| ಪಿ.ಕೆ. ಮಲ್ಲನಗೌಡರ್ |
ಶತಾಯಗತಾಯ ಮತ್ತೊಮ್ಮೆ ಪ್ರಧಾನಿಯಾಗಲು ಏನೆಲ್ಲ ಸರ್ಕಸ್ ಮಾಡುತ್ತಿರುವ ನರೇಂದ್ರ ಮೋದಿಯವರ ಕನಸಿನ ಓಟಕ್ಕೆ ಉತ್ತರ ಪ್ರದೇಶ ಎಂಬ ಈ ದೈತ್ಯ ರಾಜ್ಯವೇ ಬ್ರೇಕ್ ಹಾಕಲಿದೆ. 2014ರಲ್ಲಿ ದೊಡ್ಡ ಬ್ರೇಕ್ ನೀಡಿದ್ದ ರಾಜ್ಯವೇ 5 ವರ್ಷಗಳ ನಂತರ ಕುದುರೆಯ ಹುಚ್ಚು ಓಟಕ್ಕೆ ಬ್ರೇಕ್ ಹಾಕುತ್ತಿರುವುದು ವಿಶೇಷ.
ದೆಹಲಿಗೆ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಉತ್ತರ ಪ್ರಧೇಶ 80 ಸೀಟುಗಳನ್ನು ಹೊಂದಿದ್ದು, ಹೆಚ್ಚೂ ಕಡಿಮೆ ದೇಶದ 1/7ರಷ್ಟು ಸಂಸದರು ಈ ರಾಜ್ಯದವರೇ! ಹೀಗಾಗಿ ಉತ್ತರ ಪ್ರದೇಶದಲ್ಲಿ ಹೆಚ್ಚು ಸೀಟು ಪಡೆಯುವ ಪಕ್ಷಕ್ಕೆ ಸಹಜವಾಗಿಯೇ ದೆಹಲಿ ಗದ್ದುಗೆ ಹಿಡಿಯಲು ಒಂದು ಲಿಫ್ಟ್ ಸಿಕ್ಕಂತೆಯೇ!
ಘಟಬಂಧನ, ಮೋದಿ-ಶಾಗೆ ಪ್ರತಿಬಂಧನ
ಕಳೆದ ಚುನಾವಣೆವರೆಗೂ ಬದ್ಧ ವೈರಿಗಳಾಗಿದ್ದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಾರ್ಟಿಗಳು ಭಾರತದ ಚುನಾವಣಾ ಇತಿಹಾಸದಲ್ಲಿ ಭಿನ್ನ ಎನಿಸುವಂತಹ ಒಂದು ಒಪ್ಪಂದಕ್ಕೆ ಬಂದಿದ್ದೇ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ. ಲೋಕಸಭಾ ಉಪ ಚುನಾವಣೆಗಳಲ್ಲಿ ಈ ಮೈತ್ರಿ ತೋರಿದ ರಾಜಕೀಯ ಜಾಣ್ಮೆ ಅದಕ್ಕೆ ಅದ್ಭುತ ಗೆಲುವನ್ನು ತಂದುಕೊಟ್ಟಿದೆ. ಆ ಕಾರಣಕ್ಕಾಗಿಯೇ ಈ ಚುನಾವಣೆಯಲ್ಲಿ ಈ ಘಟಬಂಧನ್ ಬಿಜೆಪಿ ಪಾಲಿಗೆ, ಮೋದಿ ಪಾಲಿಗೆ ಪ್ರತಿಬಂಧನವಾಗಲಿದೆ.
ಈಗ ಬಂದಿರುವ ಸಮೀಕ್ಷೆಗಳ ಆಧಾರದಲ್ಲಿ ಹೇಳುವುದಾದರೆ ಬಿಜೆಪಿ ಅಲ್ಲಿ ಈಗಿರುವ ಸ್ಥಾನಗಳಿಗಿಂತ 35-43 ಸೀಟು ಕಡಿಮೆ ಪಡೆಯುವ ಸಾಧ್ಯತೆ ಇದೆ. ಇನ್ನು ಕೆಲವು ಚುನಾವಣಾ ತಜ್ಞರ ಪ್ರಕಾರ, ಬಿಜೆಪಿಗೆ 25-29 ಸೀಟು ಅಷ್ಟೇ ಸಿಗಲಿವೆ. ಅಂದರೆ ಸುಮಾರು 50 ಸೀಟ್‌ಗಳ ಲಾಸ್! ಕಾಂಗ್ರೆಸ್ ಘಟಬಂಧನದ ಹೊರಗಿದ್ದು, ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು ಬಿಜೆಪಿಗೆ 10-18 ಸ್ಥಾನಗಳಲ್ಲಿ ಇದರಿಂದ ಲಾಭವಾಗಬಹುದೇ ಎಂಬ ಪ್ರಶ್ನೆಗಳೂ ಎದ್ದಿವೆ. ಇನ್ನೊಂದು ವಿಶ್ಲೇಷಣೆ ಪ್ರಕಾರ, ಹತ್ತಾರು ಕ್ಷೇತ್ರಗಳಲ್ಲಿ ಬ್ರಾಹ್ಮಣ, ಬನಿಯಾ ಮತ್ತು ಇತರ ಮೇಲ್ಜಾತಿಗಳ ಮತಗಳನ್ನು ಕಿತ್ತುಕೊಳ್ಳುವ ಮೂಲಕ ಬಿಜೆಪಿಗೆ ಕಾಂಗ್ರಸ್ ಏಟೂ ನೀಡಬಹುದು ಎನ್ನಲಾಗುತ್ತಿದೆ.
2014-ಬಿಜೆಪಿಗೆ ಬಂಪರ್
2014ರಲ್ಲಿ ಬಿಜೆಪಿಗೆ ಹಿಂದಿ ಭಷಿಕ ರಾಜ್ಯಗಳಲ್ಲಿ ‘ಸ್ವೀಪ್’ ಎನ್ನುವಂತಹ ಗೆಲುವು ದೊರಕಿತ್ತು. ಉತ್ತರ ಪ್ರದೇಶದಲ್ಲಿ ಅದು 80 ರ ಪೈಕಿ 71 ಸೀಟುಗಳನ್ನು, ಅದರ ಮಿತ್ರಪಕ್ಷ ಅಪ್ನಾ ದಳ್ 2 ಸಿಟನ್ನು, ಹೀಗೆ 73 ಸೀಟು ಪಡೆದಿತ್ತು. ಆಗ ಸಮಾಜವಾದಿ ಪಕ್ದಷಕ್ಕೆ 5, ಕಾಂಗ್ರೆಸ್‌ಗೆ 2 ( ಸೋನಿಯಾ ಮತ್ತು ರಾಹುಲ್ ಗೆದ್ದ ಕ್ಷೇತ್ರಗಳು)ಸಿಟು ಬಂದಿದ್ದವು. ಮಾಯಾವತಿಯವರ ಬಿಎಸ್ಪಿ ಸೊನ್ನೆ ಸ್ಕೋರ್ ಮಾಡಿತ್ತು.
2014ರ ನಂತರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ದಿಗ್ವಿಜಯ ಸಾಧಿಸುತ್ತಲೇ ಹೋದಾಗ ಎಲ್ಲವೂ ಕೇಸರಿಮಯವಾಗುವ ಅಪಾಯದ ಸೂಚನೆ ಕಾಣತೊಡಗಿತ್ತು.
ಮೋದಿ ಪ್ರಧಾನಿಯಾದ ನಂತರದಲ್ಲಿ ಬಣ್ಣ ಬಣ್ಣದ ಹೆಸರಿನ ಘೋಷಣೆಗಳನ್ನು ಮಾಡುವುದು, ಅದಕ್ಕೆ ಪೇಯ್ಡ್ ಮೀಡಿಯಾ ಎಗ್ಗಿಲ್ಲದಂತೆ ಪ್ರಚಾರ ಕೊಡುವುದು ಶುರುವಾಗಿತು. ಇದೇ ಹೊತ್ತಲ್ಲಿ ಅಮಿತ್ ಶಾ ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡರು. ಇದಕ್ಕಾಗಿ ಬಿಜೆಪಿ ಬಳಸಿದ್ದು ಆದಾಯ ತರೆಇಗೆ ಇಲಾಖೆ, ಸಿಬಿಐ ಮತ್ತು ಇ.ಡಿ. ಇಲಾಖೆಗಳ ಅಸ್ತ್ರಗಳನ್ನು. ಅದರ ಪರಿಣಾಮವಾಗಿ ಹರಯಾಣ, ಜಾರ್ಖಂಡ್, ಆಂಧ್ರಪ್ರದೇಶ (ನಾಯ್ಡು ಈಗ ಬಿಜೆಪಿ ಜೊತೆಗಿಲ್ಲ), ಮಹಾರಾಷ್ಟ್ರ, ಮತ್ತು ಜಮ್ಮು ಕಾಶ್ಮೀರಗಳಲ್ಲಿ ಅದು ಸ್ವಂತ ಬಲ ಅಥವಾ ಮೈತ್ರಿ ಬಲ ಅಥವಾ ‘ಆಪರೇಷನ್ ಕಮಲ’ದ ಮೂಲಕ ಅಧಿಕಾರದಲ್ಲಿ ಭಾಗಿಯಾಯ್ತು.
ಆಮೇಲೆ, ಅಸ್ಸಾಂ, ಗೋವಾ, ಮಣಿಪುರ ಮತ್ತು ಉತ್ತರಖಾಂಡ್‌ಗಳಲ್ಲೂ ನಿಜೆಪಿ ತನ್ನ ಅಧಿಪತ್ಯವನ್ನು ಗಟ್ಟಿ ಮಾಡಿಕೊಂಡಿತು. ಬಹುಪಾಲು ಕಡೆ ಅದು ಅಕ್ರಮ ಮಾರ್ಗಗಳ ಮೂಲಕವೇ ಅಧಿಕಾರದಲ್ಲಿ ಪಾಲು ಪಡೆಯಿತು. ಆದರೆ ತೀವ್ರ ಅಪಾಯದ ಭಾಗ ಶುರುವಾಗಿದ್ದು ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆ ನಂತರ.
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅದು ಗಳಿಸಿದ ಗೆಲುವು ಪ್ರಜಾಪ್ರಭುತ್ವಕ್ಕೇ ಸವಾಲು ಎಸೆಯುವಂತಿತ್ತು. ನೋಟ್ ಬ್ಯಾನ್ ಆಗಷ್ಟೇ ಭ್ರಷ್ಟರ ವಿರುದ್ಧ ಮೋದಿ ಯುದ್ಧ ಎಂಬ ‘ಸಂಚಲನ’ ಮೂಡಿಸಿತ್ತು. ಆ ಸಂಚಲನವನ್ನು ಬಾಯಿಬಡುಕ ಮೋದಿ, ಅವರ ಪಕ್ಷದ ಗುಲಾಮಿ ನಾಯಕರು, ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದ ಮಬ್ಭಕ್ತರು ಸೃಷ್ಟಿಸಿದ್ದರು. ಆದರೆ, ಉತ್ತರ ಪ್ರದೇಶದ ಚುನಾವಣೆಯಲ್ಲಿ ಈ ಕೃತಕ ಸಂಚಲನೆಗೆ ಹಿನ್ನಡೆ ಕಂಡಾಗ, ಬಿಜೆಪಿಯ ನೆರವಿಗೆ ಬಂದದ್ದು ಎರಡು ಅಂಶಗಳು.
ಒಂದು, ವಿರೋಧ ಪಕ್ಷಗಳ ನಡುವೆ ಏರ್ಪಡದ ಹೊಂದಾಣಿಕೆ. ಎರಡನೇಯದು, ಮುಜಾಫರ್ ನಗರದಲ್ಲಿ ಹಿಂದು ಕೋಮುವಾದಿಗಳು ಸೃಷ್ಟಿಸಿದ ಭೀಕರ ಕೋಮು ಹಿಂಸಾಚಾರ. ಇದನ್ನು ಬಳಸಿಕೊಂಡ ಮೋದಿ-ಶಾ ಮತ್ತು ಅವರ ಲಂಗೋಟಿ ಯೋಗಿ ಆದಿತ್ಯನಾಥರು ಅಲ್ಲಿ ಕೋಮು ಧ್ರುವೀಕರಣ ಮಾಡಲು ಯಶಸ್ವಿಯಾಗಿಬಿಟ್ಟರು. ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಇದು ಮೊದಲ ಅಪಾಯ. ಅಲ್ಲಿ ಯೋಗಿ ಆದಿತ್ಯನಾಥ ಎಂಬ ಅಲ್ಪಸಂಖ್ಯಾತ ವಿರೋಧಿ ದುಷ್ಟನನ್ನು ಮುಖ್ಯಮಂತ್ರಿ ಪಟ್ಟಕ್ಕೆ ಏರಿಸಲಾಗಿತು. ಇದು ಎರಡನೇಯ ದೊಡ್ಡ ಅಪಾಯ. ಇದೆಲ್ಲ ಪ್ರಜಾಪ್ರಭುತ್ವಕ್ಕೇ ಅಪಾಯ ಒಡ್ಡುವ ಒಂದು ಪೂರ್ವಯೋಜಿತ ಸಂಚೇ ಆಗಿತ್ತು.
ಪ್ರಾದೇಶಿಕ ಪಕ್ಷಗಳಿಗೆ ಕುತ್ತು
ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಲೇ ಸಾಗಿದ ಬಿಜೆಪಿಯ ಹುಚ್ಚು ಕುದುರೆ ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನೇ ನಿರ್ನಾಮ ಮಾಡಲು ಹೊರಟಿತು. ಆಗ ಮೊದಲು ಎಚ್ಚರಗೊಂಡ ಅಖಿಲೇಶ್ ಯಾದವ್ ಮಾಯಾವತಿಯವರ ಜೊತೆಗಿನ ತನ್ನೆಲ್ಲ ಹಗೆತನ ಮರೆತು ಮುಕ್ತ ಸಂವಾದ ನಡೆಸಿದರು. ಅದರ ಫಲವಾಗಿ ಅಲ್ಲಿ ಆಗ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಾರ್ಟಿ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕದಳಗಳ ನಡುವೆ ಒಂದು ಒಪ್ಪಂದ, ಮೈತ್ರಿ ಶುರುವಾಗಿತು. ಮುಂದೆ ಉತ್ತರಪ್ರದೇಶದಲ್ಲಿ ನಡೆದ ಮೂರು ಲೋಕಸಭ ಚುನಾವಣೆಗಳಲ್ಲಿ ಈ ಮೈತ್ರಿ ಮೂರಕ್ಕೆ ಮೂರನ್ನು ಗೆದ್ದು ಬಿಜೆಪಿಗೆ ನಡುಕ ಹುಟ್ಟಿಸಿತು. 2018ರಲ್ಲಿ ನಡೆದ ಈ ಉಪಚುನಾವಣೆಗಳಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಪ್ರತಿನಿಧಿಸುತ್ತಿದ್ದ ಗೋರಖಪುರ ಜೊತೆಗೆ ಪ್ರತಿಷ್ಠಿತ ಪುಲ್ಪುರ್ ಮತ್ತು ಕೈರಾನಾ ಕ್ಷೇತ್ರಗಳಲ್ಲಿ ಈ ಘಟಬಂಧನವು ಬಿಜೆಪಿಯನ್ನು ಸರಾಸರಿ ಎರಡು ಲಕ್ಷಗಳಿಂದ ಸೋಲಿಸಿತು.
ಆಗಿಂದ ಈ ಮೈತ್ರಿಗೆ ಇನ್ನಷ್ಟು ಕಸುವು ಬಂದಿದೆ. ಉತ್ತರ ಪ್ರದೇಶದ ಸರ್ಕಾರ ಮಾಡುತ್ತಿರುವ ಪೊಲೀಸ್ ಗೂಂಡಾಗಿರಿ ರಾಜಕಾರಣದಿಂದ ಅಲ್ಲಿನ ದಲಿತರು, ಅಲ್ಪಸಂಖ್ಯಾತರು ಭಯಭಿತರಾಗಿದ್ದಾರೆ. ಹೀಗಾಗಿ ಈ ಸಲ ದಲಿತರು, ಮುಸ್ಲಿಮರು ಮತ್ತು ಯಾದವರು ಸಾರಾಸಗಟಾಗಿ ಘಟಬಂಧನದ ಪರ ನಿಲ್ಲುತ್ತಿದ್ದಾರೆ. ಜೊತೆಗೆ ಮೋದಿಯ ಸೃಷ್ಟಿತ ಹವಾ ಕೂಡ ಇಲ್ಲಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಈ ಹೆಬ್ಬಾಗಿಲಿನ ರಾಜ್ಯದಲ್ಲಿ ಬಿಜೆಪಿ 40 ರಿಂದ 46 ಸೀಟುಗಳನ್ನು ಕಳೆದುಕೊಳ್ಳುವುದು ಪಕ್ಕಾ ಆಗಿದೆ.
ಎಬಿಪಿ-ಸಿವೋಟರ್ ಸಮೀಕ್ಷಯ ಪ್ರಕಾರ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸಂಖ್ಯೆ 73ರಿಂದ 25ಕ್ಕೆ ಕುಸಿಯಲಿದೆ. ಘಟಬಂಧನ 51 ಸೀಟು ಗಳಿಸಲಿದೆ. ಎಬಿಪಿ-ನೆಲ್ಸನ್ ಸರ್ವೆ ಪ್ರಕಾರ ಘಟಬಂಧನ್ 42 ಸಿಟು ಗಳಿಸಲಿದೆ.
ಕಾಂಗ್ರೆಸ್ ಘಟಬಂಧನದಲ್ಲಿ ಇದ್ದಿದ್ದರೆ ಬಿಜೆಪಿಗೆ ಇನ್ನೂ 10-15 ಸೀಟು ಲಾಸ್ ಆಗಬಹುದಿತ್ತು ಎನ್ನಲಾಗಿದೆ. ಕಾಂಗ್ರೆಸ್ ಸ್ವತಂತ್ರ ಸ್ಪರ್ಧೆಯಿಂದ ಬಿಜೆಪಿಗೆ 10-14 ಸೀಟುಗಳಲ್ಲಿ ಲಾಭ ಎಂದು ಎನ್‌ಡಿಟಿವಿಯ ಪ್ರಣಬ್ ರಾಯ್ ತಂಡ ಹೇಳುತ್ತಿದೆ. ಇನ್ನು ಕೆಲವು ರಾಜಕೀಯ ಪಂಡಿತರ ಪ್ರಕಾರ, ಕನಿಷ್ಠ ಹತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಯ ಸೋಲಿಗೆ ಕಾರಣವಾಗಬಹುದು.
ಅಂತಿಮವಾಗಿ, 2014ರಲ್ಲಿ ‘ಬ್ರೇಕು’ ಕೊಟ್ಟ ರಾಜ್ವೇ ಮೋದಿ ಗಾಡಿಯ ಓಟಕ್ಕೆ ಮೊದಲ ‘ಬ್ರೇಕ್’ ಹಾಕಲಿದೆ ಎಂಬುಬಂತೂ ಸ್ಪಷ್ಟ.


