ಪ್ರಧಾನಿ ಮೋದಿಗೆ ಇಂದು ಎಪ್ಪತ್ತೊಂದನೇ ವರ್ಷದ ಹುಟ್ಟ ಹಬ್ಬ. ಬಿಜೆಪಿ ಅವರ ಹುಟ್ಟುಹಬ್ಬವನ್ನು ಒಂದು ವಾರಗಳ ಕಾಲ ಆಚರಿಸುವುದಾಗಿ ಹೇಳಿದೆ. ಜೊತೆಗೆ ಬಿಜೆಪಿಯ ನಾಯಕರು, ಬೆಂಬಲಿಗರು ಸಾಮಾಜಿಕ ಜಾಲತಾಣಲ್ಲಿ ಪ್ರಧಾನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದು, ‘ಹುಟ್ಟಹಬ್ಬದ ಶುಭಾಶಯಗಳು ಮೋದಿಯವರೇ’ #HappyBdayModiji ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.
ಈ ನಡುವೆ ಟ್ವಿಟರ್‌ನಲ್ಲಿ ‘ವಿಶ್ವ ಫೇಕು ದಿನ’ #WorldFekuDay, ‘ರಾಷ್ಟ್ರೀಯ ನಿರುದ್ಯೋಗ ದಿನ’ #NationalUnemploymentDay, ‘ಮೋದಿ ಕೆಲಸ ಕೊಡಿ’ #मोदी_रोजगार_दो, ಜುಮ್ಲಾ ದಿವಸ್ #JumlaDiwas ಹ್ಯಾಶ್ ಟ್ಯಾಗ್‌ಗಳು ಟ್ರೆಂಡ್ ಆಗಿವೆ.
ಪ್ರಧಾನಿ ಮೋದಿಯ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಆಚರಿಸುವುದಾಗಿ ಕಾಂಗ್ರೆಸ್ ಸೇರಿದಂತೆ ಹಲವಾರು ವಿಪಕ್ಷಗಳು, ಜನಪರ ಸಂಘಟನೆಗಳು ಈ ಹಿಂದೆಯೆ ಹೇಳಿದ್ದವು. ಅದರಂತೆ ಟ್ವಿಟರ್‌ನಲ್ಲಿ #WorldFekuDay, #NationalUnemploymentDay, #मोदी_रोजगार_दो, #JumlaDiwas ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.
ಇದನ್ನೂ ಓದಿ: ಮೋದಿ ಹುಟ್ಟುಹಬ್ಬವನ್ನು ‘ನಿರುದ್ಯೋಗ, ಜುಮ್ಲಾ ದಿನ’ವನ್ನಾಗಿ ಆಚರಿಸಲು ಸಜ್ಜು
ಯೂತ್ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಅವರು ಟ್ವೀಟ್ ಮಾಡಿ, “ಮೋದಿಯವರ ಜನ್ಮದಿಕ್ಕೆ ಶುಭಕೋರಿದವರಿಗಿಂತ ನಾಲ್ಕು ಪಟ್ಟು ಹೆಚ್ಚು ನಿರುದ್ಯೋಗ ದಿನದ ಟ್ವೀಟ್ ಆಗಿದೆ. ಮೋದಿಯವರೇ ನೀವು ಇದನ್ನು ನೋಡುತ್ತಿದ್ದೀರಲ್ವಾ?” ಎಂದು ಪ್ರಧಾನಿಗೆ ಕೇಳಿದ್ದಾರೆ.
Tweets on Modi ji birthday:-
199k (until 9.30am)Tweets on Unemployment Day:-
Crossing 879K+Modi ji, Aap Dekh Rahe Hai Na?#राष्ट्रीय_बेरोजगार_दिवस
#NationalUnemploymentDay pic.twitter.com/txriM1JMkH— Srinivas BV (@srinivasiyc) September 17, 2021
ಅವರು ತಮ್ಮ ಮತ್ತೊಂದು ಟ್ವೀಟ್‌ನಲ್ಲಿ ನೀವು ಮೋದಿಯವರ ಜನ್ಮದಿನವನ್ನು ಆಚರಿಸುತ್ತಿದ್ದೀರಾ ಅಥವಾ ರಾಷ್ಟ್ರೀಯ ನಿರುದ್ಯೋಗ ದಿನವನ್ನು ಈ ದೇಶದ ಯುವಕರೊಂದಿಗೆ ಆಚರಿಸುತ್ತಿರುವಿರಾ? ನಿರುದ್ಯೋಗ ಸಮಸ್ಯೆಯ ಕುರಿತು ಈಗಾಗಲೇ 1 ಮಿಲಿಯನ್‌ಗಿಂತಲೂ ಹೆಚ್ಚು ಟ್ವೀಟ್‌ಗಳು ಆಗಿದೆ. ಪತ್ರಿಕೋದ್ಯಮ ಜೀವಂತವಾಗಿದ್ದರೆ ವಾಸ್ತವಾಂಶಗಳನ್ನು ವರದಿ ಮಾಡಿ ಎಂದು ಹೇಳಿದ್ದಾರೆ.
ರೈತ ಹೋರಾಟದ ಟ್ವಿಟರ್‌ನ ಮುಖವಾದ ಕಿಸಾನ್ ಏಕ್ತಾ ಮೋರ್ಚಾ, “ಅನಿರೀಕ್ಷಿತವಾಗಿ, ಪ್ರಧಾನಿ ಮೋದಿಯವರ ಜನ್ಮವು ರಾಷ್ಟ್ರವನ್ನು ಮತ್ತು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹಾಳುಮಾಡಿದೆ. ಮೋದಿ ಸರ್ಕಾರ, ತನ್ನ ಜನರನ್ನು ಕೊಲ್ಲುವುದು, ಆಹಾರ ಉತ್ಪಾದಿಸುವವರನ್ನು ಅವಮಾನಿಸುವುದು, ಕೀಳುಮಟ್ಟದ ಮತ್ತು ಕ್ರೂರ ವಿಧಾನಗಳನ್ನು ಅಳವಡಿಸಿ ಸಾಮಾನ್ಯ ಮನುಷ್ಯನ ಹಕ್ಕುಗಳನ್ನು ದಮನಿಸುತ್ತಿದೆ. ನಾಚಿಕೆಗೇಡು, ಎಷ್ಟು ನಿರ್ದಯ ಪ್ರಧಾನಿ ಆಗಿರಬಹುದು ಅವರು. ಮೋದಿ ಹುಟ್ಟಿದ್ದೇ ಪ್ರಜಾಪ್ರಭುತ್ವವನ್ನು ನಾಶ ಮಾಡಲು” ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.
Unexpectedly, PM Modi's birth has totally ruined the nation; democracy
Modi govt; killing its people, insulting the food providers, adopting cheap & brutal methods also suppressing a common man's rightsShame; how merciless & casual PM can be#ModiBornToDestroyDemocracy pic.twitter.com/qqKGY9iCpX
— Kisan Ekta Morcha (@Kisanektamorcha) September 17, 2021
ಸುಧೀರ್ ಯಾದವ್ ಅವರು, “ಅವರು ಜೋಲಿಗೆ ಎತ್ತಿಕೊಂಡು ನಡೆಯುತ್ತಾರೆ. ದೇಶ ಯುವಕರು ಎಚ್ಚೆತ್ತು, ಈ ಹೆಮ್ಮೆಯ ಮನುಷ್ಯನನ್ನು ಇಲ್ಲಿಂದ ಓಡಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.
He will walk by the bag, the youth of the country will have to get up and drive away this proud man.#NationalUnemploymentDay #राष्ट्रीय_बेरोजगार_दिवस pic.twitter.com/DjZFI99RVp
— Sudheer Yadav (@sudheer_ydv3) September 17, 2021
ಇದನ್ನೂ ಓದಿ: ಅವರೇ ಹಾಕಿಕೊಂಡ ಟಾರ್ಗೆಟ್ ಮೂಲಕ ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-1
ಸಾಮಾಜಿಕ ಕಾರ್ಯಕರ್ತ ಶ್ರೀವತ್ಸಾ ಅವರು, ಪ್ರಧಾನಿ ಮೋದಿ ಅವರು ದೇಶಕ್ಕೆ ನೀಡಿರುವ ಕೊಡುಗೆಗಳ ಪಟ್ಟಯನ್ನು ನೀಡಿದ್ದಾರೆ. ಅವುಗಳಲ್ಲಿ, 15 ಕೋಟಿ ಉದ್ಯೋಗ ನಷ್ಟ, 23 ಕೋಟಿ ಜನರು ಬಡತನ ರೇಖೆಗಿಂತ ಕೆಳಗೆ ಇಳಿದಿದ್ದು, ಭಾರತದ ತಲಾ ಆದಾಯ ಬಾಂಗ್ಲಾದೇಶಕ್ಕಿಂತ ಇಳಿದಿದ್ದು, ಲಾಭದಾಯಕ ಸರ್ಕಾರಿ ಉದ್ದಿಮೆಗಳನ್ನು ಮಾಡಿದ್ದು, ಕೊರೊನಾ ದುರಾಡಳಿತ, ಎಲ್‌ಪಿಜಿಗೆ 900 ರೂ, ಪೆಟ್ರೋಲ್‌ಗೆ 110 ರೂ, ಅಡುಗೆ ಎಣ್ಣೆಗೆ 200 ರೂ.
Modi's GIFT to Indians
?15 crore job losses
?23 crore more below poverty line
?Bangladesh Per Capita > India?Profitable PSUs sold
?Farm Income lowest in 14yrs
?Lakhs dead in COVID Mishandling?LPG @ ₹900
?Petrol @ ₹110
?Cooking Oil @ ₹200#NationalUnemploymentDay— Srivatsa (@srivatsayb) September 17, 2021
ಒಬೈದುಲ್ಲಾ ಅವರು, “ಭಾರತದಲ್ಲಿ ಮೊಟ್ಟಮೊದಲ ಡಿಜಿಟಲ್ ಕ್ಯಾಮೆರಾ ಮಾರಾಟವಾಗಿದ್ದು 1995 ರಲ್ಲಿ. ಆದರೆ ಮೋದಿ ಅದನ್ನು 1987-88ರಲ್ಲಿ ಬಳಸಿದ್ದಾರೆ” ಎಂದು ಪ್ರಧಾನಿ ಮೋದಿ ಅವರು ಡಿಜಿಟಲ್ ಕ್ಯಾಮೆರಾ ಬಗ್ಗೆ ಖಾಸಗಿ ಚಾನೆಲ್ ಒಂದರಲ್ಲಿ ಸುಳ್ಳು ಹೇಳುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.
First Digital camera sold in India was in 1995.
But this idiot has used in 1987-88.#WorldFekuDaypic.twitter.com/4sFPwA1ktv
— Md Obaidullah (@INCObaid) September 16, 2021
ಇದನ್ನೂ ಓದಿ: ಮೋದಿ ಸರ್ಕಾರದ ಜಾಹೀರಾತಿಗೆ ದೆಹಲಿ ಸರ್ಕಾರಿ ಶಾಲೆಗಳ ಫೋಟೊ ಬಳಕೆ: ಥ್ಯಾಂಕ್ಯೂ ಮೋದಿಜೀ ಎಂದ ಆಪ್
ಅನುಪಮ್ ಅವರು, “ಇವತ್ತಿನ ‘ಜುಮ್ಲಾ ದಿವಸ್’ ನಿರುದ್ಯೋಗದ ಬಿಕ್ಕಟ್ಟನ್ನು ನಿರ್ಲಕ್ಷಿಸದಂತೆ ಮೋದಿ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
Let our #JumlaDiwas appeal become a clear warning for the Modi government to not ignore the crisis of unemployment anymore.
Today, the youth across the country will ensure that the Jumlebaaz Prime Minister's birthday becomes memorable and historic.
Do join and participate.✊ pic.twitter.com/anterZIzPi
— Anupam | अनुपम (@AnupamConnects) September 16, 2021
ಮನೋಜ್ ಮೆಹ್ತಾ ಅವರು, “ಒಂದು ದಿನ ಜನರು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ನಿಮ್ಮನ್ನು ಓಡಿಸುತ್ತಾರೆ. ಆಗ ಮೊದಲು ತಪ್ಪಿಸಿಕೊಳ್ಳುವುದು ನಿಮ್ಮ ಕಾರ್ಪೊರೇಟ್ ಸ್ನೇಹಿತರು” ಎಂದು ಬರೆದಿದ್ದಾರೆ.
One day people will run after you with sticks in hands,
First to escape shall be your corporate friends !, ?#WorldFekuDay pic.twitter.com/Tyrvs0GPbX— Manoj Mehta (@ManojMehtamm) September 16, 2021
ವಿನಯ್ ಕುಮಾರ್ ದೊಕಾನಿಯಾ ಅವರು, “ಈ ಸಹಸ್ರಮಾನದ ಮಾರಾಟಗಾರ ವಿಶ್ವ ಫೇಕು ದಿನವನ್ನು ಆಚರಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
Salesman of the millennium celebrates #WorldFekuDay today pic.twitter.com/rWwDRB3wBV
— Vinay Kumar Dokania (@VinayDokania) September 16, 2021
ಮಧುರೇಂದ್ರ ಸಿಂಗ್ ಅವರು, “ದೇಶಕ್ಕಾಗಿ ಕೊಡುಗೆ ನೀಡಲು ಸಾಧ್ಯವಿಲ್ಲದ ಕಾರಣ ಮಾಲಿಂಗ ನಿವೃತ್ತರಾದರು, ಮೋದಿಜಿ ನೀವು ಯಾವಾಗ ನಿವೃತ್ತರಾಗುತ್ತೀರಿ” ಎಂದು ಟ್ವೀಟ್ ಮಾಡಿದ್ದಾರೆ.
Malinga retires because he can't contribute for the country, Modiji when will you be #WorldFekuDay#मोदी_रोजगार_दो #राष्ट्रीय_बेरोजगार_दिवस pic.twitter.com/FuDY9wYyRa
— Madhurendra Singh (@MKSINGH01011997) September 17, 2021
ಇದನ್ನೂ ಓದಿ: ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ 66% ರಿಂದ 24% ಕ್ಕೆ ಕುಸಿತ: ಇಂಡಿಯಾ ಟುಡೆ ಸಮೀಕ್ಷೆ


