Homeಮುಖಪುಟಸಫೂರಾ ಜರ್ಗರ್: ಗರ್ಭಿಣಿ ಮಾನದಂಡದಡಿ ಜಾಮೀನು ನೀಡಲಾಗುವುದಿಲ್ಲವೆಂದ ದೆಹಲಿ ಪೊಲೀಸರು!

ಸಫೂರಾ ಜರ್ಗರ್: ಗರ್ಭಿಣಿ ಮಾನದಂಡದಡಿ ಜಾಮೀನು ನೀಡಲಾಗುವುದಿಲ್ಲವೆಂದ ದೆಹಲಿ ಪೊಲೀಸರು!

- Advertisement -
- Advertisement -

ಯುಎಪಿಎ ಆರೋಪಿ ಸಫೂರಾ ಜರ್ಗರ್ ಕುರಿತ ವಿಚಾರಣೆಯಲ್ಲಿ ಎರಡನೇ ದಿನ ದೆಹಲಿ ಹೈಕೋರ್ಟ್‌ನಲ್ಲಿ ಅವರ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ರಾಜೀವ್ ಶಖ್ದರ್ ಅವರು ಜೂನ್ 23 ಕ್ಕೆ ಮುಂದೂಡಿದರು.

ಜಾಮೀನು ಪಡೆಯಲು ಇದು ಅವರ ನಾಲ್ಕನೇ ಪ್ರಯತ್ನವಾಗಿದ್ದು ಇಂದು ಸಹ ಸುಮಾರು 24 ವಾರಗಳ ಗರ್ಭಿಣಿಗೆ ಸಫೂರಾಗೆ ಜಾಮೀನು ಸಿಗಲಿಲ್ಲ. ಎಫ್‌ಐಆರ್ ಸಂಖ್ಯೆ 59ರ ಅಡಿಯಲ್ಲಿ ಜಾಮೀನು ನಿರಾಕರಿಸುವ ವಿಚಾರಣಾ ನ್ಯಾಯಾಲಯದ ಜೂನ್ 4 ರ ಆದೇಶವನ್ನು ಆಕೆಯ ವಕೀಲರು ಪ್ರಶ್ನಿಸಿದ್ದಾರೆ.

ದೆಹಲಿ ಪೊಲೀಸರು ಈಶಾನ್ಯ ದೆಹಲಿ ಗಲಭೆಯಲ್ಲಿ ಪಿತೂರಿ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದು, ಕಟ್ಟುನಿಟ್ಟಾದ ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಯನ್ನು ಸಫೂರ ಮೇಲೆ ಹಾಕಲಾಗಿದೆ.

ಜಾಮೀನಿಗೆ ಗರ್ಭಿಣಿ ಎಂಬುದು ಮಾನದಂಡವಲ್ಲ

ಕಳೆದ ಹತ್ತು ವರ್ಷಗಳಲ್ಲಿ ತಿಹಾರ್ ಜೈಲಿನಲ್ಲಿ ಮೂವತ್ತೊಂಬತ್ತು ಹೆರಿಗೆಗಳು ನಡೆದಿವೆ ಮತ್ತು ಸಫೂರಾಗೆ ಸಾಕಷ್ಟು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಾದಿಸಿದ ಪೊಲೀಸರು, ಆಕೆಯ ಗರ್ಭಧಾರಣೆಯು ಜಾಮೀನು ನೀಡಲು ಆಧಾರವಾಗಿರಬಾರದು  ಪ್ರತಿಪಾದಿಸಿದ್ದಾರೆ.

“ಈ ವಿಷಯದಲ್ಲಿ ಕಾನೂನು ಯಾವುದೇ ವ್ಯತ್ಯಾಸವನ್ನು ತೋರಿಸುವುದಿಲ್ಲ. ಗರ್ಭಿಣಿ ಅಪರಾಧಿಯನ್ನು ಎದುರಿಸಲು ಕಾನೂನು ನಿಸ್ಸಂದಿಗ್ಧವಾಗಿ ಆಲೋಚಿಸುತ್ತಿದೆ ಎಂದು ಹೇಳಲಾಗಿದೆ. ಈ ಹಿಂದೆಯು ಗರ್ಭಿಣಿ ಆರೋಪಿಗಳನ್ನು ವಿಚಾರಣೆ ನಡೆಸಲಾಗಿದೆ” ಎಂದು ಪೊಲೀಸರು ವಾದಿಸಿದ್ದಾರೆ.


ಇದನ್ನೂ ಓದಿ: ಸಫೂರಾ ಝರ್ಗರ್‌ ಸೇರಿದಂತೆ ಸಾಮಾಜಿಕ ಕಾರ್ಯಕರ್ತರ ಬಿಡುಗಡೆಗೆ 500 ಗಣ್ಯರ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Fact Check : ನಿರುದ್ಯೋಗ ಕುರಿತ ಬಿಜೆಪಿ ಸಂಸದನ ಹೇಳಿಕೆಯ ವಿಡಿಯೋ ‘ಡೀಪ್ ಫೇಕ್’...

0
ಯೂಟ್ಯೂಬರ್ ಒಬ್ಬರು ನಿರುದ್ಯೋಗದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉತ್ತರ ಪ್ರದೇಶದ ಆಝಂಗಢ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಅಥವಾ ನಿರಹುವಾ ಅವರು "ಪ್ರಧಾನಿ...