹೋರಾಟ ಮಾಡಿದರೆ ಪ್ರಯೋಜನವಿಲ್ಲ, ಒಂದು ಕರೆ ಕೊಟ್ಟರೆ ಲಕ್ಷಾಂತರ ಜನರು ಸೇರುವಂತಾಗಬೇಕು ಎಂದು ಲೋಕೋಪಯೋಗಿ ಸಚಿವ...

ದಲಿತ ಚಳವಳಿ ಎಲ್ಲ ಶೋಷಿತರನ್ನೂ ಒಳಗೊಂಡಿದೆ; ನಮ್ಮಲ್ಲಿ ಹೊಲೆ-ಮಾದಿಗ ಎಂಬ ಬೇಧವಿಲ್ಲ: ದಸಂಸ ಸಂಚಾಲಕ ಹೆಣ್ಣೂರು ಶ್ರೀನಿವಾಸ್

"ದಲಿತ ಚಳವಳಿ ಯಾವುದೇ ಒಂದು ಜಾತಿಯ ಪರವಾಗಿಲ್ಲ.. ಪೌರ ಕಾರ್ಮಿಕನ ಮಗನನ್ನ ರಾಜ್ಯ ಸಂಚಾಲಕನನ್ನಾಗಿ ಮಾಡಿದೆ. ನಮ್ಮಲ್ಲಿ ಹೊಲೆಯ-ಮಾದಿಗ ಎಂಬ ಬೇಧವಿಲ್ಲ. ಈ ಚಳವಳಿ ಎಲ್ಲ ಶೋಷಿತ ಸಮುದಾಯಗಳನ್ನೂ ಒಳಗೊಂಡಿದೆ" ಎಂದು ಕರ್ನಾಟಕ...

ಚಳಿಗಾಲದ ಅಧಿವೇಶನ: ಸಂಸತ್ತಿನ ಹೊರಗೆ ‘ವಾಯು ಮಾಲಿನ್ಯದ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳಿಂದ ಪ್ರತಿಭಟನೆ

2025 ರ ಸಂಸತ್ತಿನ ಚಳಿಗಾಲದ ಅಧಿವೇಶನವು ನಾಲ್ಕನೇ ದಿನಕ್ಕೆ ಕಾಲಿಡುತ್ತಿದ್ದಂತೆ, ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದಾದ್ಯಂತ ಹದಗೆಡುತ್ತಿರುವ ವಾಯು ಮಾಲಿನ್ಯದ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಸಂಸದರು ಗುರುವಾರ ಲೋಕಸಭೆಯಲ್ಲಿ ಮುಂದೂಡಿಕೆ...

ಭೀಮಾ ಕೋರೆಗಾಂವ್ ಪ್ರಕರಣ: ದೆಹಲಿ ವಿವಿ ಪ್ರಾಧ್ಯಾಪಕ ಹನಿ ಬಾಬುಗೆ ಜಾಮೀನು

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ರಲ್ಲಿ ಬಂಧಿಸಲ್ಪಟ್ಟು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಖ್ಯಾತ ಶಿಕ್ಷಣ ತಜ್ಞ ಡಾ....

ಕೇಂದ್ರ ಸರ್ಕಾರ ಗಣ್ಯರು ನಮ್ಮನ್ನು ಭೇಟಿ ಮಾಡುವುದನ್ನು ನಿರಾಕರಿಸುತ್ತದೆ: ಪುಟಿನ್ ಭಾರತ ಭೇಟಿಗೂ ಮುನ್ನ ರಾಹುಲ್ ಗಾಂಧಿ ಆರೋಪ

ವಿದೇಶಿ ನಾಯಕರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುವುದು ಬಹಳ ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ, ಆದರೆ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವಾಲಯ ಈ ನಿಯಮವನ್ನು ಪಾಲಿಸುತ್ತಿಲ್ಲ ಎಂದು ರಾಹುಲ್ ಗಾಂಧಿ...

ಪ್ರತಿಭಟನೆಗಿದ್ದ ಏಕೈಕ ಜಾಗ ‘ಬೆಂಗಳೂರಿನ ಫ್ರೀಡಂ ಪಾರ್ಕ್’ ತಾತ್ಕಾಲಿಕ ಬಂದ್, ಹೋರಾಟಗಾರರ ಪರದಾಟ

ಕರ್ನಾಟಕದ ಎಲ್ಲೆಡೆಯಿಂದ ರಾಜಧಾನಿ ಬೆಂಗಳೂರಿಗೆ ಬಂದು ಹೋರಾಟಗಾರರು ಹೋರಾಟ ಮಾಡುವ ಏಕೈಕ ಜಾಗ ಫ್ರೀಡಂ ಪಾರ್ಕ್. ಅಂಥಾ ಫ್ರೀಡಂ ಪಾರ್ಕ್‌ ಅನ್ನು ಈಗ ಬಂದ್ ಮಾಡಲಾಗಿದೆ. ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ತಾತ್ಕಾಲಿಕವಾಗಿ...

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಭಾರತ ಭೇಟಿ: ದೆಹಲಿಯಲ್ಲಿ ಬಹುಹಂತದ ಭದ್ರತಾ ವ್ಯವಸ್ಥೆ ಜಾರಿ

ನವದೆಹಲಿ: ಎರಡು ದಿನಗಳ ಭಾರತ ಭೇಟಿಗಾಗಿ ಇಂದು ಸಂಜೆ ದೆಹಲಿಗೆ ಆಗಮಿಸುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಗುರುವಾರ ಬಹು ಹಂತದ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಕಟ್ಟೆಚ್ಚರ...

ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಸಿದ್ಧತೆ: ಇಂದು ಸಚಿವರೊಂದಿಗೆ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ 

ಬೆಳಗಾವಿ ಚಳಿಗಾಲ ಅಧಿವೇಶನ ಡಿಸೆಂಬರ್ 8ರಿಂದ ಆರಂಭವಾಗಲಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಂತ್ರರೂಪಿಸಿವೆ, ಈ ತಂತ್ರಗಳಿಗೆ ಸರಿಯಾದ ಉತ್ತರ ನೀಡುವ ಮತ್ತು ಸರ್ಕಾರದ ನಿಲುವುಗಳನ್ನು ಸ್ಪಷ್ಟಪಡೆಸುವ ಕುರಿತು ಚರ್ಚಿಸುವ ಸಲುವಾಗಿ...