ರಾಹುಲ್ ಗಾಂಧಿ ವಿರುದ್ದ ಅಪಪ್ರಚಾರ ನಡೆಸಿರುವ ಆರೋಪದ ಮೇಲೆ ಬಲಪಂಥೀಯ ಯೂಟ್ಯೂಬರ್ ಅಜೀತ್ ಭಾರ್ತಿ ವಿರುದ್ದ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ ಬೋಪಣ್ಣ ಅವರು ನೀಡಿದ ದೂರಿನನ್ವಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(ಎ)( ಧರ್ಮ, ಜಾತಿ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಮೂಡಿಸುವುದು) ಮತ್ತು 505(2) (ಜಾತಿ, ಧರ್ಮ, ಜನಾಂಗದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಉದ್ದೇಶದಿಂದ ನಕಲಿ ಸುದ್ದಿ ಹರಡುವುದು) ಅಡಿ ಜೂನ್ 15ರಂದು ಪ್ರಕರಣ ದಾಖಲಾಗಿದೆ.
An FIR was registered against Ajeet Bharti in Bengaluru. Here are a few more instances of him sharing dangerous disinformation during the election. 👇🏽 https://t.co/J1HpUtw99G pic.twitter.com/Nytv0ujVUF
— Mohammed Zubair (@zoo_bear) June 16, 2024
ಜೂನ್ 6ರಂದು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಅಜೀತ್ ಭಾರ್ತಿ” ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ರೀರಾಮ ಮಂದಿರದ ಬದಲಿಗೆ ಬಾಬ್ರಿ ಮಸೀದಿಯನ್ನು ಮರಳಿ ತರಲು ಉದ್ದೇಶಿಸಿದ್ದಾರೆ” ಎಂದು ಹೇಳಿದ್ದರು. ಆದರೆ, ರಾಹುಲ್ ಗಾಂಧಿ ತಮ್ಮ ಯಾವುದೇ ಭಾಷಣಗಳಲ್ಲಿ ಅಂತಹ ಹೇಳಿಕೆ ನೀಡಿಲ್ಲ. ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮತ್ತು ದ್ವೇಷ ಪ್ರಚೋದಿಸುವ ಉದ್ದೇಶದಿಂದ ಅಜೀತ್ ಭಾರ್ತಿ ಸುಳ್ಳು ಸುದ್ದಿ ಹರಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಸುವ್ಯವಸ್ಥೆ ಮತ್ತು ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ ಎಂದು ವಕೀಲ ಬಿ.ಕೆ ಬೋಪಣ್ಣ ದೂರಿನಲ್ಲಿ ಆರೋಪಿಸಿದ್ದರು.
ಇದನ್ನೂ ಓದಿ : ಪೋಕ್ಸೋ ಪ್ರಕರಣ: ಸಿಐಡಿ ಅಧಿಕಾರಿಗಳ ಮುಂದೆ ಹಾಜರಾದ ಬಿಎಸ್ ಯಡಿಯೂರಪ್ಪ



Even Narendra Modi,sha, and many others BJP leaders repeatedly told that that sriram temple would be buldosed if Congress comes to power.
Why not some more comments to lodge against Modi sha and his Parivar.