Homeಅಂಕಣಗಳುಇದನ್ನು ನಮಸ್ತೆ ಟ್ರಂಪ್ ವೈರಸ್ ಅಂತ ಯಾಕೆ ಕರೀತಿಲ್ಲ?

ಇದನ್ನು ನಮಸ್ತೆ ಟ್ರಂಪ್ ವೈರಸ್ ಅಂತ ಯಾಕೆ ಕರೀತಿಲ್ಲ?

- Advertisement -
- Advertisement -

ಮಹಾಭಾರತದ ಪರೀಕ್ಷಿತನ ಕತೆ ಎಲ್ಲಾರಿಗೂ ಗೊತ್ತು. ಅಜ್ಞಾತವಾಸದ ಕಾಲದಾಗ ಅರ್ಜುನ ವಿರಾಟರಾಜನ ಮಗಳು ಉತ್ತರಾಗ ಭರತನಾಟ್ಯ ಕಲಿಸತಾನ. ಒಂದು ವರ್ಷದ ನಂತರ ಅವಳನ್ನ ಸೊಸೆಯಾಗಿ ಮಾಡಿಕೋತಾನ. ಅವಳ ಮಗ ಪರೀಕ್ಷಿತ. ಧರ್ಮರಾಜನ ನಂತರ ಅವನೇ ಹಸ್ತಿನಾಪುರದ ರಾಜ. “ನಿನ್ನ ಸಾವು ಹಾವಿನ ವಿಷದಿಂದ” ಅಂತ ಹೇಳಿ ಅವನಿಗೆ ಋಷಿಯೊಬ್ಬ ಶಾಪ ಕೊಡತಾನ. ಪರೀಕ್ಷಿತ ಹೆದರಿ ತನ್ನ ದೇಶದ ಎಲ್ಲಾ ಹಾವುಗಳನ್ನು ಕೊಲ್ಲಲಿಕ್ಕೆ ಸರ್ಪ ಸಂಹಾರ ಯಾಗ ಮಾಡತಾನ. ಆದರೂ ಸಹಿತ ಹಾವುಗಳ ರಾಜ ತಕ್ಷಕ ಒಂದು ಸಣ್ಣ ಕ್ರಿಮಿಯಾಗಿ ಅವನು ತಿನ್ನೋ ಹಣ್ಣಿನೊಳಗ ಸೇರಿಕೊಂಡು ಆತನ್ನ ಕೊಲ್ಲತಾನ.

ಆ ಹಣ್ಣು ತಿನ್ನೋ ಮುಂಚೆ ಆ ರಾಜ ಅದನ್ನ ಪರೀಕ್ಷೆ ಮಾಡಿದ್ದರ ಅವನ ಜೀವಾ ಉಳೀತಿತ್ತು ಅಂತ ಒಂದೊಂದು ಸರ್ತಿ ಅನ್ನಸತದ.
ಇದು ಯಾಕ ನೆನಪು ಮಾಡಬೇಕಾತು ಅಂದರ ಈ ಕಿರೀಟಿ ವೈರಸ್ಸಿನ ಸಂಕಟದೊಳಗ ನಮ್ಮ ಸರಕಾರದ ಮೇಲೆ ಇರೋ ಆರೋಪ ಏನಂದರ ಅದು ಎಷ್ಟು ಬೇಕೋ ಅಷ್ಟು ಪರೀಕ್ಷೆ ಮಾಡತಾ ಇಲ್ಲಾ ಅಂತ. ಒಂದು ನೂರಾ ಮೂವತ್ತು ಕೋಟಿ ಜನಾ ಇರೋ ಈ ದೇಶದೊಳಗ ಬರೇ ಹದಿಮೂರು ಲಕ್ಷ ಪರೀಕ್ಷೆ ಆಗಿದಾವು. ಖರೇ ಹೇಳಬೇಕಂದರ ಒಂದು ದಿನಕ್ಕ ಹತ್ತು ಲಕ್ಷದ ಲೆಕ್ಕದಾಗ ನೂರು ದಿನಕ್ಕ ಹತ್ತು ಕೋಟಿ ಪರೀಕ್ಷೆ ಆಗಬೇಕಿತ್ತು ಅಂತ ತಜ್ಞರ ಅಂಬೋಣ.

ನೀವು ಯಾಕ ಮಾಡತಿಲ್ಲಾ ಅಂತ ಯಾರನ್ನೂ ಕೇಳಂಗಿಲ್ಲ. ಯಾರನ್ನ ಕೇಳತೀರಿ? ಅಧಿಕಾರಿನ್ನ ಕೇಳಿದರ ರಾಜಕಾರಣಿ ಕಡೆ ತೋರಸತಾರ. ರಾಜಕಾರಣಿ ಪ್ರಧಾನಿ ಕಚೇರಿ ಕಡೆ ತೋರಸತಾರ. ಅಲ್ಲಿ ನೋಡಿದರೆ ಪಂತ ಪ್ರಧಾನರು ಬಾಯಿಗೆ ಶಾಲು ಕಟ್ಟಿಕೊಂಡು ಕೂತಾರ.

ಸರಕಾರ ಯಾಕ ಪರೀಕ್ಷೆ ಹೆಚ್ಚು ಮಾಡತಾ ಇಲ್ಲ? ಯಾಕಂದರ ಒಂದು ಪರೀಕ್ಷೆಗೆ ಸುಮಾರು 5,000 ರೂಪಾಯಿ ಬೇಕಾಗತದ. ಎಲ್ಲರಿಗೂ ಮಾಡೋವಷ್ಟು ನಮ್ಮಲ್ಲೆ ದುಡ್ಡು ಇಲ್ಲ. ಇದ್ದರೂ ನಾವು ಮಾಡಂಗಿಲ್ಲ. ಯಾಕಂದ್ರ ಪೋಲಿಯೋದ ಗತೆ ಮನಿ – ಮನೀಗೆ ಹೋಗಿ ಮಾಡಿದರ ಜನಾ ಹೆದರಿಕೋತಾರ ಅಂತ ನಮ್ಮನ್ನಾಳುವವರು ಹೇಳಿಕೋತ ಹೊಂಟಾರ.

ಆದರ ಈ ಅಸಹಾಯಕ ಉತ್ತರದ ಹಿಂದ ಒಂದು ಕುತಂತ್ರ ಇದ್ದಂಗ ಕಾಣತದ. ಇವರು ಕೊರೋನಾ ಪರೀಕ್ಷೆಯನ್ನ ಸಹಿತ ರಾಜಕೀಯ ತಂತ್ರ ಮಾಡಿಕೊಂಡಂಗ ಕಾಣತಾರ. ದೆಹಲಿ ನಿಜಾಮುದ್ದೀನಿಗೆ ಹೋದ ಮುಸ್ಲೀಮರು ಇದನ್ನು ಹಬ್ಬಿಸಿದರು ಅಂತ ಹೇಳಿ ಜನರನ್ನ ಮುಸ್ಲೀಮರ ವಿರುದ್ಧ ಎತ್ತಿ ಕಟ್ಟೋದು, ಅಲ್ಲಿಗೆ ಹೋಗಿ ಬಂದವರ ಮೊದಲನೇ ಹಾಗೂ ಎರಡನೇ ಸಂಪರ್ಕಕ್ಕ ಬಂದ ವ್ಯಕ್ತಿಗಳನ್ನ ಅಷ್ಟ ಪರೀಕ್ಷೆ ಮಾಡೋದು, ಇದು ನಡದು ಬಿಟ್ಟದ. ಆ ಮುಸ್ಲೀಮರು ಇರೋ ಪ್ರದೇಶಗಳನ್ನ ಕಂಟೇನಮೆಂಟು ಜೋನ್ ಅಂತ ಮಾಡಿ ಅಲ್ಲಿ ಸೀಲ್ ಡೌನು ಮಾಡಿ ಅವರಿಗೆ ನೀರು- ನಿಡಿ ಸಿಗಲಾರದ ಹಂಗ ಮಾಡೋದು. ಅದರ ಬಗ್ಗೆ ಎಲ್ಲರಿಗೂ ಒಂದು ಕೆಟ್ಟ ಭಾವನಾ ಬಂದು ಮೈಲಿಗೆ ಪ್ರದೇಶ ಅಂತ ಮಾಡಿ ಅದರಿಂದ ಎಲ್ಲರೂ ದೂರ ಇರೋ ಹಂಗ ಮಾಡೋದು ಇವರ ಹುನ್ನಾರ ಅಂತ ಅನ್ನಸತದ.

ಇದ ಸರಕಾರ `ನಮಸ್ತೇ ಟ್ರಂಪ’ ಸಮಾರಂಭಕ್ಕೆ ಹೋದವರನ್ನು ಯಾಕ ಪರೀಕ್ಷೆ ಮಾಡತಿಲ್ಲಾ? ಮಾಡಿದರೂ ಕೂಡ ಅಹಮದಾಬಾದಿಗೆ ಹೋಗಿ ಬಂದವರು ಅಂತ ಹೇಳತದ ಹೊರತು, ಟ್ರಂಪ ಸಮಾರಂಭಕ್ಕೆ ಹೋದವರು ಅಂತ ಹೇಳಂಗಿಲ್ಲ. ಅವರ ಮೊದಲನೇ – ಎರಡನೇ ಸಂಪರ್ಕಗಳನ್ನ ಪರೀಕ್ಷೆ ಮಾಡತಾ ಇಲ್ಲ. ಅವರ ಮನೆಗಳನ್ನು ಸೀಲು ‍‍ಡೌನು ಮಾಡಿ ಅದಕ್ಕ ಮೈಲಿಗೆ ಪ್ರದೇಶ ಅಂತ ಹೇಳತಾ ಇಲ್ಲ.

ಜನವರಿಯಿಂದ ಮಾರ್ಚ 24 ರವರಗೆ ಭಾರತಕ್ಕ 20 ಲಕ್ಷ ಜನ ವಿಮಾನಗಳಿಂದ ಬಂದಾರಂತ. ಅವರನ್ನು ಕಡ್ಡಾಯ ಪರೀಕ್ಷೆ ಮಾಡಿಲ್ಲ. ಅವರ ಮೊದಲನೇ ಎರಡನೇ ಸಂಪರ್ಕ ಪರೀಕ್ಷೆ ಮಾಡಿಲ್ಲ. ಅವರ ಪ್ರದೇಶಕ್ಕೆ ಮೈಲಿಗೆ ಅಂಟಿಸಿಲ್ಲ.

ಫೆಬ್ರವರಿ- ಮಾರ್ಚಿ ತಿಂಗಳದಾಗ ಈ ದೇಶದ ಅನೇಕ ಹಳ್ಳಿ- ನಗರದೊಳಗ ಜಾತ್ರಿ- ಉತ್ಸವ- ಹಬ್ಬ ಆಗಿದಾವು, ಅಲ್ಲಿಗೆ ಲಕ್ಷಾಂತರ ಜನಾ ಹೋಗಿ ಬಂದಾರು. ಅವರನ್ನ ಪರೀಕ್ಷೆ ಮಾಡಿಲ್ಲ. ಅವರ ಸಂಪರ್ಕಕ್ಕ ಬಂದವರನ್ನ ಪರೀಕ್ಷೆ ಮಾಡಿಲ್ಲ. ಅವರಿಗೆ ಮೈಲಿಗೆ ಅಂಟಿಸಿಲ್ಲ.

ಬೆಂಗಳೂರು- ಮಂಗಳೂರು- ಬಾಗಲಕೋಟಿಯೊಳಗ ಐಟಿ ಕಂಪನಿ ಉದ್ಯೋಗಿಗಳಿಂದ ಸೋಂಕು ಹರಡೇತಿ. ಅವರಿಗೆ ಐಟಿ ಬಾಂಬ್ ಅಂತ ಹಣೆ ಪಟ್ಟಿ ಕಟ್ಟಿಲ್ಲ. ಅವರಿರೋ ಪ್ರದೇಶಗಳಿಗೆ ಮೈಲಿಗೆ ಅಂಟಿಲ್ಲ.

ಮೈಸೂರಿನ ಕಾರಖಾನೆಗೆ ಚೈನಾದಿಂದ ಸೋಂಕು ಬಂದೇತಿ ಅಂತಾರು. ಅದನ್ನ ಸರಿಯಾಗಿ ತನಿಖೆ ನಡಸಲಿಲ್ಲ. ಚೈನಾದ ಕಂಪನಿಗಳ ಜೊತೆ ವ್ಯಾಪಾರ – ವ್ಯವಹಾರ ನಡೆಸೋ ಸಾವಿರಾರು ಕಂಪನಿಗಳು ಹಳ್ಳಿಹಳ್ಳಿಗಳೊಳಗ ಅದಾವು. ಅವಕ್ಕ ಯಾರು ಮೈಲಿಗೆ ಅಂಟಿಸಿಲ್ಲ.

ಹಂಗಾರ ಸರಕಾರ ಮಾಡತಾ ಇರೋ ಮಸಲತ್ತು ಏನು?

ಐವತ್ತು ದಿವಸ ಅಗದೀ ಕಟ್ಟಾ ಲಾಕ್ ಡೌನ್ ಮಾಡಿ, ಹಾಲು ತರಲಿಕ್ಕೆ ಹೋದ ಮುದಕೀಯರ ಮ್ಯಾಲೆಲ್ಲಾ ಲಾಠಿ ಬಾರಿಸಿದ ಸರಕಾರ ಒಂದು ದಿವಸ ಮುಂಜಾನೆ ದೇಶದಾಗಿನ ಹೆಂಡದಂಗಡಿ ಎಲ್ಲಾ ತಗದು ಎಲ್ಲಾ ಕುಡಕರನ್ನು ಖುಷಿಯಾಗಿಸಿತು. ಹೆಂಡದಂಗಡಿ ಮುಂದ ಒಬ್ಬರ ಮ್ಯಾಲೆ ಒಬ್ಬರು ಬಿದ್ದು ಎಷ್ಟು ಜನರಿಗೆ ಕೊರೋನಾ ಹರಡಿತು ಅಂತ ಯಾರೂ ಪರೀಕ್ಷೆ ಮಾಡಲಿಲ್ಲ.

ಇದರ ಹಿಂದಿನ ಲೆಕ್ಕಾಚಾರ ಏನು? ಜನಾ ಸತ್ತರ ಸಾಯಲಿ, ನಮಗ ರೊಕ್ಕ ಬರಲಿ, ಅಂತೇನು ?

ಇದು ಜಾಗತಿಕ ಪರೀಕ್ಷೆಗೆ ಸಮಯ ಅಲ್ಲ. ಟಾರ್ಗೆಟೆಡ್ ಟೆಸ್ಟಿಂಗ್‍ನ ಸಮಯ ಅಂತ ಅಧಿಕಾರಿಗಳು ಅನ್ನಾಕ ಹತ್ಯಾರು. ಹಿಂಗಂದರ ಏನು? ಕೊರೋನಾ ಪರೀಕ್ಷೆ ಅಂದರ ಯಾರದರ ದೇಶಾಭಿಮಾನವನ್ನು ಒರೆಗೆ ಹಚ್ಚೋದೋ ಅಥವಾ ಬಡವರನ್ನ ಬಲಿ ಕೊಡೋದೋ?

ಮೊನ್ನೆ ಡೊನಾಲ್ಡಪ್ಪಾ ಟ್ರಂಪಣ್ಣನವರ ಅವರು ತಮ್ಮ ಬಿಳೀಮನಿಯೊಳಗ ಒಂದು ಪತ್ರಿಕಾ ಗೋಷ್ಠಿ ಕರದಿದ್ದರು. ಅದರಾಗ ಒಬ್ಬಕಿ ಹೆಣಮಗಳು ಅಮೇರಿಕಾದ ಕೊರೋನಾ ಪರೀಕ್ಷಾ ಪ್ರಮಾಣದ ಬಗ್ಗೆ, ಅಲ್ಲಿನ ಸರಕಾರದ ಇತರ ಕ್ರಮಗಳ ಬಗ್ಗೆ ಕೇಳಿದಾಗ ಸಿಟ್ಟಿಗೆದ್ದು ಬಿಟ್ಟರು. ನನ್ನೇನು ಕೇಳತೀರಿ, ಚೈನಾನ್ನ ಕೇಳರಿ ಅಂತ ಭುಸುಭುಸು ಮಾಡಿಕೋತ ಗೋಷ್ಠಿ ಅರ್ಧಾಕ್ಕ ನಿಲ್ಲಿಸಿ ಎದ್ದು ಹೋದರು. ಅವರ ಕೋಪ ಮತ್ತು ಅಮೇರಿಕಾದ ಹತಾಶ ಪರಿಸ್ಥಿತಿ ಬಗ್ಗೆ ಅಲ್ಲಿನ ಪತ್ರಿಕೆಗಳು ಬರದವು.

ನಮ್ಮಲ್ಲೂ ಹಿಂಗೇನಾರ ಆದರ ಪತ್ರಿಕೆಗಳು ಬರೀಬಹುದೇನೋ. ಆದರ ಇಲ್ಲಿನ ಬಿಳೀಮನಿಯೊಳಗ ಪತ್ರಿಕಾ ಗೋಷ್ಠಿನ ಇಲ್ಲಲ್ಲಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...