Homeಮುಖಪುಟಕಾಲಾ ಬಣ್ಣ ಮತ್ತು ಸಂಕೇತಗಳಲ್ಲಿ ಅರಳುವ ರಾಜಕಾರಣ

ಕಾಲಾ ಬಣ್ಣ ಮತ್ತು ಸಂಕೇತಗಳಲ್ಲಿ ಅರಳುವ ರಾಜಕಾರಣ

- Advertisement -
- Advertisement -

ಖ್ಯಾತಿ ಮತ್ತು ಹಣ ಮಾಡುವ ಉದ್ದೇಶಗಳನ್ನಿಟ್ಟುಕೊಂಡು ಸಿನಿಮಾ ಇಂಡಸ್ಟ್ರಿಗೆ ಬರುವ ಜನರೇ ಅಧಿಕವಾಗಿರುವ ಈ ಸಂದರ್ಭದಲ್ಲಿ ತಮಿಳು ಚಿತ್ರ ನಿರ್ದೇಶಕ ಪ. ರಂಜಿತ್‍ರಂತವರು ಬಹಳ ಅಪರೂಪ. ರಜನಿಕಾಂತ್ ಅಭಿನಯದ `ಕಾಲಾ’ವನ್ನು ಪ ರಂಜಿತ್ ಪ್ರಜ್ಞಾವಂತಿಕೆಯಿಂದ ಮಾಡಿದ್ದಾರೆ. `ಕಾಲಾ’ ಸಿನಿಮಾ ನೋಡಿದಾಗ ನಿರ್ದೇಶಕನ ಬೌದ್ಧಿಕತೆ, ಸಾಮಾಜಿಕ ಬದ್ಧತೆ ಮತ್ತು ಆತನ ಸೈದ್ಧಾಂತಿಕ ರಾಜಕಾರಣ ಎದ್ದು ಕಾಣುತ್ತದೆ. ಪ ರಂಜಿತ್ ಕೇವಲ ರಾಜಕೀಯ ಸಿದ್ಧಾಂತಗಳ ಮೂಲಕ ಕಥೆ ಹೇಳದೆ, ತನ್ನ ರಾಜ್ಯ ಕೇರಳದ ಸಾಂಸ್ಕøತಿಕ ರಾಜಕಾರಣ ಮತ್ತು ಕೇರಳದ ಸ್ಥಳೀಯ ಸಮುದಾಯಗಳ ಪರಂಪರೆಯನ್ನೂ ಬಳಸಿಕೊಂಡಿದ್ದಾರೆ. ಅದರಲ್ಲೂ ಕೇರಳದ ಅಡಿಯನ್ ಸಮುದಾಯದ ಮೌಖಿಕ ಕಥನಗಳ ಬಗ್ಗೆ ರಂಜಿತ್‍ಗೆ ಅಪಾರ ಅರಿವಿರುವುದು ಕಂಡುಬರುತ್ತದೆ.
ಕಾಲಾ ಸಿನಿಮಾ ವರ್ತಮಾನದ ಇಂಡಿಯಾದ ಜನಚಳವಳಿಗಳ ಸೈದ್ಧಾಂತಿಕ ನಿಲುವು ಹೇಗಿರಬೇಕು ಎಂಬುದನ್ನು ನಿರೂಪಿಸುವ ಚಿತ್ರ. ಅನೇಕ ದೃಶ್ಯಗಳಲ್ಲಿ ಬುದ್ಧ, ಪೆರಿಯಾರ್, ಜ್ಯೋತಿಬಾಫುಲೆ, ಅಂಬೇಡ್ಕರ್ ಮಾಕ್ರ್ಸ್ ಸಿದ್ಧಾಂತಗಳು ಸಾಂಕೇತಿಕವಾಗಿ ಬಂದುಹೋಗುತ್ತವೆ. ಚಿತ್ರದ ಕೊನೆಗೆ ನಾಯಕ ಚಳವಳಿಯ ಕುರಿತು ಮಾತಾಡುವಾಗ ಬಾಬಾ ಸಾಹೇಬರು ಭಾಷಣ ಮಾಡುವ ದೃಶ್ಯವೊಂದು ಕಂಡೂಕಾಣದಂತೆ ಇಣುಕುತ್ತದೆ. ಕೇರಳದ ಆದಿವಾಸಿಗಳಾದ ಅಡಿಯನ್ನರ ಕಥನಗಳಲ್ಲಿನ ‘ಭೂಮಿ ನಮ್ಮ ಆಜನ್ಮಸಿದ್ದ ಹಕ್ಕು, ಅದು ನಮ್ಮ ತಾಯಿಯೂ ಕೂಡ’ ಎಂಬಂಥ ಮಾತುಗಳು ನಾಯಕನ ಮಾತುಗಳಲ್ಲಿ ಮತ್ತೆ ಮತ್ತೆ ಬರುತ್ತವೆ. ‘ಭೂಮಿ ನಿಮಗೆ ವ್ಯಾಪಾರ ಅಧಿಕಾರ, ಆದರೆ ನಮಗದು ಬದುಕು, ಒಂದು ಹಿಡಿ ಮಣ್ಣು ಕೂಡ ನಿಮಗೆ ದಕ್ಕಲು ಬಿಡುವುದಿಲ್ಲ. ಈ ನೆಲ ನನ್ನದು, ನಿಮ್ಮ ದೇವರೇ ಬಂದರೂ ಆ ದೇವರನ್ನೂ ಕೂಡ ಲೆಕ್ಕಿಸಲಾರೆ’ ಎಂದು ಕಾಲಾ ಎದೆಯುಬ್ಬಿಸಿ ಹೇಳುತ್ತಾನೆ. ಇದು ಕಮ್ಯುನಿಸ್ಟರ ಭೂಮಿ ಹೋರಾಟಗಳನ್ನು ನೆನಪಿಸುತ್ತದೆ.
ಮುಂಬೈನ ಧಾರಾವಿ ಸ್ಲಮ್ಮನ್ನು ವಶಪಡಿಸಿಕೊಳ್ಳಲು ಸ್ಥಳೀಯ ಶ್ರೀಮಂತ ಹವಣಿಸುವ ಸಂದರ್ಭದಲ್ಲಿ ಅಲ್ಲಿನ ಜನನಾಯಕ ಕಾಲಾ ಪ್ರತಿಭಟಿಸುವುದರ ಮೂಲಕ ಸಿನಿಮಾ ಪ್ರಾರಂಭವಾಗುತ್ತದೆ. ರಿಯಲ್ ಎಸ್ಟೇಟ್ ಮಾಫಿಯ ಮತ್ತು ಸ್ಥಳೀಯ ಸರ್ಕಾರದ ವಿರುದ್ಧ ಕಾಲಾ ಸಮರ ಸಾರುತ್ತಾನೆ. `ಕಾಲಾ’ದಲ್ಲಿ ಹಸಿರು, ನೀಲಿ, ಕೆಂಪು, ಕಪ್ಪು ಮತ್ತು ಕೇಸರಿ ಬಣ್ಣದ ಧ್ವಜಗಳು ಢಾಳಾಗಿ ಕಾಣಿಸಿಕೊಳ್ಳುತ್ತವೆ. ಶ್ರೀಕೃಷ್ಣ ಮತ್ತು ಶ್ರೀರಾಮ್ ಘೋಷಣೆಗಳು, ಹಿಂಸೆ, ಆಯುಧಗಳ ಬಳಕೆಯನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಶ್ರೀಮಂತನೊಬ್ಬ ಹೇಗೆ ಜನರೆಲ್ಲ ತನ್ನ ಅಡಿಯಾಳಾಗಿರಬೇಕು, ಅವರ ಅಧೀನತೆಯನ್ನು ಶಾಶ್ವತವಾಗಿಡಲು ಬೇಕಾದ ಕೋಮುವಾದ, ಫ್ಯಾಸಿಸಂನ್ನು ಹೇಗೆ ಬಳಸಬೇಕು ಎಂಬುದನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇಂತಹ ಜನವಿರೋಧಿ ರಾಜಕಾರಣದ ಪ್ರತಿನಿಧಿಯಾಗಿ ಶ್ರೀಹರಿದಾದ (ನಾನಾ ಪಾಟೇಕರ್) ಕಂಡುಬರುತ್ತಾನೆ. ಪ್ರಜ್ಞಾಪೂರ್ವಕವಾಗಿಯೇ ಪೊಲೀಸ್ ವ್ಯವಸ್ಥೆ ಫ್ಯಾಸಿಸಂನೊಂದಿಗೆ ಕೈ ಜೋಡಿಸುತ್ತಾ ದಮನಿತರನ್ನು ಸದೆಬಡಿಯುವ ಅತ್ಯಾಚಾರ ಮಾಡುವ, ಕೊಲ್ಲುವ ಚಿತ್ರಣಗಳನ್ನು ವಾಸ್ತವದ ನೆಲೆಯಲ್ಲಿ ತೋರಿಸಲಾಗಿದೆ. ಹಾಗಾಗಿ ಕಾಲಾ ಚಿತ್ರದ ವರ್ತಮಾನದ ಭಾರತದ ರಾಜಕಾರಣದ ಮೀನಿಯೇಚರ್‍ನÀಂತೆ ಕಾಣುತ್ತದೆ. ಹರಿದಾದನ ಪಟಾಲಂ ಗಣೇಶ ಚತುರ್ಥಿಯ ಆಚರಣೆ, ಅವರ ಪೋಸ್ಟರ್‍ಗಳಲ್ಲಿ
ಹರಿದಾದನ ಚಿತ್ರ ಮತ್ತು Im ಠಿuಡಿe ಠಿeಣಡಿioಣ, I ತಿiಟಟ ಛಿಟeಚಿಟಿ ಣhis ಛಿouಟಿಣಡಿಥಿ’ ಎಂಬ ಬರಹ ಕೇಸರಿ ಬಣ್ಣ ಸಮಕಾಲೀನ ರಾಜಕಾರಣವನ್ನು ಸಂಕೇತಿಸುತ್ತವೆ. ಚಳವಳಿಗಾರರ ಮೇಲೆ ಹಿಂಸಾತ್ಮಕ ದಾಳಿ ನಡೆಯುತ್ತಾ ಹೆಣಗಳು ಬೀಳುತ್ತಿದ್ದರೆ ಹರಿದಾದನ ಮನೆಯಲ್ಲಿ ಭಗವದ್ಗೀತೆ ಮತ್ತು ರಾಮಾಯಣದ ಪಾರಾಯಣ ನಡೆಯುತ್ತಿರುತ್ತದೆ. ಜೈಶ್ರೀರಾಮ್ ಮೊಳಗುತ್ತಿರುತ್ತದೆ. ಆಗ ಹರಿದಾದ ‘ಪೂಜೆಗೆ ಎಲ್ಲವನ್ನು ಅರ್ಪಿಸಿದ್ದೇವೆ, ದೇವರೂ ತೃಪ್ತಿಗೊಂಡಿದ್ದಾನೆ. ಆದರೆ ಕೊನೆಯದಾಗಿ ಒಂದೇ ಒಂದು ಮನುಷ್ಯನ ತಲೆ ಬೇಕಂತೆ ತಗಂಡು ಬಾ ಹೋಗು’ ಎಂದು ತನ್ನ ಹಿಂಬಾಲಕನಿಗೆ ಹೇಳುತ್ತಾನೆ.
ಧಾರಾವಿ ಸ್ಲಮ್ಮನ್ನು ಅಭಿವೃದ್ಧಿಪಡಿಸಲು ಬರುವ ಜಲೀನಳನ್ನು ಸ್ಲಮ್ಮಿನ ಜನರಾದ ತಮಗೆ ಯಾವ ಅನುಕೂಲಗಳು ಬೇಕು ಎಂದು ಕೇಳಿದಾಗ ಜನ ಕರೆಂಟು, ನೀರು, ವಸತಿ, ಕ್ರೀಡಾಂಗಣ ಕೇಳುತ್ತಾರೆಯೆ ವಿನಃ ನಮಗೊಂದು ದೇವಾಲಯ ಬೇಕೆಂದು ಅಪ್ಪಿತಪ್ಪಿಯೂ ಪ್ರಸ್ತಾಪಿಸುವುದಿಲ್ಲ. ಸೂಕ್ಷ್ಮ ಅಂಬೇಡ್ಕರ್‍ವಾದಿಯೊಬ್ಬನ ಪ್ರಜ್ಞಾವಂತಿಕೆಯಿದು. ಅಂಬೇಡ್ಕರ್ ಕಾಲಾರಾಮ ದೇವಸ್ಥಾನದ ಪ್ರವೇಶಿಕೆಯ ಸಂದರ್ಭದಲ್ಲಿ ಹೇಳುವ ‘ ದೇವಾಲಯ ಮತ್ತು ಧರ್ಮ ಅಸಮಾನತೆಯ ಕೂಪಗಳು, ನಮಗೆ ಬೇಕಿರುವುದು ಶಾಲೆ, ರಾಜ್ಯಸಭೆಗಳು ಲೋಕಸಭೆಗಳೆ ವಿನಃ ದೇವಾಲಯಗಳಲ್ಲ’ ಎಂಬ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಕೋಮುಪ್ರೇರಿತ ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕಾದ ಸೂಕ್ಷ್ಮತೆಗಳ ಕುರಿತ ಚಿತ್ರದ ಆಶಯ ಮನನೀಯ. ಮೊದಲ ಹಾಡಿನಲ್ಲಿ ಕೋಮುವಾದಿಗಳು ಮುಸ್ಲಿಮರನ್ನು ಬೆನ್ನಟ್ಟಿ ಬರುವಾಗ ನಾಯಕ ಅವರನ್ನು ರಕ್ಷಿಸುತ್ತಾನೆ. ಕಾಲಾನ ಸಂಭ್ರಮ ಮತ್ತು ಚಳವಳಿಯಲ್ಲಿ ಮುಸ್ಲಿಮರ ಪಾಲಿರುತ್ತದೆ. ಚಳವಳಿಯ ಒಗ್ಗಟ್ಟು ಒಡೆಯಲು ಮಸೀದಿಯೊಳಗೆ ಹಂದಿಮಾಂಸವನ್ನು ಹಾಕುವ ಮೂಲಕ ಧರ್ಮದ ಹೆಸರಿನಲ್ಲಿ ಉದ್ರಿಕ್ತರನ್ನಾಗಿ ಮಾಡುವ ತಂತ್ರವನ್ನು ಕೋಮುವಾದಿಗಳು ಮಾಡುತ್ತಾರೆ. ಇದನ್ನು ಅತ್ಯಂತ ಪ್ರಜ್ಞಾವಂತಿಕೆಯಿಂದ ನಿವಾರಿಸಿಕೊಳ್ಳುವ ನಾಯಕ ಸಂಘಟನೆಗೆ ಒಗ್ಗಟ್ಟು ಮತ್ತು ಸೂಕ್ಷ್ಮಗ್ರಹಿಕೆಗಳ ಬಗ್ಗೆ ಮನವರಿಕೆ ಮಾಡಿ ಚಳವಳಿಗೆ ತೊಡಗಿಸುತ್ತಾನೆ.
ಹರಿದಾದ ಮತ್ತು ಕಾಲಾ ನಡುವಿನ ಒಂದು ಸಂಭಾಷಣೆ ಗಮನ ಸೆಳೆಯುವಂತಹದ್ದು. ‘ಏನದು ಕಾಲಾ, ಕಪ್ಪುಬಣ್ಣ ಕಪ್ಪುಬಟ್ಟೆ ನೋಡೋಕೆ ಅಸಹ್ಯ’ ಎನ್ನುತ್ತಾನೆ. ‘ಬಿಳಿ ಶ್ರೇಷ್ಠ, ಕಪ್ಪು ಕೊಳಕು ನಿಮ್ಮ ದೃಷ್ಟಿಕೋನವೆ ಸರಿಯಿಲ್ಲ. ಕಪ್ಪು ಶ್ರಮಸಂಸ್ಕøತಿಯ ಸಂಕೇತ ಕಣೊ’ ಎನ್ನುವ ನಾಯಕನ ಮಾತು ಪೆರಿಯಾರರನ್ನು ನೆನಪಿಸುತ್ತದೆ. ಇಡೀ ಚಿತ್ರ ನಾಯಕನೆ ಬಂದು ಚಳವಳಿಯನ್ನು ಮುನ್ನಡೆಸಬೇಕಿಲ್ಲ ಎಲ್ಲರೂ ನಾಯಕರಾಗಬೇಕು ಎನ್ನುವ ಸತ್ಯವನ್ನು ಸೂಚಿಸುತ್ತದೆ. ಕಪು,್ಪ ಹಸಿರು, ಕೆಂಪು, ನೀಲಿ, ಬಣ್ಣಗಳೆಲ್ಲಾ ಸೇರಿ ಬಂಡವಾಳಶಾಹಿಯನ್ನು, ಕೋಮುವಾದವನ್ನು ಹಿಮ್ಮೆಟ್ಟಿಸುವ ಚಿತ್ರದ ಕ್ಲೈಮ್ಯಾಕ್ಸ್ ಕಾವ್ಯಾತ್ಮಕವಾಗಿದೆ. ಜೊತೆಗ ಹಿಂಸೆಯೆ ಪರಿಹಾರವಲ್ಲ ಎಂಬ ಬುದ್ಧ, ಬಸವ, ಮಂಡೇಲಾ, ಅಂಬೇಡ್ಕರ್ ಆಶಯದಂತೆ ಚಿತ್ರದ ಕೊನೆಯಲ್ಲಿ ಖಳನಾಯಕನ್ನು ಕೊಲ್ಲುವುದಿಲ್ಲ. ಚಿತ್ರದಲ್ಲಿ ಹೊಡೆದಾಟಗಳನ್ನು ಚಳವಳಿಯ ಅನಿವಾರ್ಯ ರಕ್ಷಣೆಯ ಭಾಗವೆಂಬಂತೆ ಚಿತ್ರಿಸಲಾಗಿದೆಯೆ ವಿನಃ ವಿಜೃಂಭಿಸಿಲ್ಲ.
ಚಿತ್ರದಲ್ಲಿ ವರ್ತಮಾನದ ಕಾರ್ಪೊರೇಟ್ ಆಡಳಿತದ ಹುಸಿ ಅಭಿವೃದ್ಧಿ, ಹುಸಿ ದೇಶಪ್ರೇಮವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಇಂಥ ಸಂದರ್ಭದಲ್ಲಿ ಎಲ್ಲರೂ ಸೈದ್ಧಾಂತಿಕ ಭಿನ್ನತೆಗಳಾಚೆ ಒಂದಾಗಿ ಅಪಾಯದಲ್ಲಿರುವ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಬೇಕಿದೆ ಎಂಬ ಸಂದೇಶ ಸಕಾಲಿಕ. ಚಳವಳಿಯ ಮೂಲಕ ಮಾತ್ರ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದೂ ಸಿನಿಮಾದ ಮೂಲಕ ಹೇಳಿದ್ದಾರೆ ಪ. ರಂಜಿತ್. ಇಜuಛಿಚಿಣe ಶಿಕ್ಷಿತರಾಗಿ, ಂgiಣಚಿಣe, ವಿಚಾರವಂತರಾಗಿ ಯೋಚಿಸಿ, ಔಡಿgಚಿಟಿize ಸಂಘಟಿತರಾಗಿ ಹೋರಾಡಿ ಎಂಬ ತತ್ವಗಳನ್ನು ಹಂತಹಂತವಾಗಿ ಸಾರುತ್ತದೆ.
ಸಿನಿಮಾದಲ್ಲಿ ಕೇವಲ ಪ್ರತಿಭಟನೆ ಹೋರಾಟಗಳೆ ಇವೆಯೆಂದು ಭಾವಿಸಬಾರದು. ಔಚಿತ್ಯಪೂರ್ಣವಾದ ಕೆಲವು ಭಾವುಕ ಸನ್ನಿವೇಶಗಳಿವೆ. ಕೇವಲ ಒಂದು ಸಾಮಾನ್ಯ ಕುಟುಂಬದಂತೆಯೆ ಕಾಲಾನ ಕುಟುಂಬವಿದೆ. ಜೊತೆಗೊಂದು ಕಂಟ್ರಿನಾಯಿಯೂ. ಸೆಲ್ವಿಯ ಸೊಸೆಯರ ಮಕ್ಕಳ ಮೊಮ್ಮೊಕ್ಕಳ ನಡುವಿನ ಬಾಂಧವ್ಯ ಕುಟುಂಬದಿಂದ ನಮ್ಮನ್ನು ಪ್ರತ್ಯೇಕಿಸುವುದಿಲ್ಲ. ಆಕರ್ಷಣೆಯೂ ಅಲ್ಲದ, ದೇಹದಾಸೆಯೂ ಅಲ್ಲದ ಕಾಲಾ ಮತ್ತು ಜಲೀನ ನಡುವಿನ ಉನ್ನತಪ್ರೇಮ, ಚಳವಳಿಯ ಸಂಗಾತಿಗಳಾದ ಲೆನಿನ್ ಪ್ರೇಮ ಅಲ್ಲಲ್ಲಿ ಕಥೆಗೆ ಪೂರಕವಾಗಿವೆ. ಹರಿದಾದನ ಮೊಮ್ಮಗಳ ಎರಡು ಮಾತುಗಳು; ‘ತಾತ ಆತ ಒಳ್ಳೆಯ ಮನುಷ್ಯ ದಯವಿಟ್ಟು ಆತನನ್ನು ಕೊಲ್ಲಬೇಡಿ’ ಮತ್ತು ‘ಆತನನ್ನು ಕೊಲ್ಲದೆ ಬಿಟ್ಟಿದ್ದಕ್ಕೆ ಥ್ಯಾಂಕ್ಸ್’ ಎನ್ನುವ ಮಾತುಗಳು ತೀವ್ರವಾಗಿ ಕಾಡುತ್ತವೆ. ದಾರಾವಿಗೆ ಬೆಂಕಿಬಿದ್ದು ಸುಟ್ಟು ಕರಕಲಾದ ಬಟ್ಟೆ ಮತ್ತು ಪುಸ್ತಕಗಳನ್ನು ತೋರಿಸಿ ‘ತಾತ ನಾಳೆ ಹೀಗೇ ಸ್ಕೂಲಿಗೆ ಹೋದರೆ ಒಳಗೆ ಬಿಡಿಸಿಕೊಳ್ಳುವುದಿಲ್ಲ’ ಎಂಬ ಕಾಲಾನ ಮೊಮ್ಮೊಗಳ ಮಾತು ಕಣ್ಣು ತೇವ ಮಾಡುತ್ತದೆ. ಚಿತ್ರದಲ್ಲಿನ ಕತ್ತಲು ಧಾರಾವಿಯ ಜನರ ಬದುಕನ್ನು ಸಂಕೇತಿಸುತ್ತದೆ.
ಇಷ್ಟು ಹೇಳಿದ ಮೇಲೆ ಈ ಸಿನಿಮಾಕ್ಕೆ ಮಿತಿಗಳು ದೋಷಗಳು ಇಲ್ಲವೆಂದಲ್ಲ. ಅಬ್ಬರದ ಸಂಗೀತದಲ್ಲಿ ಸಂಭಾಷಣೆ ಗೌಣವಾಗಿ ಮಾತು ಸರಿಯಾಗಿ ಕೇಳಿಸುವುದಿಲ್ಲ. ಬೇರೆ ಭಾಷೆಗೆ ಡಬ್ ಆದ ಕಾರಣ ಮೂಲಭಾಷೆಗೆ ಹೊಂದಿಕೆಯಾದ ದೇಹಭಾಷೆ ಮತ್ತು ಟೈಮಿಂಗ್ ಹೊಂದಾಣಿಕೆಯಾಗದೆ ಕಿರಿಕಿರಿಯಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ರಜನಿಕಾಂತ್ ಅಭಿನಯಿಸಬೇಕಿತ್ತು ಅನಿಸುತ್ತದೆ. ಇದು ಸಂಪೂರ್ಣ ನಿರ್ದೇಶಕನ ಸಿನಿಮಾ. ಹೆಂಡತಿ ಮತ್ತು ಮಗನನ್ನು ಕಳಕೊಂಡ ಮೇಲೆ ಹರಿದಾದನ ಮನೆಗೆ ಹೋದ ಕಾಲಾ ಒಂದು ಮಾತು ಹೇಳುತ್ತಾನೆ. ‘ನಾನು ಇಲ್ಲಿಗೆ ಬಂದದ್ದು ನಿನಗೆ ಸವಾಲು ಹಾಕಲು ಅಲ್ಲ. ಹೆಂಡತಿ ಮತ್ತು ಮಗನನ್ನು ಕಳಕೊಂಡರೂ ನಾನು ತಗ್ಗಿಲ್ಲ ನಿತ್ರಾಣಗೊಂಡಿಲ್ಲ ಎಂದು ನಿನಗೆ ತೋರಿಸಲು’ ಎಂದು. ಇದು ಒರಿಜಿನಲ್ಲಾಗಿ ಅಂಬೇಡ್ಕರರ ಧೀಮಂತಿಕೆ, ಅವರ ಬದುಕನ್ನು ಓದಿ ತಿಳಿದವರಿಗೆ ಬೇಗ ಅರ್ಥವಾಗುತ್ತದೆ. ರಜನಿಕಾಂತ್ ಅವರ ಸ್ಟಾರ್‍ಗಿರಿ ಮತ್ತು ಇಮೇಜನ್ನು ಪಕ್ಕಕ್ಕಿಟ್ಟು, ಅವರ ಇಮೇಜಿಗೆ ತಕ್ಕಂತೆ ಕಥೆಯನ್ನು ನಿರೂಪಿಸದೆ, ಕಥೆ ಬಯಸುವಂತೆ ರಜನಿಯನ್ನು ಬಗ್ಗಿಸಿದ ಕಾರಣ ಕಥೆಯ ಶಕ್ತಿಯು ಉಳಿದುಕೊಂಡಿದೆ. ಸ್ವಲ್ಪ ನಿಷ್ಠುರವಾಗಿ ಹೇಳುವುದಾದರೆ, ಕಾಲಾ ಪಾತ್ರದಿಂದ ರಜಿನಿಕಾಂತ್ ಸಹ ಕಲಿಯುವುದು ತುಂಬಾ ಇದೆ.

– ಆರಡಿ ಮಲ್ಲಯ್ಯ ಕಟ್ಟೇರ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...