ದೆಹಲಿಯಲ್ಲಿ ಮುಂಬರುವ ಚುನಾವಣೆ ಪ್ರಚಾರದ ಸಂದರ್ಭ ಯಮುನಾ ನದಿಯ ಸ್ವಚ್ಛತೆಯ ಸ್ಥಿತಿಗಾಗಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ ಟೀಕಿಸಿದ್ದು, ತಮ್ಮದೇ ರಾಜ್ಯದ ಮಥುರಾದಲ್ಲಿನ ಯಮುನಾ ನದಿಯಿಂದ ನೀರು ಕುಡಿಯಬಹುದೇ ಎಂದು ಕೇಳಿದ್ದಾರೆ.
ಗುರುವಾರ ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾಗ, ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಯಮುನಾ ನದಿಯನ್ನು “ಕೊಳಕು ಚರಂಡಿ”ಯನ್ನಾಗಿ ಮಾಡುವ ಮೂಲಕ ಪಾಪ ಮಾಡಿದ್ದಾರೆ ಎಂದು ಆದಿತ್ಯನಾಥ್ ಆರೋಪಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬುಧವಾರ ಪ್ರಯಾಗ್‌ರಾಜ್‌ನಲ್ಲಿ ನಡೆದ ಸಂಗಮದಲ್ಲಿ ತಮ್ಮ ಸಚಿವ ಸಂಪುಟವದ ಜೊತೆಗೆ ಪುಣ್ಯಸ್ಥಾನ ಮಾಡಿದ್ದ ಯುಪಿ ಸಿಎಂ ಆದಿತ್ಯನಾಥ್, ಕೇಜ್ರಿವಾಲ್ ಮತ್ತು ಅವರ ಸಚಿವರು ಯಮುನಾ ನದಿಯಲ್ಲಿ ಸ್ನಾನ ಮಾಡಲಿದ್ದಾರೆಯೆ ಎಂದು ಕೇಳಿದ್ದು, “ಅವರಿಗೆ ನೈತಿಕ ಧೈರ್ಯವಿದ್ದರೆ ಅವರು ಉತ್ತರಿಸಬೇಕು” ಎಂದು ಹೇಳಿದ್ದರು.
ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, ಎಕ್ಸ್‌ನಲ್ಲಿ ಯಾರ ಹೆಸರನ್ನು ಕೂಡಾ ಉಲ್ಲೇಖಿಸದರೆ, “ಇತರರಿಗೆ ಸವಾಲು ಹಾಕುವ ಮೊದಲು, ತಮ್ಮದೇ ರಾಜ್ಯದ ಮಥುರಾ ಮೂಲಕ ಹರಿಯುವ ಯಮುನಾ ನದಿಯಿಂದ ನೀರು ಕುಡಿಯಲು ಧೈರ್ಯ ಮಾಡಬೇಕು” ಎಂದು ಸವಾಲು ಹಾಕಿದ್ದಾರೆ. ಯಮುನಾ ನದಿಯ
दूसरों को चुनौती देनेवाले अपने प्रदेश के अंदर मथुरा से गुजरती यमुना जी में आचमन करके दिखा दें।
— Akhilesh Yadav (@yadavakhilesh) January 24, 2025
ದೆಹಲಿಯ ಕಿರಾರಿಯಲ್ಲಿ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ, ಆದಿತ್ಯನಾಥ್ ಅವರು ಮಥುರಾ-ವೃಂದಾವನದಲ್ಲಿರುವ ಭಕ್ತರು ಮತ್ತು ಸಂತರು ಎಎಪಿಯ “ಪಾಪಗಳಿಗೆ” ಬಲಿಯಾಗಿದ್ದಾರೆ ಎಂದು ಹೇಳಿದ್ದು, ಯಮುನಾ ನೀರು ಕೊಳಕು ಚರಂಡಿಯಾಗಿ ರಾಜ್ಯವನ್ನು ತಲುಪುತ್ತದೆ ಎಂದು ತಿಳೀಸಿದ್ದರು.
ನಮಾಮಿ ಗಂಗಾ ಯೋಜನೆಯಡಿ ಕೇಂದ್ರ ಸರ್ಕಾರದೊಂದಿಗೆ ಯಮುನಾದ ಸ್ವಚ್ಛತೆಗೆ ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ಎಂದಿಗೂ ಸಹಕರಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ವನ್ನು ಎದುರಿಸಲು ರಚಿಸಲಾದ ಇಂಡಿಯಾ ಮೈತ್ರಿಯಲ್ಲಿ ಜೊತೆಗೂಡಿದ್ದವು.
ಇದನ್ನೂಓದಿ: ಕೇಂದ್ರೀಯ ವಿವಿಯ ಬಾಕಿ ಇರುವ ಪ್ರಸ್ತಾವನೆಗಳ ಬಗ್ಗೆ ಕ್ರಮಕೈಗೊಳ್ಳಿ – ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ
ಕೇಂದ್ರೀಯ ವಿವಿಯ ಬಾಕಿ ಇರುವ ಪ್ರಸ್ತಾವನೆಗಳ ಬಗ್ಗೆ ಕ್ರಮಕೈಗೊಳ್ಳಿ – ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ


