Homeಮುಖಪುಟನಕಲಿ ಶೈಕ್ಷಣಿಕ ದಾಖಲಾತಿ ಪತ್ರ ಸಲ್ಲಿಕೆ: ಕೆನಡಾದಿಂದ 700ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳ ಗಡಿಪಾರು!

ನಕಲಿ ಶೈಕ್ಷಣಿಕ ದಾಖಲಾತಿ ಪತ್ರ ಸಲ್ಲಿಕೆ: ಕೆನಡಾದಿಂದ 700ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳ ಗಡಿಪಾರು!

- Advertisement -
- Advertisement -

ಕೆನಡಾದ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ದಾಖಲಾತಿಯ ಕುರಿತಾದ ದಾಖಲೆಪತ್ರಗಳು ನಕಲಿಯೆಂಬುದನ್ನು ದೇಶದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ 700ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಗಡಿಪಾರಿನ ಭೀತಿಯನ್ನು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕೆನಡಾದ ಗಡಿ ಭದ್ರತಾ ಏಜೆನ್ಸಿ (ಸಿಬಿಎಸ್ಎ)ಯಿಂದ ಗಡಿಪಾರು ಪತ್ರಗಳು ಬಂದಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕೆನಡಿಯನ್ ಬಾರ್ಡರ್ ಸೆಕ್ಯುರಿಟಿ ಏಜೆನ್ಸಿಯು ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿತು, ಅದು ಅವರ ಪ್ರಸ್ತಾಪ ಪತ್ರಗಳು ಅಧಿಕೃತವಲ್ಲ ಎಂದು ಬಹಿರಂಗಪಡಿಸಿತು.

ಮಾಧ್ಯಮ ವರದಿಗಳ ಪ್ರಕಾರ, ಜಲಂಧರ್‌ನಲ್ಲಿರುವ ಶೈಕ್ಷಣಿಕ ವಲಸೆ ಸೇವಾ ಸಂಸ್ಥೆಯ ಮೂಲಕ ಸುಮಾರು 700 ವಿದ್ಯಾರ್ಥಿಗಳು ಕೆನಡಾದಲ್ಲಿ ಅಧ್ಯಯನ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬ್ರಿಜೇಶ್ ಮಿಶ್ರಾ ನೇತೃತ್ವದ ಈ ಸಂಸ್ಥೆಯು ಕೆನಡದ ಪ್ರತಿಷ್ಠಿ ಶಿಕ್ಷಣ ಸಂಸ್ಥೆ ಹಂಬರ್ ಕಾಲೇಜ್‌ನಲ್ಲಿ ದಾಖಲಾತಿ ಶುಲ್ಕ ಸೇರಿದಂತೆ ಎಲ್ಲಾ ವೆಚ್ಚಗಳಿಗಾಗಿ 16 ಲಕ್ಷ ರೂ.ಗೂ ಅಧಿಕ ಶುಲ್ಕವನ್ನು ಪ್ರತಿ ವಿದ್ಯಾರ್ಥಿಗೂ ವಿಧಿಸುತ್ತಿತ್ತು. ಆದರೆ ವಿಮಾನಯಾನದರ ಹಾಗೂ ಭದ್ರತಾ ಠೇವಣಿಗಳನ್ನು ಪ್ರತ್ಯೇಕವಾಗಿ ವಿಧಿಸುತ್ತಿತ್ತು.

ಇದನ್ನೂ ಓದಿ: ಬೆಂಗಳೂರು: ನಕಲಿ ಅಂಕಪಟ್ಟಿ ದಂಧೆ ಬಯಲಿಗೆಳೆದ ಪೊಲೀಸರು

ಈ ವಿದ್ಯಾರ್ಥಿಗಳು ಅಧ್ಯಯನದ ಆಧಾರದಲ್ಲಿ 2018-19ರ ಸಾಲಿನಲ್ಲಿ ಕೆನಡಾಕ್ಕೆ ತೆರಳಿದ್ದರು. ಈ ವಿದ್ಯಾರ್ಥಿಗಳು ಕೆನಡಾದಲ್ಲಿ ಖಾಯಂ ವಾಸ್ತವ್ಯಕ್ಕಾಗಿ ಅರ್ಜಿ ಸಲ್ಲಿಸಿದಾಗ, ಈ ವೀಸಾ ವಂಚನೆ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಪ್ರವೇಶ ಪತ್ರಗಳನ್ನು ಕೆನಡಾದ ಗಡಿ ಭದ್ರತಾ ಏಜೆನ್ಸಿ ಪರಿಶೀಲಿಸಿದಾಗ ಅವು ನಕಲಿಯೆಂಬುದು ಬೆಳಕಿಗೆ ಬಂದಿದೆ.

ಈ ವಿದ್ಯಾರ್ಥಿಗಳು ಸಲ್ಲಿಸಿದ ಆಡ್ಮಿಶನ್ ಆಫರ್‌ಗೆ ಸಂಬಂಧಿಸಿದ ದಾಖಲಾತಿ ಪತ್ರಗಳು ನಕಲಿಯೆಂದು ಮನವರಿಕೆಯಾದ ಶಿಕ್ಷಣ ಸಂಸ್ಥೆಗಳು ಅವರನ್ನು ಬೇರೆ ಕಾಲೇಜುಗಳಿಗೆ ಹೋಗುವಂತೆ ಸೂಚನೆ ನೀಡಿದ್ದವು. ಹೀಗೆ ಕಾಲೇಜು ಬದಲಾಯಿಸಿದ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿದೆ ಎಂಬ ವಿಚಾರವು ಈಗ ಬೆಳಕಿಗೆ ಬಂದಿದೆ.

ಕಳೆದ ಆರು ತಿಂಗಳಿನಿಂದ ಮಿಶ್ರಾ ಅವರ ಕಚೇರಿಯನ್ನು ಮುಚ್ಚಲಾಗಿದೆ ಎಂದು ಜಲಂಧರ್ ಪೊಲೀಸರು ಗುರುವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಜಲಂಧರ್ ಡೆಪ್ಯುಟಿ ಕಮಿಷನರ್ ಜಸ್ಪ್ರೀತ್ ಸಿಂಗ್ ಅವರು ಗುರುವಾರ ಶಿಕ್ಷಣ ವಲಸೆ ಸೇವೆಗಳಲ್ಲಿ ಮಿಶ್ರಾ ಅವರ ಪಾಲುದಾರರಲ್ಲಿ ಒಬ್ಬರಾದ ರಾಹುಲ್ ಭಾರ್ಗವ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.

ಈ ಬಗ್ಗೆ ತಜ್ಞರೊಬ್ಬರು ಮಾತನಾಡಿದ್ದು, ”ಈ ರೀತಿಯ ವಂಚನೆ, ಕೆನಡಾದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ. ಕೆನಡಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿವಿಧ ಉದ್ದೇಶಗಳಿಗಾಗಿ ಅರ್ಜಿ ಹಾಕುತ್ತಾರೆ. ಇದರಿಂದಾಗಿ ಈ ರೀತಿಯ ದೊಡ್ಡ ವಂಚನೆಯಾಗಿದೆ” ಎಂದು ಹೇಳಿದ್ದಾರೆ.

”ಇಂತಹ ವಂಚನೆಗಳಲ್ಲಿ ಕಾಲೇಜುಗಳ ನಕಲಿ ಆಫರ್ ಲೆಟರ್‌ಗಳನ್ನು ಪಡೆಯುವುದರಿಂದ ಹಿಡಿದು ವೀಸಾ ಪಡೆಯಲು ವಿದ್ಯಾರ್ಥಿಗಳಿಗೆ ನಕಲಿ ಶುಲ್ಕ ಪಾವತಿ ರಸೀದಿಗಳನ್ನು ಒದಗಿಸುವವರೆಗೆ ಅನೇಕ ಅಂಶಗಳು ಒಳಗೊಂಡಿವೆ . ಕಾಲೇಜುಗಳಿಗೆ ಶುಲ್ಕವನ್ನು ಪಾವತಿಸಿದ ನಂತರವೇ ವೀಸಾಗಳನ್ನು ನೀಡಲಾಗುತ್ತದೆ” ಎಂದು ಜಲಂಧರ್ ಮೂಲದ ಸಮಾಲೋಚಕರೊಬ್ಬರು” ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ-2024: ಕುಗ್ಗಿದ ಮೋದಿ ವರ್ಚಸ್ಸು; ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವಲೋಕನ…

0
2014 ಮತ್ತು 2019ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ 2024ರಲ್ಲಿ ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗಿದೆ. ಈ ಬಾರಿ ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ, ಮೋದಿ ಕುರಿತು ನಿರೂಪಣೆಯಲ್ಲಿ ಬದಲಾವಣೆ ಇದೆ, ಜನರಲ್ಲಿ ಮೋದಿ...