Homeಮುಖಪುಟ‘ವಂಡರ್‌ ವುಮೆನ್‌’: ತಾಯ್ತನದ ಸುಖ-ದುಃಖದ ಸುತ್ತಲಿನ ಲೋಕ

‘ವಂಡರ್‌ ವುಮೆನ್‌’: ತಾಯ್ತನದ ಸುಖ-ದುಃಖದ ಸುತ್ತಲಿನ ಲೋಕ

- Advertisement -
- Advertisement -

ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಕಥನ ಶೈಲಿಯ ಮೂಲಕ ಗಮನ ಸೆಳೆದವರು ‘ಅಂಜಲಿ ಮೆನಾನ್‌’. ‘ಬೆಂಗಳೂರ್‌ ಡೇಸ್‌’, ‘ಕೂಡೆ’, ‘ಕೇರಳ ಕೆಫೆ’, ‘ಉಸ್ತಾದ್ ಹೋಟೆಲ್‌’ನಂತಹ ಸಿನಿಮಾಗಳ ರೈಟರ್‌ ಆಗಿರುವ ಅಂಜಲಿಯವರು, ಎಲೈಟ್ ವರ್ಗದ ಹಿನ್ನೆಲೆಯಲ್ಲಿ ಪಾತ್ರಗಳನ್ನು ಚಿತ್ರಿಸುವುದನ್ನು ಸಾಮಾನ್ಯವಾಗಿ ಕಾಣಬಹುದು. ಪಾತ್ರಗಳು ಎಲೈಟ್ ಹಿನ್ನೆಲೆಯಲ್ಲಿದ್ದರೂ ಎಲ್ಲ ಮನುಷ್ಯರನ್ನು ಸ್ಪರ್ಶಿಸಬಲ್ಲ ವರ್ಗಾತೀತ ಅನುಭವವೊಂದನ್ನು ಅಂಜಲಿಯವರು ತಮ್ಮ ಕತೆಗಳೊಳಗೆ ತರುವ ಪ್ರಯತ್ನ ಮಾಡುವುದು ಗಮನಾರ್ಹ. ಅಂಥದ್ದೇ ಮತ್ತೊಂದು ಸಿನಿಮಾ ಕತೆಯನ್ನು ಬರೆದು, ಅವರೀಗ ನಿರ್ದೇಶಿಸಿದ್ದಾರೆ.

ಅಂಜಲಿ ಮೆನಾನ್‌ ನಿರ್ದೇಶನದ ಇತ್ತೀಚಿನ ಸಿನಿಮಾ ‘ವಂಡರ್‌ ವುಮೆನ್‌’ (ಇಂಗ್ಲಿಷ್‌) ‘ಸೋನಿಲೈವ್‌’ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ ‘ವಂಡರ್‌ ವುಮೆನ್‌’ ತಾಯ್ತನ, ಗರ್ಭಿಣಿಯರ ಕಷ್ಟಸುಖದ ಸುತ್ತ ಸಾಗುತ್ತದೆ. ನವಿರಾದ ಸಂಭಾಷಣೆಯು ಹಿತವೆನಿಸುತ್ತದೆ ಹಾಗೂ ಕೆಲವು ಗಂಭೀರ ಚಿಂತನೆಗಳಿಗೆ ಅವಕಾಶ ನೀಡಿದೆ.

ಆರು ಮಂದಿ ತುಂಬು ಗರ್ಭಿಣಿಯರು ‘ಪ್ರಸವ ಪೂರ್ವ ತರಗತಿ’ಗೆ ಸೇರುತ್ತಾರೆ. ತಮ್ಮ ಮುಂದಿರುವ ಸವಾಲುಗಳನ್ನು ನಿವಾರಿಸಿಕೊಂಡು, ಪ್ರಸವ ವೇದನೆಯನ್ನು ಮೀರಿ ತಾಯ್ತನದ ನೆಮ್ಮದಿಯನ್ನು ಪಡೆಯುವುದು ಇಂತಹ ತರಗತಿ/ತರಬೇತಿಯ ಉದ್ದೇಶ. ಆರು ಮಂದಿ ಗರ್ಭಿಣಿಯರ ಹಿನ್ನೆಲೆಯೂ ವಿಭಿನ್ನ. ಅವರೆಂದರೆ- ಸಂಪ್ರದಾಯವಾದಿ ಹಿಂದೂ ಕುಟುಂಬದ ಮಹಿಳೆ, ಕ್ರಿಶ್ಚಿಯನ್‌ ಮಹಿಳೆ, ಪ್ರಸವ ಪೂರ್ವ ತರಬೇತಿ ನೀಡುವ ತಜ್ಞೆಯೊಂದಿಗೆ ಇರುವ ಕೆಲಸದಾಕೆ, ಲಿವಿಂಗ್ ಟುಗೆದರ್‌ ಮೂಲಕ ಜೀವನ ನಡೆಸುತ್ತಿರುವಾಕೆ, ಸಿಂಗಲ್‌ ಪೇರೆಂಟ್ (ಅಂದರೆ- ಪ್ರಸವ ಪೂರ್ವದಲ್ಲಿ ವಿಚ್ಛೇದನಾ ಪಡೆದಿರುವ ಮುಸ್ಲಿಂ ಮಹಿಳೆ), ಈಗಾಗಲೇ ಎರಡು ಸಲ ಗರ್ಭಪಾತವಾಗಿ ತಾಯ್ತನಕ್ಕಾಗಿ ಹಂಬಲಿಸುತ್ತಿರುವ ಮರಾಠಿ ಮೂಲದ ಮಹಿಳೆ.

Wonder Women OTT Release Date is OUT

ಪ್ರತಿ ಹೆಣ್ಣಿನ ಹಿಂದೆಯೂ ಇರುವ ಸುಖ- ದುಃಖದ ಅನಾವರಣ ಮಾಡುತ್ತಾ, ಒಬ್ಬೊರ ದುಃಖದಲ್ಲಿ ಇನ್ನೊಬ್ಬರು ಸಹಭಾಗಿಯಾಗಿ ಸಂತ್ವಾನ ಮೆರೆಯುತ್ತಾ ಸುಖ್ಯಾಂತ್ಯದಲ್ಲಿ ಕತೆ ಮುಗಿಯುತ್ತದೆ. ಗರ್ಭಿಣಿ ಮಹಿಳೆಯರು ಎದುರಿಸುವ ಸವಾಲು, ಭಯ, ಆತಂಕ, ತಾಯಿ ಮತ್ತು ಮಗುವಿನ ಪಾಲನೆಯಲ್ಲಿ ಗಂಡ ಹಾಗೂ ಕುಟುಂಬದ ಜವಾಬ್ದಾರಿ- ಇತ್ಯಾದಿಗಳ ವಿಷಯಗಳನ್ನು ಸೂಕ್ಷ್ಮವಾಗಿ ಕತೆ ಚರ್ಚಿಸುತ್ತದೆ.

ಶ್ರೇಣೀಕೃತ ಪುರುಷಾಧಿಪತ್ಯದ ಪ್ರಶ್ನೆಯನ್ನು ಗಂಭೀರವಾಗಿಯಲ್ಲದಿದ್ದರೂ ಖೋ ಖೋ ಆಟದಂತೆ ಸ್ಪರ್ಶಿಸಿ ಕಥೆ ಮುಂದೆ ಸಾಗುತ್ತದೆ. ಎಲ್ಲರ ಹಿಂದೆಯೂ ಕಷ್ಟಗಳಿವೆ ಎಂಬ ಸಿದ್ಧಸೂತ್ರವನ್ನು ಹೆಣೆದು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಮಾದರಿಯನ್ನು ಇಲ್ಲಿ ಕಾಣಬಹುದು. ತಾಯಿ ಮತ್ತು ಮಗುವಿನ ಪಾಲನೆಗಿರುವ ತೊಡರುಗಳನ್ನು ಪರಿಹರಿಸಿಕೊಳ್ಳುವತ್ತ ಕಥೆಯನ್ನು ಕೇಂದ್ರೀಕರಿಸಲಾಗಿದೆ.

ಮಲಯಾಳಂ, ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು, ಕನ್ನಡ ಭಾಷಾ ಹಿನ್ನೆಲೆಯ ಇಲ್ಲಿನ ಪಾತ್ರಗಳು ಮುಖ್ಯವಾಗಿ ವ್ಯವಹಿಸುವುದು ‘ಇಂಗ್ಲಿಷ್‌’ ಮೂಲಕ. ಭಾವನೆಗಳ ಹಂಚಿಕೆಗೆ ಭಾಷೆ ಮುಖ್ಯವಲ್ಲ ಎಂಬ ಎಚ್ಚರಿಕೆಯನ್ನು ಇಂಗ್ಲಿಷ್ ಭಾರದಿರುವ ಮರಾಠಿ ಮಹಿಳೆಯ ಮೂಲಕ ಹೇಳಲು ಹೊರಟಿರುವುದನ್ನು ಗಮನಿಸಬಹುದು.

ಎಲೈಟ್‌ ವರ್ಗಗಳನ್ನು ಪ್ರತಿನಿಧಿಸುತ್ತಿರುವ ಇಲ್ಲಿನ ಪಾತ್ರಗಳೊಳಗೆ, ಪ್ರಸವ ಪೂರ್ವ ತರಬೇತಿ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಗರ್ಭಿಣಿಯನ್ನು ಒಳಗೊಳ್ಳುವ ಮೂಲಕ- ವರ್ಗ ಪ್ರಣೀತ ಚೌಕಟ್ಟನ್ನು ಮೀರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಆದರೆ ಇದು ಸಾಂಕೇತಿಕವೆನಿಸುತ್ತದೆಯೇ ಹೊರತು, ಇಂತಹ ತರಬೇತಿಗಳೆಲ್ಲ ಎಲೈಟ್‌ ವರ್ಗವನ್ನೇ ಪ್ರತಿನಿಧಿಸುತ್ತವೆ ಎಂಬುದು ವಾಸ್ತವ. ಪ್ರಸವ ಪೂರ್ವದಲ್ಲಿ ಈ ರೀತಿಯ ಮುಂಜಾಗ್ರತೆ ಎಲ್ಲ ಹಿನ್ನೆಲೆಯ ಮಹಿಳೆಯರಿಗೆ ಅಗತ್ಯ ಎಂಬುದನ್ನು ತಳ್ಳಿಹಾಕಲಾಗದು.

ಸರ್‌ ನೇಮ್‌ನಿಂದ ಗುರುತಿಸಿಕೊಳ್ಳಬೇಕು ಎಂಬ ಸಂಪ್ರದಾಯವಾದಿ ಕುಟುಂಬದ ಹಿನ್ನೆಲೆಯ ಅತ್ತೆಯ ಪಾತ್ರವೊಂದನ್ನು ಇಲ್ಲಿ ಬರುತ್ತದೆ. ತನ್ನ ಸೊಸೆ ಗಂಡನ ಹೆಸರಿನಿಂದ ಗುರುತಿಸಿಕೊಳ್ಳದಿದ್ದರೆ ಮಹಾಪರಾಧ ಎಂಬಂತೆ ಈ ಪಾತ್ರ ವರ್ತಿಸುತ್ತದೆ. ಹೆಣ್ಣಿನ ಭಾವನೆಗಳು ಮತ್ತು ತಾಯ್ತನದ ಕುರಿತು ಗಂಡಿನಲ್ಲಿ ತಿಳಿವಳಿಕೆಯ ಕೊರತೆ ಇದೆ ಎಂಬುದನ್ನು ಮನಗಾಣಿಸುವ ಪ್ರಯತ್ನವಾಗಿ ಸಂಪ್ರದಾಯವಾದಿ ಕುಟುಂಬದ ಮಹಿಳೆಯ ಗಂಡನನ್ನು ಪುರುಷಾಧಿಪತ್ಯ ವ್ಯವಸ್ಥೆಯ ಪ್ರತಿನಿಧಿಯಂತೆ ಚಿತ್ರಿಸಲಾಗಿದೆ. ಉಳಿದೆಲ್ಲ ಗಂಡಸರ ಪಾತ್ರಗಳಿಗಿಂತ ಪ್ರತಿಗಾಮಿಯಂತೆ ತೋರುವ ಈ ಪಾತ್ರವು ಮನಃಪರಿವರ್ತನೆಯಾಗಲು ಹೆಚ್ಚು ಸಮಯ ಬೇಡುವುದಿಲ್ಲ. ಸಂಪ್ರದಾಯನಿಷ್ಠ ಅತ್ತೆಯ ಪಾತ್ರವೂ ಹೀಗೆಯೇ ಬದಲಾಗುತ್ತದೆ. ಪಾತ್ರಗಳ ಮಾನಸಿಕತೆಯ ಬದಲಾವಣೆಯಲ್ಲಿ ಧಾವಂತ ಎದ್ದು ಕಾಣುತ್ತದೆ.

ಇದನ್ನೂ ಓದಿರಿ: ಮುಂದಿನ ಸಲ ಗಂಭೀರವಾಗಿ ಸಂಶೋಧನೆ ಮಾಡಿ: ಅಗ್ನಿಹೋತ್ರಿಗೆ ಅನುರಾಗ್ ಕಶ್ಯಪ್‌ ಸಲಹೆ

ವಿಚ್ಛೇದನಾ ಪಡೆಯುತ್ತಿರುವ ಗರ್ಭಿಣಿಯನ್ನು ‘ಮುಸ್ಲಿಂ’ ಸಮುದಾಯದ ಭಾಗವಾಗಿ ಚಿತ್ರಿಸಿರುವುದು ಕತೆಯ ಆಶಯಕ್ಕೆ ಚ್ಯುತಿ ಬರುವಂತಿದೆ. ಪುರುಷಾಧಿಪತ್ಯ ಹಾಗೂ ಹೆಣ್ಣನ್ನು ಭೋಗಿಸುವವರು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶ ಮತ್ತು ಪಿತೂರಿ ವ್ಯವಸ್ಥೆಯು ಅಲ್ಪಸಂಖ್ಯಾತ ಸಮುದಾಯವನ್ನು ಮಾತ್ರ ಕಟಕಟೆಯಲ್ಲಿ ನಿಲ್ಲುಸುತ್ತದೆ. “ಹೆಣ್ಣನ್ನು ಭೋಗಿಸಿ, ವಂಚಿಸುವ ಧರ್ಮಾಂಧರಿವರು” ಎಂಬಂತೆ ಕತೆಗಳನ್ನು ಹಬ್ಬಿಸಿ, ದ್ವೇಷವನ್ನು ಹರಡುವ ಮೂಲಭೂತವಾದಿ ವ್ಯವಸ್ಥೆಯನ್ನು ಇಂದು ಕಾಣುತ್ತಿದ್ದೇವೆ. ಹೀಗಾಗಿ ಸಿಂಗಲ್ ಪೇರೆಂಟ್‌ ಗರ್ಭಿಣಿಯನ್ನು ಮುಸ್ಲಿಂ ಎಂದು ಬಿಂಬಿಸುವುದು- ಸದ್ಯದ ರಾಜಕೀಯ ಪಿತೂರಿಗೆ ಇಂಬು ನೀಡಿದಂತಾಗುತ್ತದೆ. ಹೀಗಾಗಿ ಈ ಪಾತ್ರದ ಸುತ್ತ ಬಹುಸಂಖ್ಯಾತ ರಾಜಕೀಯ ಪ್ರಣೀತ ಪ್ರಶ್ನೆ ಏಳದಂತೆ ಅಂಜಲಿಯವರು ಎಚ್ಚರ ವಹಿಸಬೇಕಿತ್ತು. ಸಿಂಗಲ್‌ ಪೇರೆಂಟ್‌‌- ಬಹುಸಂಖ್ಯಾತ ಹಿನ್ನೆಲೆಯವಳೆನ್ನುವುದಕ್ಕಿಂತ ಅಲ್ಪಸಂಖ್ಯಾತಳಾಗಿ ಚಿತ್ರಿತವಾದರೆ ಅಲ್ಲಿ ಹುಟ್ಟುವ ರಾಜಕೀಯ ತರಂಗಳು ಬೇರೆಬೇರೆಯಾಗುತ್ತವೆ. ಈ ಚರ್ಚೆಯು ಎರಡಗಲಿನ ಕತ್ತಿಯೆಂಬುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ.

ನವಿರಾದ ಹಾಗೂ ಸುಖ್ಯಾಂತದಲ್ಲಿ ಮುಗಿಯುವ ‘ವಂಡರ್‌ ವುಮೆನ್‌’- ತಾಯ್ತನದ ಸುತ್ತ ಮೂಡಿಬಂದಿರುವ ವಿಭಿನ್ನ ಪ್ರಯತ್ನ. ತಾರಾಗಣದಲ್ಲಿ ನದಿಯಾ ಮೊಯ್ದು, ನಿತ್ಯಾ ಮೆನೆನ್, ಪಾರ್ವತಿ ತಿರುವೋತು, ಪದ್ಮಪ್ರಿಯಾ, ಸಯನೋರಾ ಫಿಲಿಪ್, ಅರ್ಚನಾ ಪದ್ಮಿನಿ ಮತ್ತು ಅಮೃತಾ ಸುಭಾಷ್ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಾಲ್ಕೈದು ಲೊಕೇಷನ್‌ಗಳಲ್ಲಿಯೇ ಕತೆ ಮುಗಿದು ಹೋದರೂ ಮನೇಶ್ ಮಾಧವನ್ ಅವರ ಛಾಯಾಗ್ರಹಣ ಮೆಚ್ಚುವಂತಿದೆ. ಗೋವಿಂದ ವಸಂತ ಅವರ ಸಂಗೀತ ಭಾವುಕ ದೃಶ್ಯಗಳನ್ನು ತೀವ್ರವಾಗಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...