Homeಮುಖಪುಟಬೆಂಗಳೂರಿನ ಹೊರಗೂ ರೈಲಿಗಾಗಿ ಕಾಯುತ್ತಿರುವ ವಲಸೆ ಕಾರ್ಮಿಕರು: ಇತ್ತ ಹರಿಯುವುದೇ ಸರ್ಕಾರದ ಗಮನ?

ಬೆಂಗಳೂರಿನ ಹೊರಗೂ ರೈಲಿಗಾಗಿ ಕಾಯುತ್ತಿರುವ ವಲಸೆ ಕಾರ್ಮಿಕರು: ಇತ್ತ ಹರಿಯುವುದೇ ಸರ್ಕಾರದ ಗಮನ?

- Advertisement -
- Advertisement -

ಕೊರೊನಾ ಲಾಕ್ ಡೌನ್ ನಿಂದಾಗಿ ದೇಶದಾದ್ಯಂತ ವಲಸಿಗ ಕಾರ್ಮಿಕರು ಬೇರೆ ಬೇರೆ ಕಡೆ ಸಿಕ್ಕಿಬಿದ್ದಿದ್ದು, ಅಲ್ಲಿ ದುಡಿಮೆಯಿಲ್ಲದೇ ಹೊಟ್ಟೆಗೆ ಅನ್ನವೂ ಇಲ್ಲದೆ ಹತಾಶರಾಗಿ ಸಾವಿರಾರು ಕಿಲೋಮೀಟರ್ ದೂರದ ತಮ್ಮ ರಾಜ್ಯಗಳಿಗೆ ಬರಿ ಕಾಲಲ್ಲೇ ಹೊರಟು ದಾರಿಯಲ್ಲಿ ಅಫಘಾತ ಸಂಭವಸಿ ಹಾಗೂ ಬಳಲಿ ಜೀವ ಬಿಟ್ಟ ನಂತರ, ಎಲ್ಲೆಡೆಯಿಂದ ಕೇಂದ್ರ ಸರ್ಕಾರದ ವಿರುದ್ದ ಟೀಕೆಗಳು ಬಂದದ್ದರಿಂದ ವಿಶೇಷ ಶ್ರಮಿಕ ರೈಲುಗಳನ್ನು ಬಿಟ್ಟಿದೆ.

ಕೇಂದ್ರ ಸರ್ಕಾರ ಈ ರೈಲಿನ ದರವನ್ನು 85% ತಾನು ಪಾವತಿಸುವುದಾಗಿ ಹೇಳಿದ್ದರೂ, ರಾಜ್ಯದ ವಿವಿದ ಭಾಗಗಳಿಂದ ವಲಸೆ ಕಾರ್ಮಿಕರೇ ಹಣವನ್ನು ತೆತ್ತು ಪ್ರಯಾಣಿಸುತ್ತಿರುವ ವರದಿಗಳು ಬರುತ್ತಿವೆ. ರಾಜ್ಯದಲ್ಲೂ ಬೆಂಗಳೂರನ್ನು ಕೇಂದ್ರವಾಗಿಸಿ ರೈಲುಗಳನ್ನು ಬಿಡುತ್ತೇವೆಂದು ಹೇಳಿದ ನಂತರ ಯಾವುದೋ ಹಿತಾಸಕ್ತಿಗೆ ಮಣಿದು ರೈಲನ್ನು ರದ್ದು ಮಾಡಿತ್ತು. ಇದರ ನಂತರ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ ಬಂದದ್ದರಿಂದ ರೈಲುಗಳನ್ನು ಬಿಡಲು ಒಪ್ಪಿಕೊಂಡು ರೈಲು ಪ್ರಯಾಣವನ್ನು ಪ್ರಾರಂಭಿಸಿತ್ತು.

ಆದರೆ ಸದ್ಯದ ಪರಿಸ್ಥಿತಿಯೇನೆಂದರೆ ಬೆಂಗಳೂರಿನ ಹೊರಗಿನ ಜಿಲ್ಲೆಗಳಲ್ಲೂ ಹಲವಾರು ವಲಸೆ ಕಾರ್ಮಿಕರು ಬಾಕಿಯಾಗಿದ್ದಾರೆ. ಹೆಚ್ಚಿನ ಕಾರ್ಮಿಕರಿಗೆ ನಡೆಯುತ್ತಿರುವ ವಿದ್ಯಮಾನಗಳೇನೂ ತಿಳಿಯದೇ ಇನ್ನೂ ಹತಾಶರಾಗಿ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಲ್ಪೆ ಬಂದರಿನಲ್ಲಿ ಇದ್ದ 400ರಷ್ಟು ವಲಸೆ ಕಾರ್ಮಿಕರು ಹೀಗೆಯೇ ಸಿಕ್ಕಿ ಬಿದ್ದಿದ್ದರು. ಮೀನುಗಾರಿಕೆಗೆ ಈಗ ಸೀಸನ್ ಆಗಿರುವುದರಿಂದ ಅವರನ್ನು ಕಳುಹಿಸಿಕೊಡಲು ಉದ್ಯೋಗದಾತರಿಗೂ ಮನಸಿರಲಿಲ್ಲ, ಅವರನ್ನು ಕರೆಸಿಕೊಳ್ಳಲೂ ಅವರ ಸರ್ಕಾರಕ್ಕೂ ಮನಸಿಲ್ಲದೇ ಇರುವುದರಿಂದ ಬಂದರಿನಲ್ಲಿಯೇ ಬಾಕಿಯಾಗಿದ್ದರು. ನಂತರ ಸಾಮಾಜಿಕ ಕಾರ್ಯಕರ್ತರು ಆಂಧ್ರ ಪ್ರದೇಶದ ವಿಪಕ್ಷ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಿ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಗಿತ್ತು.

ಆಂಧ್ರದ ಈ ವಲಸಿಗರ ನಡುವೆ ಇದ್ದ 6 ಉತ್ತರ ಪ್ರದೇಶದ ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ. ಅವರೊಂದಿಗೆ ಇದ್ದ ಇತರರಲ್ಲಿ ಕೇಳಿದಾಗ ಅವರು ನಡೆದುಕೊಂಡು ಹೊರಟಿದ್ದಾರೆಂದು ಹೇಳಲಾಗುತ್ತಿದೆಯಾದರೂ, ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಅವರಿಗಾಗಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ.

ಆದರೂ ಮಾಹಿತಿಯ ಕೊರತೆಯಿಂದ ಇನ್ನೂ ಉಡುಪಿಯಾದ್ಯಂತ ಸುಮಾರು 263 ಜಾರ್ಖಂಡ್ ವಲಸೆ ಕಾರ್ಮಿಕರು ಬಾಕಿಯಾಗಿದ್ದಾರೆ ಎಂಬುದು ಅವರ ಅನಿಸಿಕೆ. ಮೊನ್ನೆ ದಿನಾಂಕ 10ರಂದು ಶ್ರಮಿಕ್ ರೈಲೊಂದು ಜಾರ್ಖಂಡಿನ ಹಟಿಯಾಗೆ ಮಂಗಳೂರಿನಿಂದ ಉಡುಪಿ ಮೂಲಕ ಹೊರಟಿದ್ದರೂ, ಉಡುಪಿಯಲ್ಲೇ ಉಳಿದಿರುವ ವಲಸಿಗ ಕಾರ್ಮಿಕರಿಗೆ ಅದು ತಿಳಿದಿಲ್ಲ. ರಾಜ್ಯ ಸರ್ಕಾರ ಕೇವಲ ಬೆಂಗಳೂರನ್ನು ಕೇಂದ್ರೀಕರಿಸಿದ್ದರಿಂದ ಆದ ಪ್ರಮಾದಗಳಿವು.

ವಲಸಿರಿಗಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರ ಪ್ರಕಾರ ಈ ಕಾರ್ಮಿಕರನ್ನು ಕೇವಲ ಯಂತ್ರಗಳಂತೆ ಮಾಲೀಕರು ಬಳಸುತ್ತಿದ್ದಾರೆ.

ಇಲ್ಲಿನ ಸ್ಥಳೀಯ ಜನ ಪ್ರತಿನಿಧಿಗಳಿಗೂ ಇವರಿಂದ ಮತಗಳು ಆಗುವುದಿಲ್ಲವಾದ್ದರಿಂದ ಅವರೂ ಇವರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಕೇವಲ ಇವರಿಗಾಗಿ ಇಲ್ಲಿಂದ ಜಾರ್ಖಂಡಿಗೆ ರೈಲುಗಳನ್ನು ಬಿಡಲು ಸಾಧ್ಯವಿಲ್ಲ. ಈಗ ಜಿಲ್ಲಾಡಳಿತ ಮಾನವೀಯ ದೃಷ್ಟಿಯಿಂದ ಅವರಿಗೆ ಸಹಾಯ ಮಾಡಬೇಕು ಎಂದು ಅವರು ಹೇಳುತ್ತಾರೆ.

ಹೆಚ್ಚಾಗಿ ಆದಿವಾಸಿಗಳೇ ಇರುವ ರಾಜ್ಯವಾದ ಜಾರ್ಖಂಡ್ ನಿಂದ ದೇಶದಾದ್ಯಂತ ವಲಸೆ ಕಾರ್ಮಿಕರು ಹರಡಿಹೋಗಿದ್ದಾರೆ. ಅಲ್ಲಿನ ಸರ್ಕಾರ ತನ್ನ ರಾಜ್ಯದ ಪ್ರಜೆಗಳನ್ನು ರಾಜ್ಯಕ್ಕೆ ಕರೆಸಿಕೊಳ್ಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದು ಉಡುಪಿಯವರು ಹೇಳಿದರು. ಜಾರ್ಖಂಡ್ ಮುಖ್ಯಮಂತ್ರಿ ಹೆಮಂತ್ ಸೊರೆನ್, ಶ್ರಮಿಕ್ ರೈಲುಗಳ ವೆಚ್ಚವನ್ನು ಕೇಂದ್ರ ಸರ್ಕಾರವೇ ಹೊರಬೇಕು ಎಂದು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದಾರೆ.

ಉಡುಪಿಯಲ್ಲಿ ಉಳಿದಿರುವ ಜಾರ್ಖಂಡಿನ ಒಟ್ಟು 263 ವಲಸೆ ಕಾರ್ಮಿಕರಲ್ಲಿ 168 ಜನರಷ್ಟೇ ಅಧಿಕೃತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಉಳಿದವರು ತಾವು ಏನು ಮಾಡಬೇಕು ಎಂದು ತಿಳಿಯದೆ ಇನ್ನೊಬ್ಬರ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಮಣಿಪಾಲದಲ್ಲಿ ಉಳಿದಿರುವ ಹೆಚ್ಚಿನ ಕಾರ್ಮಿಕರು ಏನೂ ಮಾಹಿತಿಗಳಿಲ್ಲದವರೆ ಆಗಿದ್ದಾರೆ.

ಇಷ್ಟರವರೆಗೆ ಉಡುಪಿಯಲ್ಲಿ ತಮ್ಮ ಬೆವರು ಹರಿಸಿದ ಕಾರ್ಮಿಕರ ನೆರವಿಗೆ ಅಲ್ಲಿನ ಜಿಲ್ಲಾಡಳಿತ ಬರಬೇಕು. ಅವರನ್ನು ಬೆಂಗಳೂರಿಗೆ ತಲುಪಿಸಲು ಜಿಲ್ಲಾಡಳಿತ ನೆರವಾದರೆ ಬೆಂಗಳೂರಿನಿಂದ ಹೊರಡುವ ಹಟಿಯಾ ಎಕ್ಸ್ ಪ್ರೆಸ್ ಮೂಲಕ ಅವರು ತಮ್ಮ ರಾಜ್ಯವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅವರ ಪರವಾಗಿ ಇಲ್ಲಿ ಕೆಲಸ ಮಾಡುತ್ತಿರುವವರ ಅನಿಸಿಕೆಯಾಗಿದೆ.


ಓದಿ: ಎನ್‌ಆರ್‌ಐಗಳಂತೆ ವಲಸೆ ಕಾರ್ಮಿಕರು ಮನುಷ್ಯರಲ್ಲವೇ? ಸರ್ಕಾರದಿಂದ ಈ ತಾರತಮ್ಯವೇತಕೆ?


ವಿಡಿಯೊ ನೋಡಿ: ಸದ್ದು…ಈ ಸುದ್ದಿಗಳೇನಾಗಿವೆ.ಮರೆಯಲೇಬಾರದ ಸುದ್ದಿಗಳು. ಏಳನೇ ಸಂಚಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ.


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

The Mysore-Chennai Vandebharat train, inaugurated by the Prime Minister last week, collided; Calf death

‘ವಂದೇ ಭಾರತ್’ ಲಾಭದ ಪ್ರತ್ಯೇಕ ದಾಖಲೆಗಳನ್ನು ರೈಲ್ವೆ ಇಲಾಖೆ ನಿರ್ವಹಿಸುವುದಿಲ್ಲ: ಆರ್‌ಟಿಐ ಮಾಹಿತಿ

0
ವಂದೇ ಭಾರತ್ ರೈಲುಗಳ ಯಾವುದೇ ಪ್ರತ್ಯೇಕ ಆದಾಯದ ದಾಖಲೆಗಳನ್ನು ರೈಲ್ವೇ ಸಚಿವಾಲಯವು ನಿರ್ವಹಿಸುವುದಿಲ್ಲ ಎಂದು ಆರ್‌ಟಿಐ ಕಾಯ್ದೆಯಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ಸಚಿವಾಲಯದ ಪ್ರತಿಕ್ರಿಯೆ ನೀಡಿದೆ. ಮಧ್ಯಪ್ರದೇಶ ಮೂಲದ ಚಂದ್ರ ಶೇಖರ್ ಗೌರ್ ಅವರು ಕಳೆದ...