Homeಮುಖಪುಟಲಂಡನ್ ಭಾಷಣದ ವಿಚಾರ: ರಾಹುಲ್‌ ಲೋಕಸಭೆ ಸದಸ್ಯತ್ವ ಅಮಾನತ್ತಿಗೆ ಆಗ್ರಹಿಸಿದ ಬಿಜೆಪಿ

ಲಂಡನ್ ಭಾಷಣದ ವಿಚಾರ: ರಾಹುಲ್‌ ಲೋಕಸಭೆ ಸದಸ್ಯತ್ವ ಅಮಾನತ್ತಿಗೆ ಆಗ್ರಹಿಸಿದ ಬಿಜೆಪಿ

- Advertisement -
- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರಿಟನ್‌ನಲ್ಲಿ ಭಾರತೀಯ ಪ್ರಜಾಪ್ರಭುತ್ವದ ಕುರಿತು ಟೀಕೆ ಮಾಡಿರುವುದ್ದಕ್ಕೆ ಅವರು ಸದನದಲ್ಲಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಬೇಕು ಎಂದು ಆಡಳಿತಾರೂಢ ಬಿಜೆಪಿ ಆಗ್ರಹಿಸಿದೆ.

ಈಗಾಗಲೇ ಬಿಜೆಪಿ, ರಾಹುಲ್ ಗಾಂಧಿ ಅವರನ್ನು ಸದನದಿಂದ ಅಮಾನತುಗೊಳಿಸುವ ಸಾಧ್ಯತೆಯನ್ನು ಪರಿಶೋಧಿಸುವ ವಿಶೇಷ ಸಮಿತಿಯನ್ನು ರಚಿಸುವಂತೆ ಕೋರಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಸಂಪರ್ಕಿಸಿದೆ.

ಒಂದುವೇಳೆ ವಿಶೇಷ ಸಮಿತಿ ರಚನೆಯಾದರೆ ಲೋಕಸಭೆಯಲ್ಲಿ ಬಿಜೆಪಿಯು ಸಂಖ್ಯಾಬಲದಲ್ಲಿ ಬಹುಮತ ಪಡೆಯಲಿದೆ. ವಿಶೇಷ ಸಮಿತಿಯು ಸಾಮಾನ್ಯವಾಗಿ ಒಂದು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸುತ್ತದೆ.

ಈ ಬಗ್ಗೆ ಪಕ್ಷದ ಹಿರಿಯ ನಾಯಕರೊಬ್ಬರು ಮಾತನಾಡಿ, ”ಬಿಜೆಪಿಯು ರಾಹುಲ್ ಗಾಂಧಿ ವಿಚಾರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಇದು ಅಭಿಪ್ರಾಯ ಹಂಚಿಕೊಳ್ಳುವ ವಿಚಾರವಲ್ಲ, ಅದಕ್ಕೂ ಮೀರಿದ ಸಮಸ್ಯೆ ಆಗಿದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಕಿರಣ್ ರಿಜಿಜು, ಅನುರಾಗ್ ಠಾಕೂರ್, ಗಿರಿರಾಜ್ ಸಿಂಗ್ ಮತ್ತು ರಾಜೀವ್ ಚಂದ್ರಶೇಖರ್ ಮತ್ತು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಅವರು ಲಂಡನ್‌ನಲ್ಲಿ ಗಾಂಧಿ ಭಾರತದ ಬಗ್ಗೆ “ಸುಳ್ಳು” ಹೇಳಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ನಾಯಕ ಈ ವರೆಗೂ ತಮ್ಮ ಟೀಕೆಯ ಬಗ್ಗೆ  ಯಾವುದೇ ಪಶ್ಚಾತ್ತಾಪ ತೋರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ ಮತ್ತು ಪ್ರಸಾರ ಸಚಿವ ಠಾಕೂರ್ ಮಾತನಾಡಿ, ”ಸಂಸತ್ತಿಗೆ ಸ್ವಾಗತ, ಒಂದು ವಾರದಿಂದ ಕಾಯುತ್ತಿದ್ದೇವೆ. ರಾಹುಲ್ ಗಾಂಧಿ ಅವರು ವಿದೇಶಿ ನೆಲದಿಂದ ಭಾರತದ ವಿರುದ್ಧ ಸುಳ್ಳುಗಳನ್ನು ಹರಡಿದ್ದಾರೆ ಮತ್ತು ಸಂಸತ್ತಿಗೆ ಅವಮಾನ ಮಾಡಿದ್ದಾರೆ. ಅವರು ಸದನಕ್ಕೆ ಬಂದು ಕ್ಷಮೆಯಾಚಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರೇ ದೇಶ ವಿರೋಧಿಗಳು: ನಡ್ಡಾಗೆ ಖರ್ಗೆ ತಿರುಗೇಟು

ಗುರುವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ”ಗಾಂಧಿ ಅವರು ಸಂಸತ್ತಿನ ಇತರ ಸದಸ್ಯರಿಗಿಂತ ಮೇಲಲ್ಲ ಮತ್ತು ಭಾರತೀಯ ಸಂಸತ್ತನ್ನು ಅವರ ವೈಯಕ್ತಿಕ ಅಧಿಕಾರದ ಕ್ಷೇತ್ರ ಎಂದು ಪರಿಗಣಿಸಬಾರದು” ಎಂದು ಹೇಳಿದರು.

”ರಾಷ್ಟ್ರಕ್ಕೆ ಸಂಬಂಧಿಸಿದಂತೆ ಯಾವುದೇ ಘಟನೆಯು ಅದು ಎಲ್ಲರಿಗೂ ಕಾಳಜಿಯ ವಿಷಯವಾಗಿದೆ. ಇದರಿಂದ ಕಾಂಗ್ರೆಸ್ ಅಥವಾ ಅದರ ನಾಯಕತ್ವ ಪರಿಣಾಮಗಳ ಬಗ್ಗೆ ನಾವು ತಲೆ ಕೆಡಸಿಕೊಳ್ಳುವುದಿಲ್ಲ. ಅವರು ರಾಷ್ಟ್ರವನ್ನು ಅವಮಾನಿಸಿದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

”ರಾಹುಲ್ ಗಾಂಧಿ ಅವರು ಭಾರತ ವಿರೋಧಿ ಶಕ್ತಿಗಳು ಮಾತನಾಡುವಂತೆ ಮಾತನಾಡುತ್ತಾರೆ. ಅದೇ ಭಾಷೆಯನ್ನೇ ರಾಹುಲ್ ಗಾಂಧಿ ಬಳಸಿದ್ದಾರೆ. ಇದು ಭಾರತದ ವಿರುದ್ಧ ಕೆಲಸ ಮಾಡುವ ಎಲ್ಲರ ಭಾಷೆಯಾಗಿದೆ” ಎಂದು ರಿಜಿಜು ಹೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಯಿಂದ ದೇಶಕ್ಕೆ ಮತ್ತು ಅವರು ಸದಸ್ಯರಾಗಿರುವ ಸಂಸತ್ತಿಗೆ ಹಾನಿಯಾಗಿದೆ. ಕೆಲವು ಜನರು ದೇಶದ ಗೌರವದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈಗ ಕಾಂಗ್ರೆಸ್‌ ಲಂಡನ್‌ನಲ್ಲಿ ಪೊರಕೆಯಿಂದ ಗುಡಿಸಿ ಸ್ವಚ್ಚಗೊಳಿಸುವುದು ಎಂದು ಕೇಳಿದ್ದಾರೆ.

“ರಾಹುಲ್ ಗಾಂಧಿ ಅವರು ತಮ್ಮ 50 ವರ್ಷಗಳ ಕಾಲ ರಾಜವಂಶಸ್ತರಂತೆ ಬದುಕಿರಬಹುದು. 2014ರ ಮೊದಲು, ಅವರು ಸುಗ್ರೀವಾಜ್ಞೆಗಳನ್ನು ಹರಿದು ಹಾಕುವುದು ಸೇರಿದಂತೆ ಯಾವುದೇ ಹೊಣೆಗಾರಿಕೆಯಿಲ್ಲದೆ ತನಗೆ ಬೇಕಾದುದನ್ನು ಮಾಡಲು ಮತ್ತು ಹೇಳಲು ಅವಕಾಶ ಇತ್ತು. ಆದರೆ ಅದು ಈಗ ನಡೆಯಲ್ಲ. ಅವರ ಸುಳ್ಳಿಗೆ ಅವರೇ ಜವಾಬ್ದಾರನಾಗಿರಬೇಕು” ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

ಸಂಸತ್ತಿನಲ್ಲಿ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ. ಇದಕ್ಕೆ ಪ್ರತಿಕ್ರಿಸಿರುವ ಅವರು, ತಾನು ಯಾವುದೇ “ಭಾರತ ವಿರೋಧಿ” ಟೀಕೆ ನೀಡಿಲ್ಲ ಮತ್ತು ಅವಕಾಶ ನೀಡಿದರೆ ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಗುರುವಾರ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...