HomeಮುಖಪುಟYes Bank ಪತನ ಅಂತ್ಯವೋ, ಆರಂಭವೋ?

Yes Bank ಪತನ ಅಂತ್ಯವೋ, ಆರಂಭವೋ?

- Advertisement -
- Advertisement -

ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ Yes Bank ಪತನದ ಹಾದಿ ಹಿಡಿದಿದ್ದು ಆ ಬ್ಯಾಂಕಿನಲ್ಲಿ ಡಿಪಾಜಿಟ್ ಇಟ್ಟಿದ್ದ ಗ್ರಾಹಕರ ಹಣವನ್ನು ರಕ್ಷಿಸಲು ಮತ್ತು Yes Bankನ್ನು ಪೂರ್ಣ ಮುಳುಗಡೆಯಿಂದ ರಕ್ಷಿಸಲು ಪಬ್ಲಿಕ್ ಸೆಕ್ಟರ್ ಬ್ಯಾಂಕಾದ SBI, ಯೆಸ್ ಬ್ಯಾಂಕಿನ 49% ಶೇರುಗಳನ್ನು 2450 ಹೂಡಿಕೆ ಮಾಡಿ ಕೊಳ್ಳುವಂತೆ RBI ಮಾಡಿದೆ.

ಆದರೆ, ಯೆಸ್ ಬ್ಯಾಂಕನ್ನು ಈ ಕ್ರೈಸಿಸ್‍ನಿಂದ ಪಾರು (bail out) ಮಾಡಲು ಕನಿಷ್ಟ 21,000 ಕೋಟಿ ರೂಪಾಯಿಗಳ ಅವಶ್ಯಕತೆ ಇತ್ತು. ಆದರೆ, ಈಗ SBI ಹೂಡಿಕೆ ಮಾಡಿರುವುದು ಕೇವಲ 2450 ಕೋಟಿ ರೂಪಾಯಿಗಳು. ಆದ್ದರಿಂದ RBIನ ಈ ನಡೆ ಗ್ರಾಹಕರ ಡಿಪಾಜಿಟ್ ಹಣದ ರಕ್ಷಣೆ ಯಾವ ಮಟ್ಟದಲ್ಲಿ ಮಾಡಲಿದೆ ಎಂದು ಕಾಯ್ದು ನೋಡಬೇಕಾಗಿದೆ.

ಬಹುತೇಕ ಕಡೆಯ ಹದಿನೈದು ವರ್ಷಗಳಲ್ಲಿ ಒಂದು ಖಾಸಗಿ ಬ್ಯಾಂಕನ್ನು ಪತನದಿಂದ ರಕ್ಷಿಸಲು ಸರ್ಕಾರ ಮುಂದಾಗಿದ್ದು ಇದೇ ಮೊದಲು.

ಈ ಹಿನ್ನೆಲೆಯಲ್ಲಿ ಯೆಸ್ ಬ್ಯಾಂಕಿನ ಪತನಕ್ಕೆ ಕಾರಣಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ನೋಡುತ್ತ, ಈ ಬ್ಯಾಂಕಿಂಗ್ ಕ್ಷೇತ್ರದ ಈ ರೀತಿಯ ಪತನದ ಕತೆ ಇಲ್ಲಿಗೇ ಮುಗಿಯಲಿದೆಯೇ ಅತವಾ ಮುಂದುವರೆಯಲಿದೆಯೇ ನೋಡೋಣ.

ಯಾವುದೇ ಬ್ಯಾಂಕಿನ ವ್ಯವಹಾರ ಸರಳವಾಗಿ ಗ್ರಾಹಕರಿಂದ ಡಿಪಾಜಿಟ್ಟುಗಳನ್ನು ಕಡಿಮೆ ಬಡ್ಡಿದರದಲ್ಲಿ ಇರಿಸಿಕೊಂಡು, ಆ ಡಿಪಾಜಿಟ್ ಹಣವನ್ನು ಹೆಚ್ಚಿನ ಬಡ್ಡಿದರಕ್ಕೆ ಸಾಲವಾಗಿ ಅವಶ್ಯಕತೆಯುಳ್ಳ ಗ್ರಾಹಕರಿಗೆ ಕೊಟ್ಟು ಲಾಭ ಗಳಿಸುವುದು.

ಆದರೆ ಸಾಲವಾಗಿ ಕೊಟ್ಟ ಹಣ ವಾಪಸ್ ಬರದೇ ಇದ್ದಾಗ ಬ್ಯಾಂಕುಗಳು ತೊಂದರೆಗೆ ಸಿಲುಕಿ ನಷ್ಟ ಅನುಭವಿಸಬೇಕಾಗುತ್ತದೆ. ಈ ರೀತಿ ಕನಿಷ್ಟ ತೊಂಬತ್ತು ದಿನ ಕೊಟ್ಟ ಸಾಲದ ಕಂತು ವಾಪಸ್ ಬರದೇ ಇದ್ದಾಗ ಅಂತ ಸಾಲವನ್ನು ಕೆಟ್ಟ ಸಾಲ (Bad loans) ಎಂದು ಕರೆಯಲಾಗುತ್ತದೆ. ಈ ಕೆಟ್ಟ ಸಾಲಗಳ ಸಂಖ್ಯೆ ಮತ್ತು ಮೌಲ್ಯ ಹೆಚ್ಚಾದಷ್ಟೂ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕುತ್ತವೆ.

ಆಗ ಅಂತಹ ಬ್ಯಾಂಕಿನಲ್ಲಿ ಕಷ್ಟಪಟ್ಟು ಉಳಿಸಿದ ಹಣವನ್ನು ಡಿಪಾಜಿಟ್ ಇಟ್ಟಿರುವವರೂ ಸಂಕಷ್ಟಕ್ಕೆ ಸಿಲುಕುತ್ತಾರೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಇದು ಇಡೀ ದೇಶದ ಆರ್ಥಿಕತೆಯ ಮೇಲೆ ಭಾರೀ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದೇರೀತಿ ಯೆಸ್ ಬ್ಯಾಂಕ್ ಕೂಡ ಕೆಟ್ಟ ಸಾಲದ ಸುಳಿಗೆ ಸಿಲುಕಿತ್ತು. ಈ ರೀತಿ ಸಾಲ ತೆಗೆದುಕೊಂಡು ವಾಪಸ್ ಕೊಡದಿರುವವರು ಬಹುತೇಕ ಕಾರ್ಪೊರೇಟ್ ಕಂಪನಿಗಳವರಾಗಿರುತ್ತಾರೆ ಮತ್ತು ಯೆಸ್ ಬ್ಯಾಂಕ್ ಕೊಟ್ಟ ಸಾಲದಲ್ಲಿ ಸುಮಾರು 63% ರಷ್ಟನ್ನು ಕಾರ್ಪೊರೇಟ್ ಕಂಪನಿಗಳಿಗೇ (ಅಥವಾ ಕಾರ್ಪೊರೇಟ್ ವ್ಯಕ್ತಿಗಳಿಗೆ) ಕೊಡಲಾಗಿತ್ತು. ಬ್ಯಾಂಕುಗಳ NPA ಯನ್ನೂ ಒಂದು ಪ್ರಮುಖ ವಿಷಯ ಮಾಡಿ ಅಧಿಕಾರಕ್ಕೆ ಬಂದ ಈ ಸರ್ಕಾರದ ಅವಧಿಯಲ್ಲಿಯೇ ಯೆಸ್ ಬ್ಯಾಂಕ್ ಕೊಟ್ಟ ಸಾಲ 400% ( 2014 ರಿಂದ 2019 ರವರೆಗೆ 55000 ಕೋಟಿಯಿಂದ 241000 ಕೋಟಿ) ರಷ್ಟು ಏರಿಕೆಯಾಗಿದೆ ಎಂಬ ವಿಷಯ ಈ ರೀತಿಯ ಕೆಟ್ಟ ಸಾಲಗಳ ನೀಡುವಿಕೆ ಸರ್ಕಾರಕ್ಕೆ ಅರಿವಿದ್ದೂ ನಡೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಹಾಗೆಯೇ ಈ ರೀತಿಯ ಸಾಲ ಪಡೆದವರಲ್ಲಿ ಅನೇಕರು ಸರ್ಕಾರಕ್ಕೆ ( ಯಾವುದೇ ಸರ್ಕಾರವಿದ್ದಾಗಲೂ) ಆಪ್ತರಾಗಿರುವವರು ಎಂಬುದು ಈ ವ್ಯವಹಾರದ ಮತ್ತೊಂದು ಮುಖವನ್ನು ನಮಗೆ ತೆರೆದು ತೋರಿಸುತ್ತದೆ.

ಈ ಯೆಸ್ ಬ್ಯಾಂಕಿನ ಒಟ್ಟಾರೆ NPA ಪ್ರಮಾಣ ಅದು ಕೊಟ್ಟಿರುವ ಒಟ್ಟು ಸಾಲದ 8% ಗಳಷ್ಟು ಮಾತ್ರ ( ಈ ಪ್ರಮಾಣ 2% ಗಿಂತ ಹೆಚ್ಚಿದ್ದರೆ ಅಂತ ಬ್ಯಾಂಕ್ ವ್ಯವಹಾರ ಅನಾರೋಗ್ಯಕರವಾಗಿದೆಯೆಂದು ಹೇಳಲಾಗುತ್ತದೆ). ಇಷ್ಟು ಕೆಟ್ಟ ಸಾಲದ ಹೊರೆಯಿಂದಾಗಿ ಯೆಸ್ ಬ್ಯಾಂಕ್ ತನ್ನ ಡಿಪಾಜಿಟ್‍ದಾರರಿಗೆಹಣ ಹಿಂದುರಿಗಿಸಲಾರದ ಸ್ಥಿತಿಗೆ ತಲುಪಿತ್ತು.

ಹಾಗೆ ನೋಡಿದರೆ, ನಮ್ಮ ಹಲವು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ NPA ಪ್ರಮಾಣ ಶೇ ಹತ್ತಕಿಂತ ಹೆಚ್ಚಿದೆ. ಶೇ. ಹತ್ತಕ್ಕಿಂತ ಹೆಚ್ಚು ಓPಂ ಹೊಂದಿರುವ ಒಟ್ಟು ಹದಿನೇಳು ಬ್ಯಾಂಕುಗಳಲ್ಲಿ ಹದಿನಾರು ಬ್ಯಾಂಕುಗಳು ಪಬ್ಲಿಕ್ ಸೆಕ್ಟರ್ ಬ್ಯಾಂಕ್‍ಗಳೇ ಆಗಿವೆ. IDBI, UCO Bank, IOB ಗಳ NPA ಪ್ರಮಾಣ 20% ಗಿಂತ ಹೆಚ್ಚಿದೆ.

ಹಾಗಿದ್ದರೆ, ನಮ್ಮ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು ಇಂಥಾ ಸ್ಥಿತಿಯಲ್ಲಿ ಗ್ರಾಹಕರ ಡಿಪಾಜಿಟ್ ಹಣಕ್ಕೆ ಬಡ್ಡಿ ಕೊಡಲು ಮತ್ತು ವಾಪಸ್ ಮಾಡಲು ಹೇಗೆ ಸಾಧ್ಯವಾಗುತ್ತಿದೆ ಎಂದು ನೋಡೋಣ. ನಿಮಗೆ ನೆನಪಿರುವ ಹಾಗೆ 2016-17 ಮತ್ತು 2017-18 ರಲ್ಲಿ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಒಟ್ಟು 50000 ಕೋಟಿ ರೂಪಾಯಿಗಳನ್ನು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ಕೊಟ್ಟಿದೆ. ಇದರಿಂದಾಗಿ ಭಾರೀ ಓPಂಯ ಹೊರತಾಗಿಯೂ ಈ ಬ್ಯಾಂಕುಗಳು ಒಂದು ಮಟ್ಟಿಗೆ ಉಸಿರಾಡಲು ಸಾಧ್ಯವಾಗಿದೆ.

ಆದರೆ, ಸರ್ಕಾರ ಬ್ಯಾಂಕುಗಳಿಗೆ ಕೊಟ್ಟ ಈ ಹಣ ನಮ್ಮೆಲ್ಲರ ತೆರಿಗೆಯ ಹಣ. ಇದನ್ನು ರಸ್ತೆಗೋ, ಶಾಲೆಗೋ ಉಪಯೋಗಿಸುವ ಬದಲು ಸರ್ಕಾರ ಬ್ಯಾಂಕುಗಳಿಗೆ ಕೊಟ್ಟಿದೆ.

ಇದರಿಂದ ಒಂದು ಕಡೆ ಅಭಿವೃದ್ಧಿ ಕುಂಠಿತವಾದರೆ ಮತ್ತೊಂದೆಡೆ ದೇಶದ ವಿತ್ತೀಯ ಕೊರತೆಯೂ ಹೆಚ್ಚುತ್ತದೆ(ಈ ಹಣ ಸರ್ಕಾರದ ಖರ್ಚಿನಡಿ ಬರುವುದರಿಂದ).

ಒಟ್ಟಿನಲ್ಲಿ ಬ್ಯಾಂಕುಗಳು ಮಾಡುವ ತಪ್ಪಿಗೆ (ಈ ತಪ್ಪಿನಲ್ಲಿ ಇದನ್ನು ತಡೆಯುವುದಿರಲಿ ಪರೋಕ್ಷವಾಗಿ ಪ್ರೋತ್ಸಾಹಿಸುವ ಕಾರಣಕ್ಕೆ ಸರ್ಕಾರದ ಪಾಲು ದೊಡ್ಡದಿದೆ) ನಮ್ಮ ತೆರಿಗೆ ದುಡ್ಡು ಪೋಲಾಗುತ್ತಿದೆಯಷ್ಟೇ ಅಲ್ಲದೆ ನಮ್ಮೆಲ್ಲರ ಮೇಲೂ ಹೆಚ್ಚೆಚ್ಚು ಸಾಲದ ಹೊರೆ ಬೀಳುತ್ತಿದೆ.

ಹೀಗೆ NPA ಗೆ ಸಿಲುಕಿದ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳನ್ನು ಕಾಪಾಡಲು ಮತ್ತು NPA ಯಿಂದಾಗುವ ವಿತ್ತೀಯ ಕೊರತೆಯಿಂದ ತಕ್ಷಣ ಪಾರಾಗಲು ಸರ್ಕಾರ ಅಕ್ಟೋಬರ್ 2017 ರಿಂದ Recapitalization bonds ಅನ್ನು ಬಿಡುಗಡೆ ಮಾಡಿತು. ಬ್ಯಾಂಕುಗಳು ತಮ್ಮ ಡಿಪಾಜಿಟ್ ಹಣದಿಂದ Recapitalization bond ಗಳನ್ನು ಖರೀದಿಸಬೇಕು. ಅ ಹಣವನ್ನು ಭಾರೀ ಸಂಕಷ್ಟದಲ್ಲಿರುವ ಬ್ಯಾಂಕುಗಳಿಗೆ ಸರ್ಕಾರ ವಿತರಿಸುತ್ತದೆ.

ಈ ರೀತಿಯಾಗಿ ಇಲ್ಲಿಯತನಕ ಒಟ್ಟು 250000 ಕೋಟಿಗಳಷ್ಟು ಬೆಲೆಯ ಬಾಂಡುಗಳನ್ನು ವಿವಿಧ ಬ್ಯಾಂಕುಗಳು ಖರೀದಿಸಿವೆ. ಅಂದರೆ ನಮ್ಮ ಡಿಪಾಜಿಟ್ ಹಣದಿಂದಲೇ ಬ್ಯಾಂಕುಗಳನ್ನು NPA ಸುಳಿಯಿಂದ ಮೇಲೆತ್ತುವ ಕೆಲಸಕ್ಕೆ ಸರ್ಕಾರ ಕೈಹಾಕಿತು. ಇದರಿಂದ ಸರ್ಕಾರ ಬಜೆಟಲ್ಲಿ ಬ್ಯಾಂಕುಗಳಿಗೆ ಕೊಡುವ ಹಣವನ್ನು ತಪ್ಪಿಸಿ ಅದರಿಂದಾವಾಗುವಷ್ಟು ವಿತ್ತೀಯ ಕೊರತೆಯಿಂದ ತಕ್ಷಣಕ್ಕೆ ಪಾರಾಗುವ ಯತ್ನ ಮಾಡಿತು.

ಆದರೆ, ಈ ಬಾಂಡುಗಳನ್ನು ಖರೀದಿಸಿದ ಹಣಕ್ಕೆ ಸರ್ಕಾರ ವಾರ್ಷಿಕ 6 – 8% ಬಡ್ಡಿ ಕೊಡಬೇಕಿದೆ. ಈ ಬಡ್ಡಿಯೂ ಒಂದು ಮಟ್ಟಿಗೆ ವಿತ್ತೀಯ ಕೊರತೆ ಹೆಚ್ಚಿಸಲಿದೆ. ಅದಲ್ಲದೆ ಈ ಬಾಂಡುಗಳು ಮುಂದೆ ಹತ್ತರಿಂದ ಹದಿನೈದು ವರ್ಷಗಳಲ್ಲಿ ಮೆಚ್ಯೂರ್ ಆದಾಗ ಅಷ್ಟೂ ಹಣವನ್ನು ಸರ್ಕಾರ ಬಡ್ಡಿ ಸಮೇತ ಹಿಂದಿರುಗಿಸಬೇಕಾಗುತ್ತದೆ.

ಅಂದರೆ, ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಹತ್ತಾರು ಲಕ್ಷ ಕೋಟಿಗಳಷ್ಟು ಹೊರೆ ಒಟ್ಟಿಗೆ ಬೀಳಲಿದ್ದು, ಸರ್ಕಾರದ ಈ ಕ್ರಮ ಬ್ಯಾಂಕಿಂಗ್ ಪತನವನ್ನು ಮುಂದೂಡುಲಷ್ಟೇ ಶಕ್ತವಾಗಲಿದೆ. ಈ ಮುಂದೂಡಲ್ಪಟ್ಟದ್ದು ಮುಂದಿನ ಹತ್ತು ವರ್ಷಗಳಲ್ಲಿ ಈಗಿನದಕ್ಕಿಂತ ಭಾರೀ ಸಮಸ್ಯೆಯಾಗಿ ಎರಗುವ ಎಲ್ಲ ಸಾಧ್ಯತೆಗಳೂ ಇವೆ.

ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳೇ ಹೆಚ್ಚಿನ NPA ಹೊಂದಿರುವುದನ್ನು (ಕೆಲವು ಶೇ ಇಪ್ಪತ್ತಕಿಂತ ಹೆಚ್ಚು) ನೋಡಿದಾಗ ಮತ್ತು ಸರ್ಕಾರದ ಕ್ರಮಗಳು ಕೇವಲ ತಾತ್ಕಾಲಿಕವಾಗಿರುವಾಗ ಈ ಯೆಸ್ ಬ್ಯಾಂಕ್ ಬಿಕ್ಕಟ್ಟು ಅಂತ್ಯವಲ್ಲ, ಆರಂಭ ಎಂದು ಯಾರಿಗಾದರೂ ಗೊತ್ತಾಗುತ್ತದೆ.

ಕೊನೆಯದಾಗಿ, ಒಂದು ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರದ ಅರಿವಿರುವವರಿಗೆ ನಮ್ಮ ಬ್ಯಾಂಕುಗಳ ಪರಿಹಾರವಾಗದ NPA ಬಿಕ್ಕಟ್ಟನ್ನು ನೋಡಿದಾಗ ನಮಗೆ ಬೇರೆಯದೇ ಅಭಿವೃದ್ದಿ ಮಾದರಿಯ ಅವಶ್ಯಕತೆ ಇದೆಯೆಂಬುದು ಸುಸ್ಪಷ್ಟವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...