Homeಅಂಕಣಗಳುವಿಶ್ವ ಸಿದ್ದೇಶ್ವರರು ತ್ರಿಮತಸ್ಥರಂತೆ ಕಂಗೊಳಿಸಿದರಂತಲ್ಲಾ

ವಿಶ್ವ ಸಿದ್ದೇಶ್ವರರು ತ್ರಿಮತಸ್ಥರಂತೆ ಕಂಗೊಳಿಸಿದರಂತಲ್ಲಾ

- Advertisement -
- Advertisement -

ಭಾರತಕ್ಕೆ ವಕ್ಕರಿಸಿರುವ, ಮೋದಿ ಶಾ ಎಂಬ ಕರಟಕ ದಮನಕರಿಂದ ಇಡೀ ಭಾರತದ ಮನೆಯ ನೆಮ್ಮದಿಯೇ ಹಾಳಾಗಿದೆಯಂತಲ್ಲಾ. ಅದು ಸಹಜ. ಮನೆಯ ಒಬ್ಬ ಸದಸ್ಯನ ತಲೆ ಕೆಟ್ಟರೆ ಆತ ಯಾವ ಸಮಯದಲ್ಲಿ ಏನು ಮಾಡುತ್ತಾನೋ ಎಂದು ಹೆದರಿದ ಮನೆಯ ಸದಸ್ಯರು ಕ್ಷೋಭೆಗೆ ತುತ್ತಾಗಿರುತ್ತಾರೆ. ಆದರೆ ಎರಡು ಜನ ತಲೆಕೆಟ್ಟವರಿದ್ದರೆ ಕತೆಯೇನು? ಇಂತದ್ದೊಂದು ಸ್ಥಿತಿಯನ್ನು ಭಾರತಾಂಬೆಯ ಅವಿಭಕ್ತ ಕುಟುಂಬ ಎದರಿಸುತ್ತಿದೆ. ಅಚ್ಚರಿಯ ಸಂಗತಿ ಎಂದರೆ ತಲೆಕೆಟ್ಟ ಗಿರಾಕಿಗಳೇ ಮನೆಯ ಯಜಮಾನರುಗಳಾಗಿರುವುದು. ಒಮ್ಮೊಮ್ಮೆ ಅವನಾಡುವ ಮಾತನ್ನು ಇವನಾಡುತ್ತಾನೆ, ಇವನ ಮಾತನ್ನು ಅವನಾಡುತ್ತಾನೆ. ಯಾರು ಯಾವ ಮಾತನ್ನಾಡಬಾರದೊ ಅವರೇ ಆಡುತ್ತಾ ಭಾರತವನ್ನೆ ಅತಂತ್ರಕ್ಕೆ ದೂಡಿಬಿಟ್ಟಿದ್ದಾರೆ. ಇದರಿಂದ ಭಾರತದ ಸಮಸ್ತ ಜನಕೋಟಿಯೇ ಆತಂಕಕ್ಕೀಡಾಗಿದೆ. ಆದರೆ ಈ ಪೈಕಿ ಬಿಜೆಪಿಯಲ್ಲಿ ಆಶ್ರಯ ಪಡೆದಿರುವ ಜನ ಮಾತ್ರ ಯಂಥದೋ ಖುಷಿಯಿಂದ ಕೇಕೆ ಹಾಕುತ್ತಿವೆ. ಸೂಕ್ಷ್ಮವಾಗಿ ನೋಡಿದರೆ ಕರಟಕ ದಮನಕರ ಮನಸ್ಥಿತಿ ಇವರಿಗೂ ಆವರಿಸಿರುವ ಕಾರಣಕ್ಕೇ ಈ ಕೇಕೆಯಂತಲ್ಲಾ ಥೂತ್ತೇರಿ….

ಕೃಷ್ಣ ಭಗವಧ್ಗೀತೆಯ ಹೊರಗೂ ಒಂದು ಮಾತನ್ನಾಡಿದ್ದಾನೆ. ದುರ್ಯೋಧನನಿಂದ ಇಡೀ ಕುರುವಂಶವೇ ಯುದ್ಧ ಎದುರಿಸಿ, ನಾಶವಾಗುವುದರ ಬದಲು ದುರ್ಯೋಧನನನ್ನೇ ನಿಯಂತ್ರಿಸಿದರೆ ಹೇಗೆ? ಅಂದರೆ, ಒಂದು ದೇಶ ಉಳಿಸುವ ಸಲುವಾಗಿ ಒಂದು ಗ್ರಾಮವನ್ನು ಬಲಿಕೊಡಬೇಕಾಗಿ ಬಂದರೆ ಹಿಂದೆ ಮುಂದೆ ನೋಡಬಾರದು, ಹಾಗೆಯೇ ಒಂದು ಊರನ್ನ ಉಳಿಸಬೇಕಾದರೆ ಒಂದು ಕುಟುಂಬದ ಬಲಿಯ ಅಗತ್ಯಬಿದ್ದರೆ, ಕನಿಕರ ಒಳ್ಳೆಯದಲ್ಲ. ಅದರಂತೆ ಒಂದು ಕುಟುಂಬದ ಉಳುವಿಗಾಗಿ ಒಬ್ಬ ವ್ಯಕ್ತಿಯ ಬಲಿ ಅನಿವಾರ್ಯವಾದರೆ ಬಲಿಕೊಡಲೇಬೇಕು ಎಂದು ಕೃಷ್ಣ ಹೇಳಿದ್ದಾನೆ, ಆದರೆ, ಇದು ಕತೆಯಾಯಿತು. ಭಾರತದ ಸಂವಿಧಾನದ ರೀತ್ಯ ಚುನಾವಣೆಯಲ್ಲಿ ಆರಿಸಿ ಬಂದು ಪ್ರಧಾನಿಯಾದವ, ತನ್ನನ್ನು ಆರಿಸಿದ ಎಂ.ಪಿ.ಗಳ ಬೀಜವನೇ ಎಗರಿಸಿ ಸೀಡ್‍ಲೆಸ್ ಎಂಪಿಗಳನ್ನಾಗಿಸಿದ್ದಾನೆ. ಧಿಕ್ಕಾರ ಕೂಗಿದವನನ್ನೇ ಜೈಲಿಗೆ ಹಾಕುತ್ತೇನೆ ಎನ್ನುತ್ತಿದ್ದಾನೆ. ಅಂತೂ ಆತನ ಹುಲಿ ಸವಾರಿಗೊಂದು ಅಂತ್ಯ ಬರಬೇಕಾದರೆ ಮತ್ತೆ ಚುನಾವಣೆ ಬರಬೇಕು. ಆದರೆ ಅದೂ ಭಯ, ಏಕೆಂದರೆ ಕರ್ನಾಟಕದ ಜನತಾ ಜನಾರ್ಧನ ಅನರ್ಹರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾನಲ್ಲಾ ಥೂತ್ತೇರಿ…

ಇದ್ದುದರಲ್ಲಿ ಹುಣಸೂರಿನ ಜನ ಅನರ್ಹ ವಿಶ್ವನಾಥರನ್ನ ಸೋಲಿಸಿ, ತಕ್ಕ ಉತ್ತರ ಕೊಟ್ಟಿದ್ದಾರಂತಲ್ಲಾ. ತನ್ನ ಸೋಲಿಗೆ ಸಿದ್ದು ಕಾರಣ ಎಂದು ಹೇಳಿದ ವಿಶ್ವನಾಥ್ ಮೊನ್ನೆ ದೊಡ್ಡಕೊಪ್ಪಲಿನಲ್ಲಿ ಸಿದ್ದುವನ್ನು ಮಧ್ಯಕ್ಕೆ ಕೂರಿಸಿಕೊಂಡು ಆಕಡೆಗೆ ಈಶ್ವರಪ್ಪನನ್ನು ಸ್ಥಾಪಿಸಿಕೊಂಡು ಬ್ರಾಹ್ಮಣ ಸಮಾಜದ ತ್ರಿಮತಸ್ಥರಂತೆ ವಿರಾಜಮಾನರಾಗಿದ್ದು ನೋಡಿದ ದೊಡ್ಡಕೊಪ್ಪಲ ಕುರುಬರ ಕಣ್ಣಲ್ಲಿ ಆನಂದ ಭಾಷ್ಪಾ ಹರಿದು ಹೋದವಂತಲ್ಲಾ. ಕರ್ನಾಟಕದ ಬ್ರಾಹ್ಮಣ ಸಮಾಜದ ರಾಜಕಾರಣಿಗಳು, ತ್ರಿಮತಸ್ಥರು ಒಂದಾದರೆ ಅದೆಷ್ಟು ಚಂದ, ಮತ್ತೆ ಪುರೋಹಿತಶಾಹಿ ಕಾಲ ಮರುಕಳಿಸುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹರಸಾಹಸ ಪಡುತ್ತಿರಬೇಕಾದರೆ ಕುರುಬ ಕುಲದ ತ್ರಿಮತಸ್ಥರಂತೆ ಕಾಣುವ ಸಿದ್ದು ವಿಶ್ವ ಈಶ್ವರ ಬಾಡಿನೂಟಕ್ಕೆ ಸೇರಿದ ಬಾಡು ಒಕ್ಕರಂತೆ ಒಂದೇ ಮೈಕಿನಿಂದ ಪರಸ್ಪರ ಹಿಗ್ಗಾಮುಗ್ಗಾ ಹೊಗಳಿಕೊಂಡರಲ್ಲಾ. ಹಾಗೆ ನೋಡಿದರೆ, ಈ ಮೂವರು ತ್ರಿಮತಸ್ಥರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಮನೋಗತದಲ್ಲಿ ಕುಲಾಚರಣೆಯಲ್ಲಿ ಪ್ರತಿನಿಧಿಸುವ ಪಾರ್ಟಿ ವಿಷಯದಲ್ಲೂ ಇವರು ತ್ರಿಮತಸ್ಥರಂತಲ್ಲಾ ಥೂತ್ತೇರಿ…

ಬ್ರಾಹ್ಮಣ ತ್ರಿಮತಸ್ಥರು ಒಂದಾಗುವ ಅಗತ್ಯವಿಲ್ಲ. ಏಕೆಂದರೆ ಪುರೋಹಿತಶಾಹಿ ಚಿಹ್ನೆಯಾದ ಬೆಲ್ಟು ಅವರನ್ನೆಲ್ಲಾ ಬಂಧಿಸಿದೆ. ಅವರ ಯೋಗಕ್ಷೇಮವನ್ನು ಆರೆಸೆಸ್ಸ್ ನೋಡಿಕೊಳ್ಳುತ್ತಿದೆ. ಆದರೆ ಕುರುಬರಿಗೆ ಅಂತ ಬೆಲ್ಟೇ ಇಲ್ಲ. ವಿಶ್ವನಾಥ ಮತ ಕೆದಕಿದರೆ ಕಾಂಗ್ರೆಸ್ ಮನೆ ಇತಿಹಾಸ ಹೇಳುತ್ತಾರೆ. ಸಿದ್ದು ಕುಲಕೇಳಿದರೆ ಜನತಾದಳದ ಮನೆಬಿಟ್ಟು ಬಂದ ಅಗಲಿಕೆ ವಾಸನೆ ಇನ್ನೂ ಇದೆ. ಈ ಪೈಕಿ ಈಶ್ವರಪ್ಪ ಮಾತ್ರ ಹೆಸರಿಗೆ ಕುರುಬ ಅಷ್ಟೇ, ಆತನ ಮಾತು ಮನಸ್ಸು ಚಡ್ಡಿಮಯವಾಗಿದೆ. ಅದಕ್ಕೆ ಉಡುಪಿಯಲ್ಲಿ ಕನಕ ಗೋಪುರವೇ ಇರಲಿಲ್ಲ ಎಂದುದಲ್ಲದೆ, ಅಧಿಕಾರ ಇರಲಿ ಇಲ್ಲದಿರಲಿ ಆತ ಮಾಡುವ ಕೆಲಸದಲ್ಲಿ ಮೊದಲನೆಯದು ಬ್ರಾಹ್ಮಣರ ಪರಿಚಾರಿಕೆ. ನಂತರ ಲಿಂಗಾಯಿತರದ್ದು. ಉಳಿದಂತೆ ಮರೆಯಲ್ಲಿ ಕುರುಬರದ್ದು. ಸಾರ್ವಜನಿಕವಾಗಿ ಖಂಡನೆ, ಹೀಯಾಳಿಕೆ ಮೂದಲಿಕೆ ಮಾತುಗಳನ್ನಾಡಿದರೂ ಕೂಡ, ದೊಡ್ಡಕೊಪ್ಪಲ ಮೈದಾನದಲಿ ವಿಶ್ವಸಿದ್ದೇಶ್ವರರ ಸಮಾಗಮ ನೋಡಿದ ಒಕ್ಕಲಿಗರು “ನೋಡಿರ್ಲ ಅವುರ್ಯಂಗೆ ಒಂಥಾಯಿ ಮಕ್ಕಳಂಗೆ ಕುಂತವರೆ! ನಮ್ಮದ್ಯಾವೇಗೌಡ ಜೀವಮಾನದಲ್ಲಿ ಹಿಂಗೆ ನಮ್ಮ ಜಾತಿ ಲೀಡ್ರು ಜತೆ ಕುಂತಿದ್ದ ನೋಡಕ್ಕಾಗಲೇಯಿಲವಲ್ಲಾ” ಎಂದು ಹಲುಬಿದರಂತಲ್ಲಾ. ಥೂತ್ತೇರಿ..

ಮೊನ್ನೆ ಮೊನ್ನೆಯವರೆಗೆ ಒಂದೇ ತಂದೆಯ ಮಕ್ಕಳಂತೆ ಕಂಗೊಳಿಸಿದ್ದ ಕುಮಾರಣ್ಣ ಮತ್ತು ಈಶ್ವರಣ್ಣ ಕೋಳಿಗಳಂತೆ ಜಗಳಕ್ಕೆ ಬಿದ್ದಿದ್ದಾರಲ್ಲಾ, ಇದನ್ನೇನು ಗಂಭೀರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಈಶ್ವರಪ್ಪ ಸಿದ್ದು ಜಗಳ ಮತ್ತು ವಿಶ್ವನಾಥ್ ಸಿದ್ದು ಫೈಟಿಂಗ್ ನೋಡಿದವರಿಗೆ ಮೊನ್ನೆ ನಡೆದ ದೊಡ್ಡಕೊಪ್ಪಲ ಸಭೆ ನೆನಪಿಸಿಕೊಂಡರೆ ಸಾಕು, ಈ ನಟಸಾರ್ವಭೌಮರ ಜಗಳ ನಟನೆಯೆಂಬುದು ಸಾಬೀತಾಗಿದೆ. ಇದೇ ಈಶ್ವರಪ್ಪ 2013ರ ಚುನಾವಣೆಯಲ್ಲಿ `ನಿಮ್ಮ ಜೆಡಿಎಸ್ ಅಭ್ಯರ್ಥಿ ಶಿವಮೊಗ್ಗದಲ್ಲಿ ತೊಡಕಾಗಿದ್ದಾನೆ’ ಎಂದು ಕುಮಾರಣ್ಣನಿಗೆ ಫೋನ್ ಮಾಡಿದಾಗ, ಕುಮಾರಣ್ಣ “ಆಯ್ತು ಬ್ರದರ್ ಹೆದರಬೇಡಿ” ಎಂದು ಆಶ್ವಾಸನೆ ಕೊಟ್ಟ ಮರುದಿನದಿಂದಲೇ ಜೆ.ಡಿ.ಎಸ್ ಕ್ಯಾಂಡಿಡೇಟ್ ಶ್ರೀಕಾಂತ್ ಕೈಗೆ ಯಾವ ಕಾರ್ಯಕರ್ತರೂ ಸಿಗಲಿಲ್ಲ. ಆದರೇನು ಲಿಂಗಾಯಿತರು ಈಶ್ವರಪ್ಪನನ್ನ ಮಗ್ಗ ಮಲಗಿಸಿದ್ದರು. ಆಪತ್ಕಾಲದಲ್ಲಿ ಸಹಾಯ ಮಾಡುವ ಕುಮಾರಣ್ಣನೇ ಈಗ `ಈಶ್ವರಪ್ಪನ ನಾಲಿಗೆ ಇರಬೇಕಾದ ಜಾಗದಲ್ಲಿ ಇರಬೇಕು’ ಎಂದಿದ್ದಾರಲ್ಲಾ. ವಿಶ್ವನಾಥ್ ಸಿದ್ದು ಜಗಳದ ಎದುರು ಇದ್ಯಾವ ಮಹಾ ಅಂತೀರಾ ಥೂತ್ತೇರಿ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...