ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಲಕ್ಷಾಂತರ ಮಹಿಳೆಯರು ದೆಹಲಿಯ ಗಡಿಗಳಲ್ಲಿ ಒಟ್ಟುಗೂಡಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.
ದೆಹಲಿಯ ಟಿಕ್ರಿ ಗಡಿಯಲ್ಲಿ ಜಮಾಯಿಸಿದ ಸಾವಿರಾರು ಮಹಿಳೆಯರು ವೇದಿಕೆಯನ್ನು ಆಕ್ರಮಿಸಿಕೊಂಡರು. ಇಂದು ಮಹಿಳಾ ದಿನಾಚರಣೆಯ ಅಂಗವಾಗಿ ವೇದಿಕೆಯನ್ನು ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಿಡಲಾಗಿತ್ತು. ಕೆಲ ಪುರುಷರು ನಾವು ವೇದಿಕೆಯಲ್ಲಿ ಮಾತನಾಡುತ್ತೇವೆ ಎಂದು ಕೇಳಿದಾಗ ಅಲ್ಲಿದ್ದ ಪುರುಷರೇ ‘ಇಂದು ಮಹಿಳಾ ದಿನ.. ವೇದಿಕೆ ಪೂರ್ತಿ ಮಹಿಳೆಯರಿಗೆ ಮೀಸಲಾಗಿದೆ ಎಂದು ಹೇಳುತ್ತಿದ್ದುದ್ದು ಸಾಮಾನ್ಯವಾಗಿತ್ತು’ ಎಂದು ಪತ್ರಕರ್ತ ಸಂದೀಪ್ ಸಿಂಗ್ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
Today at Tikri border protest site, Women are managing the stage.
Some men were demanding that they should be allowed to address from stage. Then a man came and told them it is women’s day, men won’t be allowed. pic.twitter.com/pMVwnLHP3G— Sandeep Singh (@PunYaab) March 8, 2021
ಇನ್ನು ಹರಿಯಾಣದ ಟಿಕ್ರಿ ಗಡಿ ಬಳಿಯ ಬಹದ್ದೂರ್‌ಗರ್‌ನ ಪಕೋರಾ ಚೌಕ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಮಹಿಳೆಯರು ಒಟ್ಟುಗೂಡಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಉಗ್ರಾಣ್ ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಪಂಜಾಬ್ ಮತ್ತು ಹರಿಯಾಣದ ಮಹಿಳೆಯರು ಸೇರಿ ಇಡೀ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. ಎಲ್ಲಾ ಭಾಷಣಕಾರರು ಮಹಿಳೆಯರೇ ಆಗಿದ್ದು, ಸಾವಿರಾರು ಪುರುಷರು ಸಹ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
On International women’s day, BKU Ugrahan is organizing a massive rally of women farmers.
Today stage is managed by women and speakers are women. pic.twitter.com/goYG63VuB1— Sandeep Singh (@PunYaab) March 8, 2021
“ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಬಹುದೊಡ್ಡ ಆದರೆ ಇದುವರೆಗೂ ಗುರುತಿಸಲಾಗದ’ ಕೃಷಿ ಸಮುದಾಯದ ಭಾಗವಾಗಿರುವ ಎಲ್ಲ ಧೈರ್ಯಶಾಲಿ ಮಹಿಳೆಯರಿಗೆ ಸಮರ್ಪಿಸಲಾಗುವುದು. ಇಂದು ವೇದಿಕೆಯನ್ನು ಮಹಿಳೆಯರಿಂದ ನಿರ್ವಹಿಸಲಾಗುವುದು ಮತ್ತು ಅವರ ಗೌರವಾರ್ಥವಾಗಿ ಸಿಂಘು ಗಡಿಯಲ್ಲಿ ಸಣ್ಣ ಮೆರವಣಿಗೆಯನ್ನು ಆಯೋಜಿಸಲಾಗುವುದು.
#WeSaluteWomenFarmers” ಎಂದು ಸಂಯುಕ್ತಾ ಕಿಸಾನ್ ಮೋರ್ಚಾ ಟ್ವೀಟ್ ಮಾಡಿದೆ.
Today, International Women's Day, will be dedicated to all courageous women who have been 'BIG but Unrecognised' part of farming community, wherein the stage will be managed by women, and a small march will be organized in their honour at Singhu border. #WeSaluteWomenFarmers pic.twitter.com/48LQRn0tGO
— Kisan Ekta Morcha (@Kisanektamorcha) March 8, 2021
ಟಿಕ್ರಿ ಗಡಿಯಲ್ಲಿ ನೂರಾರು ಮಹಿಳೆಯರು ಮೆರವಣಿಗೆ ನಡೆಸುವ ಮೂಲಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ಎಂಎಸ್‌ಪಿ ಖಾತ್ರಿಗೆ ಕಾನೂನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸಿದರು.
On d women's day at Tikri. Thousands throng. D jealous govt terminated metro connection@PunYaab #FarmersProtests pic.twitter.com/yO6wU6QQ4x
— Prabhjit Singh (@Prabhtalks) March 8, 2021
ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ದಿನ; ಸ್ತ್ರೀ ಪುರುಷರಲ್ಲಿ ಸಮಾನತೆ ಸಾಧ್ಯವೇ?: ಎಚ್ ಎಸ್ ಶ್ರೀಮತಿ


