ರಿಚರ್ಡ್ ಅಟೆನ್‌ಬರೋ ಅವರು 1982ರಲ್ಲಿ ‘ಗಾಂಧಿ’ ಸಿನಿಮಾವನ್ನು ನಿರ್ಮಿಸುವವರೆಗೂ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಜಗತ್ತಿಗೆ ತಿಳಿದಿರಲಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ.
ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ 75 ವರ್ಷಗಳಲ್ಲಿ ಗಾಂಧಿಯವರ ಜಾಗತಿಕ ಖ್ಯಾತಿಯನ್ನು ಹೆಚ್ಚು ಮಾಡುವುದು ದೇಶದ ಕೆಲಸವಾಗಿರಲಿಲ್ಲವೇ ಎಂದು ಪ್ರಶ್ನಿಸಿದ್ದರು. ಮಹಾತ್ಮಾ ಗಾಂಧೀಜಿ ಒಬ್ಬ ಮಹಾನ್ ಚೇತನ. ಕಳೆದ 75 ವರ್ಷಗಳಲ್ಲಿ ಅವರಿಗೆ ಜಾಗತಿಕ ಮನ್ನಣೆಯನ್ನು ತಂದುಕೊಡುವುದು ನಮ್ಮ ಜವಾಬ್ದಾರಿಯಲ್ಲವೇ? ಇದು ಯಾರಿಗೂ ತಿಳಿದಿರಲಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ. ಮೊದಲ ಬಾರಿಗೆ, 1982ರಲ್ಲಿ ಗಾಂಧಿ ಚಲನಚಿತ್ರವನ್ನು ನಿರ್ಮಿಸಿದಾಗ, ಅವರು ಯಾರು ಎಂದು ಜಗತ್ತು ಕುತೂಹಲದಿಂದ ನೋಡಿತ್ತು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅವರ ಬಗ್ಗೆ ಜಗತ್ತಿಗೆ ತಿಳಿದಿದ್ದರೆ, ಜಗತ್ತು ಗಾಂಧಿ ಬಗ್ಗೆ ಕೂಡ ಅಷ್ಟೇ ತಿಳಿದಿರಬೇಕಿತ್ತು. ಗಾಂಧಿ ಮತ್ತು ಅವರ ಮೂಲಕ ಭಾರತವನ್ನು ಗುರುತಿಸಬೇಕಾಗಿತ್ತು ಎಂದು ನಾನು ಜಗತ್ತನ್ನು ಸುತ್ತಿದ ನಂತರ ಹೇಳುತ್ತಿದ್ದೇನೆ ಎಂದು ಮೋದಿ ಹೇಳಿದ್ದರು.
ಮಹಾತ್ಮಾ ಗಾಂಧಿ ಎಂದು ಕರೆಯಲ್ಪಡುವ ‘ಮೋಹನ್ ದಾಸ್ ಕರಮಚಂದ್ ಗಾಂಧಿ’ ಶಾಂತಿ ಮತ್ತು ಅಹಿಂಸೆಯ ಸಂಕೇತವಾಗಿ ಜಗತ್ತಿನ ಇತಿಹಾಸದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರು ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಮಹಾತ್ಮ ಗಾಂಧಿಯವರು 1937 ಮತ್ತು 1948ರ ನಡುವೆ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಐದು ಬಾರಿ ನಾಮನಿರ್ದೇಶನಗೊಂಡಿದ್ದರು. ಅಕ್ಟೋಬರ್ 2, 1869ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದ ಮಹತ್ಮಾ ಗಾಂಧಿ ‘ರಾಷ್ಟ್ರಪಿತ’ ಎಂದು ಹೆಸರುವಾಸಿಯಾಗಿದ್ದಾರೆ. 2007ರಲ್ಲಿ ವಿಶ್ವಸಂಸ್ಥೆಯು ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ವನ್ನಾಗಿ ಘೋಷಿಸಿದೆ.
ಮೋದಿ ಹೇಳಿಕೆಗೆ ವ್ಯಕ್ತವಾದ ತೀವ್ರ ವಿರೋಧ:
ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಜ್ಯಸಭಾ ಸಂಸದೆ, ಪತ್ರಕರ್ತೆ ಸಾಗರಿಕಾ ಘೋಷ್, ರಿಚರ್ಡ್ ಅಟೆನ್‌ಬರೋ ಸಿನಿಮಾ ಮಾಡುವವರೆಗೂ ಮಹಾತ್ಮಗಾಂಧಿ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಹೇಳಿಕೆಯಲ್ಲಿ ಆಶ್ಚರ್ಯವೇನಿಲ್ಲ, ನಾಥೂರಾಂ ಗೋಡ್ಸೆಯ ಗೀಳು ಹೊಂದಿರುವವರಿಗೆ ಸಹಜವಾಗಿಯೇ ಗಾಂಧಿಯ ಬಗ್ಗೆ ಏನೂ ತಿಳಿದಿರುವುದಿಲ್ಲ ಎಂದು ಹೇಳಿದ್ದಾರೆ.
Nobody knew about #MahatmaGandhi until Richard Attenborough made a film, says @narendramodi. Not surprising. Those obsessed with Nathuram Godse naturally don’t know anything about Gandhi. #Modi pic.twitter.com/Fo3M1DgXCp
— Sagarika Ghose (@sagarikaghose) May 29, 2024
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪತ್ರಕರ್ತೆ ಸ್ವಾತಿ ಚತುರ್ವೇದಿ, ಹೌದು ಪ್ರಧಾನಿ ಮೋದಿ, ಮಹಾತ್ಮಾ ಗಾಂಧಿಯವರು “ಚಲನಚಿತ್ರ” ಕ್ಕಿಂತ ಮೊದಲು ತಿಳಿದಿದ್ದರು ಎಂದು ಗಾಂಧೀಜಿ ಕುರಿತ ಅಂತರಾಷ್ಟ್ರೀಯ ಮ್ಯಾಗಝಿನ್‌ಗಳ ವರದಿಯನ್ನು ಉಲ್ಲೇಖಿಸಿ ಮೋದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಪೋಸ್ಟ್‌ನಲ್ಲಿ ಅಮೆರಿಕ ಮೂಲದ ನ್ಯೂಸ್‌ವೀಕ್, ಟೈಮ್ ಮ್ಯಾಗಝೀನ್ ಪೋಟೋವನ್ನು ಉಲ್ಲೇಖಿಸಿದ್ದಾರೆ.
Yes Prime Minister, Modi. Mahatma Gandhi was somewhat known before the “movie” pic.twitter.com/AUrn1mtGr5
— Swati Chaturvedi (@bainjal) May 29, 2024
ನೆಹರೂವಿಯನ್ ಎಂಬ ಎಕ್ಸ್ ಖಾತೆ ಈ ಬಗ್ಗೆ ಮೋದಿಗೆ ಪ್ರತಿಕ್ರಿಯಿಸಿ ಪೋಸ್ಟ್ ಮಾಡಿದ್ದು, ಮಹಾತ್ಮಾ ಗಾಂಧಿಯವರ ಕುರಿತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮಾತನಾಡುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ರಾಜಕೀಯ ತತ್ವಜ್ಞಾನಿ, ಅವರು 1955ರಿಂದ 1968ರಲ್ಲಿ ಹತ್ಯೆಯಾಗುವವರೆಗೆ ನಾಗರಿಕ ಹಕ್ಕುಗಳ ಚಳವಳಿಯಲ್ಲಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು.
Martin Luther King Jr. on Mahatma Gandhi:
Part one: pic.twitter.com/dtsQDBxtbR
— Nehruvian (@_nehruvian) May 29, 2024
ಈ ಕುರಿತು ಎಕ್ಸ್‌ನಲ್ಲಿ ಆದಿತ್ಯಸೇನ್ ಎಂಬವರು ಪ್ರತಿಕ್ರಿಯಿಸಿದ್ದು, ಸೂರ್ಯನ ಬಿಸಿಲಿಗೆ ಚುನಾವಣಾ ಪ್ರಚಾರ ಮಾಡುವಾಗ ಮೋದಿಯ ಸಣ್ಣ ಮೆದುಳು ಹುರಿದಿದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ‘ನೀಲ್ಕ್’ ಎಂಬ ಎಕ್ಸ್ ಬಳಕೆದಾರರು, ಈ ಪಕ್ಷಕ್ಕೆ ಮತ ಹಾಕಿದ್ದಕ್ಕೆ ಇಂದು ನಾಚಿಕೆಯಾಗುತ್ತಿದೆ. ಈ ಜನರು ‘ಸಿನಿಮಾಗಳು ಗಾಂಧಿಯನ್ನು ಜಾಗತಿಕ ಐಕಾನ್ ಮಾಡಿದವು’ ಎಂದು ಭಾವಿಸುತ್ತಾರೆ, ವಾಸ್ತವವಾಗಿ, ಅವರು ಜಾಗತಿಕ ಐಕಾನ್ ಆಗಿದ್ದರು, ಆದ್ದರಿಂದ ವಿದೇಶಿ ನಿರ್ದೇಶಕರು ಅವರ ಜೀವನವನ್ನು ಆಧರಿಸಿ ಚಲನಚಿತ್ರವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮನರಂಜನ್ ಬಾಗ್ ಎಂಬವರು ಪ್ರತಿಕ್ರಿಯಿಸಿದ್ದು, ಮಹಾತ್ಮಗಾಂಧಿ ಬಗ್ಗೆ ಯಾರಿಗೂ ತಿಳಿದಿಲ್ಲದಿದ್ದರೆ, ಯುಕೆ ಮೂಲದ ರಿಚರ್ಡ್ ಅಟೆನ್‌ಬರೋಗೆ ಗಾಂಧಿಯ ಬಗ್ಗೆ ಹೇಗೆ ಗೊತ್ತು? ಎಂದು ಮೋದಿಗೆ ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಮಧ್ಯಪ್ರದೇಶ: ಬುಡಕಟ್ಟು ಸಮುದಾಯದ ವ್ಯಕ್ತಿಯೋರ್ವನಿಗೆ ಥಳಿಸಿ ಮೂತ್ರ ಕುಡಿಯುವಂತೆ ಬಲವಂತ


