Homeಅಂತರಾಷ್ಟ್ರೀಯಕೆಜಿಗೆ 2.7 ಲಕ್ಷ ರೂ. ಬೆಲೆಯ ಜಗತ್ತಿನ ಅತಿ ದುಬಾರಿ ಮಾವಿನ ಹಣ್ಣು ಮಿಯಝಾಕಿ

ಕೆಜಿಗೆ 2.7 ಲಕ್ಷ ರೂ. ಬೆಲೆಯ ಜಗತ್ತಿನ ಅತಿ ದುಬಾರಿ ಮಾವಿನ ಹಣ್ಣು ಮಿಯಝಾಕಿ

- Advertisement -
- Advertisement -

ಭಾರತವಲ್ಲದೇ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಾವಿನ ಹಣ್ಣಿಗೆ ವಿಶೇಷ ಸ್ಥಾನಮಾನವಿದೆ. ಜಗತ್ತಿನ ಮೂಲೆ ಮೂಲೆಯಲ್ಲಿ ಮಾವಿನ ಹಣ್ಣಿನ ಪ್ರಿಯರಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾವಿನ ಬೆಳೆ ಬಹಳ ಕಡಿಮೆ. ಹಾಗಾಗಿ ಭಾರತ ಸೇರಿ ಏಷ್ಯಾದ ರಾಷ್ಟ್ರಗಳಿಂದ ಅಮೆರಿಕ ಮತ್ತು ಯುರೋಪ್‌ಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾವಿನ ಹಣ್ಣು ರಫ್ತಾಗುತ್ತದೆ. ವಿದೇಶಗಳಿಗೆ ರಫ್ತಾಗುವ ಮಾವಿನ ಹಣ್ಣುಗಳು ವಿಶೇಷ ಗುಣಮಟ್ಟವನ್ನು ಹೊಂದಿರುತ್ತವೆ ಮತ್ತು ಅವುಗಳ ಬೆಲೆಯೂ ಅಷ್ಟೇ ಹೆಚ್ಚಾಗಿರುತ್ತದೆ. ನಾವು ಮಾವಿನ ಹಣ್ಣಿನ ಬೆಲೆ ಕೆ.ಜಿ.ಗೆ 100 ರೂಪಾಯಿ ಎಂದರೆ ದುಬಾರಿ ಎಂದುಕೊಳ್ಳುತ್ತೇವೆ. ಆದರೆ ಇಲ್ಲೊಂದು ಮಾವಿನ ಹಣ್ಣಿದೆ. ಇದರ ಬೆಲೆಯನ್ನು ಕೇಳಿದರೆ ನಾವೆಲ್ಲರೂ ಆಶ್ಚರ್ಯಕ್ಕೆ ಒಳಗಾಗುತ್ತೇವೆ. ಹಾಗೇ ಇದು ನಿಜವೇ ಎಂದು ಪ್ರಶ್ನಿಸುತ್ತೇವೆ…

ಹೌದು ಇದು ಅಂತಹದ್ದೇ ಮಾವಿನ ಹಣ್ಣು. ನೋಡಲು ಅಷ್ಟೇ ಸುಂದರ. ಅಷ್ಟೇ ರುಚಿಕರ. ಸುವಾಸನೆ ಭರಿತ ತಳಿ. ಅಷ್ಟೇ ದುಬಾರಿ. ಒಂದು ಕೆಜಿಗೆ 2.7 ಲಕ್ಷ ರುಪಾಯಿ. ಅದು ಯಾವ ಮಾವಿನ ಹಣ್ಣು ಎನ್ನುತ್ತೀರಾ ? ಅದೇ ಜಪಾನ್ ಮೂಲದ ತಳಿಯ ಮಾವಿನ ಹಣ್ಣು ಮಿಯಝಾಕಿ. ಕೆಂಪು-ಬೂದು ಬಣ್ಣದ ಈ ಮಾವಿನ ಹಣ್ಣಿಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆಯಿದೆ. ಮಧ್ಯಪ್ರದೇಶದ ಕೃಷಿಕ ದಂಪತಿಯೊಂದು ಮಿಯಝಾಕಿ ತಳಿಯ ಮಾವಿನ ಹಣ್ಣನ್ನು ತಮ್ಮ ಹೊಲದಲ್ಲಿ ಬೆಳೆದು ಅಪಾರ ಲಾಭ ಗಳಿಸಿದ್ದಾರೆ.

ದುಬಾರಿ ಈ ಮಾವಿನ ಹಣ್ಣನ್ನು ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಕೃಷಿ ದಂಪತಿ ಈ ಮಾವಿನ ಹಣ್ಣಿನ ತೋಟಕ್ಕೆ ಗಾರ್ಡ್‌ಗಳನ್ನು ನೇಮಿಸಿದ್ದಾರೆ.

ಮಧ್ಯಪ್ರದೇಶದ ಈ ಕೃಷಿ ದಂಪತಿ ಬೆಳೆದಿರುವ ಮಿಯಝಾಕಿ ಮಾವಿನ ಹಣ್ಣಿನ ಒಂದು ಚಿಕ್ಕ ಹೋಳಿನ ಬೆಲೆಯೇ ಸುಮಾರು 1,000 ರೂಪಾಯಿಗೂ ಅಧಿಕವಾಗಿದೆ ಎಂದರೆ ನೀವು ನಂಬಲಾರರಿ. ಆದರೆ ಇದು ಸತ್ಯ. ಮಧ್ಯಪ್ರದೇಶದ ಈ ಕೃಷಿಕರು ಬೆಳೆದ ಮಿಯಝಾಕಿ ಮಾವಿನ ಹಣ್ಣು ಬೂದು ಬಣ್ಣವನ್ನು ಪಡೆದುಕೊಂಡಿದೆ. ಹಾಗೇ ವಿಶೇಷ ಸುವಾಸನೆಯನ್ನು ಹೊಂದಿದೆ.

ಇದನ್ನೂ ಓದಿ : ಕೊರೊನಾದಿಂದ ಅನಾಥರಾದ ಮಕ್ಕಳ ಜವಾಬ್ದಾರಿ ಪಡೆದ ರಾಜ್ಯಗಳ ಸಾಲಿಗೆ ಉತ್ತರ ಪ್ರದೇಶ

1970-80 ರಲ್ಲಿ ಜಪಾನ್ ದೇಶದ ಮಿಯಝಾಕಿ ಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳೆಯಲಾದ ಈ ಮಾವಿನ ತಳಿ ಆ ಪಟ್ಟಣದ ಹೆಸರನ್ನೇ ಪಡೆದುಕೊಂಡು ಜಗತ್ತಿನಾದ್ಯಂತ ಮಿಯಝಾಕಿ ಎಂದೇ ಪ್ರಸಿದ್ಧವಾಗಿದೆ. ಜಪಾನ್‌ನಲ್ಲಿ ಆರಂಭವಾದ ಮಿಯಝಾಕಿ ತಳಿಯ ಬೆಳೆ ಕೊರಿಯಾ, ಮಲೇಷ್ಯಾ, ಥೈಲಾಂಡ್ ಹೀಗೆ ಭಾರತದ ಮಧ್ಯಪ್ರದೇಶದವರೆಗೂ ಬಂದಿದೆ. ಸಾಧಾರಣ ಮಾವಿಗಿಂತ 15% ಹೆಚ್ಚು ಸಕ್ಕರೆಯ ಅಂಶವನ್ನು ಹೊಂದಿರುವ ಈ ಮಿಯಝಾಕಿ ಮಾವು ಅತ್ಯಂತ ಕಡಿಮೆ ಆಮ್ಲದ ಗುಣವನ್ನು ಹೊಂದಿದೆ. ಏಪ್ರಿಲ್ ನಿಂದ ಆಗಸ್ಟ್ ತಿಂಗಳವರೆಗೆ ಹಣ್ಣನ್ನು ಬಿಡುವ ಈ ತಳಿ ಉಷ್ಣವಲಯದಲ್ಲಿ ಮಾತ್ರ ಚೆನ್ನಾಗಿ ಫಲ ಕೊಡುತ್ತದೆ.

ಕಳೆದ ವರ್ಷ ಅಂತರರಾಷ್ಟಿಯ ಮಾರುಕಟ್ಟೆಯಲ್ಲಿ ಕೆಜಿಗೆ 2.7 ಲಕ್ಷ ಬೆಲೆಗೆ ಮಾರಾಟವಾಗಿದ್ದ ಮಿಯಝಾಕಿ ಬೆಲೆ ಈ ವರ್ಷ 3  ಲಕ್ಷ ರೂಪಾಯಿ ತಲುಪುವ ನಿರೀಕ್ಷೆಯನ್ನು ರೈತರು ಇಟ್ಟುಕೊಂಡಿದ್ದಾರೆ. ಕೆಂಪು ಬಣ್ಣದ ಡೈನೋಸಾರ್ ಮೊಟ್ಟೆಯನ್ನು ಹೋಲುವ ಈ ಮಿಯಝಾಕಿ ಹಣ್ಣು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸಿದೆ. ಈ ಹಣ್ಣಿನ ವಿವರ ಕೇಳಿದ ನೆಟ್ಟಿಗರು ದುಬಾರಿ ಬೆಲೆಯಿಂದಾಗಿ ಮಿಯಝಾಕಿ ಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಾವಿನ ಹಣ್ಣಿನ ಸೀಸನ್‌ನಲ್ಲಿ ನೀವು ಮಾವಿನ ಪ್ರಿಯರಾಗಿದ್ದರೆ ಮಿಯಝಾಕಿ ತಳಿಯ ಹಣ್ಣನ್ನು ಪ್ರಯತ್ನಿಸುವ ಆಸೆಯಾಗುತ್ತಿದೆಯಾ ? ಹಾಗಿದ್ದರೆ 2.70 ಲಕ್ಷ ರೂಪಾಯಿಯನ್ನು ಮಾವಿನ ಹಣ್ಣಿಗಾಗಿ ನಿಮ್ಮ ಜೇಬಿನಿಂದ ತೆಗೆದಿರಿಸಿಕೊಳ್ಳುವುದು ಉತ್ತಮ.

– ರಾಜೇಶ್ ಹೆಬ್ಬಾರ್


ಇದನ್ನೂ ಓದಿ : ಹಿಂದುತ್ವ ಅಜೆಂಡಾದ ಪ್ರಯೋಗಕ್ಕೆ ಈಗ ನೂತನ ಬಲಿ ಲಕ್ಷದ್ವೀಪ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಹತ್ಯೆಗೆ ಗುರಿಯಾಗುತ್ತಾನೆ: ಇಸ್ರೇಲ್ ರಕ್ಷಣಾ ಸಚಿವನಿಂದ ಬೆದರಿಕೆ

ದುಬೈ: ‘ಅಯತೊಲ್ಲಾ ಅಲಿ ಖಮೇನಿ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ ಅವರನ್ನು ಹತ್ಯೆ ಮಾಡುತ್ತೇವೆ’ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಬುಧವಾರ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ...

ಇರಾನ್ ಮೇಲಿನ ಇಸ್ರೇಲ್-ಅಮೆರಿಕ ದಾಳಿಗಳು ಅಂತರರಾಷ್ಟ್ರೀಯ ಕಾನೂನಿಗೆ ಸರಿ ಹೊಂದುವುದಿಲ್ಲ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ

ಸಿಡ್ನಿ: ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು "ವಿಷಾದದಿಂದ" ಬೆಂಬಲಿಸುವುದಾಗಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ. ಆದರೆ ಈ ಸಂಘರ್ಷವು ಅಂತರರಾಷ್ಟ್ರೀಯ ಕ್ರಮದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು...

ಉತ್ತರ ಪ್ರದೇಶ | ಅತ್ಯಾಚಾರ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದ ಆರೋಪಿ

ಸುಮಾರು 17 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು 22 ವರ್ಷದ ಆರೋಪಿ ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಯ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು...

ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್; ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಸಿದ 37 ಭಾರತೀಯ ಹಡಗುಗಳು

ಇಸ್ರೇಲ್-ಯುಎಸ್ ಜಂಟಿ ದಾಳಿಯ ನಂತರ, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಭಾರತೀಯ ಹಡಗುಗಳು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ. ಭಾರತೀಯ ಧ್ವಜ ಹೊಂದಿರುವ 37 ಹಡಗುಗಳು ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ನೀರಿನಲ್ಲಿ ಸಿಲುಕಿಕೊಂಡಿವೆ. 37 ಹಡಗುಗಳು...

ಪಾಲ್ಘರ್: ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟೆಂಪೋ: 28 ವರ್ಷದ ಚಾಲಕ ಸಜೀವ ದಹನ, ಕ್ಲೀನರ್ ಗೆ ಗಾಯ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಟೆಂಪೋಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಪಂಜಾಬ್‌ನ 28 ವರ್ಷದ ಚಾಲಕ ಸುಟ್ಟು ಕರಕಲಾಗಿದ್ದು, ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ಜನನಿಬಿಡ...

ಗುಜರಾತ್| ಅಂತರ್ಧರ್ಮೀಯ ದಂಪತಿಗೆ ಪೊಲೀಸರ ರಕ್ಷಣೆ; ‘ಲವ್ ಜಿಹಾದ್’ ಎಂದು ಕೂಗಿದ ವಿಎಚ್‌ಪಿ

ಮಾರ್ಚ್ 3 ರಂದು ಗುಜರಾತ್‌ನ ಅಹಮದಾಬಾದ್‌ನ ಮೆಟ್ರೋ ನ್ಯಾಯಾಲಯದ ಸಂಕೀರ್ಣದೊಳಗಿನ ವಿವಾಹ ನೋಂದಣಿ ಕಚೇರಿಯು ಅವ್ಯವಸ್ಥೆಯ ತಾಣವಾಯಿತು. ಗಾಂಧಿನಗರದ ಹಿಂದೂ ಮಹಿಳೆಯೊಬ್ಬರು ನಗರದ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಲು ಬಂದ ನಂತರ ಹಿಂದುತ್ವ ಸಂಘಟನೆಯ...

ಖಮೇನಿ ಹತ್ಯೆ ಕುರಿತು ಪೋಸ್ಟ್‌ : ನ್ಯಾಷನಲ್ ಕಾನ್ಫರೆನ್ಸ್ ಸಂಸದ, ಶ್ರೀನಗರದ ಮಾಜಿ ಮೇಯರ್ ವಿರುದ್ಧ ಎಫ್‌ಐಆರ್

ದಾರಿತಪ್ಪಿಸುವ ಆನ್‌ಲೈನ್ ವಿಷಯವನ್ನು ಹಂಚಿಕೊಂಡ ಆರೋಪದ ಮೇಲೆ ಜಮ್ಮು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರೂಹುಲ್ಲಾ ಮೆಹದಿ ಮತ್ತು ಶ್ರೀನಗರದ ಮಾಜಿ ಮೇಯರ್ ಜುನೈದ್ ಅಝೀಂ ಮಟ್ಟು ವಿರುದ್ಧ...

ಒಡಿಶಾ| ಮೇಕೆ ಕಳ್ಳತನ ಶಂಕೆಯಿಂದ 14 ವರ್ಷದ ಬಾಲಕನನ್ನು ಹೊಡೆದು ಕೊಂದ ಗುಂಪು; 12 ಜನರ ಬಂಧನ

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಶಂಕೆಯಿಂದ ಗ್ರಾಮಸ್ಥರು ಥಳಿಸಿದರಿಂದ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿ, ಇನ್ನೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಟಿರಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಇಂಡೋಖೋಲಿ...

ಮಧ್ಯಪ್ರಾಚ್ಯ ಉದ್ವಿಗ್ನತೆ: ಪಶ್ಚಿಮ ಏಷ್ಯಾದಲ್ಲಿ ಸಿಲುಕಿದ್ದ ಮಹಾರಾಷ್ಟ್ರದ 164 ಪ್ರವಾಸಿಗರು ಮನೆಗೆ ಮರಳಿದ್ದಾರೆ: ಶಿವಸೇನೆ

ಮುಂಬೈ: ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸಿಲುಕಿಕೊಂಡಿದ್ದ ಮಹಾರಾಷ್ಟ್ರದ ಒಟ್ಟು 164 ಪ್ರವಾಸಿಗರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವ್ಯವಸ್ಥೆ ಮಾಡಿದ ಎರಡು ವಿಮಾನಗಳಲ್ಲಿ ಮನೆಗೆ ಮರಳಿದ್ದಾರೆ ಎಂದು ಶಿವಸೇನಾ ಪದಾಧಿಕಾರಿಯೊಬ್ಬರು ಬುಧವಾರ...

‘ಇದು ಟ್ರಂಪ್ ವಾಗ್ದಾನ ಮಾಡಿದ ರಕ್ಷಣೆ’: 165 ಮಕ್ಕಳ ಸಾಮೂಹಿಕ ಸಮಾಧಿಯ ಫೋಟೋ ಹಂಚಿಕೊಂಡ ಇರಾನ್; ಮರುಗಿದ ಮಾನವ ಜಗತ್ತು

ದಕ್ಷಿಣ ಇರಾನ್‌ನ ಮಿನಾಬ್ ನಗರದ ಬಾಲಕಿಯರ ಶಾಲೆಯೊಂದರ ಮೇಲೆ ಶನಿವಾರ (ಫೆ.28) ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಸಾವನ್ನಪ್ಪಿದ 165 ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಯ ಬೃಹತ್ ಅಂತಿಮ ಸಂಸ್ಕಾರ ಮೆರವಣಿಗೆ ಮಂಗಳವಾರ (ಮಾ.3)...