Homeಮುಖಪುಟಮಕ್ಕಳು, ಗರ್ಭಿಣಿಯರಿಗಾಗಿ ನಿತ್ಯ 18 ಕಿಮೀ ಸಂಚರಿಸುವ ಅಂಗನವಾಡಿ ಕಾರ್ಯಕರ್ತೆ!

ಮಕ್ಕಳು, ಗರ್ಭಿಣಿಯರಿಗಾಗಿ ನಿತ್ಯ 18 ಕಿಮೀ ಸಂಚರಿಸುವ ಅಂಗನವಾಡಿ ಕಾರ್ಯಕರ್ತೆ!

ನನಗೆ ಸಂಚಾರ ಮಾಡುವ ಕಷ್ಟಕ್ಕಿಂತ ನವಜಾತ ಶಿಶುಗಳು, ಗರ್ಭಿಣಿಯರು ಮತ್ತುಬಾಣಂತಿ ತಾಯಂದಿರು ಪೌಷ್ಟಿಕ ಆಹಾರವನ್ನು ಸೇವಿಸಿ ಆರೋಗ್ಯವಾಗಿರುವುದು ಬಹಳ ಮುಖ್ಯ ಎಂದು ರೇಲು ವಾಸವೆ ತಿಳಿಸುತ್ತಾರೆ

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಜನರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ, ಮಹಾರಾಷ್ಟ್ರದ ನಂದೂರ್‌ಬಾರ್‌ನ ಅಂಗನವಾಡಿ ಕಾರ್ಯಕರ್ತೆ ರೇಲು ವಾಸವೆ, ಪ್ರತಿದಿನ 18 ಕಿಲೋಮೀಟರ್ ಸಂಚರಿಸಿ ಕುಗ್ರಾಮಗಳಿಗೆ, ಬುಡಕಟ್ಟು ಹಳ್ಳಿಗಳಿಗೆ ತೆರಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆರು ವರ್ಷದೊಳಗಿನ ಬುಡಕಟ್ಟು ಮಕ್ಕಳಿಗೆ ಸಹಾಯ ಮಾಡಲು ಮತ್ತು ಗರ್ಭಿಣಿಯರು, ಬಾಣಂತಿ ತಾಯಂದಿರನ್ನು ನೋಡಲು, ಅವರಿಗೆ ಸರಿಯಾದ ವೈದ್ಯಕೀಯ ಆರೈಕೆ ಮತ್ತು ತಿಳುವಳಿಕೆ ನೀಡಲು ಪ್ರತಿ ದಿನ ರೇಲು ವಾಸವೆ ನದಿಯನ್ನು ದಾಟಿ ಬುಡಕಟ್ಟು ಗ್ರಾಮಗಳಿಗೆ ತೆರಳುತ್ತಾರೆ.

ಅಂಗನವಾಡಿ ಕಾರ್ಯಕರ್ತೆ ರೇಲು ವಾಸವೆ, ನಾಸಿಕ್‌ಗೆ ಸೇರಿದವರಾಗಿದ್ದು, ಕಳೆದ ಏಪ್ರಿಲ್‌ನಿಂದ ಬುಡಕಟ್ಟು ಗ್ರಾಮಗಳ ನವಜಾತ ಶಿಶುಗಳನ್ನು ಭೇಟಿ ಮಾಡಲು ಪ್ರಾರಂಭಿಸಿದರು. ಜೊತೆಗೆ ಅಲಿಗಟ್ ಮತ್ತು ದಾದರ್‌ನ ಕುಗ್ರಾಮಗಳಲ್ಲಿ ಗರ್ಭಿಣಿ ಮತ್ತು ಬಾಣಂತಿ ತಾಯಂದಿರನ್ನು ನೋಡಿಕೊಳ್ಳಲು ಪ್ರಾರಂಭಿಸಿದರು.

ಇದನ್ನೂ ಓದಿ: ಅಮೆರಿಕ: ಜೋ ಬಿಡೆನ್ ಪತ್ನಿಯ ನೀತಿ ನಿರ್ದೇಶಕಿಯಾಗಿ ಭಾರತೀಯ ಮೂಲದ ಮಾಲಾ ಅಡಿಗಾ ಆಯ್ಕೆ!

ಅಂಗನವಾಡಿ ಕಾರ್ಯಕರ್ತೆಯಾಗಿರುವ ಅವರು ನವಜಾತ ಶಿಶುಗಳು, ಅವರ ತಾಯಂದಿರ ತೂಕ, ಆರೋಗ್ಯ ಮತ್ತು ಸರಿಯಾದ ಬೆಳವಣಿಗೆಯನ್ನು ಪರಿಶೀಲಿಸುತ್ತಲೇ ಇರಬೇಕು. ಹಾಗಾಗಿ ಅವರು ಲಾಕ್‌ಡೌನ್‌ ಲೆಕ್ಕಿಸದೇ ಕೆಲಸ ಮಾಡಿದ್ದಾರೆ.

’ಪ್ರತಿದಿನ ನದಿಯಲ್ಲಿ ಹುಟ್ಟು ಹಾಕಿ ಸಂಚಾರ ಮಾಡುವುದು ಸುಲಭವಲ್ಲ. ಸಂಜೆ ಮನೆಗೆ ಹಿಂದಿರುಗುವ ಹೊತ್ತಿಗೆ ನನ್ನ ಕೈ ನೋವು ಬಂದಿರುತ್ತದೆ. ಆದರೆ ನನಗೆ ಆ ಚಿಂತೆ ಇಲ್ಲ. ಮುಖ್ಯವಾಗಿ ನವಜಾತ ಶಿಶುಗಳು ಮತ್ತು ಗರ್ಭಿಣಿಯರು ಮತ್ತು ಬಾಣಂತಿ ತಾಯಂದಿರು ಪೌಷ್ಟಿಕ ಆಹಾರವನ್ನು ಸೇವಿಸಿ ಆರೋಗ್ಯವಾಗಿರುವುದು ಬಹಳ ಮುಖ್ಯ’ ಎನ್ನುತ್ತಾರೆ. ಕೊರೊನಾ ಸಾಂಕ್ರಾಮಿಕ ರೋಗ ಸುಧಾರಿಸುವವರೆಗೆ ನಾನು ಈ ಕುಗ್ರಾಮಗಳಿಗೆ ಭೇಟಿ ನೀಡುತ್ತೇನೆ “ಎಂದು ರೇಲು ವಾಸವೆ ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ.

Image
PC: ANI

ಕೊರೊನಾದಂತಹ ಸಂಕಷ್ಟಕರ ಸಮಯದಲ್ಲಿ ಅವರು ಮಾಡಿದ, ಮಾಡುತ್ತಿರುವ ಸೇವೆಗಾಗಿ ಕುಗ್ರಾಮಗಳ ಬುಡಕಟ್ಟು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈಕೆಯ ಸೇವೆ ಕುರಿತು ಮುಖ್ಯಮಂತ್ರಿಗಳ ಕಚೇರಿ ಮತ್ತು ನಂದೂರ್‌ಬಾರ್‌ನ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕರಿಗೂ ವಿಚಾರ ತಲುಪಿದ್ದು, ಇಂತಹ ಅಮೂಲ್ಯ ಸೇವೆ ಸಲ್ಲಿಸುತ್ತಿರುವುದಕ್ಕಾಗಿ ಮುಖ್ಯಮಂತ್ರಿಗಳ ಪರವಾಗಿ ಅವರು ಧನ್ಯವಾದ ತಿಳಿಸಿದ್ದಾರೆ.


ಇದನ್ನೂ ಓದಿ: ಕೊರೊನಾ: ಸೋಂಕಿತರನ್ನು ಗುಣಪಡಿಸುವಲ್ಲಿ ಫಿಜರ್ ಲಸಿಕೆ ಶೇಕಡ 95 ರಷ್ಟು ಪರಿಣಾಮಕಾರಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read