Homeಮುಖಪುಟ'She Man': ನೋಯ್ಡಾ ಮೆಟ್ರೋ ಸ್ಟೇಷನ್ ಹೆಸರಿಗೆ ಟ್ರಾನ್ಸ್‌ಜೆಂಡರ್ ಸಮುದಾಯದ ವಿರೋಧ

‘She Man’: ನೋಯ್ಡಾ ಮೆಟ್ರೋ ಸ್ಟೇಷನ್ ಹೆಸರಿಗೆ ಟ್ರಾನ್ಸ್‌ಜೆಂಡರ್ ಸಮುದಾಯದ ವಿರೋಧ

- Advertisement -
- Advertisement -

ಟ್ರಾನ್ಸ್‌ಜೆಂಡರ್ ಹಕ್ಕುಗಳನ್ನು ಉತ್ತೇಜಿಸುವ ಉದ್ದೇಶದಿಂದ, ನೋಯ್ಡಾ ಮೆಟ್ರೋ ರೈಲು ನಿಗಮವು ಆಕ್ವಾ ಸಾಲಿನಲ್ಲಿರುವ ಸೆಕ್ಟರ್ 50 ನಿಲ್ದಾಣವನ್ನು ‘She Man’ ಎಂದು ಮರುನಾಮಕರಣ ಮಾಡುವುದಾಗಿ ಇತ್ತೀಚೆಗೆ ಘೋಷಿಸಿತು.

ಆದರೆ ದೆಹಲಿ-ಎನ್‌ಸಿಆರ್ ಪ್ರದೇಶದ ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಮೆಟ್ರೊ ನಿಗಮವು ತನ್ನ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದು, ಇದನ್ನು “ಟ್ರಾನ್ಸ್‌ಫೋಬಿಕ್” ಮತ್ತು “ಸಂವೇದನೆಯಿಲ್ಲದ” ಕ್ರಮ ಎಂದು ದೂರಲಾಗಿದೆ.

ಡಾ. ಅಕ್ಸಾ ಶೇಖ್, ತನ್ನನ್ನು ತಾನು ಟ್ರಾನ್ಸ್ ಮಹಿಳೆ ಎಂದು ಗುರುತಿಸಿಕೊಳ್ಳುತ್ತಾಳೆ, ಮೆಟ್ರೊ ನಿಲ್ದಾಣವನ್ನು ‘She Man’ ಎಂದು ಮರುನಾಮಕರಣ ಮಾಡುವ ನಿರ್ಧಾರವು ಸಮುದಾಯಕ್ಕೆ ಅವಹೇಳನಕಾರಿ ಎಂಬುದು ಅವರ ಅಭಿಪ್ರಾಯವಾಗಿದೆ.

She Man ಎಂಬ ಪದವು ಅವಹೇಳನಕಾರಿಯಾಗಿದೆ. ಇದರರ್ಥ ಗಂಡು ಮತ್ತು ಹೆಣ್ಣಿನ ಮಿಶ್ರಣವಾಗಿರುವವರು ಎಂಬುದಾಗಿದೆ. ಅರ್ಧ ಗಂಡು ಮತ್ತು ಅರ್ಧ ಹೆಣ್ಣು ಎನ್ನುವುದು ಸರಿಯಲ್ಲ. ಮತ್ತು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ತಮ್ಮನ್ನು ಹೇಗೆ ವ್ಯಾಖ್ಯಾನಿಸಲು ಬಯಸುತ್ತಾರೆ ಎಂಬ ಮನೋಭಾವಕ್ಕೆ ವಿರುದ್ಧವಾಗಿದೆ ಎನ್ನುತ್ತಾರೆ ಡಾ.ಅಕ್ಸಾ ಶೇಖ್.

She Male, She Man, Lady Boy ನಂತಹ ಪದಗಳನ್ನು ಸಮುದಾಯದ ಸದಸ್ಯರ ವಿರುದ್ಧ ಅಸಭ್ಯವಾಗಿ ಬಳಸಲಾಗುತ್ತಿದೆ. ಸರಳವಾದ ಗೂಗಲ್ ಹುಡುಕಾಟವು ಇದನ್ನು ಯಾರಿಗಾದರೂ ತಿಳಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಒಮ್ಮೆ ದಕ್ಷಿಣ ಭಾರತದಲ್ಲಿ ಸಮುದಾಯವು ಅಂಗೀಕರಿಸಿದ್ದ ತಿರುನಂಗೈ (ಪುರುಷ ಮತ್ತು ಮಹಿಳೆ) ಎಂಬ ಪದವನ್ನು 2019 ರಲ್ಲಿ ಹಿಂತೆಗೆದುಕೊಳ್ಳಲಾಯಿತು. ಹಿಂದಿ ಅನುವಾದವು ‘ಉಭೈಲಿಂಗಿ’ ಪದವನ್ನು ಬಳಸುತ್ತದೆ. ಇದು ಇಂಟರ್‌ಸೆಕ್ಸ್ ವ್ಯಕ್ತಿಗಳಿಗೆ ಸೂಕ್ತವಾಗಬಹುದು ಆದರೆ ಖಂಡಿತವಾಗಿಯೂ ಇಡೀ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಅಲ್ಲ ಎಂಬುದು ಅವರ ಅಭಿಪ್ರಾಯ.

ನಿಲ್ದಾಣವನ್ನು ಮರುಹೆಸರಿಸುವ ಉದ್ದೇಶವೇನು?

ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ನೋಯ್ಡಾ ಮೆಟ್ರೋ ಅಧಿಕಾರಿಗಳು, “ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ” ಸಂಬಂಧಿಸಿದಂತೆ ನಿಲ್ದಾಣದ ಸಿಬ್ಬಂದಿಗೆ ಸಂವೇದನೆ ಮತ್ತು ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ.

“2011 ರ ಜನಗಣತಿ ಪ್ರಕಾರ ಭಾರತದಲ್ಲಿ 4.9 ಲಕ್ಷ ಟ್ರಾನ್ಸ್‌ಜೆಂಡರ್‌ಗಳಿದ್ದಾರೆ. ಅದರಲ್ಲಿ 30,000-35,000 ಜನರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಉಳಿದಿದ್ದಾರೆ. ಟ್ರಾನ್ಸ್‌ಜೆಂಡರ್ ಸಮುದಾಯದ ಅರ್ಥಪೂರ್ಣ ಸೇರ್ಪಡೆ ಮತ್ತು ಭಾಗವಹಿಸುವಿಕೆಯನ್ನು ನೀಡುವಲ್ಲಿ ಈ ಕ್ರಮವು ಒಂದು ಪ್ರಮುಖ ಹೆಜ್ಜೆಯಾಗಿದೆ. ನಿಲ್ದಾಣದ ಹೆಸರಿಡುವುದು ಜಾಗೃತಿ ಮತ್ತು ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ”ಎಂದು ಎನ್‌ಎಂಆರ್‌ಸಿಯ ಎಂಡಿ ರಿತು ಮಹೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಸರಿನ ಬಗ್ಗೆ ಕೇಳಿದಾಗ, ‘She Man’ ಎಂಬ ಪದವನ್ನು ನಿರ್ದೇಶಕರ ಮಂಡಳಿ ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಎನ್‌ಜಿಒಗಳು ಸೇರಿದಂತೆ ಹಲವರಿಂದ ಸೂಚಿಸಲ್ಪಟ್ಟಿದೆ ಎಂದು ಹೇಳಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ; ಸಫೂರಾ ಜರ್ಗರ್: ಗರ್ಭಿಣಿ ಮಾನದಂಡದಡಿ ಜಾಮೀನು ನೀಡಲಾಗುವುದಿಲ್ಲವೆಂದ ದೆಹಲಿ ಪೊಲೀಸರು! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...