Homeರಾಜಕೀಯಭಟ್ಕಳದಲ್ಲಿ “ಗಂಟೆ” ಹಿಡಿದವರು ಗಂಡಾಂತರದಲ್ಲಿ!!

ಭಟ್ಕಳದಲ್ಲಿ “ಗಂಟೆ” ಹಿಡಿದವರು ಗಂಡಾಂತರದಲ್ಲಿ!!

- Advertisement -
ಮುಸ್ಲಿಮ್ ಭಯೋತ್ಪಾದಕರಿಂದ ಭಟ್ಕಳದ ಹೆಸರು ಹಾಳಾಗಿದೆ ಎಂದು ಬೊಬ್ಬಿರಿಯುವ ಹಿಂದೂ ಹರಿಕಾರಗಳು ವಾಸ್ತವ ಮರೆಮಾಚುತ್ತಿದ್ದಾರೆ. ಅಸಲಿಗೆ ಭಟ್ಕಳಕ್ಕೆ ಮತಾಂಧತೆಯ ಕಳಂಕ ತಟ್ಟಿದ್ದೇ ಮೋದಿ ಮಾಮನ ಪುಟಗೋಸಿ ಮಂತ್ರಿ ಅನಂತ್ಮಾಣಿ ಯಾನೆ ಅನಂತ್‍ಕುಮಾರ್ ಹೆಗಡೆಯ ಕೇಸರಿ ಕ್ರೌರ್ಯದ ಕರಾಮತ್ತಿನಿಂದ! 1990ರ ದಶಕದಲ್ಲಿ ಭಟ್ಕಳ ಅನಂತ್ಮಾಣಿಯ ಹಿಂದೂತ್ವದ ಆಡಂಬೋಲವಾಗಿತ್ತು ನವಾಯಣ ಮುಸಲರು ಹೆಚ್ಚಿರುವ ಭಟ್ಕಳ 1990ರ ದಶಕದಾರಂಭದಲ್ಲಿ ಒಂದಿಡೀ ವರ್ಷ ಕೋಮುದಳ್ಳುರಿಯಲ್ಲಿ ಬೆಂದು ಬಸವಳಿದಿತ್ತು. ಈ ಹಿಂಸಾಕಾಂಡದ ಹಿಂದಿದ್ದದ್ದು ಇದೇ ಅನಂತ್ಮಾಣಿಯ ಕಾಣದ ಕೈಗಳು!!
ಅಂದು ಹಿಂದೂ ಜಾಗರಣಾ ವೇದಿಕೆಯ ಭೂಗತ ಹಿಂಸಾ ರಾಯಭಾರಿಯಾಗಿ ಭಟ್ಕಳದ ಹಳ್ಳಿ-ಹಳ್ಳಿಗಳಲ್ಲಿ ಅಂಡಲೆಯುತ್ತಿದ್ದ ಮಾಣಿ ಮತೀಯ ಉನ್ಮಾದಕ್ಕೆ ಚಿತಾವಣೆ ನಡೆಸುತ್ತಿದ್ದ. ಮಾಣಿಗೆ ಕೇಸರಿ ರಾಜಕಾರಣದ ದೀಕ್ಷೆ ಕೊಟ್ಟಿದ್ದು ಡಾ| ಚಿತ್ತರಂಜನ್ ಎಂಬ ಚೆಡ್ಡಿ ಪಿತಾಮಹ. ಅಚಾನಕ್ ರಂಜನ್ ಎಮ್ಮೆಲ್ಲೆಯಾಗಲು ಮಾಣಿಯ ಕೋಮು ಕಿತಾಪತಿಯೇ ಕಾರಣವಾಗಿತ್ತು. ಭಟ್ಕಳದ ಪರಿಸ್ಥಿತಿ ಅದೆಂಥ ರೌರವ ನರಕದಂತಾಯಿತೆಂದರೆ, ಹಿಂದೂತ್ವದ ಉಗ್ರ ಪ್ರತಾಪವೇ ಡಾ| ರಂಜನ್‍ರ ಬಲಿ ಪಡೆದುಬಿಟ್ಟಿತು! ಆಗ ಖುಲಾಯಿಸಿತು ಒಂದ್ಹೊತ್ತಿನ ಮಜ್ಗೆ ತಂಬ್ಳಿ-ಅನ್ನದ ಮಾಣಿಯ ಅದೃಷ್ಟ!! ಎರಡು ದಶಕದ ಹಿಂದೆ ಡಾ| ರಂಜನ್‍ರ ಹೆಣ ಮುಂದಿಟ್ಟುಕೊಂಡು ರಾಜಕೀಯ ಜೀವನ ಆರಂಭಿಸಿದ್ದ ಅನಂತ್ಮಾಣಿ ಬಡಿವಾರಕ್ಕೆ ಇವತ್ತಿಗೂ ಹಿಂದೂ ಅಮಾಯಕರ ಹೆಣವೇ ಬಂಡವಾಳ!
ಎಂಪಿಯಾಗುವ ಯಾವ ಯೋಗ್ಯತೆಯೂ ಇಲ್ಲದ ಪುಂಡ ಅನಂತ್ಮಾಣಿಗೆ ದಿಲ್ಲಿ ಪಾರ್ಲಿಮೆಂಟ್‍ನಲ್ಲಿ ನತದೃಷ್ಟ ಉತ್ತರ ಕನ್ನಡ ಪ್ರತಿನಿಧಿಸುವ ಯೋಗವೂ ಬಂತು! ಬರೀ ಬುರ್ನಾಸ್ ಭಾಷಣ-ದೂಷಣೆ ಮಾಡುವ ಮಾಣಿಯಿಂದ ಉತ್ತರ ಕನ್ನಡಕ್ಕೆ ಒಳ್ಳೆಯದೇನೂ ಆಗಲಿಲ್ಲ. ಆತನ ಹಿಂದೂತ್ವದ ದಗಲುಬಾಜಿತನ  ಭಟ್ಕಳದ ಜನರಿಗೆ ತಿಳಿಯಲು ತಡವಾಗಲಿಲ್ಲ. ಅನಂತ್ಮಾಣಿ ಮುಂದಾಳತ್ವದ ಹಿಂಜಾವೇ-ಆರೆಸ್ಸೆಸ್-ಬಿಜೆಪಿಯ “ಬೇಧವಾಕ್ಯ”ಕ್ಕೆ ಮರುಳಾಗಿ ಲಾಠಿ-ಬೂಟಿನ ಏಟಿನ ಹಿಂಸೆ, ಕೋರ್ಟು-ಕಚೇರಿ ಅಲೆದಾಟದ ನೋವು ಅನುಭವಿಸಿದ ಭಟ್ಕಳದ ಮಂದಿಗೆ ಮಾಣಿ ಅವತಾರ ಅರಿವಾಯಿತು! ಕೋಮುಗಲಭೆಯ ಉಸಾಬರಿಯಿಂದ ಜನರು ದೂರಾದರು. ಅನಂತ್ಮಾಣಿ ವಿರುದ್ಧ ತಿರುಗಿಬಿದ್ದರು. ಲೋಕಸಭೆಯ ಚುನಾವಣೆಯಲ್ಲಿ ಅನಂತ್ಮಾಣಿಗೆ ಸತತ ಹಿನ್ನಡೆಯಾಯ್ತು, ಭಟ್ಕಳದ ನೆಲೆ ಕುಸಿಯಿತು ಕಳೆಗುಂದಿದ ಮಾಣಿ  ಚಿಂತಾಕ್ರಾಂತನಾದ. ಭಟ್ಕಳದಲ್ಲಿ ಮತ್ತೆ ಹಿಂದಿನ ಹಿಡಿತ ಸಾಧಿಸಲು ಆತ ಕುತಂತ್ರ ಶುರುಹಚ್ಚಿಕೊಂಡ.
ಗೋವಿಂದ ನಾಯ್ಕ, ಸುನೀಲ್ ನಾಯ್ಕ(ಈಗ ಶಾಸಕ)ನಂಥ ಹುಂಬ ನಾಮಧಾರಿ ಯುವಕರಿಗೆ ಎಮ್ಮೆಲ್ಲೆ, ಜಿಪಂ ಸದಸ್ಯತ್ವ, ಜುಜುಬಿ ಅಧಿಕಾರದ ಆಸೆ ತೋರಿಸಿ ಗಂಟೆ(ಜಾನುವಾರು) ಹಿಡಿದು ದೊಂಬಿ ಎಬ್ಬಿಸಿ ಹಿಂದೂಗಳ ಮತಾಂಧ ಧ್ರುವೀಕರಣ ಮಾಡುವ ತರಬೇತಿ ನೀಡತೊಡಗಿದ. ಹುಚ್ಚನೊಬ್ಬನ ಕೈಲಿ ದನದ ಮಾಂಸ ಕಟ್ಟುಕೊಟ್ಟು ನಾಗರಬನದಲ್ಲಿ ಹಾಕಿಸಿದ ಭಾನ್ಗಡಿ ಮತ್ತು ಗಂಟೆ ಹಿಡಿಯೋ ಗಾಂಚಾಲಿಯ ಫಲಾನುಭವಿಯಾದ ಸುನೀಲ್ ನಾಯ್ಕ ಶಾಸಕನೂ ಆಗಿಹೋದ!
ಅನಂತ್ಮಾಣಿ ಮತ್ತು ಸುನೀಲ್ ನಾಯ್ಕ್ ಗುರು-ಶಿಷ್ಯರ ಗಂಟೆ ರಾಜಕಾರಣವೀಗ ಹಿಂದೂ ಹುಡುಗರಿಗೆ, ಅದರಲ್ಲೂ ಕಟ್ಟಾ ಬಿಜೆಪಿ ಕಾರ್ಯಕರ್ತರಾದ ದೀವರ ಪೋರರಿಗೇ ಉಲ್ಟಾ ಹೊಡೆಯುತ್ತಿದೆ. ಅನಂತ್ಮಾಣಿ-ಸುನೀಲ್ ನಂಬಿ ಗಂಟೆಗಾಡಿ(ಜಾನುವಾರು ಸಾಗಾಟದ ವಾಹನ) ಅಡ್ಡಹಾಕಿ ಅದರಲ್ಲಿದ್ದವರು ಹಿಂದುವೋ, ಸಾಬಿಯೋ ಎಂದೂ ನೋಡದೆ ಹೊಡೆದು-ಬಡಿದು ರಕ್ತ ಹರಿಸಿ ಹೀರೋ ಆಗಿ ಮೆರೆಯಲು ಹವಣಿಸಿದ ಭಂಡ ಬಿಜೆಪಿ ತರುಣರೀಗ ಜೈಲಲ್ಲಿ ಕೊಳೆಯುತ್ತಿದ್ದಾರೆ; ಅವರ ಹೆತ್ತವರು-ಒಡಹುಟ್ಟಿದವರು ಸಂಕಟ ತಡೆಯಲಾಗದೆ ಮಾಣಿ ಮತ್ತವನ ಚೇಲ ಸುನೀಲನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಜೈಲು ಪಾಲಾಗಿರುವ ಒಬ್ಬೊಬ್ಬ ಹಿಂದುಳಿದ ವರ್ಗದ ಹುಡುಗನ ಕುಟುಂಬದ ಕಣ್ಣೀರ ಕತೆ ಹೇಳತೀರದು. ಎರಡು ತಿಂಗಳಿಂದ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿರುವ ಹುಡುಗರು ಅವರವರ ಕುಟುಂಬದ ತುತ್ತಿಗೆ ಆಧಾರವಾಗಿದ್ದವರು. ದುಡಿದು ತರುವ ಮನೆ ಮಗನೇ ಇಲ್ಲದ ಉಪವಾಸ-ವನವಾಸ ಅನುಭವಿಸುತ್ತಿರುವ ಚಡಪಡಿಕೆ ಎಂಥ ಕಲ್ಲು ಹೃದಯವನ್ನೇ ಕರಗಿಸುವಂತಿದೆ. ಆದರೆ ಘಾತುಕ ಅನಂತ್ಮಾಣಿ-ಸುನೀಲ್ ನಾಯ್ಕ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹಾಯಾಗಿ ಅಧಿಕಾರ ಸುಖ ಅನುಭವಿಸುತ್ತಿದ್ದಾರೆ.
ಕಳೆದ ಮೇ 20ರಂದು ಭಟ್ಕಳದ ಮುರ್ಡೇಶ್ವರ ಬಳಿಯ ತೆರ್ನಮಕ್ಕಿ ಎಂಬಲ್ಲಿ ನಡೆದ ಗಂಟೆಗಾಡಿ ಅಡ್ಡಹಾಕಿ ಡ್ರೈವರ್-ಕ್ಲೀನರ್‍ಗೆ ಬಡಿದು, ದನ ದರೋಡೆ ಮಾಡುವ “ಹಿಂದೂತ್ವ ಅಭಿಯಾನ” ಬಿಜೆಪಿ ಮಹಾಮಹಿಮರ ವಿಕಾರಮುಖ ಅನಾವರಣಗೊಳಿಸಿಬಿಟ್ಟಿದೆ! ಹಿಂದೂತ್ವದ ಹುಲಿ ಸವಾರಿ ಹೊರಟವರನ್ನು ಅದೇ ಹುಲಿ ನುಂಗುತ್ತಿರುವುದು ಮೇಲುನೋಟಕ್ಕೆ ಮಜಾ ಅನಿಸಿದರೂ ಆಳದಲ್ಲಿ ಘನಘೋರವಾಗಿದೆ ಪರಿಸ್ಥಿತಿ!! ಅಂದು ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಹದಿನಾಲ್ಕು ವಿಶೇಷ ತಳಿಯ ಹಾಲು ಕೊಡುವ ದನ ಮತ್ತು ಕರು ಇರುವ ದೊಡ್ಡದೊಂದು ಲಾರಿ ತೆರ್ನಮಕ್ಕಿ ರಸ್ತೆಬದಿಯಲ್ಲಿ ನಿಂತಿರುತ್ತದೆ. ಗುಜರಾತ್‍ನಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ಈ ದನದ ಲಾರಿಯ ಡ್ರೈವರ್ ಮತ್ತು ಕ್ಲೀನರ್ ಗೂಡಂಗಡಿಯಲ್ಲಿ ಚಹಾ ಕುಡಿಯಲೆಂದು ಲಾರಿ ನಿಲ್ಲಿಸಿದ್ದರು. ತೆರ್ನಮಕ್ಕಿ-ಬಸ್ತಿ ಏರಿಯಾ ಎಂದರೆ ನೂತನ ಶಾಸಕ ಸಾಹೇಬ ಸುನಿಲ್ ನಾಯ್ಕನ ಪುಂಡರ ದಂಡಿನ ಗೂಂಡಾ ಮೆಟ್ಟಿನ ಸ್ಥಳ.
ಲಾರಿಯಲ್ಲಿದ್ದ ದನ-ಕರು ಕಂಡಿದ್ದೇ ತಡ, ಶಾಸಕ ಸುನಿಲ್‍ನ ಸಹಚರರಾದ ಶಬರೀಶ್ ನಾಯ್ಕ, ಜನಾರ್ದನ ನಾಯ್ಕ…. ವಗೈರೆ ಹದಿನೈದಿಪ್ಪತ್ತು ಹುಡುಗರು ಜಮೆಯಾಗಿದ್ದಾರೆ. ಸಾಬರು ಸಮೃದ್ಧವಾದ ದನ-ಕರು ಕಡಿಯಲು ಒಯ್ಯುತ್ತಿದ್ದಾರೆಂಬುದು ಗುಲ್ಲೆಬ್ಬಿಸಿದ್ದಾರೆ. “ಕಸಾಯಿಖಾನೆಗೆ ಹೋಗುತ್ತಿಲ್ಲ; ಕೊಚ್ಚಿಯ ಹಾಲಿನ ಡೈರಿಗೆ ಹೋಗುತ್ತಿದೆ ದನ-ಕರು….” ಎಂದು ಡ್ರೈವರ್-ಕ್ಲೀನರ್ ಅದೆಷ್ಟೇ ಹೇಳಿದರೂ ಕೇಳುವ ವ್ಯವಧಾನ ಶಾಸಕ ಸಾಹೇಬರ ಹಿಂಬಾಲಕರಿಗೆ ಇರಲಿಲ್ಲ. ಬರೀ ಐದೇ ದಿನದ ಹಿಂದೆ ಬಿಜೆಪಿ ಸುನಿಲ್ ನಾಯ್ಕ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಗೆದ್ದಿದ್ದ ಅಮಲಿನ್ನೂ ಆತನ ಹಿಂಬಾಲಕರಿಗೆ ಇಳಿದಿರಲಿಲ್ಲ! ಡ್ರೈವರ್-ಕ್ಲೀನರ್‍ಗೆ ಮನಸೋ ಇಚ್ಛೆ ಥಳಿಸಿ ರಕ್ತ ಹರಿಸಿದರು; ಲಾರಿಯಲ್ಲಿದ್ದ ಅಷ್ಟು ದನ-ಕರು ಇಳಿಸಿದರು. ಕೆಲವರು ದನ-ಕರು ಮನೆಗೊಯ್ದು ಕಟ್ಟಿಕೊಂಡರು; ಇನ್ನೂ ಕೆಲವರು ಒಂದಿಷ್ಟು ದನ-ಕರುವನ್ನು ಕಾಡಿಗೆ ಅಟ್ಟಿದರು. ಸುದ್ದಿ ತಿಳಿದುಬಂದ ಪೊಲೀಸರಿಗೂ ಚೆಡ್ಡಿ ರೌಡಿಪಡೆ ಹೊಡೆದು ಹಿಮ್ಮೆಟ್ಟಿಸಿತು!
ಶಾಸಕ ವೇದವ್ಯಾಸ್ ಕಾಮತ್ ಎಂಟ್ರಿ!
ತೆರ್ನಮಕ್ಕಿಯಲ್ಲಿ ಶಾಸಕ ಸುನಿಲ್‍ನ ಕೌಬ್ರಿಗೇಡ್‍ನ “ಗೋಸಂಸ್ಕರಣೆ” ಪುಣ್ಯ್ಯಕಾರ್ಯ ಮುಗಿದು, ಡ್ರೈವರ್-ಕ್ಲೀನರ್‍ನ ಪೊಲೀಸರು ಬಚಾಯಿಸಿ ಸುರಕ್ಷಿತ ಸ್ಥಳ ತಲಪುವಾಗ ರಾತ್ರಿ 10 ಗಂಟೆ ಆಗಿತ್ತು. ಆಗ ಡ್ರೈವರ್ ಗುಜರಾತಿಗೆ ನಡೆದ ಘಟನೆಯನ್ನೆಲ್ಲ ಫೋನಲ್ಲಿ ತಿಳಿಸಿದ್ದಾನೆ. ಆಗ ಎಂಟ್ರಿ ಹೊಡೆದಿದ್ದೇ ಮಂಗಳೂರು ದಕ್ಷಿಣ ಕ್ಷೇತ್ರದ ಹೊಚ್ಚಹೊಸ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್!! ಪೊಲೀಸರಿಗೆ ದನ-ಕರು ಒಂದೂ ಬಿಡದೆ ಹುಡುಕಿ ತರುವಂತೆ ಮೇಲಧಿಕಾರಿಗಳು ಖಡಕ್ ಆರ್ಡರ್ ಮಾಡುತ್ತಾರೆ. ಕೇಸ್ ಸೀರಿಯಸ್ ಆಗುತ್ತದೆ. ಬರೋಬ್ಬರಿ ಹದಿಮೂರು ಮಂದಿ ಸುನಿಲ್ ಬಂಟರ ಮೇಲೆ ದರೋಡೆ-ಹಲ್ಲೆ ಕೇಸು ಬೀಳುತ್ತದೆ. ಪೊಲೀಸರು ಪೀಕಲಾಟ ಆರಂಭವಾಗುತ್ತದೆ. ಒಂದುಕಡೆ ದನ-ಕರು ಹುಡುಕಬೇಕು; ಮತ್ತೊಂದೆಡೆ ಆರೋಪಿಗಳ ಹಿಡಿದು ತಂದು ಲಾಕಪ್ಪಿಗೆ ಜಡಿಯಬೇಕು.
ದನ-ಕರುಗಳೆಲ್ಲ ಸಿಗುತ್ತದೆ, ಆದರೆ ಅನಂತ್ಮಾಣಿ-ಸುನಿಲ್‍ನ ಸೈನ್ಯದ ಹದಿಮೂರು ಮಂದಿ ದರೋಡೆ ಕೇಸಲ್ಲಿ ಜಾಮೀನು ಸಿಗದೆ ಕಾರವಾರ ಜೈಲಿಗೆ ಹೋಗಬೇಕಾಗುತ್ತದೆ. ಇದರಲ್ಲಿ ಬಿಜೆಪಿ ಲೀಡರ್‍ಗಳ ಪ್ರಚೋದನೆಗೆ ಸಿಲುಕಿ ಗಂಟೆ ಹಿಡಿಯಲು ಬಂದ ಪಾಪದ ಪೋರರೂ ಇದ್ದಾರೆ. ಇವರಿಗೆಲ್ಲ ಎರಡು ತಿಂಗಳಿಂದ ಜಾಮೀನು ಸಿಗುತ್ತಿಲ್ಲ. ದರೋಡೆ ಕೇಸ್(ಸೆಕ್ಷನ್ 395)ಗೆ ಜ್ಜಾಮೀನು ಇಲ್ಲ. ಅದು ನಾನ್ ಬೇಲಬಲ್!! ಗಂಟೆ ಹುಡುಗರ ಕೇಸು ಇಷ್ಟು ಗಟ್ಟಿಯಾಗಲು ಕಾರಣವೇನು ಗೊತ್ತಾ? ಗುಜರಾತ್‍ನಿಂದ ಹೊರಟಿದ್ದ ದನ-ಕರು ಲಾರಿ ಹೋಗುತ್ತಿದ್ದದ್ದು ಕೇರಳ ಕೊಚ್ಚಿಯ ಹಾಲು ಡೈರಿಗೆ. ಇದು ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್‍ನ ಸಹೋದರನದು. ವಿಶೇಷ ತಳಿಯ ದುಬಾರಿ ಹಸುಗಳನ್ನು ಕೊಂಡುಕೊಂಡಿದ್ದರು ಕಾಮತ್ ಬ್ರದರ್ಸ್! ಹೀಗಾಗಿ ಕೆರಳಿದ ಕಾಮತ್ ಶಾಸಕಗಿರಿ ಬಲ ಬಳಸಿ ಪೊಲೀಸರ ಮೇಲೆ ಒತ್ತಡ ಹಾಕಿ ದನ-ಕರು ಹುಡುಕಿ ತಂದುಕೊಡುವಂತೆ ಪ್ಲಾನು ಮಾಡಿದ್ದರು.
ಮೊದ-ಮೊದಲು ಭಟ್ಕಳ ಕೇಸರಿ ಶಾಸಕ ಸುನಿಲ್‍ನಾಯ್ಕ ಹಿಂಬಾಲಕರ ಬಚಾಯಿಸಲು ಪ್ರಯತ್ನ ಮಾಡಿದ್ದಾನೆ. ಯಾವಾಗ ತನ್ನ ಪಕ್ಷದ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್‍ನ ಫೋನು ಬಂತೋ ಆಗ ಅನುಯಾಯಿಗಳ ಬಲಿಗೊಟ್ಟು ತಲೆ ತಪ್ಪಿಸಿಕೊಂಡಿದ್ದಾನೆ. ಜಾಮೀನು ಕೊಡಿಸಿ ಎಂದು ಹೋದವರಿಗೆ- “ಆ ಗಂಟೆಗಾಡಿ ಮುಟ್ಟು ಕೆಲ್ಸ ಎಂತ ಇದ್ದಿತ್ತು ಮಾರಾಯ್ರೆ…. ದನ-ಕರು ಬಿಚ್ಚಿ ಓಡಿಸ್ತ್ರು ಅಂದ್ರೆ…? ಡ್ರೈವರ್‍ಗೆ ಅಷ್ಟೆಲ್ಲ ಹೊಡೋದೆಂತಕ್ಕಿಂತು… ಅವ್ರೆಂಥ ಹೊಟ್ಟೆಗೆ ಅನ್ನ ತಿಂತ್ರೋ… ಸಗಣಿ ತಿಂತ್ರೋ…” ಎಂದಬ್ಬರಿಸಿದ್ದಾನೆ. ಅಲ್ಲಿಗೆ ಆತನ ಗೆಲ್ಲಿಸಲು ಬೆವರಿಳಿಸಿದ ಹಿಂದೂತ್ವದ ಅಮಲುಕೋರರ ನಶೆ ಇಳಿದಿದೆ. ಸುನಿಲ್ ಢೋಂಗಿ ಅಂತ ಸಾಬ್ರ ಫ್ರೆಂಡು; ಅವ್ರ ಸಂಗ್ತಿಗೆ ಪಾರ್ಟಿ ಮಾಡ್ತಾ ಮಹಾ ಮೋಸಗಾರ ಎಂದೆಲ್ಲ ಸಾಹಿತ್ಯ ಸೃಷ್ಟಿಸಿ ವಾಟ್ಸ್‍ಆ್ಯಪ್‍ಗೆ ಹಾಕಿದ್ದಾರೆ. ಸಾಬರ ಜತೆ ಆತ ಉಣ್ಣುತ್ತ ಕುಳಿತ ಫೋಟೋ ಅಂತೂ ವೈರಲ್ ಆಗಿದೆ ಹಿಂದೂ ಹುಡುಗರ ನಡುವೆ.
ಭಟ್ಕಳದ ಹಿಂದೂಗಳು ಕೆರಳುತ್ತಿರುವ ವರ್ತಮಾನ ಕೇಳಿದ ಕೇಂದ್ರಮಂತ್ರಿ ಅನಂತ್ಮಾಣಿ ಇದು ತನಗೆ ಮುಂದಿನ ಪಾರ್ಲಿಮೆಂಟ್ ಇಲೆಕ್ಷನ್‍ನಲ್ಲಿ ದುಬಾರಿಯಾಗುತ್ತದೆ ಎಂದು ಲೆಕ್ಕಹಾಕಿ ರಾಜಿಗೆ ನೋಡಿದ್ದಾನೆ. ಕೇಸು ವಾಪಸ್‍ಗೆ ಶಾಸಕ ವೇದವ್ಯಾಸ್ ಕಾಮತ್ ಪರಿವಾರ ಒಪ್ಪದೆ ಅನಂತ್ಮಾಣಿ ನೀರಿಳಿಸಿದ್ದಾರೆ. ದರೋಡೆ ಕೇಸು ವಾಪಸ್ ತೆಗೆಸುವುದು ಅಷ್ಟು ಸುಲಭವಲ್ಲ ಎಂದು ಪೊಲೀಸರು ಮಾಣಿಗೆ ಬುದ್ದಿ ಹೇಳಿದ್ದಾರೆ. ಇದಕ್ಕೆ ಕೋರ್ಟ್ ಒಪ್ಪುವುದು ಕಷ್ಟ ಆಗ ಪೊಲೀಸರ ತಲೆದಂಡವಾಗುತ್ತದೆ. ಸಂದಿಗ್ಧಕ್ಕೆ ಸಿಲುಕಿದ ಅನಂತ್ಮಾಣಿ ಈ ಗಂಟೆ ಗಲಾಟೆಯಿಂದ ಸಾವಕಾಶವಾಗಿ ದೂರವಾಗಿದ್ದಾನೆ. ದಿಲ್ಲಿ-ಬೆಂಗಳೂರಲ್ಲಿ ಬಿಜಿ ಎಂದ್ಹೇಳಿ ನಾಟಕ ನಡೆಸಿದ್ದಾನೆ. ಅಲ್ಲಿಗೆ “ಹಿಂದೂ ಹುಲಿ” ಅನಂತ್ಮಾಣಿಯ ನರಿಗಿರಿ ಬಟಾಬಯಲಾಗಿದೆ. ಅನಂತ್ಮಾಣಿಗೆ ಭಟ್ಕಳದ ಹುಡುಗರು ಸಲೀಸಾಗಿ ಜೈಲಿಂದ ಬರುವುದು ಬೇಕಾಗಿಲ್ಲ, ಅಲ್ಲಿ ಆ ಹುಡುಗರು ಕೊಳೆತಷ್ಟೂ ಇಲ್ಲಿ ಭಟ್ಕಳ ಮತ್ತಿತರೆಡೆ ಹಿಂದೂಗಳಲ್ಲಿ ಹಿಂದೂತ್ವದ ಕೆಚ್ಚು ಹೆಚ್ಚುತ್ತದೆ. ಅದು ಮುಂದಿನ ಇಲೆಕ್ಷನ್‍ನಲ್ಲಿ ಬಿಜೆಪಿಗೆ ಓಟಾಗಿ ಪರಿವರ್ತನೆ ಆಗುತ್ತದೆ ಎಂಬ ದೂ(ದು)ರಾಲೋಚನೆ ಮಾಣಿಯದು. ಇನ್ನೊಂದು ಕಾರಣ-ಸ್ವಪಕ್ಷದ ಮಂಗಳೂರು ಎಮ್ಮೆಲ್ಲೆ ಕಾಮತ್‍ಗೆ ತೊಂದರೆ ಆಗಬಾರದೆಂಬುದು.
ಬಡ ದೀವರ ಪೋರರ ಬಲಿಕೊಟ್ಟು ಲಾಭ-ನಷ್ಟದ ಲೆಕ್ಕಾಚಾರ ಮಾಣಿ ಹಾಕುತ್ತಿದ್ದಾನೆ. ಇಷ್ಟಕ್ಕೂ ಭಟ್ಕಳ ಬಿಜೆಪಿ ಭೂಪರಿಗೆ, ಶಾಸಕ ಸುನಿಲ್ ನಾಯ್ಕನಿಗೆ ಮತ್ತು ಕೇಂದ್ರ ಮಂತ್ರಿ ಅನಂತ್ಮಾಣಿಗೆ ಜೈಲಲ್ಲಿರುವ 13 ಮಂದಿ ಬಿಜೆಪಿ ಬೆಂಬಲಿಗರಿಗೆ ಜಾಮೀನು ಕೊಡಿಸೋದು ಕಷ್ಟದ ಕೆಲಸವೇನೂ ಅಲ್ಲ, 13 ಜನರ ಮೇಲೆ ಎರಡು ಎಫ್‍ಐಆರ್ ಆಗಿತ್ತು. ಸೆಕ್ಷನ್ 353ರಲ್ಲಿ ಬೇಲಾಗಿದೆ. ಇನ್ನೊಂದರಲ್ಲಿ(395) ದೂರುಕೊಟ್ಟ ಡ್ರೈವರ್ ಹತ್ತಿರ ಮರುಹೇಳಿಕೆ ಪಡೆದು 395ನೇ ಸೆಕ್ಷನ್ ವಾಪಸ್ ಪಡೆಯಲು ಅವಕಾಶವಿತ್ತು. ಕಂಪ್ಲೇಂಟು ವಾಪಸ್ ಪಡೀಬೇಕೆಂದು ಲಾರಿ ಚಾಲಕ ಗುಜರಾತಿಂದ ಒಮ್ಮೆ ಬಂದಿದ್ದ. ಆಗ ಬಿಜೆಪಿ ಎಂಪಿ ಮಂತ್ರಿ-ಎಮ್ಮೆಲ್ಲೆ ಯಾರೂ ಕೇರ್ ಮಾಡಲಿಲ್ಲ, ಇದರರ್ಥ ಇಷ್ಟೇ-ಲೋಕಸಭೆ ಇಲೆಕ್ಷನ್ ಬರುವವರೆಗೆ ಕಂಡವರ ಮನೆ ಮಕ್ಕಳು ಸಾಯಬೇಕು. ಜೈಲಿಗೆ ಬೀಳಬೇಕು. ಆಗ ಬಿಜೆಪಿ ಭರ್ಜರಿ ಲಾಭ ಗಳಿಸುತ್ತದೆಂಬ ಕ್ರೂರ ರಾಜಕಾರಣ ನೀತಿ ಸಂಘಪರಿವಾರದ್ದು.
ಇಲ್ಲೊಂದು ಮಹತ್ವದ-ಅಚ್ಚರಿಯ ಸಂಗತಿಯೊಂದಿದೆ. ದನಗಳು ಬಿಜೆಪಿಯ ಮಂಗಳೂರು ಶಾಸಕನ ಕುಟುಂಬದ್ದು, ದನ ಸಾಗಿಸುತ್ತಿದ್ದದ್ದು ಕಾಮತರ ಫ್ಯಾಮಿಲಿಯ ಬಿಜೆಪಿಗರೇ. ದನ ಹಿಡಿದದ್ದು ಭಟ್ಕಳ ಬಿಜೆಪಿ ಭಂಡ ಹುಡುಗರು. ಅವರ ಮೇಲೆ ನಾನ್‍ಬೇಲೇಬಲ್ ಕೇಸು ಹಾಕಿಸಿದ್ದು ಬಿಜೆಪಿ ಶಾಸಕ! ಜೈಲಲ್ಲಿರುವ ಅಮಾಯಕರಿಗೆ ಬೇಲ್ ಕೊಡಿಸುತ್ತೇವೆಂದು ನಯವಂಚನೆ-ಮೋಸ ಮಾಡುತ್ತಿರುವುದೂ ಬಿಜೆಪಿಯ ಸ್ವಯಂ ಘೋಷಿತ  ನಾಯಕ ಅನಂತ್ಮಾಣಿ, ಆತನ ಆಜ್ಞಾನುದಾರಿ ಶಿಷ್ಯ-ಶಾಸಕ ಸುನಿಲ್ ನಾಯ್ಕ ಮತ್ತು ಸ್ಥಳೀಯ ಬಿಜೆಪಿ ಲೀಡರ್‍ಗಳು. ಜೈಲಲ್ಲಿ ಇರುವವರ ಬಿಡಿಸುವ ಮನಸ್ಸು ಇದ್ದರೆ ಈ ಬಿಜೆಪಿಗಳಿಗೆಲ್ಲ ನಿರ್ಧಾರ ಮಾಡೋದು ಒಂದು ನಿಮಿಷದ ಕೆಲಸ. ಆದರೆ ಸಂತ್ರಸ್ತ ಕುಟುಂಬದವರನ್ನು ಅನಂತ್ಮಾಣಿ ಗ್ಯಾಂಗ್ ಬೇಲ್ ಮಾಡಿಸುತ್ತೇವೆಂದು ಮಂಗ ಮಾಡುತ್ತಿದೆ. ತನ್ನ ರಾಜಕೀಯ-ಆರ್ಥಿಕ ಲಾಭದ ಹಿಂದೂತ್ವದ ಹೋರಾಟಕ್ಕೆ ಅಮಾಯಕ ಶೂದ್ರರನ್ನು ಕಾಲಾಳುಗಳಾಗಿ ಮಾಡಿಕೊಳ್ಳುವ ಬ್ರಾಹ್ಮಣಿಕೆ ನಂಜಿನ ಮಾಣಿ ಮಸಲತ್ತೀಗ ಜನರಿಗೆ ಅರ್ಥವಾಗುತ್ತಿದೆ. ಇದು ಮುಂದಿನ ಚುನಾವಣೆಯಲ್ಲಿ ಮಾಣಿಗೆ ದೊಡ್ಡ “ದಂಡ” ಆಗುವುದಂತೂ ಗ್ಯಾರಂಟಿ.
– ವರದಿಗಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...