Homeಅಂಕಣಗಳುಗೆದ್ದ ನಂತರವೇ ಗಡ್ಡಮೀಸೆ ಬೋಳಿಸೋದಾಗಿ ಟೋಫನ್‍ತಲೆ ಮೇಲೆ ಆಣೆ

ಗೆದ್ದ ನಂತರವೇ ಗಡ್ಡಮೀಸೆ ಬೋಳಿಸೋದಾಗಿ ಟೋಫನ್‍ತಲೆ ಮೇಲೆ ಆಣೆ

- Advertisement -
- Advertisement -

ಆಘಾತವಾಣಿ |

ನಮಸ್ಕಾರ, ಆಘಾತವಾಣಿಗೆ ಸ್ವಾಗತ, ಇದೀಗ ಮುಖ್ಯಾಂಶಗಳು. ಓದುತ್ತಿರೋರು ಅಟ್ಯಾಕ್ ಹನ್ಮಂತು

ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಳೆದ ಒಂದು ತಿಂಗಳಿನಿಂದ ಉರಿಬಿಸಿಲಿನಲ್ಲಿ ಓತ್ಲಾ ಹೊಡೆಯುತ್ತಿದ್ದ ‘ವಿಜೇಂದ್ರ ಸನ್ನಾಫ್ ಯಡ್ರಪ್ಪ’ನವರಿಗೆ ಚಾಮರಾಜಪೇಟೆಯ ‘ಹೇ ಶವ ಕೃಪ’ದ ವಯೋವೃದ್ಧರು ಟಿಕೆಟ್ ನಿರಾಕರಿಸಿದ್ದಾರೆ. ತನ್ನ ‘ಅಧಿಕೃತ’ ಮಗನಿಗೇ ಟಿಕೆಟ್ ಢಮಾರ್ ಅನ್ನಿಸಿದ ಈ ಬೆಳವಣಿಗೆಯಿಂದ ನೊಂದ ಯಡೂರಪ್ಪನವರು ಸೋಪಕ್ಕನ ಹಳೇ ಸೀರೆಯೊಂದನ್ನು ಎತ್ತಿಕೊಂಡು ಫ್ಯಾನಿಗೆಸೆದು ನೇಣು ಹಾಕಿಕೊಳ್ಳಲು ಇನ್ನೂ ಯತ್ನಿಸಿಲ್ಲ ಎಂಬ ಸಾಕಿಂಗ್ ನ್ಯೂಸ್ ಹೊರಬಿದ್ದಿದೆ.
< < < <
ಸಂವಿಧಾನ ಬದಲಿಸೋಕೇ ನಾವು ಅಲ್ಲಾಡಿಸಿಕೊಂಡು ಇಲ್ಲೀತನಕ ಬಂದಿದ್ದೇವೆ ಎಂದು ಮಿಯಾಂವ್ ಎಂದಿದ್ದ ಬಿಜೆಪಿಯ ‘ಅನಾಥಕುಮಾರ್ ಹೆಗಡೆ’ಯವರು ಇದ್ದಕ್ಕಿದ್ದಂತೆ ಮಂಗಮಾಯವಾಗಿ ಹೋಗಿದ್ದಾರೆ. ಮೊನ್ನೆ ತಾನೇ ಬಿಜೆಪಿ ನಾಯಕನ ಲಾರಿಯೊಂದು ತಮ್ಮ ಬೆಂಗಾವಲು ವಾಹನಕ್ಕೆ ಗುದ್ದಿದ್ದರಿಂದ ಆಮಶಂಕೆ ಬೇಧಿಯಾಗಿ ಸುಸ್ತಾಗಿದ್ದ ಅನಾಥಕುಮಾರ್.. ಹೋದಲ್ಲಿ ಬಂದಲ್ಲಿ ಕಯ ಕಯ ಎಂದು ನರಳಾಡುತ್ತ ಜನರಿಂದ ಕಪುಕ್ ತುಪುಕ್ ಎಂದು ಉಗಿಸಿಕೊಂಡು ಚರ್ಮದ ಅಲರ್ಜಿಯಿಂದಲೂ ಬಳಲುತ್ತಿದ್ದರು. ಜನರ ಉಗುಳಿನಿಂದ ಇನ್ಫೆಕ್ಷನ್ ಆಗಿರಬಹುದಾದ ಸಾಧ್ಯತೆಯಿದ್ದುದರಿಂದ ಇದಕ್ಕೆ ಚಿಕಿತ್ಸೆ ಪಡೆಯಲು ಅನಾಥಕುಮಾರ್, ನೈಜೀರಿಯಾ ದೇಶಕ್ಕೆ ಅಳುತ್ತ ನಡೆದುಕೊಂಡೇ ಹೋಗಿದ್ದಾರೆ ಎಂಬ ಗುಮಾನಿಗಳು ವ್ಯಕ್ತವಾಗಿವೆ.
< < < <
ಈಗಾಗಲೇ ತಮ್ಮ ಎರಡೂ ಕಾಲನ್ನು ಸ್ಮಶಾನದ ಗುಂಡಿಗೆ ಇಳಿಬಿಟ್ಟಿರುವ ಬೊಚ್ಚುಬಾಯಿ ತಾತ ‘ಅಸಾರಾಂ ಬಾಪು’ ಅವರು ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರದ ಕೇಸಿನಲ್ಲಿ ಕಳೆದ 5 ವರ್ಷಗಳಿಂದ ಜೈಲಿನಲ್ಲಿ ಶೌಚಾಲಯ ಸ್ವಚ್ಛ ಮಾಡುತ್ತ ಸಜೆಬಂಧಿಯಾಗಿದ್ದುದು ತಮಗೆಲ್ಲರಿಗೂ ತಿಳಿದಿದೆ. ಇದೀಗ ಈ ಅತ್ಯಾಚಾರದ ಕುರಿತಂತೆ ಕೋರ್ಟ್ ತೀರ್ಪು ಪ್ರಕಟವಾಗಿದ್ದು, ತಾತ ಅಸಾರಾಂ ಬಾಪು ತಪ್ಪಿತಸ್ಥ ಎಂದು ಸಾಬೀತಾಗಿದೆ. ಈ ಬಗ್ಗೆ ತೀರ್ಪು ಕೊಡುವಾಗ ರೊಚ್ಚಿಗೆದ್ದ ತೀರ್ಪುಗಾರರು.. ಈ ರೇಪಿಸ್ಟ್ ಮುದುಕನಿಗೆ ಸಾಯುವತನಕ ಪಕೋಡಮ್ಯಾನ್ ಫ್ರಾಡೇಂದ್ರನ ಎಲ್ಲ ಭಾಷಣಗಳನ್ನೂ ಕೇಳುವ ಮತ್ತು ನೋಡುವ ಭಯಾನಕ ಶಿಕ್ಷೆಯನ್ನು ಇನ್ನೂ ವಿಧಿಸಿಲ್ಲ ಎಂದು ವರದಿಯಾಗಿದೆ.
< < < <
ಈ ನಡುವೆ ಗುಜರಾತಿನ ತಮ್ಮ ಅಧಿಕೃತ ಹೆಂಡಿರು ಮಕ್ಕಳನ್ನು ಮರೆತು ಕರ್ನಾಟಕದ ತುಂಬೆಲ್ಲ ಅಂಡಲೆಯುತ್ತಿರುವ ಅಮಿತ್ ಬೋಡಪ್ಪನವರು ಬಿಜೆಪಿ ಪಾರ್ಟಿಗೂ ಮತ್ತು ಗಣಿರೆಡ್ಡಿಗೂ ಯಾವುದೇ ‘ವಿವಾಹೇತರ ಅಕ್ರಮ ಸಂಬಂಧ’ವಿಲ್ಲ ಎಂದು ಹೇಳಿದ್ದರು. ಆದರೂ ಸಹ ಬೋಡಪ್ಪನ ಮಾತಿಗೆ ಹಳೇಮೆಟ್ಟಿನಷ್ಟೂ ಬೆಲೆ ಕೊಡದ ಯಡೂರಪ್ಪನವರು ಗಣಿರೆಡ್ಡಿಯನ್ನು ಕಂಕುಳಲ್ಲಿ ಎತ್ತಿಕೊಂಡು ಕರ್ನಾಟಕದ ಮನೆಮನೆಯಲ್ಲಿ ಓಟಿನ ತಿರುಪೆ ಎತ್ತಲು ಮುಂದಾಗಿದ್ದಾರೆ. ಈ ಬಗ್ಗೆ ಸುದ್ದಿ ತಿಳಿದ ಅಮಿತ್ ಬೋಡಪ್ಪನವರು ಸಿಟ್ಟಿಗೆದ್ದು ಯಡೂರಪ್ಪನ ಮಗನ ಎಲೆಕ್ಷನ್ ಟಿಕೇಟಿಗೆ ಬಗನಿಗೂಟ ಹೆಟ್ಟಿದ್ದಾರೆಂದು ಬಲ್ಲ ಮೂಲಗಳಿಂದ ಇನ್ನೂ ತಿಳಿದು ಬಂದಿಲ್ಲ.
< < < <
ಇದೀಗ ಬಂದ ಸುದ್ದಿ. ಈ ಚುನಾವಣೆಯಲ್ಲಿ ಗೆದ್ದ ನಂತರವೇ ಗಡ್ಡಮೀಸೆ ಬೋಳಿಸುತ್ತೇನೆಂದು ಗಣಿರೆಡ್ಡಿಯ ಟೋಫನ್‍ತಲೆ ಮೇಲೆ ಆಣೆ ಮಡಗಿರುವ ‘ಸ್ತ್ರೀರಾಮುಲು’ ಇದ್ದಕ್ಕಿದ್ದಂತೆ ದೈವಭಕ್ತರಾಗಿದ್ದಾರೆ. ತಮ್ಮ ಮನೆಗೇ ಪೂಜಾರಿಗಳನ್ನು ಕರೆಸಿಕೊಂಡು ಗೋಪೂಜೆಯನ್ನು ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಹಸುವಿಗೆ ಅರಿಶಿಣ ಕುಂಕುಮ ಹಚ್ಚಲು ಹೇಳಿದ ಪೂಜಾರಿಯ ಮಾತು ಮುಗಿಯುವ ಮೊದಲೇ ಅರಿಶಿಣ ಕುಂಕುಮದ ಪಾತ್ರೆಯೆತ್ತಿಕೊಂಡ ಸ್ತ್ರೀರಾಮುಲು ಗೋಡೆಗೆ ಎನಾಮೆಲ್ ಪೇಂಟ್ ಬಳಿದಂತೆ ಹಸುವಿಗೆ ಬಳಿದಿದ್ದಾರೆ. ಪೂಜೆಯ ನಂತರ ಈ ಅನಿರೀಕ್ಷಿತ ಕುಂಕುಮದ ದಾಳಿಯಿಂದ ಬೆಚ್ಚಿಬಿದ್ದ ಹಸುವು ಸ್ತ್ರೀರಾಮುಲು ಮನೆಯಿದ್ದ ವಿರುದ್ಧ ದಿಕ್ಕಿಗೆ ಓಡಿಹೋಗಿದ್ದು ಇಷ್ಟೊತ್ತಿಗೆ ಬಹುಶಃ ರಾಜಸ್ಥಾನ ತಲುಪಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
< < < <
ಬಿಜೆಪಿ ಪಕ್ಷದ ಅನಧಿಕೃತ ಕಾನ್ಸ್‍ಟೇಬಲ್‍ಗಳಂತೆ ಕೋಮುಗಲಭೆಗಳು, ಬಂದ್, ಪ್ರತಿಭಟನೆಗಳಲ್ಲಿ ಗುಂಪುಗುಂಪಾಗಿ ಧುಮುಕಿ ಜೈಲುಪಾಲಾಗುತ್ತಿದ್ದ ‘ಪಿಲ್ಲವ ಸಮುದಾಯದ’ ವೀರಸೈನಿಕರಿಗೆ ಈ ಬಾರಿ ಬಿಜೆಪಿ ಪಂಗನಾಮ ಎಳೆದಿದೆ. ‘ಪಿಲ್ಲವ ಸಮುದಾಯದ’ ಯಾವೊಬ್ಬ ಗಂಡಸೂ ಮನೆಯಲ್ಲಿ ಇರಲು ಬಿಡದೆ, ಎಲ್ಲರನ್ನೂ ಸಾಮೂಹಿಕವಾಗಿ ಜೈಲಿಗೆ ಸೇರಿಸಿ ಗಿನ್ನೆಸ್ ದಾಖಲೆ ಬರೆಯಲು ಯತ್ನಿಸುತ್ತಿರುವ ಬಿಜೆಪಿಯ ಕೃಶಕಾಯ ಎದೆಯ ಮೇಲೆ ‘ಪಿಲ್ಲವರು’ ಕಾಲೆತ್ತಿ ಮಡಗಿದ್ದಾರೆ. ಯೂಸ್ ಮಾಡಿ ಬಿಸಾಕಲು ನಮ್ಮನ್ನೇನು ಕಾಂಡೋಮ್ ಎಂದುಕೊಂಡಿದ್ದೀರ ಎಂದು ರೊಚ್ಚಿಗೆದ್ದಿರುವ ‘ಪಿಲ್ಲವರ’ ಆಕ್ರೋಶದ ಹಿಂದೆ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದ ಬಿಜೆಪಿಯ ದೌಲತ್ತಿದೆ ಎಂಬುದು ತಿಳಿದುಬಂದಿದೆ.
< < < <
ಅತ್ತಾಗೂ ಇಲ್ಲ, ಇತ್ತಾಗೂ ಇಲ್ಲದ ಉಪರಾಷ್ಟ್ರಪತಿ ‘ಪೆಂಕಯ್ಯ ನಾಯ್ಡು’ ಅವರು ‘ಭಾರತದಲ್ಲಿ ಮಹಿಳೆಯರ ಮೇಲೆ ಗೌರವ ಕಡಿಮೆಯಾಗಲು ಬ್ರಿಟಿಷರೇ ಕಾರಣ’ ಎಂದು ಹೇಳಿದ್ದಾರೆ. ಬ್ರಿಟಿಷರು ಬರುವುದಕ್ಕೂ ಮೊದಲು ಭಾರತ ದೇಶದಲ್ಲಿ ವಿಧವೆಯರನ್ನು ಗಂಡನ ಚಿತೆಯೊಳಗೆ ತಳ್ಳಿ ಸುಟ್ಟುಹಾಕುವ ಅದ್ಭುತ ಸತಿಸಹಗಮನ ಪದ್ಧತಿ, ದೇವರ ಹೆಸರಿನಲ್ಲಿ ದಲಿತ ಮಹಿಳೆಯರನ್ನು ವೇಶ್ಯಾವಾಟಿಕೆಗೆ ನೂಕುತ್ತಿದ್ದ ದೇವದಾಸಿ ಪದ್ಧತಿಯಂತಹ ಅತ್ಯದ್ಭುತ ಪದ್ಧತಿಗಳಿದ್ದವು. ಬ್ರಿಟಿಷರು ಬಂದು ಇವೆಲ್ಲ ಅತ್ಯುತ್ತಮ ಪದ್ಧತಿಗಳನ್ನು ನಿಲ್ಲಿಸಿ ಮಹಿಳೆಯರಿಗೆ ಅಗೌರವ ಉಂಟು ಮಾಡಿದರೆಂದು ಪೆಂಕಯ್ಯನವರು ಇನ್ನೂ ಹೇಳಿಲ್ಲವೆಂದು ಬಲ್ಲ ಮೂಲಗಳು ಹೇಳಿವೆ.
< < < <
ನೋಟ್ ಬ್ಯಾನ್ ಮೂಲಕ ಲಕ್ಷಾಂತರ ಕೋಟಿ ಕಪ್ಪುಹಣವನ್ನು ಹೊರತೆಗೆಯಲು ಯತ್ನಿಸಿ ಅಂಡುಸುಟ್ಟ ಬೆಕ್ಕಿನಂತಾಗಿರುವ ಪಕೋಡೇಂದ್ರರ ಅಧ್ವಾನಗಳಿಗೆ ಇಂದಿಗೂ ಸಹ ಭಾರತದ ಎಟಿಎಂಗಳಲ್ಲಿ ಹಣವಿಲ್ಲದಂತಾಗಿದೆ. ಇದನ್ನು ಸರಿಪಡಿಸಲು ಎಟಿಎಂಗಳಲ್ಲಿ ಖೋಟಾನೋಟುಗಳನ್ನು ತುಂಬಿ ಜನರ ಹಣೆಗೆ ಪಂಗನಾಮ ಎಳೆಯುವ ಪ್ರಯತ್ನ ಉತ್ತರ ಭಾರತದಿಂದ ವರದಿಯಾಗಿದೆ. ಬರೇಲಿಯ ಎಟಿಎಂಗಳಲ್ಲಿ ಹಣ ಪಡೆಯಲು ಹೋದ ಜನರ ಕೈಗೆ ಖೋಟಾನೋಟುಗಳು ತುಪತುಪನೆ ಉದುರಿದ್ದು, ಜನರು ಪಕೋಡೇಂದ್ರನ ನೋಟ್‍ಬ್ಯಾನ್ ಸಾಹಸವೇ ಇವೆಲ್ಲ ಕಾಮಿಡಿಗಳಿಗೆ ಕಾರಣವೆಂದು ಪಕೋಡೇಂದ್ರನ ಮೇಲೆ ಮಾಟಮಂತ್ರ ಮಾಡಿಸಿಯಾದರೂ ಸರಿ ದೇಶದಿಂದ ಓಡಿಸಬೇಕೆಂದು ಕೇರಳದ ಮಾಂತ್ರಿಕರನ್ನು ಹುಡುಕುತ್ತಿದ್ದಾರೆ ಎಂಬ ಘನಘೋರ ಸತ್ಯ ಇನ್ನೂ ಬಯಲಾಗಿಲ್ಲ.
< < < <
ಇದೆಲ್ಲದರ ನಡುವೆ ಕುಖ್ಯಾತ ನಟ ‘ಸಾಯಿಗುಮಾರ್’ ಅವರಿಗೆ ಬಿಜೆಪಿ ಪಕ್ಷವು ಟಿಕೇಟನ್ನು ಕೊಟ್ಟಿದ್ದು, ಇದಕ್ಕೆ ಕಾರಣವೇನೆಂದು ಕೆದಕಿದಾಗ ಆಘಾತಕಾರಿ ವಿಷಯಗಳು ಹೊರಬಂದಿವೆ. ಟಿಕೇಟ್ ಕೇಳಲು ಕೈಯಲ್ಲಿ ಲಾಂಗ್ ಹಿಡಿದು ಸೀದ ‘ಹಾರೆಸ್ಸೆಸ್’ ಮುದುಕರ ಕೊಂಪೆಗೆ ನುಗ್ಗಿದ್ದ ಸಾಯಿಗುಮಾರ್ ಅವರು ಅಲ್ಲಿದ್ದ ಮಿಟುಕಲಾಡಿ ಮುದುಕರ ಸೊಂಟದ ಮೇಲೆ ಲಾಂಗ್ ಇಟ್ಟು, ಟಿಕೇಟ್ ಕೊಡ್ತೀರೋ, ಇಲ್ಲಾ ಸೊಂಟ ಕುಯ್ಯಲೋ ಎಂದು ಆವಾಜ್ ಹಾಕಿದ್ದರಂತೆ. ಐಟಂ ಉಳಿದರೆ ಸಾಕೆಂದು ಹಾರೆಸ್ಸೆಸ್ ಮುದುಕರು ಸಾಯಿಗುಮಾರ್‍ಗೆ ಟಿಕೇಟ್ ಕೊಟ್ಟು, ‘ವದಲೇರಾ ದೊಂಗ ನಾ ಕೊಡಕಾ’ ಎಂದು ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆಂದು ಇನ್ನೂ ತಿಳಿದುಬಂದಿಲ್ಲ.
< < < <
ಭಾರತೀಯ ಜನ ಪಕ್ಷದ ಒನ್ ಅಂಡ್ ಓನ್ಲಿ ಗಂಡಸಾಗಿರುವ ಸೋಪಕ್ಕನವರು ಈ ಸಲ ಟಿಕೇಟ್ ಸಿಗದೆ ಅಬ್ಬೇಪಾರಿಯಂತಾಗಿ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ‘ಯಾಕೆ ಸೋಪ, ಏನಾಯ್ತು ನಿಂಗೆ, ಯಾಕೆ ಹೀಗೆ ತಲೆಕೆದರಿಕೊಂಡು ಕುಂತಿದ್ದೀಯ’ ಎಂದು ಸಮಾಧಾನಪಡಿಸಲು ಹೋದ ಯಡ್ರಪ್ಪನವರ ತೊಡೆಗೆ ಸೋಪಕ್ಕನವರು ಬಲವಾಗಿ ಅಗಿದಿರುವ ಸಿಸಿಟಿವಿ ದೃಶ್ಯಗಳು ನಮಗೆ ಲಭ್ಯವಾಗಿವೆ. ಕನಿಷ್ಟ ಪಕ್ಷ 250 ಗ್ರಾಂನಷ್ಟು ಮಾಂಸವನ್ನು ಕಿತ್ತಿರುವ ಸೋಪಕ್ಕನವರು ನಂತರ ಯಡ್ರಪ್ಪನವರ ಕುತ್ತಿಗೆಗೆ ಬಾಯಿ ಹಾಕಲು ಯತ್ನಿಸಿದ್ದಾರೆ. ಆಗ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್‍ಗಳು ಸೋಪನ ಕಪ್ಪಾಳಕ್ಕೆ ಚಟೇರ್-ಪಟೇರ್ ಎಂದು ಬಡಿದು ಯಡ್ರಪ್ಪನವರ ಪ್ರಾಣವನ್ನು ಕಾಪಾಡಿದ್ದಾರೆಂದು ಇನ್ನೇನು ನಮಗೆ ಸುದ್ದಿ ಲಭಿಸಲಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮುಂದಿನ ವಾರ ಸಿಗೋಣ. ಟೇಕ್ ಕೇರ್ ಬೈ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....