Homeಮುಖಪುಟಬಿಜೆಪಿಯವರೇ ದೇಶ ವಿರೋಧಿಗಳು: ನಡ್ಡಾಗೆ ಖರ್ಗೆ ತಿರುಗೇಟು

ಬಿಜೆಪಿಯವರೇ ದೇಶ ವಿರೋಧಿಗಳು: ನಡ್ಡಾಗೆ ಖರ್ಗೆ ತಿರುಗೇಟು

- Advertisement -
- Advertisement -

ಇತ್ತೀಚೆಗೆ ಬ್ರಿಟನ್‌ನಲ್ಲಿ ಪ್ರಜಾಪ್ರಭತ್ವದ ಬಗ್ಗೆ ಮಾಡಿದ ಟೀಕೆಗಳ ಕುರಿತು ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಾಗ್ದಾಳಿ ನಡೆಸಿ, ”ರಾಹುಲ್ ಗಾಂಧಿ, ‘ರಾಷ್ಟ್ರ ವಿರೋಧಿ ಟೂಲ್‌ಕಿಟ್‌ನ ಶಾಶ್ವತ ಭಾಗ’ವಾಗಿದ್ದಾರೆ” ಎಂದು ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆಡಳಿತಾರೂಢ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

”ರಾಹುಲ್ ಗಾಂಧಿ ಎಂದಾದರೂ ದೇಶ ವಿರೋಧಿಯಾಗಲು ಸಾಧ್ಯವೇ? ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡುವವರು ದೇಶ ವಿರೋಧಿಗಳೇ?” ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.

”ಅವರೇ (ಬಿಜೆಪಿ) ದೇಶ ವಿರೋಧಿಗಳು. ಅವರು ಎಂದಿಗೂ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಮತ್ತು ಅವರು ಇತರರನ್ನು ದೇಶ ವಿರೋಧಿಗಳು ಎಂದು ಕರೆಯುತ್ತಿದ್ದಾರೆ. ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳಿಂದ ವಿಮುಖರಾಗಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥರ ಹೇಳಿಕೆಗೆ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿ ಎಂದಾದರೂ ದೇಶ ವಿರೋಧಿಯಾಗಬಹುದೇ? ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡುವವರು ದೇಶ ವಿರೋಧಿಗಳೇ? ಜೆಪಿ ನಡ್ಡಾ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರು ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಮಾತನಾಡಲು ಏಕೆ ಅವಕಾಶ ನೀಡುತ್ತಿಲ್ಲ? ಎಂದು ಖರ್ಗೆ ಪ್ರಶ್ನೆ ಮಾಡಿದ್ಧಾರೆ.

“ರಾಹುಲ್ ಗಾಂಧಿ ರಾಷ್ಟ್ರ ವಿರೋಧಿ ಟೂಲ್‌ಕಿಟ್‌ನ ಶಾಶ್ವತ ಭಾಗ”: ನಡ್ಡಾ ಆರೋಪ

ನಡ್ಡಾ ಅವರು ವಿಡಿಯೋ ಸಂದೇಶದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದು, ”ಕಾಂಗ್ರೆಸ್ ಪಕ್ಷವು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ದುರದೃಷ್ಟಕರ. ರಾಹುಲ್ ಗಾಂಧಿ ಈಗ ರಾಷ್ಟ್ರವಿರೋಧಿ ಟೂಲ್‌ಕಿಟ್‌ನ ಶಾಶ್ವತ ಭಾಗವಾಗಿದ್ದಾರೆ” ಎಂದು ಆರೋಪ ಮಾಡಿದ್ದಾರೆ.

”ಭಾರತದ ಆಂತರಿಕ ವಿಷಯಗಳಲ್ಲಿ ಇನ್ನೊಂದು ದೇಶವು ಹಸ್ತಕ್ಷೇಪ ಮಾಡುವಂತೆ ಕೇಳುವುದು ಭಾರತದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ.. ಭಾರತದ ದೇಶೀಯ ವಿಷಯಗಳಲ್ಲಿ ಮಧ್ಯಪ್ರವೇಶಿಸುವಂತೆ ಯುರೋಪ್ ಮತ್ತು ಅಮೆರಿಕವನ್ನು ಒತ್ತಾಯಿಸುವುದರ ಹಿಂದೆ ಅವರ ಉದ್ದೇಶವೇನು ಎಂದು ನಾನು ರಾಹುಲ್ ಗಾಂಧಿಯನ್ನು ಕೇಳಲು ಬಯಸುತ್ತೇನೆ” ಎಂದು ನಡ್ಡಾ ಹೇಳಿದರು.

”ಅವರು (ರಾಹುಲ್ ಗಾಂಧಿ), ಭಾರತ, ಸಂಸತ್ತು, ವಿದೇಶಿ ನೆಲದಲ್ಲಿರುವ ಭಾರತೀಯ ಜನರನ್ನು ಅವಮಾನಿಸಿದ್ದಾರೆ. ಇದು ದೇಶದ ವಿರುದ್ಧ ಕೆಲಸ ಮಾಡುವವರನ್ನು ಬಲಪಡಿಸುತ್ತದೆ” ಎಂದು ಹೇಳಿದ್ದಾರೆ.

”ಜಾರ್ಜ್ ಸೊರೊಸ್ ಮತ್ತು ರಾಹುಲ್ ಗಾಂಧಿ ಏಕೆ ಒಂದೇ ಭಾಷೆಯನ್ನು ಮಾತನಾಡುತ್ತಾರೆ?” ಎಂದು ನಡ್ಡಾ ಪ್ರಶ್ನೆ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...