Homeಮುಖಪುಟವಿಶ್ವದಲ್ಲಿ ಭಾರತದ ಮಾನ ತೆಗೆದ ನಿಜವಾದ ಅಪರಾಧಿ ಯಾರು?

ವಿಶ್ವದಲ್ಲಿ ಭಾರತದ ಮಾನ ತೆಗೆದ ನಿಜವಾದ ಅಪರಾಧಿ ಯಾರು?

- Advertisement -
- Advertisement -

ಹಿಂದಿಯಲ್ಲೊಂದು ಗಾದೆಯಿದೆ; ’ಛಾಜ್ ಬೊಲೆ ತೊ ಬೋಲೆ, ಛಲನಿ ಭಿ ಬೋಲಿ ಜಿಸ್‌ಮೆ ಸತ್ತರ್ ಛೇದ್’ ಎಂದು. ಅದಕ್ಕೆ ಕನ್ನಡದಲ್ಲಿ ’ತನ್ನ ತಟ್ಟೆಯಲ್ಲಿ ಸತ್ತ ಹೆಗ್ಗಣ ಇಟ್ಟುಕೊಂಡು, ಪಕ್ಕದವನ ತಟ್ಟೆಯಲ್ಲಿನ ನೊಣ ಓಡಿಸಿದನಂತೆ’ ಎಂಬ ಗಾದೆ ಸೂಕ್ತವಾಗಿದೆ. ರಾಹುಲ್ ಗಾಂಧಿ ಇಂಗ್ಲೆಂಡಿನ ಪ್ರವಾಸದಲ್ಲಿ ನೀಡಿದ ಹೇಳಿಕೆಗಳ ಮೇಲೆ ಸೃಷ್ಟಿಸುತ್ತಿರುವ ಗಲಾಟೆ ನೋಡಿದರೆ ಈ ಗಾದೆಯೇ ನೆನಪಾಗುವುದು.

ನಿಸ್ಸಂಶಯವಾಗಿ ದೇಶದ ಆಂತರಿಕ ವಿಷಯಗಳ ಬಗ್ಗೆ ವಿದೇಶದಲ್ಲಿ ಮಾಡುವ ಹೇಳಿಕೆಗಳಲ್ಲಿ ಒಂದು ಮಟ್ಟದ ಘನತೆ ಇರಲೇಬೇಕು. ವಿರೋಧಪಕ್ಷದ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಈ ಘನತೆಯ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದರು; ಆದರೆ ಯಾವುದೇ ಪಕ್ಷದ ಯಾವ ನಾಯಕರೂ ಇಂದು ಆ ಹಂತಕ್ಕೆ ತಲುಪುವುದಿಲ್ಲ. ಅಂದಹಾಗೆ ಈಗ ಮನೆಯ ಮಾತು ಮನೆಯಲ್ಲಿಯೇ ಮುಚ್ಚಿಡಬಹುದಾದ ಆ ದಿನಗಳೂ ಇಲ್ಲ. ಇಂಟರ್‌ನೆಟ್ ಮತ್ತು ಜಾಗತಿಕ ಮಾಧ್ಯಮಗಳ ಕಾಲದಲ್ಲಿ ಅಂತರಿಕ ಗೌಪ್ಯ ವಿಷಯಗಳನ್ನು ಹೊರಗೆ ಹೇಳಬೇಕಾದ-ಹೇಳಬಾರದ ಸಂಗತಿಗಳೆಂದೂ ಉಳಿದಿಲ್ಲ. ಆದರೂ, ಕನಿಷ್ಠ ಮೂರು ಘನತೆಯ ಸೂತ್ರಗಳನ್ನು ವ್ಯಾಖ್ಯಾನಿಸಬಹುದಾಗಿದೆ. ಮೊದಲನೆಯದಾಗಿ. ಯಾವುದೇ ಪಕ್ಷ ಇತರ ಪಕ್ಷಗಳನ್ನು ಟೀಕೆ ಮಾಡಲಿ, ಆದರೆ ಯಾವುದೇ ಕೆಳಮಟ್ಟ ಅಗ್ಗದ ಗಾಸಿಪ್‌ಅನ್ನು ಹೊರಗೆ ಹೋಗಿ ಹರಡಬಾರದು. ಎರಡನೆಯದಾಗಿ, ಇತರ ಪಕ್ಷಗಳ ಆಡಳಿತದ ಬಗ್ಗೆ ಟೀಕೆ ಮಾಡಬಹುದು, ಆದರೆ ಇಡೀ ದೇಶದ ಗೌರವವನ್ನು ತಗ್ಗಿಸುವ ಮಾತುಗಳನ್ನು ಆಡಬಾರದು. ಮೂರನೆಯದಾಗಿ, ನಮ್ಮ ಸಮಸ್ಯೆಗಳು ಏನೇ ಇರಲಿ, ವಿದೇಶಿಯರ ಹಸ್ತಕ್ಷೇಪದ ಬೇಡಿಕೆ ಇಡಬಾರದು ಹಾಗೂ ಅವರ ವಿಷಯಗಳಲ್ಲಿ ನಾವು ತಲೆತೂರಿಸಬಾರದು.

ಅಟಲ್ ಬಿಹಾರಿ ವಾಜಪೇಯಿ

ಮೊದಲ ಮಾನದಂಡವನ್ನು ತೆಗೆದುಕೊಂಡರೆ, ರಾಹುಲ್ ಗಾಂಧಿಯ ಹೇಳಿಕೆಯಲ್ಲಿ ಅಗ್ಗದ ಅಥವಾ ತೀರಾ ಕೆಳಮಟ್ಟದ ಅಂತಹ ಯಾವ ಮಾತೂ ಕಾಣಿಸಲಿಲ್ಲ. ಅವರು ಸಂಸತ್ತಿನಲ್ಲಿ ವಿರೋಧಪಕ್ಷಗಳ ನಾಯಕರ ಮೈಕ್ ಬಂದ್ ಮಾಡುವುದರ ಬಗ್ಗೆ ಹೇಳಿದರು, ವಿರೋಧಪಕ್ಷದವರ ಮೇಲೆ ತನಿಖಾ ಸಂಸ್ಥೆಗಳು ಮಾಡುತ್ತಿರುವ ರೇಡ್‌ಗಳ ಬಗ್ಗೆ ಹೇಳಿದರು ಹಾಗೂ ವಿರೋಧಪಕ್ಷಗಳ ನಾಯಕರ ಮೇಲೆ ಪೆಗಸಸ್ ಮೂಲಕ ಕಣ್ಗಾವಲು ಇಟ್ಟಿದ್ದರ ಬಗ್ಗೆ ಹೇಳಿದರು. ಈ ವಾಸ್ತವಗಳು ಜಗಜ್ಜಾಹೀರಾಗಿರುವ ವಾಸ್ತವಗಳು. ರಾಹುಲ್ ಗಾಂಧಿ ಗೌಪ್ಯವಾಗಿದ್ದ ಏನನ್ನೂ ಹೇಳಿಲ್ಲ. ಭಾರತವಷ್ಟೇ ಅಲ್ಲ, ಜಗತ್ತಿನ ಹಲವಾರು ದೇಶಗಳಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಇಂತಹದ್ದೇ ರೀತಿಯಲ್ಲಿ ದಾಳಿಗಳು ಆಗುತ್ತಿವೆ. ಒಂದು ವೇಳೆ ಒಂದು ದೇಶದ ಒಬ್ಬ ಸಂಸದ, ಇನ್ನೊಂದು ದೇಶದ ಸಂಸದರೊಂದಿಗೆ ಮುಚ್ಚಿದ ಕೋಣೆಯಲ್ಲಿ ಮಾತನಾಡಿದರೆ, ಅವರು ಈ ಪ್ರಶ್ನೆಗಳ ಮೇಲೆ ಚರ್ಚೆ ಮಾಡದೇ ಇದ್ದರೆ ಮತ್ಯಾವುದರ ಬಗ್ಗೆ ಚರ್ಚೆ ಮಾಡಿಯಾರು?

ಈ ಹೇಳಿಕೆಯನ್ನು ನೀವು 2022ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬರ್ಲಿನ್‌ನ ಬಹಿರಂಗ ಸಭೆಯಲ್ಲಿ ಮಾಡಿದ ಭಾಷಣದೊಂದಿಗೆ ಹೋಲಿಸಿ. ಅಲ್ಲಿ ಮೋದಿಯವರು ರಾಜೀವ್ ಗಾಂಧೀಯನ್ನು ಟೀಕಿಸುತ್ತ ಹೇಳಿದ್ದೇನೆಂದರೆ, ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಕೆಳಗೆ ತಲುಪುವ ಆ ದಿನಗಳು ಈಗಿಲ್ಲ ಎಂದರು. ಅಷ್ಟೇ ಅಲ್ಲ, ಅಲ್ಲಿ ಸೇರಿದ ಜನರಿಗೆ ಅತ್ಯಂತ ಅಸಭ್ಯ ರೀತಿಯಲ್ಲಿ ’ಆ 85 ಪೈಸೆಗಳನ್ನು ಸವೆಸುತ್ತಿದ್ದ ’ಕೈ’ ಯಾವುದಿತ್ತು’ ಎಂದು ಕೇಳಿದರು. ವಿದೇಶದಲ್ಲಿ ಮಾಡಿದ ಈ ಅಗ್ಗದ ಚುನಾವಣಾ ಭಾಷಣದ ಬಗ್ಗೆ ಪ್ರಧಾನಮಂತ್ರಿಯವರು ಕ್ಷಮೆಯನ್ನೂ ಕೇಳಲಿಲ್ಲ, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಯಾವ ಉತ್ತರವನ್ನೂ ನೀಡಲಿಲ್ಲ.

ಇದನ್ನೂ ಓದಿ: ರೌಡಿಶೀಟರ್ ಫೈಟರ್ ರವಿ ಎದುರು ಕೈಮುಗಿದು ನಿಂತ ಮೋದಿ, ಇದು ಪ್ರಧಾನಿ ಹುದ್ದೆಗೆ ಕಳಂಕ ಎಂದ ಕಾಂಗ್ರೆಸ್

ಬಹುಶಃ ಬಿಜೆಪಿಯ ನಾಯಕರ ದೂರು ಎರಡನೆಯ ಮಾನದಂಡದ ಬಗ್ಗೆ ಇದೆ; ಅದು ರಾಹುಲ್ ಗಾಂಧಿ ಮಾತುಗಳಲ್ಲಿ, ಭಾರತದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಘನತೆಯ ಪತನದ ಬಗ್ಗೆ ವ್ಯಕ್ತಪಡಿಸಿದ ಕಾಳಜಿಯಿಂದ ದೇಶದ ಇಮೇಜ್ ಕುಸಿದಿದೆ ಎಂದು. ಒಂದು ವೇಳೆ ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಶಕ್ತಿಗಳು ಇಲ್ಲವಾಗಿವೆ ಅಥವಾ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಡೆಸುವುದು ಭಾರತೀಯರಿಗೆ ಆಗುವುದಿಲ್ಲ ಎಂದು ಹೇಳಿದ್ದರೆ, ಆ ಮಾನದಂಡ ಉಲ್ಲಂಘಿಸಿದ್ದಾರೆ ಎನ್ನಬಹುದಾಗಿತ್ತು. ಆದರೆ ಅವರು ಇಂಥದ್ದೇನೂ ಹೇಳಲಿಲ್ಲ, ಅದರ ಬದಲಿಗೆ ಭಾರತದ ಜನರಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯು ಆಳವಾಗಿ ಬೇರುಬಿಟ್ಟಿದ್ದನ್ನು ಎತ್ತಿತೋರಿಸಿದರು. ಅವರ ಈ ಹೇಳಿಕೆಯನ್ನು, ನೀವು ಪ್ರಧಾನಮಂತ್ರಿ ನರೇಂದ್ರ ಮೋದಿ 2015ರಲ್ಲಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ನೀಡಿದ ಭಾಷಣದೊಂದಿಗೆ ಹೋಲಿಕೆ ಮಾಡಿನೋಡಿ. ಅಲ್ಲಿ ಹಿಂದಿನ ಸರಕಾರಗಳ ಮೇಲೆ ದಾಳಿ ಮಾಡುತ್ತ ಮೋದಿಯವರು ’ಹೀಗೂ ಒಂದು ಸಮಯವಿತ್ತು, ಆಗ ಜನರು ತಮ್ಮ ಕಳೆದ ಜನ್ಮದಲ್ಲಿ ಯಾವ ಪಾಪ ಮಾಡಿದ್ದೆವೋ ಏನೋ, ಅದಕ್ಕಾಗಿ ಹಿಂದುಸ್ತಾನದಲ್ಲಿ ಹುಟ್ಟಿದ್ದೀವಿ ಎಂದು ಯೋಚಿಸುತ್ತಿದ್ದರು’ ಎಂದು ಹೇಳಿದರು. ದೇಶದ ಪ್ರತಿಷ್ಠೆಯನ್ನು ತಗ್ಗಿಸುವ ಮಾನದಂಡದಲ್ಲಿ ದೇಶವನ್ನು ಅವಮಾನಿಸುವ ದೊಡ್ಡ ದೋಷಿ ಮೋದಿಜಿಯ ಈ ಹೇಳಿಕೆ ಎಂದು ನಿಸ್ಸಂಶಯವಾಗಿ ಹೇಳಬೇಕಿದೆ.

ಮೂರನೆಯ ಮಾನದಂಡ ವಿದೇಶಿಯರ ಹಸ್ತಕ್ಷೇಪವನ್ನು ಆಹ್ವಾನಿಸುವುದರ ಬಗ್ಗೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಅಂದಿನ ಜನಸಂಘದ ಸಂಸದ ಸುಬ್ರಮಣ್ಯಂ ಸ್ವಾಮಿಯೊಂದಿಗೆ ಅನೇಕ ವಿರೋಧಪಕ್ಷದ ನಾಯಕರು ಅಮೆರಿಕ ಮತ್ತು ಇತರ ದೇಶಗಳಿಗೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಹಸ್ತಕ್ಷೇಪ ಮಾಡುವ ಬೇಡಿಕೆ ಇಟ್ಟಿದ್ದರು. ಅಂತಹ ವಿಪತ್ತಿನ ಕಾಲದಲ್ಲಿ ಹೀಗೆ ಮಾಡಬೇಕೇ ಇಲ್ಲವೇ ಎಂಬುದು ಚರ್ಚೆಯ ವಿಷಯವಾಗಿದೆ, ಆದರೆ ಸದ್ಯಕ್ಕೆ ಇಂತಹದ್ದೇನೂ ಆಗಿಲ್ಲ. ಬಿಜೆಪಿಯ ನಾಯಕರು ಆರೋಪವನ್ನಂತೂ ಮಾಡುತ್ತಿದ್ದಾರೆ, ಆದರೆ ಇಂಗ್ಲೆಂಡಿನ ಸಂಸದರು ಭಾರತೀಯ ಪ್ರಜಾಪ್ರಭುತ್ವದ ರಕ್ಷಣೆ ಮಾಡಬೇಕು ಎಂಬ ಮನವಿ ಮಾಡಿರುವಂತಹ ಯಾವ ಹೇಳಿಕೆಗಳೂ ರಾಹುಲ್ ಗಾಂಧಿಯ ಮಾತುಗಳಲ್ಲಿ ಕಾಣಸಿಗುತ್ತಿಲ್ಲ. ಸ್ವಾಭಾವಿಕವಾಗಿಯೇ, ಇಂತಹ ಆರೋಪ ಮೋದಿಯವರ ಮೇಲೆಯೂ ಇಲ್ಲ. ಆದರೆ, ಇನ್ನೊಂದು ದಿಕ್ಕಿನಿಂದ ಅವರು ಖಂಡಿತವಾಗಿಯೂ ಈ ಘನತೆಯ ಉಲ್ಲಂಘನೆ ಮಾಡಿದ್ದಾರೆ; ಅದು ಅವರು ಅಮೆರಿಕದ ಹೂಸ್ಟನ್ ನಗರದಲ್ಲಿ 2019ರಲ್ಲಿ ಆದ ರ್‍ಯಾಲಿಯಲ್ಲಿ ’ಅಬ್ ಕಿ ಬಾರ್ ಟ್ರಂಪ್ ಸರಕಾರ್’ (ಈ ಬಾರಿ ಟ್ರಂಪ್ ಸರಕಾರ) ಎಂಬ ಘೋಷಣೆಯನ್ನು ಕೂಗಿ, ಸುಮ್‌ಸುಮ್ನೆ ಅಮೇರಿಕದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವಂತಹ ಕೆಲಸ ಮಾಡಿದರು. ಈ ಅಸಫಲ ಮತ್ತು ಹಾಸ್ಯಾಸ್ಪದ ಪ್ರಯತ್ನದ ಪರಿಣಾಮಗಳನ್ನು ದೇಶ ಅನುಭವಿಸಬೇಕಾಯಿತು.

ಪ್ರಶ್ನೆ ಏನೆಂದರೆ, ಒಂದು ವೇಳೆ ಈ ಮೂರು ಮಾನದಂಡಗಳು ರಾಹುಲ್ ಗಾಂಧಿಯ ಮೇಲೆ ಅನ್ವಯ ಆಗುವುದಿಲ್ಲ ಎಂದಮೇಲೆ ಬಿಜೆಪಿ ಇಷ್ಟು ವಿಚಲಿತವಾಗಿದ್ದು ಏಕೆ? ಒಂದೋ, ಅದಾನಿ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಈ ಗಲಾಟೆ ಸೃಷ್ಟಿಸುತ್ತಿದ್ದಾರೆ, ಅಥವಾ ರಾಹುಲ್ ಗಾಂಧಿಯು ಮೋದಿ ಸರಕಾರದ ಮರ್ಮಸ್ಥಾನದ ಮೇಲೆಯೇ ಪೆಟ್ಟುಕೊಟ್ಟಿದ್ದಾರೆಯೇ? ನಿಜ ಏನೆಂದರೆ, ಭಾರತದ ಪ್ರಜಾಸತ್ತಾತ್ಮಕ ಪ್ರತಿಷ್ಠೆ ಕುಸಿಯುವುದು ಯಾವಾಗ ಅಂದರೆ, ಭಾರತ ಸರಕಾರವು ಬಿಬಿಸಿಯ ಸಾಕ್ಷ್ಯಚಿತ್ರವನ್ನು ಬ್ಯಾನ್ ಮಾಡಿದಾಗ ಹಾಗೂ ಬಿಬಿಸಿ ಕಚೇರಿಗಳ ಮೇಲೆ ರೇಡ್ ಮಾಡಿದ್ದಾರೆ ಎಂದು ಇಡೀ ಜಗತ್ತಿಗೆ ಗೊತ್ತಾದಾಗ. ಭಾರತೀಯ ಅರ್ಥವ್ಯವಸ್ಥೆಯ ಪ್ರತಿಷ್ಠೆ ಕುಸಿಯುವುದು ಯಾವಾಗ ಅಂದರೆ, ಹಿಂಡನ್‌ಬರ್ಗ್ ವರದಿಯಿಂದ ಷೇರು ಮಾರುಕಟ್ಟೆಯಲ್ಲಿ ಆದ ಹಗರಣ ತಡೆಯಲು ಭಾರತ ಸರಕಾರ ಮತ್ತು ಅದರ ಸಂಸ್ಥೆಗಳು ಏನನ್ನೂ ಮಾಡಿಲ್ಲ ಎಂಬುದು ಇಡೀ ಜಗತ್ತಿಗೆ ಗೊತ್ತಾದಾಗ. ಒಂದು ಸಶಕ್ತ ದೇಶದ ರೂಪದಲ್ಲಿ ಭಾರತದ ಪ್ರತಿಷ್ಠೆ ಯಾವಾಗ ಕುಸಿಯುತ್ತೆ ಎಂದರೆ, ಚೀನಾ ದೇಶವು ಭಾರತದ 2000 ಚದರ ಕಿಲೊಮೀಟರ್ ಆಕ್ರಮಿಸಿದೆ ಎಂದು ಸೆಟಲೈಟ್ ಮೂಲಕ ಜಗತ್ತಿಗೆ ತಿಳಿದಾಗ ಹಾಗೂ ಸರಕಾರ ಅದರ ಬಗ್ಗೆ ಮೌನವಹಿಸಿದ್ದನ್ನು ನೋಡಿದಾಗ. ಯಾರೂ ನಮ್ಮ ಗಡಿಯಲ್ಲಿ ಪ್ರವೇಶಿಸಿಲ್ಲ ಎಂದು ಪ್ರಧಾನಮಂತ್ರಿ ಹೇಳ್ತಾರೆ ಹಾಗೂ ಚೀನಾದ ಬಳಿ ಎಷ್ಟು ಆರ್ಥಿಕ ಶಕ್ತಿ ಇದೆಯೆಂದರೆ, ನಾವು ಅವರೊಂದಿಗೆ ಕಾಲ್ಕೆರೆದು ಜಗಳವಾಡಲು ಸಾಧ್ಯವಿಲ್ಲ ಎಂದು ವಿದೇಶ ಮಂತ್ರಿ ಹೇಳುತ್ತಾರೆ. ಒಂದು ವೇಳೆ ಸಂಸತ್ತಿನಲ್ಲಿ ರಾಹುಲ್ ಗಾಂಧಿಯ ಮೇಲೆ ದೇಶದ ಪ್ರತಿಷ್ಠೆ ಕಡಿಮೆ ಮಾಡಿದ ಆರೋಪ ಹೊರಿಸುವ ಬದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾದ ಆಕ್ರಮಣದ ಬಗ್ಗೆ ಬಾಯ್ಬಿಟ್ಟಿದ್ದರೆ ದೇಶದ ಘನತೆ ಖಂಡಿತವಾಗಿಯೂ ಹೆಚ್ಚುತ್ತಿತ್ತು.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...