Homeಅಂತರಾಷ್ಟ್ರೀಯಇರಾನ್ ಮೇಲೆ ಅಮೆರಿಕದ ಹದ್ದಿನ ಕಣ್ಣು

ಇರಾನ್ ಮೇಲೆ ಅಮೆರಿಕದ ಹದ್ದಿನ ಕಣ್ಣು

- Advertisement -
- Advertisement -

| ಭರತ್ ಹೆಬ್ಬಾಳ |

ದಶಕಗಳಿಂದ ಮಧ್ಯಪ್ರಾಚ್ಯ ಏಶಿಯಾವನ್ನು ಯುದ್ದ ನಕ್ಷೆಯಂತೆ ಉಪಯೋಗಿಸುತ್ತಿರುವ ಪಾಶ್ಚಾತ್ಯ ಶಕ್ತಿಗಳು ಈಗ ಇರಾನ್ ಮೇಲೆ ಕಣ್ಣಿಟ್ಟಿದೆ. ಪುರಾತನ ಕಾಲದಿಂದಲೂ ದೀರ್ಘ ಮತ್ತು ಮಹತ್ತರ ಇತಿಹಾಸ ಹೊಂದಿರುವ ಇರಾನ್, ಪ್ರಪಂಚದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪಗಳು ಮತ್ತು ಪ್ರಪಂಚದ ಎರಡನೇ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರ.

ಅಮೆರಿಕದ ಕಾರ್ಯದರ್ಶಿ ಕೋಲಿನ್ ಪೊವೆಲ್ 2003, ಫೆಬ್ರುವರೀ 5ನೇ ತಾರೀಕು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎದುರು ಒಂದು ವರದಿಯನ್ನು ನೀಡಿ ಮಾಡಿದ ಭಾಷಣ ಇರಾಕ್ ವಿರುದ್ದದ ಯುದ್ದಕ್ಕೆ ದಾರಿಮಾಡಿಕೊಟ್ಟಿತ್ತು. ಈ ಭಾಷಣದಲ್ಲಿ ಪೊವೆಲ್ ಅವರು ಸದ್ದಾಂ ಹುಸೇನ್ ಮತ್ತವರ ಆಡಳಿತವು ಉಗ್ರವಾದ ಪ್ರತಿಪಾದಿಸುವ ಅಲ್‍ಖೈದಾ ಅಂಗ ಸಂಘಟನೆಯ ಸಹಯೋಗದೊಂದಿಗೆ ರಾಸಾಯನಿಕ ಆಯುಧಗಳು ಮತ್ತು ಇನ್ನಷ್ಟು ವಿಧ್ವಂಸಕಾರಿ ಆಯುಧಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಮತ್ತದರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಪ್ರತಿಪಾದಿಸಿದ್ದರು. ತಾವು ಮಂಡಿಸಿದ ವರದಿಯಲ್ಲಿ ಬ್ರಿಟನ್ ಗೂಢಾಚಾರಿ ಸಂಸ್ಥೆ, ಉಪಗ್ರಹ ಚಿತ್ರಗಳು, ಆಡಿಯೋ ರೆಕಾರ್ಡಿಂಗ್ಸ್ ಮತ್ತು ಇನ್ನೂ ಇತರೆ ನಿರಾಕರಿಸಲಾಗದಂಥ ಪುರಾವೆಗಳೊಂದಿಗೆ ಇದೆ ಎಂದು ಒತ್ತು ಮಾಡಿ ಹೇಳಿದ್ದರು. ಈ ಘಟನೆಯ ಒಂದು ತಿಂಗಳ ನಂತರ ಅಮೆರಿಕ ಮತ್ತು ಹಿಂಬಾಲಕ ಪಡೆಗಳು ಇರಾಕ್ ಅನ್ನು ಬಾಂಬ್ಗಳ ಸುರಿಮಳೆಗೈದು ಧ್ವಂಸಗೊಳಿಸಿ ಇಲ್ಲಿಯವರೆಗೂ ಹತ್ತು ಲಕ್ಷಕ್ಕೂ ಮೇಲ್ಪಟ್ಟ ಜನ ಪ್ರಾಣ ಕಳೆದುಕೊಂಡಿದ್ದಾರೆ, ಅಷ್ಟೇ ಮಂದಿ ಆಂತರಿಕ ಹಾಗೂ ಅಂತರ್ರಾಷ್ಟ್ರೀಯ ನಿರಾಶ್ರಿತರಾಗಿದ್ದಾರೆ ಮತ್ತು ಇದಕ್ಕಾಗಿ ಅಮೆರಿಕ 1.06 ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ. ಇರಾಕಿನಲ್ಲಿ ತಾನು ಹುಟ್ಟು ಹಾಕಿದ್ದ ಕ್ರೌರ್ಯದಿಂದ ಐಸಿಸ್ ಹುಟ್ಟಲು ಕಾರಣವಾಯಿತು.

ಆದರೆ ಬಹುತೇಕ ಮಾಧ್ಯಮಗಳು ಮರೆಮಾಚಿದ ಸಂಗತಿಯೆಂದರೆ ಕೋಲಿನ್ ಪೊವೆಲ್ ಮಂಡಿಸಿದ ಇರಾಕ್ ವಿರುದ್ದದ ವರದಿ ಒಂದು ಕೃತಿಚೌರ್ಯ ವರದಿಯಾಗಿದ್ದು ಅದನ್ನು ಕೇಂಬ್ರಿಡ್ಜ್ ಪ್ರೋಫೆಸರ್ ಗ್ಲೆನ್ ರಾಂಗ್ವಾಲ ಹೊರತಂದ ವಾಸ್ತವವನ್ನು ಕೆಲವೇ ಕೆಲವು ಮಾಧ್ಯಮಗಳು ಪ್ರಕಟಿಸಿದ್ದವು. ಆ ಹತ್ತೊಂಬತ್ತು ಪುಟಗಳ ವರದಿಯಲ್ಲಿ 6ರಿಂದ 16ರ ಪುಟಗಳು ಆಕ್ಸ್‍ಫರ್ಡ್ ಯೂನಿವರ್ಸಿಟಿ ವಿದ್ಯಾರ್ಥಿಯ ಥೀಸಿಸ್ ಇಂದ ನೇರ ಕಾಪೀ ಪೇಸ್ಟ್ ಮಾಡಿದ ವರದಿ. ಆಗಿನ ಬ್ರಿಟಿಷ್ ಅಧ್ಯಕ್ಷ ಟೋನೀ ಬ್ಲೇರ್ ಆಫೀಸಿನಿಂದ ಬಂದದ್ದು ಎಂದು ಹೇಳಲಾಗುತ್ತಿದ್ದ ವರದಿ ಒಂದು ದೊಡ್ಡ ಕೃತಿಚೌರ್ಯ ದಾಖಲೆ. ಈ ಸುಳ್ಳು ದಾಖಲೆಯಿಂದ ತಮ್ಮೆಲ್ಲವನ್ನು ಕಳೆದುಕೊಂಡ ಇರಾಕ್ ಜನತೆ ಅತಿ ಕೆಟ್ಟ ಪರಿಣಾಮವನ್ನು ಎದುರಿಸುತ್ತಿದೆ. ಅಮೆರಿಕ ಮತ್ತದರ ಮಿತ್ರಪಡೆಗಳು ಉಪಯೋಗಿಸಿದ ಡೆಪ್ಲೀಟೆಡ್ ಯುರೇನೀಯಮ್ ಬಾಂಬ್ನಿಂದಾಗಿ ಆ ಪ್ರದೇಶಗಳಲ್ಲಿ ಹುಟ್ಟುವ ಅರ್ಧದಷ್ಟು ಮಕ್ಕಳು ಬರ್ತ್ ಡೆಫೆಕ್ಟ್ಸ್‍ಗಳಿಂದ ಹುಟ್ಟುತ್ತಿವೆ. 45% ಮಕ್ಕಳು ಹುಟ್ಟುವ ಮುಂಚಿತವಾಗಿ ಗರ್ಭದಲ್ಲೇ ಅಸುನೀಗುತ್ತವೆ. ಈ ಸಂಖ್ಯೆ ಯುದ್ದಕ್ಕೂ ಮುಂಚೆ 10%ಗಿಂತಲೂ ಕಡಿಮೆ ಇತ್ತು. ಇರಾಕ್‍ನಲ್ಲಿರುವ ಕಚ್ಚಾ ತೈಲವನ್ನು ಲಪಟಾಯಿಸಲು ಅಮೆರಿಕ ಕೊಟ್ಟ ಸಬೂಬು “ಸದ್ದಾಂ ತೊಲಗಿಸಿ ಪ್ರಜಾತಂತ್ರ (“ವಾಸ್ತವವಾಗಿ ಪಾಶ್ಚಾತ್ಯ ಬಂಡವಾಳಶಾಹಿ ಪ್ರಜಾತಂತ್ರ”) ತೆರುತ್ತೇವೆ” ಎಂದು.

ಮಧ್ಯಪ್ರಾಚ್ಯ ಕಚ್ಚಾ ತೈಲದ ನಿಯಂತ್ರಣವನ್ನು ತಮ್ಮ ತಮ್ಮ ಬಹುರಾಷ್ಟ್ರೀಯ ಕಂಪನಿಗಳ ಒಡೆತನದಲ್ಲಿಯೇ ಇಟ್ಟುಕೊಳ್ಳಲು ಈಗ ಮತ್ತೆ ಅದೇ ಯುದ್ದ ರಾಗವನ್ನು ಇರಾನ್ ವಿರುದ್ಧ ಉಪಯೋಗಿಸುತ್ತಿದ್ದಾರೆ. ದಶಕಗಳಿಂದ ಮಧ್ಯಪ್ರಾಚ್ಯ ಏಶಿಯಾವನ್ನು ಯುದ್ದ ನಕ್ಷೆಯಂತೆ ಉಪಯೋಗಿಸುತ್ತಿರುವ ಪಾಶ್ಚಾತ್ಯ ಶಕ್ತಿಗಳು ಈಗ ಇರಾನ್ ಮೇಲೆ ಕಣ್ಣಿಟ್ಟಿದೆ. ಪುರಾತನ ಕಾಲದಿಂದಲೂ ದೀರ್ಘ ಮತ್ತು ಮಹತ್ತರ ಇತಿಹಾಸ ಹೊಂದಿರುವ ಇರಾನ್, ಪ್ರಪಂಚದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪಗಳು ಮತ್ತು ಪ್ರಪಂಚದ ಎರಡನೇ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರ. 1953ರಲ್ಲಿ ಅಮೆರಿಕ ಮತ್ತು ಬ್ರಿಟಿಷ್ ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ ಇರಾನ್ ದೇಶದ ಕಚ್ಚಾ ತೈಲ ನಿಕ್ಷೇಪಗಳ ರಾಷ್ಟ್ರೀಕರಣ ಮಾಡಲೆತ್ನಿಸಿದ ಮೊಹಮ್ಮೆದ್ ಮೊಸ್ಸಾದೇಘ್ನನ್ನು ಕಿತ್ತೊಗೆದು ತನ್ನ ಕೈಗೊಂಬೆ ಶಾಹ್ ರೆಜû ಪಲ್ಹಾವಿ ಯನ್ನು ಕೂರಿಸಿತು. ಶಾಹ್ ಆಡಳಿತ ಇರಾನಿನ ಜನರ ಮೇಲೆ ಅತ್ಯಂತ ಕ್ರೂರವಾಗಿತ್ತು. 1979 ಇಸ್ಲಾಮಿಕ್ ಕ್ರಾಂತಿಯ ಮೂಲಕ ಇರಾನಿನ ಜನತೆ ಶಾಹ್ ಮತ್ತು ತಮ್ಮ ದೇಶದಲ್ಲಿನ ಪಾಶ್ಚಾತ್ಯ ಹಸ್ತಕ್ಷೇಪವನ್ನು ತೊಲಗಿಸಿತು ಮತ್ತು ತನ್ನ ತೈಲ ಬಾವಿಗಳನ್ನು ಹಿಂಪಡೆಯಿತು. ಆಗಿನಿಂದಲೂ 40 ವರ್ಷಗಳ ಕಾಲ ಸರಕುಗಳು, ಔಷಧಿಗಳು, ಆರ್ಥಿಕ, ವೈಜ್ಞಾನಿಕ ನಿರ್ಬಂಧಗಳನ್ನು ಎದುರಿಸುತ್ತಾ ಬಂದಿದೆ.

ನಲವತ್ತು ವರುಷಗಳಿಂದ ಈ ನಿರ್ಬಂಧಗಳ ನಡುವೆಯೂ ಇರಾನ್ ಸಾಕಷ್ಟು ಸಾಧಿಸಿದೆ. ಪ್ರತಿರೋಧದ ಹೆಸರಿನಲ್ಲಿ ಇಸ್ಲಾಮಿಕ್ ಕ್ರಾಂತಿಯ ಆಶಯಗಳಿಗೆ ನಿಷ್ಠೆಯಿಂದ ದುಡಿಯುವ ಇರಾನಿಯನ್ ರೆವೊಲ್ಯೂಶನರೀ ಗಾರ್ಡ್ಸ್ ಸೇನೆ. ಕ್ಯೂಬ ನಂತರ ನಿರ್ಬಂಧಗಳ ಹೊರತಾಗಿಯೂ ಪ್ರಗತಿ ಸಾಧಿಸಿರುವುದೇ ಇರಾನಿನ ಬಹುದೊಡ್ಡ ಸಾಧನೆ. ಇರಾಕಿನ ದ್ವಂಸದ ನಂತರ ಅಲ್ಲಿನ ಸ್ಥಳೀಯ ನಾಯಕತ್ವವನ್ನು ಇರಾನ್ ಬೆಳೆಸಿದೆ. ಇಸ್ರೇಲ್ಗೆ ಸವಾಲೊಡ್ಡುವ ಲೆಬೆನನ್ ಹೆಜ್ ಬೊಲ್ಲ ಬೆಳೆಸಿದೆ, ಸೌದಿಗೆ ಸವಾಲೊಡ್ಡುವ ಹೌತಿ ಪ್ರತಿರೋಧವನ್ನು ಹುಟ್ಟು ಹಾಕಿದೆ ಇರಾನ್. ತನ್ನದೇ ಕ್ಷಿಪಣಿಗಳನ್ನು ತಯಾರಿಸುವುದೇ ಅಲ್ಲದೆ ಹೊರದೇಶಗಳ ವೈಜ್ಞಾನಿಕ ಸಹಾಯವಿಲ್ಲದೆ ಅಣು ವಿಜ್ಞಾನದಲ್ಲೂ ಬಹಳಷ್ಟು ಸಾಧಿಸಿದೆ. ಮುಖ್ಯವಾಗಿ ಇರಾನ್ ಏಳಿಗೆಯನ್ನು ಸಹಿಸಲಾಗದ ಸೌದಿ ಮತ್ತು ಇಸ್ರೇಲ್ ಅಮೆರಿಕದ ಯುದ್ದಕೋರ ಬಣವನ್ನು ಯುದ್ದಕ್ಕಾಗಿ ಪ್ರೇರೇಪಿಸುತ್ತಿದ್ದಾರೆ. ಇದರ ಸಲುವಾಗಿಯೇ ಒಬಾಮಾ ಆಡಳಿತ ಚೀನಾ, ರಶಿಯ, ಜರ್ಮನೀ, ಫ್ರಾನ್ಸ್, ಇರಾನ್ ಜೊತೆ ಮಾತುಕತೆ ನಡೆಸಿ Joint Comprehensive Plan of Action (JCPOA) ಒಪ್ಪಂದವನ್ನು 2015 ಜುಲೈ ತಿಂಗಳಲ್ಲಿ ಮಾಡಿಕೊಂಡಿತ್ತು. ಅದನ್ನು ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಏಕಪಕ್ಷೀಯವಾಗಿ ಮುರಿದು ಮತ್ತೆ ಯುದ್ದದ ಮಾತುಗಳನ್ನು ಆಡುತ್ತಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಣ ಈ ಬಿಕ್ಕಟ್ಟು 1979ರ ಬಿಕ್ಕಟ್ಟನ್ನು ನೆನಪಿಸುತ್ತಿದೆ.

ಹದಿನಾರು ವರ್ಷದ ಹಿಂದೆ ಕೋಲಿನ್ ಪೊವೆಲ್ ಹೇಗೆ ಸುಳ್ಳು ಹೇಳಿ ಇರಾಕ್ ವಿರುದ್ದದ ಯುದ್ದ ಶುರು ಮಾಡಿದ್ದಾರೋ ಹಾಗೆ ಇಸ್ರೇಲ್ನ ಬೆಂಜಮಿನ್ ನೆತನ್ಯಾಹು ಇರಾನ್ ಅಣು ಬಾಂಬ್‍ಗಳನ್ನು ತಯಾರಿಸುತ್ತಿದೆ ಎಂದು ವಿಶ್ವ ಸಂಸ್ಥೆಗೆ ಸುಳ್ಳು ಹೇಳಿ ಯುದ್ದಕ್ಕೆ ಸಜ್ಜಾಗುತ್ತಿದ್ದಾರೆ. ಜಾರ್ಜ್ ಬುಷ್ ಹೇಗೆ ಇರಾಕ್ ಅನ್ನು ಬೆದರಿಸಿ ದಾಳಿ ನೆಡೆಸಿದನೋ ಅದೇ ರೀತಿ ಟ್ರಂಪ್ ಇರಾನ್ ವಿರುದ್ದ ಬೆದರಿಕೆಗಳನ್ನು ಒಡ್ಡುತ್ತಿದ್ದಾನೆ. ಅಮೆರಿಕದ ಮಾಧ್ಯಮಗಳು ಕೂಡ (ಲಿಬರಲ್ ಪತ್ರಿಕೆಗಳು ಸೇರಿದಂತೆ) ಯುದ್ದವನ್ನು ಉತ್ತೇಜಿಸುವ ಪ್ರಚಾರವನ್ನೇ ಪತ್ರಿಕೋದ್ಯಮವನ್ನಾಗಿ ಮಾಡಿಕೊಂಡಿದೆ. ಈಗ ಅದು ಇರಾನಿನ ಮೇಲೆ ಕಡಿಮೆ ಇಳುವರಿ ಇರುವ ನಿರ್ದಿಷ್ಟ ಅಣು ಬಾಂಬ್ಗಳನ್ನು ಹಾಕಬೇಕು ಎಂಬ ಸಲಹೆಯನ್ನು ಟ್ರಂಪ್ ಆಡಳಿತಕ್ಕೆ ನೀಡುತ್ತಿದೆ. ಸೌದಿ, ಇಸ್ರೇಲ್, ಅಮೆರಿಕ ಒಂದು ಕಡೆಯಾದರೆ ಇರಾನ್, ರಶಿಯ, ಚೀನಾ, ಸಿರಿಯ, ಹಿeóïಬೊಲ್ಲ ಇನ್ನೊಂದು ಕಡೆ.

ಆದರೆ ಇರಾನ್ ಇವೆಲ್ಲದಕ್ಕೂ ಸಜ್ಜಾಗಿದೆ ಎಂದು ಸ್ಪಷ್ಟ ಸಂದೇಶ ಅಮೆರಿಕಗೆ ರವಾನಿಸಿದೆ. ತನ್ನ ಮೇಲೆ ದಾಳಿ ಆದಲ್ಲಿ ಅಮೆರಿಕ ಮಿಲಿಟರೀ ಬೇಸ್ ಇರುವ ತನ್ನ ಸುತ್ತಮುತ್ತಲಿನ ರಾಷ್ಟ್ರಗಳೆಲ್ಲವನ್ನು ಶತ್ರು ರಾಷ್ಟ್ರಗಳು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿಕೆ ಕೊಟ್ಟಿದೆ. ಕಾನೂನುಬಾಹಿರ ನಿರ್ಬಂಧಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಇರಾನ್ ಹೇಗೆ ಪುಟಿದೇಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಚೀನಾ ಮತ್ತು ರಶಿಯ ಕೂಡ ಬಲವಾಗಿ ಇರಾನ್ ಜೊತೆಗೆ ನಿಂತರೆ ಭಾರತ ಅಮೆರಿಕ ಮಾತುಗಳನ್ನು ಕೇಳಿ ಮೇ ತಿಂಗಳಿನಿಂದ ಇರಾನ್‍ನಿಂದ ತೈಲ ಆಮದು ನಿಲ್ಲಿಸಿದೆ. ಇರಾನ್ ವಿರುದ್ದ ಅಮೆರಿಕ ದಾಳಿ ಮಾಡಿದ್ದೆ ಆದಲ್ಲಿ ಅದರ ಪರಿಣಾಮ ಪ್ರಪಂಚದ ಎಲ್ಲ ದೇಶಗಳನ್ನು ತೀವ್ರ ಬಿಕ್ಕಟ್ಟಿಗೆ ತಳ್ಳುತ್ತದೆ. ತೈಲ ಬೆಲೆ ಗಗನಕ್ಕೇರುತ್ತವೆ. 1928 ರಲ್ಲಿ ಕಾಣಿಸಿಕೊಂಡಿದ್ದ ಆರ್ಥಿಕ ಕುಸಿತಕ್ಕಿಂತ ತೀವ್ರವಾಗಿರುತ್ತದೆ ಎಂದು ಆರ್ಥಿಕ ವಿಶ್ಲೇಷಕರು ಊಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...