HomeUncategorizedತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

ತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

- Advertisement -
- Advertisement -

‘ದೇಶದ್ರೋಹ’: ಈ ಮೊದಲು ಯಾವುದೋ ನಕ್ಸಲ್ ಕೇಸಲ್ಲಿ ಅದಕ್ಕೂ ಮುಂಚೆ ಖಲಿಸ್ತಾನ್ ಕೇಸುಗಳಲ್ಲಿ, ಮತ್ತಂಥದ್ಯಾವುದೋ ಕೇಸುಗಳಲ್ಲಿ ನಾವು ಪೇಪರಿನಲ್ಲಿ ಓದುತ್ತಿದ್ದೆವು. ನಮ್ಮ ಸುತ್ತಲಿನ ನಿತ್ಯದ ಬದುಕಲ್ಲಿ ಅದರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯೂ ಇರಲಿಲ್ಲ.

‘ದೇಶದ್ರೋಹ’ದ ಆಪಾದನೆಗಳು ಒಂದು ಕಾಲಘಟ್ಟದಲ್ಲಿ ಹೆಚ್ಚಾಗಿ ಕಂಡುಬಂದಿದ್ದು ಎಪ್ಪತ್ತರ ದಶಕದ ಎಮರ್ಜೆನ್ಸಿ ಸಮಯದಲ್ಲಿ. ಸ್ವಾತಂತ್ರ್ಯಪೂರ್ವದಲ್ಲಿ ಅದೊಂದು ನಿತ್ಯದ ಅಪರಾಧವಾಗಿತ್ತು. ದೇಶದ್ರೋಹದ ಆಪಾದನೆಯಿಲ್ಲದ ಸ್ವಾತಂತ್ರ್ಯ ಹೋರಾಟಗಾರನಿರಲಿಲ್ಲ. ನಮ್ಮ ದ.ರಾ ಬೇಂದ್ರೆಯವರನ್ನು ಕಾಡಿತ್ತು ದೇಶದ್ರೋಹದ ಶಿಕ್ಷೆ. ಅವರ ‘ನಾದಲೀಲೆ’ ಕವನಸಂಕಲನ ಆ ಸಮಯದಲ್ಲಿ ಬರೆದದ್ದು.

ಅಷ್ಟಕ್ಕೂ ಏನಿದು ‘ದೇಶದ್ರೋಹ’? ನಮ್ಮ ಕಾನೂನಿನಲ್ಲಿ, ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ, ಕಾನೂನಾತ್ಮಕವಾಗಿ ನಡೆಸುತ್ತಿರುವ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಶಾಂತಿಭಂಗವಾಗುವಂಥ ವಾತಾವರಣ ಸೃಷ್ಟಿ ಮಾಡುವುದು ‘ದೇಶದ್ರೋಹ’ವೆನ್ನಲಾಗುತ್ತದೆ.

ಸರ್ಕಾರವನ್ನು ಟೀಕಿಸುವ, ವಿಮರ್ಶಿಸುವ ಅಧಿಕಾರ ನಮಗಿಲ್ಲವೇ? ಅದೆಷ್ಟೋ ಜನ ಸರ್ಕಾರಗಳನ್ನ ತರಾಟೆಗೆ ತೆಗೆದುಕೊಳ್ತಾರೆ – ವಿರೋಧಪಕ್ಷವಾಗಲೀ, ಮಾಧ್ಯಮದವರಾಗಲೀ ತಮ್ಮ ಹದ್ದಿನಕಣ್ಣಿನಿಂದ ಯಾವಾಗಲೂ ನೋಡುತ್ತಿರುತ್ತಾರೆ ಹಾಗೂ ಪ್ರತಿ ಚಿಕ್ಕತಪ್ಪನ್ನು ಎತ್ತಿಹಿಡಿಯುತ್ತಾರೆ. ಅದೇನಾದರೂ ಭ್ರಷ್ಟತೆಯ ಆರೋಪವಾದರೆ ಮುಗಿಯಿತು ಸರ್ಕಾರವನ್ನು ಹಿಗ್ಗಾಮುಗ್ಗಾ ಬೈಯುತ್ತಿರುತ್ತಾರೆ. ಎಂತೆಂಥದೋ ಕೆಟ್ಟ ಶಬ್ದಗಳನ್ನ ಉಪಯೋಗಿಸಲಾಗುತ್ತದೆ. ಅದೇ ಅಲ್ಲವೇ ಪ್ರಜಾಪ್ರಭುತ್ವವೆಂದರೆ ಎಂದು ನೀವು ಕೇಳಬಹುದು. ಆಶ್ಚರ್ಯದ ಸಂಗತಿ ಏನೆಂದರೆ ಸುಪ್ರೀಂಕೋರ್ಟು, ಹೈಕೋರ್ಟುಗಳು ಕೂಡ ಇದನ್ನೇ ಹೇಳುತ್ತವೆ. ಹಾಗಾದರೆ ಅದು ಅಪರಾಧ ಹೇಗಾಯಿತು?

ದುರಂತವೆಂದರೆ ಸ್ವಾತಂತ್ರ್ಯಾನಂತರ ದೇಶದ್ರೋಹದ ಅಪರಾಧವನ್ನು ಕಾನೂನಲ್ಲಿ ಉಳಿಸಿಕೊಳ್ಳಲಾಯಿತು. ಈ ಅಪರಾಧ ಊರ್ಜಿತವಲ್ಲವೆಂದು, ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದಾಗ ದೇಶದ್ರೋಹ ಉಳಿಯುವ ಅವಕಾಶವಿಲ್ಲವೆಂದು ಕೇದಾರನಾಥ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ವಾದಿಸಲಾಯಿತು. ಅಂದಿನ ಕಾಲಘಟ್ಟದಲ್ಲಿನ ಸ್ಥಿತಿಗಳು ಆ ಅಪರಾಧದ ಕಾನೂನನ್ನು ಉಳಿಸಿಕೊಳ್ಳುವ ಅವಶ್ಯಕತೆಯನ್ನ ಒಪ್ಪಿಸಿದ್ದವು. ಇಂದಿಗೂ ಕೇದಾರನಾಥ್ ಪ್ರಕರಣ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮೈಲಿಗಲ್ಲು.

ಕೇದಾರನಾಥ್ ಪ್ರಕರಣದ ಮುಖ್ಯ ತೀರ್ಪೆಂದರೆ ಎಲ್ಲವುದೂ ದೇಶದ್ರೋಹವಲ್ಲ. 124ಎ ನಲ್ಲಿಯೇ ಅದಕ್ಕೆ ರಕ್ಷಣೆ ಕೊಡಲಾಗಿದೆ. ಸರ್ಕಾರದ ನೀತಿಗಳಿಗೆ ವಿರೋಧ ವ್ಯಕ್ತಪಡಿಸುವುದು, ಸರಿಯಿಲ್ಲವೆನ್ನುವುದು, ಮೂರ್ಖತ್ವದಿಂದ ಕೂಡಿದೆಯೆಂಬುದು, ಜನವಿರೋಧಿ ಎನ್ನುವುದು, ಮತ್ತು ಯಾವುದೇ ರೀತಿಯ ವಿಮರ್ಶೆಯನ್ನು ಅಲ್ಲಿ ರಕ್ಷಿಸಲಾಗಿದೆ. ಅದಿಲ್ಲದೇ ಇದ್ದರೇ ಪ್ರತಿ ವಿರೋಧಪಕ್ಷದ ರಾಜಕಾರಣಿಯನ್ನು ಜೈಲಲ್ಲಿಡಬಹುದು – ಅದು ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ.

ಕೇದಾರನಾಥ್ ತೀರ್ಪು ಎಷ್ಟೇ ಸರಿಯಿದ್ದರೂ, ಸರ್ಕಾರಗಳೆಂದೂ ತುಂಬಾ ಶ್ರದ್ಧೆಯಿಂದ ಆ ತೀರ್ಪನ್ನು ಕಡೆಗಣಿಸಿವೆ ಎಂಬುದು ಚಾರಿತ್ರಿಕ ಸತ್ಯ. ಆದರೆ ಇದನ್ನ ಯಾರ ಮೇಲೆ ಪ್ರಯೋಗಿಸಲಾಯಿತು ಎಂದರೆ, ಸಾಮಾನ್ಯವಾಗಿ ಜನಪರ ಚಳವಳಿಗಳ ಮೇಲೆ. ಅವುಗಳ ನಾಯಕರನ್ನು ಯಾವಾಗಲೂ ದೇಶದ್ರೋಹದ ಪಟ್ಟಿಯಲ್ಲಿ ಸೇರಿಸಲಾಗಿದೆ. ಜಯಪ್ರಕಾಶ್ ನಾರಾಯಣ್ ಇರಲಿ, ಕಮ್ಯೂನಿಸ್ಟ್ ನಾಯಕರಿರಲಿ, ಅಟಲ್ ಬಿಹಾರಿ ವಾಜಪೇಯಿಯವರಿರಲಿ ಒಂದು ಚಳವಳಿಯ ನೇತಾರರಾಗಿದ್ದರೆ ದೇಶದ್ರೋಹದ ಆರೋಪ ಕಟ್ಟಿಟ್ಟಬುತ್ತಿ ಎಂಬಂತಿದೆ. ಇಂದಿಗೂ ಆ ಸ್ಥಿತಿ ಬದಲಾಗಿಲ್ಲ.

ಎಮರ್ಜೆನ್ಸಿ ಸಮಯದಲ್ಲಂತೂ ಈ ಅಪರಾಧ ಕಾನೂನನ್ನು, ಸರ್ಕಾರದ ಮಾತನ್ನು ವಿರೋಧಿಸಿದವರೆಲ್ಲರ ಮೇಲೂ ಉಪಯೋಗಿಸಲಾಯಿತು. ಅದರ ಪರಿಣಾಮ ನಮಗೆಲ್ಲರಿಗೂ ತಿಳಿದ ಇತಿಹಾಸ.

ಎಂಭತ್ತರ, ತೊಂಭತ್ತರ ದಶಕ ಹಾಗೂ ಇಪ್ಪತ್ತೊಂದನೇ ಶತಮಾನದ ಮೊದಲ ದಶಕದ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಕಂಡರೂ (ಬಹುಶಃ ಮೈತ್ರಿ ಸರ್ಕಾರಗಳ ಕಾರಣವಿರಬಹುದು) ಕಳೆದೈದು ವರ್ಷಗಳಲ್ಲಿ ಇದರ ದುರುಪಯೋಗ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲೆಂದೆ ತಂದ UAPA ಕಾಯ್ದೆ ನಂತರದ ರೂಪಗಳಲ್ಲಿ, TADA ಹಾಗೂ POTA ಕಾಯ್ದೆಗಳಿಗೆ ಪರ್ಯಾಯವಾಗಿ ಬದಲಾವಣೆಯಾಗಿದ್ದು ಚಾರಿತ್ರಿಕ ಸತ್ಯ. ಯಾವುದೋ ಆತಂಕವಾದಿ ಸಂಘಟನೆಯನ್ನು ಬಹಿಷ್ಕರಿಸುವ ಹಾಗೂ ಅದರ ಕಾರ್ಯಗಳನ್ನು ಕಟ್ಟಿಹಾಕುವ ಹಾಗೂ ಯಾವುದೇ ಅಂಥಾ ಘಟನೆಗಳಿಗೆ ಶಿಕ್ಷಿಸುವಂಥಾ ಉದ್ದೇಶವನ್ನು ಹೊಂದಿದ್ದು ತನ್ನ ಹೊಸ ಅವತಾರದಲ್ಲಿ ಯಾರನ್ನಾದರೂ ಅದರಡಿಯಲ್ಲಿ ಜೈಲಿಗೆ ತಳ್ಳಬಹುದಾದ ಮತ್ತು ಸಂವಿಧಾನ ಜನಿತ ಹಕ್ಕುಗಳನ್ನು ಇಲ್ಲದಂತೆ ಮಾಡುವ ಅಧಿಕಾರವನ್ನು ಹೊಂದಿದೆ.

ಅದರ ತೀವ್ರ ದುರುಪಯೋಗ ಇಂದು ನಾವೆಲ್ಲ ಕಾಣುತ್ತಿದ್ದೇವೆ. ಬೀದರಿನ ಶಾಲೆಯಲ್ಲಿ ನಾಟಕಕ್ಕೆಂದು ಮಗುವಿಗೆ ಹಳೆಯ ಚಪ್ಪಲಿಯೊಂದು ಕೊಟ್ಟಿದ್ದು ತಾಯಿಯ ದೇಶದ್ರೋಹವಾಗುವಷ್ಟು, ಒಂದು ಕವನ ಬರೆದರೆ, ಒಂದು ಕಾರ್ಟೂನನ್ನು ಶೇರ್ ಮಾಡಿದರೆ, ಕಾರ್ಟೂನ್ ಚಿತ್ರಿಸಿದರೆ, ಒಂದು ಸ್ಲೋಗನ್ ಕೂಗಿದರೂ ದೇಶದ್ರೋಹ ಪ್ರಕರಣ ದಾಖಲಿಸುವ ಸ್ಥಿತಿಯನ್ನು ನಾವು ತಲುಪಿದ್ದೇವೆ. ಮಾನವ ಹಕ್ಕುಗಳನ್ನು ಕೇಳುವವರನ್ನು ಜೈಲಿಗಟ್ಟುತ್ತಿದೇವೆ. ಅದು ಒಬ್ಬ ಕವಿಯಿರಲಿ, ಪ್ರಾಧ್ಯಾಪಕನಿರಲಿ, ವಿದ್ಯಾರ್ಥಿಯಿರಲಿ, ಬಸರಿಯಿರಲಿ, ಸಂವಿಧಾನಿಕ ರೀತಿಯ ಹೋರಾಟವನ್ನು ತನ್ನದಾಗಿಸಿಕೊಂಡವನಿರಲಿ, ಸರ್ಕಾರಗಳು ಸಹಿಸುತ್ತಿಲ್ಲ. ಇಂದು ಇಂಥಾ ಕಾನೂನುಗಳಲ್ಲಿ ಆರೋಪಿಸುವುದಕ್ಕೆ ಬಲವಾದ ಕಾರಣಗಳೂ ಬೇಕಿಲ್ಲ.

ಇವು ನಾವು ನಮಗಾಗಿ ಬರೆದುಕೊಂಡಿರುವ, ನಮ್ಮದಾದ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಚ್ಯುತಿ ತಂದಿವೆ. ಇಂಥಾ ಕರಾಳ ಕಾಯ್ದೆಗಳ ಮರುಪರಿಶೀಲನೆ ಅತ್ಯವಶ್ಯವಾಗಿದೆ. ಇಂಥಾ ಕಾನೂನುಗಳ ದುರುಪಯೋಗ ನಿಲ್ಲಬೇಕಿದೆ.


ಇದನ್ನು ಓದಿ: ಪತಂಜಲಿ ಕೊರೊನಾ ಔಷಧಿ ಮಾರಿದರೆ ಕ್ರಮ: ರಾಜಸ್ಥಾನ ಸಚಿವರ ಎಚ್ಚರಿಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...