Homeಅಂಕಣಗಳುಸ್ವಾತಂತ್ರ್ಯ ಸಿಗಲು ನೆಹರು ಕೊಡುಗೆಯೇ ಇಲ್ಲವೇ ಮೋದೀಜಿ?

ಸ್ವಾತಂತ್ರ್ಯ ಸಿಗಲು ನೆಹರು ಕೊಡುಗೆಯೇ ಇಲ್ಲವೇ ಮೋದೀಜಿ?

- Advertisement -
- Advertisement -

ಮಿಥ್ಯ: ಸ್ವಾತಂತ್ರಯ ಸಿಗಲು ನೆಹರೂ ಕೊಡುಗೆ ಏನಿಲ್ಲ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿದ್ದರು. ಬಿಜೆಪಿಯ ಐಟಿ ಸೆಲ್ ಕೂಡ ನೆಹರು ಕುರಿತು ಸಾಕಷ್ಟು ಫೇಕ್ ಸ್ಟೋರಿಗಳನ್ನು ಹರಡುತ್ತಲೇ ಬಂದಿದೆ.

ಸತ್ಯ: ಇವತ್ತು ಖರೀದಿಸಿದ ಮಾಧ್ಯಮಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು, ಜವಾಹರಲಾಲ್ ನೆಹರೂ ಕುರಿತು ಏನೆಲ್ಲ ಸುಳ್ಳುಗಳನ್ನು ಹಬ್ಬಿಸಲು ಯತ್ನಿಸುತ್ತಿದ್ದರೂ, ನೆಹರೂ ಕೊಡುಗೆ ಈ ದೇಶಕ್ಕೆ ಅಪಾರ ಎಂಬುದನ್ನು ಅವರಿಂದ ಮುಚ್ಚಿಡಲಾಗುತ್ತಿಲ್ಲ. 1964ರಲ್ಲಿ ನೆಹರೂ ಮಡಿದಾಗ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು ‘ಆಧುನಿಕ ಭಾರತದ ನಿಮ್ರಾತೃ’ ಎಂದು ಬಣ್ಣಿಸುತ್ತದೆ. ‘ದಿ ಎಕನಾಮಿಸ್ಟ್’ ಪತ್ರಿಕೆಯು ‘ನೆಹರೂ ಇಲ್ಲದ ಜಗತ್ತು’ ಎಂಬ ಕವರ್ಸ್ಟೋರಿಯನ್ನು ಪ್ರಕಟಿಸುತ್ತದೆ. ಆ ಹೊತ್ತಿಗಾಗಲೇ ನೆಹರೂ ತೃತೀಯ ರಾಷ್ಟ್ರಗಳಲ್ಲಿ ಹೊಸ ಭರವಸೆ ಮೂಡಿಸಿದ್ದರು.

ಸಂಸತ್ತಿನಲ್ಲಿ ಇಂತಹ ನೆಹರೂ ಕುರಿತು ಮಾತನಾಡುವ ನಮ್ಮ ದಿ ಗ್ರೇಟ್ ಪ್ರಧಾನ ಮಂತ್ರಿಯವರು, ‘ಸ್ವಾಂತಂತ್ರ್ಯ ಹೋರಾಟಕ್ಕೆ ನೆಹರೂ ಕೊಡುಗೆ ಏನಿಲ್ಲ’ ಎಂದು ಮೂರ್ಖನಂತೆ ಮಾತಾಡುತ್ತಾರೆ. ಹಾಗಾದರೆ ಮೋದಿಯವರ ಆದರ್ಶಗಳಾದ ಹೆಡಗೆವಾರ್, ಸಾವರ್ಕರ್, ಗೋಳ್ವಾಲ್ಕರ್-ಈ ತರಿವಳಿಗಳ ಕೊಡುಗೆ ಏನು? ಇವರು ಪುಟ್ಟಾಪೂರಾ ಬ್ರಿಟಿಷರ ಚೇಲಾಗಳಂತೆ ವರ್ತಿಸಿದ್ದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಅದಿರಲಿ, ಇವರ ಕುರಿತು ಮೋದಿ ಸಾಹೇಬರೇಕೆ ಮಾತೇ ಆಡಲ್ಲ? ಈ ತ್ರಿವಳಿಗಳನ್ನು ಆರೆಸ್ಸೆಸ್ ಆರಾಧಿಸುತ್ತದೆ, ಮೋದಿಗೂ ಕೂಡ ಈ ಮೂವರು ಆದರ್ಶರೇ. ಬಟ್, ಬಾಹ್ಯವಾಗಿ ಮೋದಿ ಎಂದೂ ಇವರ ಪರ ಮಾತಾಡುತ್ತಿಲ್ಲ. ಮಾತಾಡುವ ಧಮ್ಮೂ ಇಲ್ಲ. ಯಾಕೆಂದರೆ ಈ ಮೂವರೂ ಮೋದಿಯಷ್ಟೇ ದೇಶದ್ರೋಹಿಗಳಾಗಿದ್ದರು!

ಹೀಗಾಗಿ ಐದು ವರ್ಷಗಳಲ್ಲಿ ನೀವೇನು ಮಾಡಿದಿರಾ ಎಂಬ ಪ್ರಶ್ನೆಗೆ ಉತ್ತರಿಸುವ ಯೋಗ್ಯತೆಯನ್ನೇ ಕಳೆದುಕೊಂಡಿರುವ ಪ್ರಧಾನಿ, ನೆಹರೂ ಈ ದೇಶಕ್ಕೆ ಏನು ಮಾಡಿದರು, ಕಾಂಗ್ರೆಸ್ ಈ ದೇಶಕ್ಕೆ ಏನು ಮಾಡಿತು ಎಂದು ವಿಷಯಾಂತರ ಮಾಡುತ್ತಿದ್ದಾರೆ. ನೆಹರು ವ್ಯಕ್ತಿತ್ವವನ್ನು ಮಸುಕಾಗಿಸುವ ಉದ್ದೇಶದಿಂದಲೇ ಹಲವಾರು ಮಿಥ್ಯಗಳನ್ನು, ಮತ್ತೆ ಕೆಲವು ತಪ್ಪು ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು ಪಾಲು ಏನಿಲ್ಲ ಎಂಬುದು ತೀರಾ ಬಾಲಿಶತನದ ಹೇಳಿಕೆಯಷ್ಟೇ. 1921ರಿಂದ 1945ರ ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕಾರಣಕ್ಕೆ ನೆಹರು 9 ಸಲ ಜೈಲಿಗೆ ತಳ್ಳಲ್ಪಡುತ್ತಾರೆ. 12 ದಿನಗಳಿಂದ ಹಿಡಿದು, 1041ಗಳ ಅವಧಿಯ ಜೈಲು ಶಿಕ್ಷೆ ಅನುಭವಿಸಿದರು. ಒಟ್ಟು 3,259 ದಿನಗಳನ್ನು ನೆಹರು ಜೈಲಿನಲ್ಲಿ ಕಳೆದರು. ಅಂದರೆ ತಮ್ಮ ಜೀವನದ ಒಂಭತ್ತು ವರ್ಷಗಳಷ್ಟು ಅವಧಿಯನ್ನು ನೆಹರು ಜೈಲಿನಲ್ಲೇ ಕಳೆದರು. ಜೈಲು ಶಿಕ್ಷೆಯನ್ನು ನೆಹರು ತಮ್ಮ ಓದಿಗೆ ಬಳಸಿಕೊಂಡರು. ಸಾಕಷ್ಟು ವೈವಿಧ್ಯಮಯ ಪುಸ್ತಕಗಳನ್ನು ಓದುತ್ತ ನಿಜವಾದ ಭಾರತದ ರೂಪುರೇಷೆ ಹೇಗಿರಬೇಕೆಂಬುದನ್ನು ಅರಿಯುತ್ತ ಹೋದರು. ಫೆಬ್ರುವರಿ 1934 ಮತ್ತು ಸೆಪ್ಟೆಂಬರ್ 1935- ಈ ಅವಧಿಯಲ್ಲಿ ನೆಹರು 188 ಪುಸ್ತಕಗಳನ್ನು ಜೈಲಿನಲ್ಲಿ ಓದಿದ್ದರು.

ಆದರೆ ಸಂಘ ಪರಿವಾರದ ಕೇಂದ್ರಸ್ಥಾನದಲ್ಲಿರುವ ಮತ್ತು ಇಡೀ ಸಂಘ ಪರಿವಾರವನ್ನು ನಿರ್ದೇಶಿಸುವ, ನಿಯಂತ್ರಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮಾತ್ರ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದಿದ್ದಷ್ಟೇ ಅಲ್ಲ, ಅದು ಬ್ರಿಟಿಷರ ಪರವಾದ ನಿಲುವುಗಳನ್ನು ಹೊಂದಿತ್ತು. ಅದರ ನಾಯಕ ಕೇಶವ ಹೆಡಗೆವಾರ್ ಸ್ವಾತಂತ್ರ್ಯ ಚಳುವಳಿಯಿಂದ ದೂರ ಇರುವಂತೆ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದರು. ಹಿಂದೂತ್ವದ ಇನ್ನೊಬ್ಬ ನಾಯಕ ಸಾವರ್ಕರ್ ಆರಂಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ, ಅಂಡಮಾನ್ ಜೈಲು ಸೇರಿದ್ದು ನಿಜ. ಹಾಗೆಯೇ ಬ್ರಿಟಿಷರೊಂದಿಗೆ ರಾಜಿಯಾಗಿ ಶಿಕ್ಷೆಯಿಂದ ಮುಕ್ತಿ ಪಡೆದಿದ್ದೂ ನಿಜ.

ಸ್ವಾತಂತ್ರ್ಯ ಚಳುವಳಿಯಿಂದ ದೂರವೇ ಉಳಿದ ಸಂಘಟನೆಯಿಂದ ರೂಪುಗೊಂಡ ನರೇಂದ್ರ ಮೋದಿಯವರು, ಸುಮಾರು 9 ವರ್ಷಗಳಷ್ಟು ಕಾಲ ಜೈಲಿನಲ್ಲಿ ಕಳೆದ ನೆಹರುರ ಹೋರಾಟದ ಪಾತ್ರವನ್ನು ಕಡೆಗಣಿಸಿ ಮಾತಾಡುತ್ತಿರುವುದೇ ಹಾಸ್ಯಾಸ್ಪದ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌ ಜಾಮೀನು ಆದೇಶವನ್ನು ಮೇ 10ಕ್ಕೆ ಕಾಯ್ದಿರಿಸಿದ ಸುಪ್ರೀಂ...

0
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್ ಮೇ 10 ರಂದು ತನ್ನ...