ಸಿಎಎ ವಿರೋಧಿ ಕಾರ್ಯಕರ್ತೆ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಿದ್ಯಾರ್ಥಿನಿ ಸಫೂರಾ ಜರ್ಗರ್ ಕಡೆಗೂ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ನಾಲ್ಕನೇ ಜಾಮೀನು ಅರ್ಜಿಯ ವಿಚಾರಣೆಯ ಮೂರನೇ ದಿನದಂದು ಆಕೆಗೆ ‘ಮಾನವೀಯ ಆಧಾರದ ಮೇಲೆ’ ಜಾಮೀನು ನೀಡಲಾಯಿತು.
23 ವಾರಗಳ ಗರ್ಭಿಣಿಯಾಗಿರುವ ಸಫೂರ ಅವರ ಜಾಮೀನು ಅರ್ಜಿಗಳನ್ನು ಇದುವರೆಗೂ ಮೂರು ಬಾರಿ ತಿರಸ್ಕರಿಸಲಾಗಿತ್ತು. ದೆಹಲಿ ಗಲಭೆಗಳೊಂದಿಗೆ ಅವಳ ಸಂಬಂಧವಿದೆ ಎಂದು ಆರೋಪಿಸಿರುವ ಪ್ರಕರಣವೊಂದರಲ್ಲಿ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ಅತ್ಯಂತ ಕಠಿಣ ಕಾನೂನುಗಳ ಅಡಿಯಲ್ಲಿ ಅವಳನ್ನು ಏಪ್ರಿಲ್ 10 ರಿಂದ ತಿಹಾರ್ ಜೈಲಿನಲ್ಲಿ ಬಂಧಿಸಲಾಗಿದೆ.
ಕಳೆದ ಒಂದು ದಶಕದಲ್ಲಿ ದೆಹಲಿ ಕಾರಾಗೃಹದಲ್ಲಿ 39 ಗರ್ಭಿಣಿಯರು ಜನ್ಮ ನೀಡಿದ್ದಾರೆ. ಹಾಗಾಗಿ ಗರ್ಭಿಣಿ ಆಧಾರದಲ್ಲಿ ಜಾಮೀನು ನೀಡಬಾರದೆಂಬ ದೆಹಲಿ ಪೊಲೀಸರ ವಾದವನ್ನು ದೆಹಲಿ ಹೈಕೋರ್ಟ್ ತಳ್ಳಿಹಾಕಿದೆ.
ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ಸಫೂರ ಭಾಗವಹಿಸಿದ್ದರು. ಜಾಫ್ರಾಬಾದ್ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸಿದ್ದ ಕಾರಣಕ್ಕೆ ಅವರ ಮೇಲೆ ಗಲಭೆಯ ಪಿತೂರಿ ಆರೋಪವನ್ನು ಹೊರಿಸಲಾಗಿದೆ.
ಇದನ್ನೂ ಓದಿ: ಸಫೂರಾ ಜರ್ಗರ್: ಗರ್ಭಿಣಿ ಮಾನದಂಡದಡಿ ಜಾಮೀನು ನೀಡಲಾಗುವುದಿಲ್ಲವೆಂದ ದೆಹಲಿ ಪೊಲೀಸರು!