Homeಸುಳ್ಳಪ್ಪೋ ಸುಳ್ಳುಫೇಕ್ ನ್ಯೂಸ್ ಫ್ಯಾಕ್ಟರಿಗೆ ನಮೋ ಆ್ಯಪ್ ಶ್ರೀರಕ್ಷೆ!

ಫೇಕ್ ನ್ಯೂಸ್ ಫ್ಯಾಕ್ಟರಿಗೆ ನಮೋ ಆ್ಯಪ್ ಶ್ರೀರಕ್ಷೆ!

- Advertisement -
- Advertisement -

ಚುನಾವಣೆ ಸಮರದಲ್ಲಿ ಸುಳ್ಳು ಸಹಜ. ಆದರೆ ಸಾಮಾಜಿಕ ಜಾಲತಾಣಗಳ ಬಳಕೆ ಪ್ರಮಾಣ ಹೆಚ್ಚಾದಂತೆಲ್ಲ ಸುಳ್ಳುಗಳ ಮಹಾಪೂರವೇ ಹರಿದು ಬರುತ್ತಿದ್ದು ರಾಜಕೀಯ, ಏಧರ್ಮಕ್ಕೆ ಸಂಬಂಧಿಸಿದ ಯಾವ ಸುದ್ದಿಯನ್ನೂ ಪರೀಕ್ಷಿಸದೇ ನಂಬುವಂತೆಯೇ ಇಲ್ಲ.
ಅದಿರಲಿ, ಸರ್ಕಾರವೇ ಇಂತಹ ಫೇಕ್ ಫ್ಯಾಕ್ಟರಿಗಳನ್ನು ಪೋಷಿಸತೊಡಗಿದರೆ, ದೇಶದ ಪ್ರಧಾನಿಯೇ ಇಂತಹ ಸುಳ್ ಕಾರ್ಖಾನೆಗಳನ್ನು ಪ್ರಮೋಟ್ ಮಾಡತೊಡಗಿದರೆ ಅದಕ್ಕಿಂತ ನಾಚಿಕೆಗೇಡು ಬೇರೆನಿದೆ?
ಕಳೆದ ತಿಂಗಳು ಸಮರ್ಥ ಬನ್ಸಾಲ್ ಎಂಬ ಪರ್ತಕರ್ತರು ಈ ಫೇಕ್ ಫ್ಯಾಕ್ಟರಿಗಳ ಕುರಿತು ಒಂದು ತನಿಖಾ ವರದಿ ಪ್ರಕಟಿಸಿದರು. ಹೆಚ್ಚುತ್ತಿರುವ ಫೇಕ್ ಸ್ಟೋರಿಗಳು ಮತ್ತು ಸರ್ಕಾರದ ನಡುವೆ ಲಿಂಕ್ ಇರುವುದನ್ನು ಅವರು ಎಳೆಎಳೆಯಾಗಿ ತೋರಿಸಿದ್ದರು. ಪ್ರಧಾನಿಯ ನಮೋ ಆ್ಯಪ್ ಮೂಲಕ ಸುಳ್ಳು ಸುದ್ದಿಗಳು, ಕುಚೋದ್ಯಗಳು ಹರಿದಾಡುವುದನ್ನು ಬನ್ಸಾಲ್ ತೋರಿಸಿದರು.
ನಮೋ ಆ್ಯಪ್‍ನ ‘ಮೈ ನೆಟ್‍ವರ್ಕ್’ ವಿಭಾಗದಲ್ಲಿ 15 ಪ್ರಮೋಟೆಡ್ ಅಕೌಂಟುಗಳಿವೆ, ಅದರಲ್ಲಿ ಫೇಕ್ ಫ್ಯಾಕಟ್ರಿ ಎಂದೇ ಕುಖ್ಯಾತಿ ಪಡೆದಿರುವ ‘ದಿ ಇಂಡಿಯನ್ ಐ’ ಕೂಡ ಇದೆ. ಬಳಕೆದಾರರು ಇದನ್ನು ಫಾಲೋ ಮಾಡದೇ ಇದ್ದಾಗಲೂ ಇದರ ಪೋಸ್ಟ್‍ಗಳು ಅವರ ‘ಮೈ ನೆಟ್‍ವರ್ಕ್’ ಫೀಡರ್‍ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.

ಕೇಜ್ರಿವಾಲಾ ದೇಶದ್ರೋಹಿಯಂತೆ!
ಫೇಸ್‍ಬುಕ್ ಪೇಜ್, ಟ್ವಿಟರ್, ವೆಬ್‍ಸೈಟ್- ಹೀಗೆ ಸಾಮಾಜಿಕ ಜಾಲತಾಣದ ಎಲ್ಲ ಸ್ತರಗಳಲ್ಲೂ ಇರುವ ‘ದಿ ಇಂಡಿಯನ್ ಐ’ ಎಂತಹ ಕುಚೋದ್ಯ ಮಾಡುತ್ತದೆ ಎಂಬುದಕ್ಕೆ ಈ ಉದಾಹರಣೆ ನೋಡಿ. ವಿರೋಧ ಪಕ್ಷಗಳ ಮಹಾಘಟಬಂಧನ್ ಸಮಾವೇಶದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಪಾಕಿಸ್ತಾನದ ಪರ ಮಾತಾಡಿದರು ಎಂದು ಈ ಇಂಡಿಯನ್ ಐ ಸುಳ್ ಸುದ್ದಿ ಹರಡಿತ್ತು. ‘ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ತೊಂದರೆ’ ಎಂಬರ್ಥದಲ್ಲಿ ಕೇಜ್ರಿವಾಲ ಮಾತಾಡಿದರು ಎಂದಿತ್ತು. ಅದಕ್ಕಾಗಿ ಅವರನ್ನು ದೇಶದ್ರೋಹಿ ಎಂದು ‘ಆರ್ಡರ್’ ಅನ್ನೂ ಪಾಸ್ ಮಾಡಿಬಿಟ್ಟಿತ್ತು.
ಆದರೆ ಆಗಲೇ ಅಲ್ಟ್‍ನ್ಯೂಸ್ ಇಂಡಿಯನ್ ಐ ಹಾಕಿರುವ ವಿಡಿಯೋ ತಿರುಚಿದ್ದು ಎಂದು ಸಾಬೀತು ಮಾಡಿತ್ತು. ‘ಮೋದಿ ಮತ್ತು ಶಾ ಮತ್ತೆ ಅಧಿಕಾರಕ್ಕೆ ಬಂದರೆ ದೇಶ ಉಳಿಯಲಾರದು’ ಎಂಬ ಕೇಜ್ರಿವಾಲರ ಮಾತನ್ನು ತಿರುಚಲಾಗಿತ್ತು. ‘ದೇಶ’ ಎಂದಿರುವಲ್ಲಿ ‘ಪಾಕಿಸ್ತಾನ’ ಎಂದು ಸೇರಿಸಲಾಗಿತ್ತು! ಇಂತಹ ಅನಾಹುತ ಮಾಡುವ ಗುಂಪಿಗೆ ನರೇಂದ್ರ ಮೋದಿಯವರ ಆ್ಯಪ್ ಸಪೋರ್ಟು ಮಾಡುತ್ತಿದೆ.
ಗುಜರಾತ್ ಲಿಂಕ್
ಅಲ್ಟ್‍ನ್ಯೂಸ್ ಕಳೆದ ಸೆಪ್ಟೆಂಬರ್‍ನಲ್ಲಿ ಈ ಇಂಡಿಯನ್ ಐಗಿರುವ ಗುಜರಾತ್ ಲಿಂಕನ್ನು ಬಯಲು ಮಾಡಿತ್ತು. ಗುಜರಾತ್ ಮೂಲದ ಸಿಲ್ವರ್ ಟಚ್ ಟೆಕ್ನಾಲಜೀಸ್ ಕಂಪನಿಗೂ ಇದಕ್ಕೂ ಸಂಬಂಧವಿದೆ. ಈ ಸಿಲ್ವರ್ ಟಚ್ ಟೆಕ್ನಾಲಜಿ ಸಂಸ್ಥೆಯೇ ನಮೋ ಆ್ಯಪ್ ರೂಪಿಸಿದೆ! ಈ ಕಂಪನಿಯ ಸರ್ವರ್‍ಗಳ ಮೂಲಕವೇ ಇಂಡಿಯನ್ ಐ ಹಾಸ್ಟ್ ಮಾಡಲಾಗುತ್ತಿತ್ತು. ಅಲ್ಟ್‍ನ್ಯೂಸ್ ತನಿಖೆಯ ನಂತರ ಇಂಡಿಯನ್ ಐ ಐಪಿ ಅಡ್ರೆಸ್ ಬದಲು ಮಾಡಲಾಗಿತು.
ಇದೇ ಇಂಡಿಯನ್ ಐ ಕೊಲ್ಕೊತ್ತಾದ ಮಹಾಘಟಬಂಧನ್ ರ್ಯಾಲಿಯಲ್ಲಿ ಯಾರೊಬ್ಬರೂ ‘ಭಾರತ್ ಮಾತಾ ಕಿ ಜೈ’ ಅನ್ನಲಿಲ್ಲ ಎಂದು ಸುಳ್ಳು ಹರಡಿತ್ತು. ಇದನ್ನೇ ಅಮಿತ್ ಶಾ ತಮ್ಮ ಭಾಷಣಗಳಲ್ಲಿ ಹೇಳಿದ್ದರು. ಆದರೆ ರ್ಯಾಲಿಯ ಕೊನೆಯಲ್ಲಿ ಭಾರತ್ ಮಾತಾ ಕಿ ಜೈ, ಜೈ ಹಿಂದ್, ವಂದೇ ಮಾತರಂ ಘೋಷಣೆಗಳನ್ನು ಹೇಳಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ಹೀಗೆ ಬರೀ ಸುಳ್ಳು, ಕುಚೋದ್ಯವನ್ನೇ ಮಾಡುವ ಇಂತಹ ನೂರಾರು ಗುಂಪುಗಳಿವೆ. ಆದರೆ, ಪ್ರಧಾನಿಯವರ ನಮೋ ಆ್ಯಪ್ ಇಂಥವನ್ನು ಬೆಂಬಲಿಸುತ್ತದೆ ಎನ್ನುವ ವಿಷಯ ಅಸಹ್ಯಕರವಾದುದು.
ಪ್ರಧಾನಿಯೇ ಒಬ್ಬ ಮಹಾ ಸುಳ್ಳುಗಾರನಾಗಿರುವಾಗ, ಸುಳ್ಳುಗಲೇ ಅವರ ಬಂಡವಾಳವಾಗಿರುವಾಗ ಇಂಥದ್ದೆಲ್ಲ ನಡೆಯದೇ ಇರುತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...