Homeರಾಜಕೀಯಸಾಧನೆಶೂನ್ಯ ಬಿಜೆಪಿಯಿಂದ ಮತ್ತೆ ರಾಮ ಮಂದಿರದ ಜಪ

ಸಾಧನೆಶೂನ್ಯ ಬಿಜೆಪಿಯಿಂದ ಮತ್ತೆ ರಾಮ ಮಂದಿರದ ಜಪ

- Advertisement -
- Advertisement -

ಪಿ.ಕೆ. ಮಲ್ಲನಗೌಡರ್ |

ರಾಮಮಂದಿರದ ಹೆಸರಲ್ಲಿ ಕೋಮು ಧ್ರುವೀಕರಣ ಮಾಡಿ, 2019ರ ಚುನಾವಣೆ ಗೆಲ್ಲಲು ಸಂಘಪರಿವಾರ ರೂಪಿಸಿರುವ ಜೀವದ್ವೇಷಿ ಕಾರ್ಯಕ್ರಮದ ರಿಹರ್ಸಲ್ ರವಿವಾರ ಯಾವುದೇ ಅಹಿತಕರ ಘಟನೆಗಳಿಲ್ಲದೇ ಮುಗಿದಿದೆ. ಆದರೆ ಅದು ಒಂದು ಅಪಾಯದ ಮುನ್ಸೂಚನೆಯನ್ನು ನೀಡಿದೆ. 1992ರಲ್ಲಾದಂತೆ ಮತ್ತೆ ಹಿಂಸಾಚಾರದ ಮೂಲಕ ಧ್ರುವೀಕರಣ ಮಾಡವ ಹುನ್ನಾರಕ್ಕೆ ಚಾಲನೆ ನೀಡಲಾಗಿದೆ.

ವಿಎಚ್‍ಪಿ, ಆರ್‍ಎಸ್‍ಎಸ್‍ಗಳ ಈ ಸರಣಿ ಕಾರ್ಯಕ್ರಮ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದ್ದು ಎನಿಸುವಂತೆ ಬಿಂಬಿಸಲಾಗಿದೆ. ಆದರೆ ಈ ಕಾರ್ಯಕ್ರಮದ ಪ್ರಾಯೋಜಕ ಖುದ್ದು ಬಿಜೆಪಿಯೇ ಆಗಿದೆ. ಇನ್ನು ಸ್ಪಷ್ಟವಾಗಿ ನರೇಂದ್ರ ಮೋದಿ ಮತ್ತು ಅಮಿತ್‍ಶಾಗಳೇ ಆಗಿದ್ದಾರೆ.

ನೋಟು ಅಮಾನ್ಯೀಕರಣ, ಜಿಎಸ್‍ಟಿಗಳಿಂದ ಜರ್ಜರಿತಗೊಂಡ ಜನಸಾಮಾನ್ಯರನ್ನು ಒಲಿಸಿಕೊಳ್ಳಲು ಅದಕ್ಕೆ ಈಗ ಉಳಿದಿರುವ ದಾರಿ ಇದೇ ಆಗಿದೆ. 2014ರ ನಂತರ ನಡೆದ ಲೋಕಸಭಾ ಉಪಚುನಾವಣೆಗಳಲ್ಲಿ, ವಿಪಕ್ಷಗಳು ಒಮ್ಮತದ ಅಭ್ಯರ್ಥಿ ಹಾಕಿದರೆ ಬಿಜೆಪಿಗೆ ಹೀನಾಯ ಸೋಲು ಎಂಬುದು ಪಕ್ಕಾ ಆಗಿದೆ. ಒಟ್ಟು 16 ಉಪಚುನಾವಣೆಗಳಲ್ಲಿ ಸೋತಿರುವ ಬಿಜೆಪಿ, 2014ರಲ್ಲಿ ತಾನು ಗೆದ್ದಿದ್ದ 10 ಕ್ಷೇತ್ರಗಳನ್ನು ಕಳೆದುಕೊಂಡು, 282ರಿಂದ 272ಕ್ಕೆ ಕುಸಿದಿದೆ. ಭಾರಿ ಅಂತರದ ಸೋಲುಗಳು ಅದನ್ನು ಕಂಗೆಡಿಸಿವೆ.

ಮೋದಿಯ ಭಾಷಣಗಳು ಈಗ ಜನರಿಂದ ಲೇವಡಿಗೆ ಒಳಗಾಗುತ್ತಿವೆ. ಅಭಿವೃದ್ಧಿ ಆಧಾರದಲ್ಲಿ ಮತ ಕೇಳುವೆವು ಎಂಬ ಸೋಗಲಾಡಿತನ ಮಾಡುತ್ತಲೇ ಅಡ್ಡ ಮಾರ್ಗಗಳನ್ನು ಹಿಡಿಯುತ್ತ ಸಾಗಿದೆ. ಉತ್ತರದಲ್ಲಿ ಈಗ ಚುನಾವಣಾ ಪ್ರಚಾರಗಳಲ್ಲಿ ಮೋದಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ವ್ಯಂಗ್ಯ ಮಾಡುವ ಕಸರತ್ತಿನಲ್ಲಿ ತೊಡಗಿದ್ದಾರೆ. ಇದು ಫಲ ಕೊಡಲಾರದು ಎಂದು ಸಂಶಯ ಬರತೊಡಗಿದ ಮೇಲೆ ಸಂಘ ಪರಿವಾರ ಅಖಾಡಕ್ಕೆ ಇಳಿದಿದೆ. ರಕ್ತಪಾತ ನಡೆಸಿಯಾದರೂ 2019ರ ಚುನಾವಣೆ ಗೆಲ್ಲುವ ಜೀವವಿರೋಧಿ, ದೇಶವಿರೋಧಿ ಕೃತ್ಯಕ್ಕೆ ಧರ್ಮಸಂಸದ್ ಎಂಬ ಅಧರ್ಮದ ಕಾರ್ಯಕ್ರಮಕ್ಕೆ ಈಗ ಖುಲ್ಲಂಖುಲ್ಲಂ ಕೈಹಾಕಿದೆ.

ಆದರೆ ಅನಧಿಕೃತವಾಗಿಇದು ಎಂದೋ ಶುರುವಾಗಿದೆ. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಅದು ಗೆದ್ದಿದ್ದು ಜನರ ಬದುಕಿಗೆ ಬೆಂಕಿ ಇಡುವ ಮೂಲಕವೇ. ಅಲ್ಲಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡಿಸಿದ್ದು, ಹಿಂದೂ ಮತಗಳ ಧ್ರುವೀಕರಣಕ್ಕಾಗಿಯೇ. ಮೊದಲ ದಿನದಿಂದಲೂ ಯೋಗಿ ಇದಕ್ಕೆ ಪೂರಕವಾದ ಹುಚ್ಚಾಟವನ್ನೇ ನಡೆಸುತ್ತ ಬಂದಿದ್ದಾರೆ. ಕಳೆದ 2 ತಿಂಗಳಿಂದ ಈ ಪುಣ್ಯಾತ್ನ ಮುಖ್ಯಮಂತ್ರಿಯ ಅಜೆಂಡಾ ಅಯೋಧ್ಯಾ, ರಾಮಮಂದಿರವಷ್ಟೇ ಆಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಆಹಾರಧಾನ್ಯಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಸಮರ್ಥವಾಗಿರುವ ಸರ್ಕಾರ, ಈಗ ರಫೇಲ್ ರಾಡಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದೆಲ್ಲಕ್ಕೂ ಮುಖ್ಯವಾಗಿ ರೈತಾಪಿ ಸಮುದಾಯದ ಕಷ್ಟಗಳಿಗೆ ಸ್ಪಂದಿಸುವ ಒಂದೇಒಂದು ಕಾರ್ಯಕ್ರಮವನ್ನೂ ರೂಪಿಸದ ಸರ್ಕಾರ, ಉದ್ಯಮಿಗಳ ಹಿತ ಕಾಯುತ್ತ ದೇಶದ ಆರ್ಥಿಕತೆಯನ್ನೇ ಡೋಲಾಯಮಾನ ಮಾಡಿದೆ.

ನ್ಯಾಯಾಲಯಕ್ಕೇ ಸವಾಲು

ಹೊರಮಾತಿನಲ್ಲಿ ನ್ಯಾಯಾಲಯದ ತೀರ್ಪಿಗೆ ಬದ್ಧ ಎಂದು 4 ವರ್ಷ ಕಾಲ ಹಾಕಿದ ಬಿಜೆಪಿ, ಈಗ ತನ್ನ ಮಾನ ಮುಚ್ಚಿಕೊಳ್ಳಲು ಸಂಘ ಪರಿವಾರದ ಇತರ ಅಂಗಗಳ ಮೂಲಕ ಕಾನೂನು ಅಥವಾ ಸುಗ್ರಿವಾಜ್ಞೆಯ ಬೇಡಿಕೆಯನ್ನು ಮುನ್ನೆಲೆಗೆ ತಂದಿದೆ. ನ್ಯಾಯಾಲಯ ವಿಚಾರಣೆಯನ್ನು ಈಗಲೇ ಆರಂಭಿಸಿದ್ದರೂ ಅದರ ನಿಲುವೇನೂ ಬದಲಾಗುತ್ತಿರಲಿಲ್ಲ. ಕಳೆದ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಮಂದಿರದ ಭರಸ ನೀಡಿ, ‘ರಾಮಭಕ್ತರಿಗೇ’ ವಂಚಿಸಿದ ನಡೆಯ ಲಾಭವನ್ನು ಶಿವಸೇನಾ ಪಡೆಯಲು ಕಣಕ್ಕೆ ಇಳಿದ ಮೇಲಂತೂ ಸಂಘಕ್ಕೆ ಹಿಂದೂತ್ವದ ಹಾದಿಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಅನಿವಾರ್ಯತೆಯೂ ಸೃಷ್ಟಿಯಾಗಿದೆ.

2017ರಲ್ಲಿ ಸುಪ್ರಿಂ ತೀರ್ಪ ಉಲ್ಲಂಘನೆ

ಬಿಜೆಪಿ ಮತ್ತೆ ಧ್ವಂಸ ರಾಜಕಾರಣಕ್ಕೆ ಇಳಿಯುವ ಸುಳಿವು 2017ರಲ್ಲಿಯೇ ಸಿಕ್ಕಿತ್ತು. ವಿಎಚ್‍ಪಿ ಮುಖಡ ರಾಮ ವಿಲಾಸ್ ವೇದಾಂತಿ, ಅಭಯ ಚೈತನ್ಯ ಸ್ವಾಮಿಯ ನೇತೃತ್ವದಲ್ಲಿ ಸಾಧುಸಂತರ ಗುಂಪೊಂದು ರಾಮಲಲ್ಲಾ ದೇಗುಲಕ್ಕೆ ತ್ರಿಶೂಲ ಹಿಡಿದು ಪ್ರವೇಶಿಸುವ ಮೂಲಕ ಸುಪ್ರಿಂ ಕೋರ್ಟ್‍ನ 2002ರ ಆದೇಶವನ್ನು ಉಲ್ಲಂಘಿಸಿತ್ತು. ಯಾವುದೇ ಆಯುಧ, ಧರ್ಮದ ಸಂಕೇತಗಳನ್ನು ಈ ನಿಷೇಧಿತ ಪ್ರದೇಶದಲ್ಲಿ ತರಬಾರದು ಎಂಬ ಆದೇಶವನ್ನು ಉಲ್ಲಂಘಿಸಲು ಯೋಗಿ ಆದಿತ್ಯನಾಥ ಸರ್ಕಾರ ಕುಮ್ಮಕ್ಕು ನೀಡಿತ್ತು. ಫೈಜಾಬಾದ್‍ನ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಎಚ್‍ಪಿಯ ನಡೆಯನ್ನು ಬೆಂಬಲಿಸಿ ಮಾತಾಡಿದ್ದರು.

2014ರಿಂದ ಕಲ್ಲು ಸಂಗ್ರಹ

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿಎಚ್‍ಪಿ ದೇಶಾದ್ಯಂತ ಕಲ್ಲು ಸಂಗ್ರಹ ಕೆಲಸವನ್ನು ಆರಂಭಿಸಿತ್ತು. ಅಯೋಧ್ಯೆಯಲ್ಲಿರುವ ತನ್ನ ವರ್ಕ್‍ಶಾಪ್‍ನಲ್ಲಿ ಕಲ್ಲು ಕೆತ್ತನೆಯ ಕೆಲಸಕ್ಕೆ ವೇಗ ನೀಡಲಾರಂಭಿಸಿತು. 2017ರಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್‍ಮಂದಿರ ನಿರ್ಮಾಣಕ್ಕೆ ಕೋರ್ಟ್ ಸಂಧಾನ ವಹಿಸಲು ಸಿದ್ದವೆಂದಾಗ, ಇನ್ನಷ್ಟು ಚುರುಕುಗೊಂಡ ವಿಎಚ್‍ಪಿ, ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಆಕ್ಷೇಪಣಾ ಅರ್ಜಿಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿತ್ತು. ಆದರೆ ಆ ವರ್ಷ ಅಪೆಕ್ಸ್ ಕೋರ್ಟ್ ಬಿಜೆಪಿಯ ಲಾಲ ಕೃಷ್ಣ ಅದ್ವಾನಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿಯವರ ಮೇಲೆ ಹೊರಿಸಿದ್ದ ಕ್ರಿಮಿನಲ್‍ಸಂಚಿನ ಆರೋಪಗಳನ್ನು ಮಾನ್ಯ ಮಾಡಿತು.ಹೀಗಾಗಿ ಖೇಹರ್ ಸಾಹೇಬರ ‘ಸಂಧಾನ’ ಶುರುವೇ ಆಗಲಿಲ್ಲ.

ಸಂಕಟ ಬಂದಾಗ ರಾಮರಮಣ!

ಜನಪರ ಆಡಳಿತ ನೀಡುವ ಯಾವ ಪ್ರಯತ್ನವನ್ನೂ ಇಲ್ಲಿವರೆಗಿನ ಬಿಜೆಪಿ ಸರ್ಕಾರಗಳು (ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ನೀಡಿಲ್ಲ. ಸಂಘ ಪರಿವಾರದ ತಲೆಯಲ್ಲಿ ಹಿಂದೂರಾಷ್ಟ್ರ ಎಂಬ ಗೊಬ್ಬರ ಬಿಟ್ಟರೆ ಮತ್ತೇನಿಲ್ಲ. ಗೋಳ್ವಾಲ್ಕರ್ ಎಂಬ ಜೀವವಿರೋಧಿಯ ‘ಸಿದ್ದಾಂತ’ವೇ ಅದಕ್ಕೆ ಸಂವಿಧಾನ. ಗಾಂಧಿ, ಅಂಬೇಡ್ಕರ್, ಪಟೇಲರ ಹೆಸರನ್ನು ಕೇವಲ ಲಾಭಕ್ಕಷ್ಟೇ ಅದು ಬಳಸಿಕೊಳ್ಳುತ್ತದೆ. ಈಗ ಮೋದಿ ಮಾಡುತ್ತಿರುವುದೂ ಅದನ್ನೇ. ಮೋದಿಯ ‘ಅಭಿವೃದ್ಧಿ’ ಎಂದರೆ ಖದೀಮ ಉದ್ಯಮಿಗಳಿಗಾಗಿ ಯೋಜನೆ ರೂಪಿಸುವುದು, ಹಣ ಕೊಳ್ಳೆ ಹೊಡೆದು, ಅದನ್ನು ಹಿಂದೂತ್ವದ ಉದ್ಯಮದಲ್ಲಿ ಹೂಡುವುದು.

ಜನರ ನಿತ್ಯ ಬವಣೆಗಳ ಬಗ್ಗೆ ಯೋಚಿಸದ ಬಿಜೆಪಿಗೆ ಚುನಾವಣೆ ಬಂದಾಗ ರಾಮ ನೆನಪಾಗುತ್ತಾನೆ. ಆದರೆ ಈ ಸಲ ಮಾಧ್ಯಮಗಳ ಭಾರಿಬೆಂಬಲದ ಹೊರತಾಗಿಯೂ 2019ರ ಚುನಾವಣೆಯ ಭಯ ಶುರುವಾಗಿರುವುದರಿಂದ ಮತ್ತೆ ಅದು ಧ್ರುವೀಕರಣಕ್ಕೆ ಕೈ ಹಾಕಿದೆ.

ಮೊನ್ನೆ ದೇಶಾದ್ಯಂತ ನಡೆಸಿದ ಸಭೆಗಳ ಸ್ವರೂಪ, ಧಾಟಿ ನೋಡಿದರೆ 1992 ಮತ್ತು 2002ರ ಹತ್ಯಾಕಾಂಡಗಳಿಗಿಂತಲೂ ಭೀಕರವಾದ ಕೋಮುಗಲಭೆಗೆ ಅದು ಸಿದ್ಧತೆ ನಡೆಸಿರುವ ಸೂಚನೆಗಳು ಕಾಣುತ್ತಿವೆ. ಅಯೋಧ್ಯೆಯಲ್ಲಿ ನಡೆದ ಧರ್ಮಸಂಸದ್ ಬರೀ ಆರಂಭ ಮತ್ತು ರಿಹರ್ಸಲ್ ಮಾತ್ರ…..

ಈ ದೇಶದ ರೈತರು, ದಲಿತರು ಮತ್ತು ಎಲ್ಲ ಶ್ರಮಜೀವಿಗಳು ಈ ಹುನ್ನಾರವನ್ನು ಚಿವುಟಿ ಹಾಕಲು ಜನಾಂದೋಲನ ರೂಪಿಸಬೇಕಿದೆ.

ನಂಬುಗೆ, ಪುರಾಣ ಮತ್ತು ನ್ಯಾಯ!

2010ರಲ್ಲಿ ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿಯ ಜಾಗವನ್ನು ಮೂವರೂ ದಾವೆದಾರರಿಗೆ ಸರಿಸಮವಾಗಿ ಹಂಚಿ ನೀಡಿದ ತೀರ್ಪಿಗೆ ಆಗ ಜನಸಾಮಾನ್ಯರು ಸ್ವಾಗತಿಸಿದ್ದರು. ಮತ್ತೆ 1992ರ ದುಸ್ವಪ್ನ ಕಾಡಲಾರದು ಎಂಬ ಆಶಾಭಾವನೆಯೇ ಅದಕ್ಕೆ ಕಾರಣವಾಗಿತ್ತು.

ಆದರೆ ಪುರಾಣ ಮತ್ತು ದೇಶದ ಬಹುಸಂಖ್ಯಾತರ ನಂಬುಗೆಗಳನ್ನು ಆಧರಿಸಿ ಆ ವಿಲಕ್ಷಣ ತೀರ್ಪನ್ನು ನೀಡಲಾಗಿತ್ತು. ಆಶಿಶ್ ನಂದಿಯವರಂತಹ ದೇಸಿ ಚಿಂತಕರು ಕೂಡ, ನ್ಯಾಯದ ಚೌಕಟ್ಟನ್ನು ಮೀರಿ, ದೇಶದ ಜನರ ನಂಬಿಕೆಗಳನ್ನು ಆಧರಿಸಿ ತೀರ್ಪು ನೀಡುವ ಮೂಲಕ ಕೋರ್ಟ್ ಇತಿಹಾಸ ಸೃಷ್ಟಿಸಲು ಯತ್ನಿಸಿದೆ ಎಂದು ಕೊಂಡಾಡಿದ್ದರು! ಕನ್ನಡದ ‘ದೇಸಿ’ ಚಿಂತಕರಲ್ಲಿ ಒಬ್ಬರಾದ ಕೆ.ವಿ. ಅಕ್ಷರ ಕೂಡ ಸಂಭ್ರಮಪಟ್ಟಿದ್ದರು.

ಈ ದೇಶದ ಬಹುಸಂಖ್ಯಾತ ಶ್ರಮಿಕರಿಗೆ ರಾಮ ಆರಾಧ್ಯ ದೈವವೇ ಅಲ್ಲ. ರಾಮನ್ನು ಆರಾಧಿಸುವ ಬಹುಪಾಲು ಜನರು ‘ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ’ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿಯೇ ಇಲ್ಲ. ಮಾಧ್ಯಮಗಳ ನೆರವಿನಿಂದ ಸಂಘಪರಿವಾರ ಅಂತಹ ನಂಬಿಕೆಯನ್ನು ಸೃಷಿಸಲು ಯತ್ನಿಸುತ್ತ ಬಂದಿದೆಯಷ್ಟೇ. ಸುಪ್ರಿಂಕೋರ್ಟ್ ವಿಚಾರಣೆ ಈ ಬಿಂಬಿತ ‘ಸತ್ಯ’ಗಳನ್ನು ದಾಟಿ ನ್ಯಾಯ ನೀಡುತ್ತದೆ ಎಂದು ಆಶಿಸೋಣ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...