Homeಮುಖಪುಟಉತ್ತರಖಾಂಡ್‌ನ ಜೋಶಿಮಠ ಪಟ್ಟಣ ಕುಸಿಯುತ್ತಿರುವುದೇಕೆ?

ಉತ್ತರಖಾಂಡ್‌ನ ಜೋಶಿಮಠ ಪಟ್ಟಣ ಕುಸಿಯುತ್ತಿರುವುದೇಕೆ?

- Advertisement -
- Advertisement -

ಪ್ರಕೃತಿ ವಿಕೋಪಗಳಿಂದ ನಲುಗಿರುವ ಉತ್ತರಖಾಂಡ ರಾಜ್ಯ ಮತ್ತೆ ಬಿಕ್ಕಟ್ಟಿಗೆ ಸಿಲುಕಿದೆ. ಇಲ್ಲಿನ ಜೋಶಿಮಠ ಪಟ್ಟಣದಲ್ಲಿನ ಮನೆಗಳ ಗೋಡೆಗಳಲ್ಲಿ, ಹೊಲೆಗಳಲ್ಲಿ, ರಸ್ತೆಗಳಲ್ಲಿ ಬಿರುಕುಗಳು ದೊಡ್ಡದಾಗಿ ಕಾಣಿಸಲಾರಂಭಿಸಿವೆ. ಬೆಟ್ಟದ ಪಟ್ಟಣವೆಂದೇ ಖ್ಯಾತವಾದ ಜೋಶಿಮಠದ ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಅವರ ಊರು ಮುಳುಗುತ್ತಿದೆ.

ಈ ಪ್ರದೇಶವನ್ನು ಭೂಕುಸಿತ ಮತ್ತು ಭೂ ಕುಸಿತ ಪೀಡಿತ ಪ್ರದೇಶ ಎಂದು ಜನವರಿ 8 ರಂದು ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಜನವರಿ 9ರ ಹೊತ್ತಿಗೆ, 678 ಕಟ್ಟಡಗಳು (ಮನೆಗಳು ಸೇರಿದಂತೆ) ಬಿರುಕುಬಿಟ್ಟಿವೆ. ಅಧಿಕಾರಿಗಳು 80 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಿದ್ದಾರೆ. ಸಮೀಪದ ಪಟ್ಟಣಗಳಾದ ರೈನಿ ಮತ್ತು ಕರ್ಣಪ್ರಯಾಗದಲ್ಲಿನ ಮನೆಗಳಲ್ಲಿಯೂ ಬಿರುಕುಗಳು ಕಾಣಿಸಿಕೊಂಡಿವೆ.

ಈ ಪಟ್ಟಣಗಳು ದುರ್ಬಲವಾದ, ಪರ್ವತ ಪ್ರದೇಶದಲ್ಲಿ ನೆಲೆಗೊಂಡಿವೆ. ಇಲ್ಲಿ ಪ್ರಸ್ತುತ ನಡೆಯುತ್ತಿರುವ ಹಲವಾರು ಅಭಿವೃದ್ಧಿ ಯೋಜನೆಗಳು ಆತಂಕವನ್ನು ಸೃಷ್ಟಿಸಿವೆ.

ತಪೋವನ ವಿಷ್ಣುಘಡ ಜಲವಿದ್ಯುತ್ ಯೋಜನೆ ಭಾಗವಾಗಿ ಕೈಗೊಂಡ ಕಾಮಗಾರಿಯು ತಮ್ಮ ಪಟ್ಟಣ ಮುಳುಗಲು ಒಂದು ಕಾರಣ ಎಂದು ಜೋಶಿಮಠದ ನಿವಾಸಿಗಳು ಆರೋಪಿಸುತ್ತಾರೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೈಗೊಂಡ ಚಾರ್ ಧಾಮ್ ಯೋಜನೆ (900  ಕಿಮೀ ಉದ್ದದ ರಸ್ತೆ ನಿರ್ಮಾಣ) ಪ್ರಾಕೃತಿಕ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ ಎಂದು ತಜ್ಞರು ಬೊಟ್ಟು ಮಾಡುತ್ತಾರೆ.

ಈ ಭೂಭಾಗದ ಕುರಿತು 40 ವರ್ಷಗಳ ಹಿಂದೆಯೇ ಮಹತ್ವದ ವರದಿಗಳು ಬಂದಿವೆ. ಅದರ ಹೊರತಾಗಿಯೂ ಸರ್ಕಾರಗಳು ಇಂತಹ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಪ್ರದೇಶದಲ್ಲಿ ಭಾರೀ ನಿರ್ಮಾಣ ಕಾಮಗಾರಿಗಳನ್ನು ನಿರ್ಬಂಧಿಸಬೇಕು ಎಂದು ಎಚ್ಚರಿಸಿವೆ. ಹವಾಮಾನ ಬದಲಾವಣೆ ಉಲ್ಬಣದ ಜೊತೆಗೆ, ಸದ್ಯದ ಪರಿಸ್ಥಿತಿಯು ಈ ಪ್ರದೇಶಕ್ಕೆ ಒಳ್ಳೆಯದಾಗಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜೋಶಿಮಠ ಮುಳುಗಡೆ

ಬೆಟ್ಟದ ಪಟ್ಟಣವಾದ ಜೋಶಿಮಠ ಸಮುದ್ರ ಮಟ್ಟದಿಂದ ಸುಮಾರು 1,875 ಮೀಟರ್ ಎತ್ತರದಲ್ಲಿದೆ. ಪಟ್ಟಣವು ಹಲವು ವಿಧಗಳಲ್ಲಿ ಮಹತ್ವದ್ದಾಗಿದೆ: ಇದು ಟ್ರೆಕ್ಕಿಂಗ್ ಮಾರ್ಗಗಳಿಗೆ (ಹಿಮಾಲಯ ಪರ್ವತ ಶ್ರೇಣಿಯಲ್ಲಿ), ಧಾರ್ಮಿಕ ಸ್ಥಳಗಳಿಗೆ (ಉದಾಹರಣೆಗೆ ಬದರಿನಾಥ) ಹೆಸರುವಾಸಿಯಾಗಿದೆ. ಭಾರತ-ಚೀನಾ ಗಡಿ ಭಾಗಗಳ ಕಾರ್ಯತಂತ್ರಕ್ಕೂ ಮುಖ್ಯವಾಗಿದೆ.

ಈ ಎಲ್ಲ ಅಗತ್ಯಗಳನ್ನು ಪೂರೈಸಲು ಜೋಶಿಮಠದಲ್ಲಿ ಕಟ್ಟಡಗಳು ತಲೆಎತ್ತಿದವು ಎಂದು ಜಲ ನೀತಿ ತಜ್ಞ ಮತ್ತು ಸಂಶೋಧಕಿ ಕವಿತಾ ಉಪಾಧ್ಯಾಯ ಹೇಳುತ್ತಾರೆ.

ಇಲ್ಲಿನ ರಸ್ತೆಗಳು ಮತ್ತು ಮನೆಗಳ ಗೋಡೆಗಳಲ್ಲಿ ಬಿರುಕು ಮೂಡುತ್ತಿರುವುದನ್ನು ಇಲ್ಲಿನ ನಿವಾಸಿಗಳು ಹೊಸ ವರ್ಷದ ಮೊದಲ ವಾದದಲ್ಲಿ ಕಂಡುಕೊಂಡರು. 200ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ ಹಠಾತ್ ಪ್ರವಾಹದ ನಂತರ, ಕಳೆದ ವರ್ಷದ ಫೆಬ್ರವರಿಯಿಂದ ನಿವಾಸಿಗಳು ಇಂತಹ ಬಿರುಕುಗಳನ್ನು ಗಮನಿಸುತ್ತಿದ್ದಾರೆ ಎಂದು ಉಪಾಧ್ಯಾಯ ತಿಳಿಸುತ್ತಾರೆ. ಆದರೆ ಈ ವರ್ಷದ ಜನವರಿಯ ಮೊದಲ ವಾರದಲ್ಲಿ ಇದು ಗಂಭೀರ ಸ್ವರೂಪದ್ದಾಗಿ ಕಾಣಿಸಿಕೊಂಡಿತು.

ಜೋಶಿಮಠ ಮುಳುಗುತ್ತಿದೆ, 678 ಕಟ್ಟಡಗಳು ಬಿರುಕು ಬಿಟ್ಟಿವೆ. ಇನ್ನೂ 600 ಕುಟುಂಬಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿ ದೃಢಪಡಿಸಿದ್ದಾರೆ. ಕಟ್ಟಡಗಳು ಉರಳಲು ಆರಂಭವಾಗಿವೆ. ಎರಡು ಹೋಟೆಲ್‌ಗಳನ್ನು ನೆಲಸಮ ಮಾಡಲಾಗಿದೆ.

ಜೋಶಿಮಠ ಮುಳುಗಲು ಕಾರಣವೇನು?

ಜೋಶಿಮಠ ಭೂಕುಸಿತ ಪೀಡಿತ ಪ್ರದೇಶವಾಗಿದೆ. ಜೋಶಿಮಠ-ಬದರಿನಾಥ್ ರಸ್ತೆ ಕಾರಿಡಾರ್‌ನಲ್ಲಿ ಭೂಕುಸಿತದ ಅಪಾಯದ ಪ್ರದೇಶಗಳನ್ನು ಪರೀಕ್ಷೆ ಮಾಡಿದ 2007ರ ಅಧ್ಯಯನವು ಜೋಶಿಮಠ ಪಟ್ಟಣವು ಪ್ರದೇಶದ ಅತ್ಯಂತ ಅಪಾಯಕಾರಿ ಭೂಕುಸಿತ ಪೀಡಿತ ಸ್ಥಳಗಳಲ್ಲಿ ಒಂದಾಗಿದೆ ಎಂದು ಎಚ್ಚರಿಸಿತ್ತು. ವಾಸ್ತವವಾಗಿ 70ರ ದಶಕದಲ್ಲಿಯೇ ಜೋಶಿಮಠದಲ್ಲಿ ಆರಂಭವಾಗಿದ್ದ ಭೂಕುಸಿತಗಳು ಅಲ್ಲಿನ ನಿವಾಸಿಗಳನ್ನು ಚಿಂತೆಗೀಡುಮಾಡಿದ್ದವು. 1976ರಲ್ಲಿ ಅಂದಿನ ಸರ್ಕಾರವು ಎಂ.ಸಿ. ಮಿಶ್ರಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಜರುಗಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. ಪರ್ವತ ತಪ್ಪಲಿನಲ್ಲಿ ಯಾವುದೇ ಕಾರಣಕ್ಕೂ ಕಾಮಗಾರಿಗಳನ್ನು ನಡೆಸಬಾರದು ಎಂದಿತ್ತು. ಜೊತೆಗೆ ಇಲ್ಲಿನ ಪ್ರಾಕೃತಿಕ ಗುಣದ ಬಗ್ಗೆ ಬೆಳಕು ಚೆಲ್ಲಿತ್ತು.

ಜೋಶಿಮಠದ ಪಟ್ಟಣವು ಭೂಕುಸಿತಕ್ಕೆ ಹೆಸರುವಾಸಿ. ಇಲ್ಲಿನ ಪ್ರದೇಶ ಮರಳು ಮತ್ತು ಕಲ್ಲಿನ ಮಿಶ್ರಣವಾಗಿದೆ. ಮಳೆ ಅಥವಾ ಹಿಮ ಕರಗುವಿಕೆಯಿಂದ ಉಂಟಾಗುವ ಮೇಲ್ಮೈ ನೀರು ಮಣ್ಣನ್ನು ಸಡಿಲಗೊಳಿಸಬಹುದು.  ಭೂಮಿಯನ್ನು ಅಸ್ಥಿರಗೊಳಿಸಬಹುದು, ಇದು ಭೂಕುಸಿತಗಳಿಗೆ ಕಾರಣವಾಗುತ್ತದೆ ಎಂ.ಸಿ.ಮಿಶ್ರಾ ವರದಿ ಗಮನ ಸೆಳೆದಿದೆ.

ಅಂತರ್ಜಲವನ್ನು ಹೊರತೆಗೆಯುವುದು ಸಹ ಕುಸಿತಕ್ಕೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಬ್ಲಾಸ್ಟ್‌ ಮಾಡುವುದು, ಸುರಂಗಗಳನ್ನು ನಿರ್ಮಿಸುವುದು (ನಿವಾಸಿಗಳ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆ) ಕೂಡ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದು.

ವರದಿ ಕೃಪೆ: ದಿ ವೈರ್‌ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...