Homeರಾಜಕೀಯಆಧಾರ ಕಳೆದುಕೊಂಡ ಟ್ರಾಯ್ ಅಧ್ಯಕ್ಷ

ಆಧಾರ ಕಳೆದುಕೊಂಡ ಟ್ರಾಯ್ ಅಧ್ಯಕ್ಷ

- Advertisement -
- Advertisement -

ನಮ್ಮ ಪ್ರಧಾನ ಸೇವಕ ನರೇಂದ್ರ ಮೋದಿ ಸೇರಿದಂತೆ ಸಿನಿಮಾ ಸ್ಟಾರ್‍ಗಳು, ಆಟಗಾರರು ಫಿಟ್ನೆಸ್ ಚಾಲೆಂಜ್ ಮಾಡ್ಕಂಡು ಒಂದಷ್ಟು ದಿನ ಆಟ ಆಡಿದ್ರು, ಅಲ್ಲದೆ ಒಂದು ವಾರದಿಂದ ಕಿಕಿ ಚಾಲೆಂಜ್ ಅಂತ ಹೊಸದೊಂದು ಚಾಲೆಂಜ್ ಟ್ರೆಂಡ್ ಶುರು ಮಾಡ್ಕೊಂಡು ಜನ ಬಿಸಿಯಾಗಿದ್ದಾರೆ. ಇದನ್ನ ನೋಡಿ ಸುಮ್ಮನಿರಲಾರದ ಟ್ರಾಯ್ ಅಧ್ಯಕ್ಷ ಕಂ ಯುಐಡಿಎಐ(ವಿಶಿಷ್ಟ ಗುರುತು ಪ್ರಾಧಿಕಾರ)ನ ಮಾಜಿ ಸಿಇಓ ಆರ್.ಎಸ್.ಶರ್ಮ ಇರಲಾರದೋರು ಇರುವೆ ಬಿಡ್ಕಂಡ್ರು ಅನ್ನೋ ಹಾಗೆ ಹೊಸ ಚಾಲೆಂಜ್ ಶುರು ಮಾಡೋಕೋಗಿ ನಮ್ ಜನರ ಮುಂದೆ ಕಾಮೆಡಿ ಪೀಸಾಗಿದ್ದಾರೆ.
ಅಂತದ್ದೇನಪ್ಪಾ ಮಾಡಿದ್ರು ನಮ್ ಟ್ರಾಯ್ ಅಧ್ಯಕ್ಷರು ಅಂದ್ರೆ, ಆಧಾರ್ ಸಂಖ್ಯೆ ಸೇಫಾಗಿಲ್ಲ ಅನ್ನೋರಿಗೆ ಅಧಾರ್ ಎಷ್ಟು ಸೇಫ್ ಅಂತ ತೋರಿಸ್ತೀನಿ ಅಂತ ಕೆಲವು ದಿನಗಳ ಹಿಂದೆ ತಮ್ಮ ಆಧಾರ್ ನಂಬರ್‍ನ ಟ್ವಿಟರ್‍ನಲ್ಲಿ ಹಂಚಿಕೊಂಡ ಶರ್ಮಾ ಯಾರಿಗಾದ್ರು ಸಾಧ್ಯವಾದ್ರೆ ನನ್ನ ಆಧಾರ್ ನಂಬರ್‍ನ ಬಳಸಿಕೊಂಡು ಹ್ಯಾಕ್ ಮಾಡಿ ಅಂತ ಸವಾಲ್ ಹಾಕಿದ್ರು. ಇದನ್ನ ನೋಡಿದ ಹ್ಯಾಕಿಂಗ್ ಪ್ರವೀಣರು ಸಂಪತ್ತಿಗೆ ಸವಾಲ್ ಅನ್ನೋ ಹಾಗೆ ಮಾಜಿ ಸಿಇಓ ಶರ್ಮಾರವರ ಆಧಾರಗಳನ್ನೆಲ್ಲ ಹೊರತೆಗೆದೇ ಬಿಟ್ಟಿದ್ದಾರೆ. ಶರ್ಮಾರ ಡೀಟೇಲ್ಸ್‍ಗಳನ್ನ ಕದ್ದಿರುವ ಹ್ಯಾಕ್ ಪ್ರವೀಣರು ಅವರ ಪರ್ಸನಲ್ ಡೀಟೆಲ್‍ಗಳನ್ನ ಒಂದೊಂದಾಗಿ ಕಳಿಸಿದ್ದಾರೆ, ಇದು ಆಧಾರ್‍ಸಂಖ್ಯೆ ಗಟ್ಟಿ ಆಧಾರವನ್ನು ಹೊಂದಿಲ್ಲ ಅನ್ನೋದನ್ನ ಖಾತ್ರಿ ಮಾಡಿದೆ.
ಇಷ್ಟಕ್ಕ ಸುಮ್ಮನಾಗದ ಹ್ಯಾಕರ್ಸ್ ಟ್ರಾಯ್ ಅಧ್ಯಕ್ಷರ ಫೋನ್ ನಂಬರ್, ಇ-ಮೇಲ್ ಅಡ್ರೆಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ನಂಬರ್, ಹುಟ್ಟಿದ ದಿನಾಂಕ ಎಲ್ಲವನ್ನೂ ಪಡೆದುಕೊಂಢು ಒಂದೊಂದಾಗಿ ಶರ್ಮಾರಿಗೆ ಕಳಿಸಿದ್ದಾರೆ. ಇಷ್ಟಾದರೂ ಎಚ್ಚೆತ್ತುಕೊಂಡು ಸುಮ್ಮನಿರದ ಶರ್ಮಾ ಸಾಹೇಬರು ನಾನು ಹೇಳಿದ್ದು ನನಗೆ ತೊಂದರೆ ಆಗುವಂತದ್ದನ್ನ ಮಾಡಿ ಎಂದು, ಡೀಟೆಲ್ಸ್ ಕೊಡಿ ಎಂದಲ್ಲ ಎಂದು ಮತ್ತೊಂದು ಟ್ವಿಟ್ ಮಾಡಿದ್ದಾರೆ. ಇದನ್ನ ನೋಡಿ ರೊಚ್ಚಿಗೆದ್ದ ಹ್ಯಾಕರ್ಸ್ ಅವರ ಖಾತೆಯಿಂದ ಹಣ ಪಡೆದರೆ ಅದನ್ನ ಮತ್ತೆ ಪಾಪಸ್ ಪಡೆಯಬಹುದು ಎಂದು ತಿಳಿದಿದ್ದವರು ಹಣ ತೆಗೆದುಕೊಳ್ಳದೆ ಶರ್ಮಾರ ಪಿಎನ್‍ಬಿ ಅಕೌಂಟಿಗೆ ಒಂದು ರೂಪಾಯಿ ಜಮಾ ಮಾಡಿ ಶರ್ಮಾರನ್ನು ಕೀಟಲೆ ಮಾಡಿದ್ದಾರೆ.
ಶರ್ಮಾರ ಇ-ಮೇಲ್ ಖಾತೆಯಿಂದಲೇ ಅವರ ಪುತ್ರಿಗೆ ಮೇಲ್ ಮಾಡಿರುವ ಖತರ್ನಾಕ್ ಪ್ರವೀಣರು ಸಾಮಾಜಿಕ ಮಾಧ್ಯಮದಲ್ಲಿ ಸವಾಲೆಸೆದು ದೇಶಕ್ಕೆ ಮುಜುಗರ ಉಂಟುಮಾಡಿರುವ ನಿಮ್ಮ ತಂದೆ ಹ್ಯಾಕರ್‍ಗಳಿಗೆ ಭರ್ಜರಿ ಬಹುಮಾನ ನೀಡಿದ್ದಾರೆಂದು ಸಂದೇಶ ಕಳಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ಬ್ಯಾಂಕ್ ಖಾತೆಯು ಶೀಘ್ರದಲ್ಲೇ ಹ್ಯಾಕ್ ಆಗಲಿದೆ, ಒಂದು ವೇಳೆ ಅವರು ತನ್ನ ಖಾತೆಯನ್ನು ಅಳಿಸಿ ಹಾಕದಿದ್ದರೆ ಸೂಕ್ಷ್ಮ ದಾಖಲೆಗಳನ್ನೂ ಬಹಿರಂಗ ಪಡಿಸಲಾಗುವುದು ಎಂದೂ, ಈ ಸೂಚನೆಯನ್ನು ಪಾಲಿಸದಿದ್ದರೆ ಮಾಲ್‍ವೇರ್(ಮಾಹಿತಿ ಕದಿಯುವ ಸಾಫ್ಟ್‍ವೇರ್)ಅನ್ನು ಶರ್ಮಾರ ಮೊಬೈಲ್‍ಗೆ ಇನ್‍ಸ್ಟಾಲ್ ಮಾಡಿ ಅವರ ಸಂವಾದವನ್ನು ಕದಿಯಲಾಗುವುದೆಂದು ಎಚ್ಚರಿಕೆ ಸಂದೇಶವನ್ನೂ ಟ್ರಾಯ್ ಅಧ್ಯಕ್ಷರ ಪುತ್ರಿಗೆ ಕಳಿಸಿದ್ದಾರೆ.
ಇಷ್ಟಾದರೂ ಬುದ್ದಿಕಲಿಯದ ಶರ್ಮಾ ಸಾಹೇಬರು ಡಿಜಿಜಲ್ ಯುಗದಲ್ಲಿ ಖಾಸಗೀ ಡಾಟಾವನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾದ ವಿಚಾರ, ಅಂತಹ ಡಾಟಾಗಳನ್ನು ಆಧಾರ್ ಲೀಕ್ ಮಾಡಲಾರದು, ನಾನು ಅದರ ಜತೆಗಿದ್ದೇನೆ ಎಂದು ಮತ್ತೆ ಟ್ವಿಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಆಧಾರ್‍ಗೆ ಯಾವ ಆಧಾರವೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಧಾನ ಸೇವಕ ಮೋದಿ ಸರ್ಕಾರದ ಗೊಡ್ಡು ಆಶ್ವಾಸನೆಗಳಿಂದ ಎಲ್ಲಾ ಖಾಸಗೀ ಡೇಟಾಗಳಿಗೂ ಆಧಾರ್ ಲಿಂಕ್ ಕೊಟ್ಟಿರುವ ಜನರು ತಮ್ಮ ಡೇಟಾಗಳನ್ನು ರಕ್ಷಿಸಿಕೊಳ್ಳಲು ಪೇಚಾಡಬೇಕಾದ ಪರಿಸ್ಥಿತಿಯನ್ನು ಚಾಲೆಂಜಿಂಗ್ ಸ್ಟಾರ್ ಶರ್ಮಾರ ಅವಾಂತರ ಎದುರುಗೊಳಿಸಿದೆ.

– ಸೋಮಶೇಖರ್ ಚಲ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...