Homeಮುಖಪುಟಎಷ್ಟೇ ಬಲಿಪಶು ಮಾಡಿದರೂ, ದೇಶದ ಜನಸೇವೆಯ ಸಂಕಲ್ಪ ಕುಗ್ಗಿಸಲಾಗದು

ಎಷ್ಟೇ ಬಲಿಪಶು ಮಾಡಿದರೂ, ದೇಶದ ಜನಸೇವೆಯ ಸಂಕಲ್ಪ ಕುಗ್ಗಿಸಲಾಗದು

- Advertisement -
- Advertisement -

ಡಾ. ಕಫೀಲ್ ಖಾನ್

ತಿಂಗಳುಗಟ್ಟಲೇ ಆಕ್ಸಿಜನ್ ಸರಬರಾಜು ಇಲ್ಲದೇ ಗೋರಖ್‍ಪುರದ ಬಿಆರ್‍ಡಿ ಮೆಡಿಕಲ್ ಕಾಲೇಜಿನಲ್ಲಿ ಮೆದುಳುಜ್ವರದಿಂದ ದೊಡ್ಡ ಸಂಖ್ಯೆಯಲ್ಲಿ ಮಕ್ಕಳ ಸಾವುಗಳು ಸಂಭವಿಸಿದವು. ದೇಶಾದ್ಯಂತ ಯೋಗಿ ಆದಿತ್ಯನಾಥ್ ಸರ್ಕಾರದ ಕುರಿತು ಟೀಕೆಗಳು ಸಂಭವಿಸಿದಾಗ ಸರ್ಕಾರ ಬಲಿಪಶು ಮಾಡಿದ್ದು ಅಲ್ಲಿನ ಮಕ್ಕಳ ತಜ್ಞ ಡಾ.ಕಫೀಲ್ ಖಾನರನ್ನು. ವಾಸ್ತವದಲ್ಲಿ ಅವರು ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ಸಿಲಿಂಡರ್‍ಗಳನ್ನು ತರಿಸಿ ಮಕ್ಕಳನ್ನು ಉಳಿಸಲು ಪ್ರಯತ್ನಿಸಿದ್ದರು. 9 ತಿಂಗಳು ಅವರನ್ನು ಸರ್ಕಾರ ಜೈಲಿಗೆ ದೂಡಿತ್ತು. ಅವರ ವಿರುದ್ಧ ಯಾವುದೇ ಪುರಾವೆಗಳಲ್ಲಿದ್ದರಿಂದ ಕೋರ್ಟು ಬಿಡುಗಡೆ ಮಾಡಿತ್ತು.

ಅನುವಾದ: ನಿಖಿಲ್ ಕೋಲ್ಪೆ

ಗೋರಖ್‍ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಕ್ಸಿಜನ್ ದುರಂತಕ್ಕೆ ಮೊದಲು ಜಾತಿ/ಧರ್ಮ/ಸಾಮಾಜಿಕ-ಆರ್ಥಿಕ ಸ್ಥಾನಮಾನ/ಪ್ರಾದೇಶಿಕತೆ/ಲಿಂಗ/ವೈಕಲ್ಯ ಇತ್ಯಾದಿಗಳ ಹೆಸರಿನಲ್ಲಿ ಸಮಾಜದಲ್ಲಿ ಇಷ್ಟೊಂದು ದ್ವೇಷ ತುಂಬಿದೆ ಎಂದು ನನಗೆ ಗೊತ್ತಾಗಿಯೇ ಇರಲಿಲ್ಲ. ಅಖ್ಲಾಕ್, ಜುನೈದ್, ಪೆಹ್ಲೂಖಾನ್ ಯಾರು, ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡದ್ದು ಏಕೆ, ಉನಾ ದುರಂತ ಏನು, ಗೌರಿ ಲಂಕೇಶ್ ಹತ್ಯೆಯಾದದ್ದು ಏಕೆ ಎಂದೆಲ್ಲಾ ನನಗೆ ಗೊತ್ತೇ ಇರಲಿಲ್ಲ. ನಾನು ಮಕ್ಕಳ ಜೊತೆಗೆ ಇರಬಯಸುವ ಒಬ್ಬ ಸಾಮಾನ್ಯ ವೈದ್ಯನಾಗಿದ್ದೆ.

ಬಿಆರ್‍ಡಿ ಆಕ್ಸಿಜನ್ ದುರಂತವು 2017ರ ಆಗಸ್ಟ್ 10ರಂದು ನಡೆದು ಹಲವು ಮಕ್ಕಳ ಪ್ರಾಣ ಕಸಿಯಿತು. ಇದಕ್ಕೆ ಕಾರಣವೆಂದರೆ ಆಮ್ಲಜನಕ ಪೂರೈಕೆದಾರರಿಗೆ ನೀಡಬೇಕಾದ ಬಾಕಿಯನ್ನು ನೀಡದೇ ಇದ್ದುದರಿಂದ ಅವರು ಪೂರೈಕೆಯನ್ನೇ ನಿಲ್ಲಿಸಿದ್ದು. ಸರಕಾರದ ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಹಾಕಲು ನನ್ನನ್ನು ಹರಕೆಯ ಕುರಿ ಮಾಡಿ, ಒಂಭತ್ತು ತಿಂಗಳುಗಳ ಕಾಲ ಜೈಲಿನಲ್ಲಿಡಲಾಯಿತು. ಆದರೆ, ನಾನು ಆ ದಿನ ಮಕ್ಕಳ ಜೀವ ಉಳಿಸಲು ಯಾವುದೇ ಒಂದು ಪ್ರಯತ್ನವನ್ನು ಮಾಡದೇ ಬಾಕಿ ಇಟ್ಟಿರಲಿಲ್ಲ. ಒಂಭತ್ತು ತಿಂಗಳುಗಳ ಕಠಿಣ ಸಮಯ ಕಳೆದು, ಭಾವನಾತ್ಮಕ ಮತ್ತು ದೈಹಿಕ ಕ್ಷೋಭೆಯ ಬಳಿಕ ನಾನು ಮತ್ತೆ ಶೂನ್ಯದಿಂದ ಜೀವನ ಕಟ್ಟುವ ಪ್ರಯತ್ನದಲ್ಲಿದ್ದಾಗ ಅವರು ನನ್ನ ಸಹೋದರನನ್ನು ಕೊಲೆ ಮಾಡಲು ಯತ್ನಿಸಿದರು. ನಂತರ ನಡೆದದ್ದು ಭಯಾನಕ ಮತ್ತು ಅಸ್ವೀಕಾರಾರ್ಹವಾಗಿದ್ದು, ಉತ್ತರ ಪ್ರದೇಶ ಪೊಲೀಸರ ಅಸೂಕ್ಷ್ಮ ಮನೋಭಾವವನ್ನು ತೋರಿಸುತ್ತದೆ. ಅವರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಆತನ ದೇಹದಲ್ಲಿದ್ದ ಗುಂಡುಗಳನ್ನು ತೆಗೆಯುವುದನ್ನು ವಿಳಂಬಗೊಳಿಸಲು ತಮಗೆ ಸಾಧ್ಯವಿರುವಷ್ಟು ಪ್ರಯತ್ನ ನಡೆಸಿದರು- ಇದು ಉತ್ತರ ಪ್ರದೇಶ ಪೊಲೀಸರು ನಡೆಸಿದ ಎರಡನೇ ಕೊಲೆಯತ್ನ.

ನನ್ನ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ಯಾವುದೇ ಸಾಕ್ಷ್ಯಾಧಾರಗಳು ಇಲ್ಲವೆಂದು ಗೌರವಾನ್ವಿತ ಅಲಹಾಬಾದ್ ಹೈಕೋರ್ಟ್ ಖಡಾಖಂಡಿತವಾಗಿ ಹೇಳಿದ್ದರೂ, ನನ್ನನ್ನು ಕಳೆದೆರಡು ವರ್ಷಗಳಿಂದ ಅಮಾನತಿನಲ್ಲಿಡಲಾಗಿದ್ದು, ಸರಕಾರಿ ಪ್ರಾಯೋಜಿತ ಕಿರುಕುಳ ಮುಂದುವರಿದಿದೆ.

ನಾನು ಈ ದಿನಗಳನ್ನು ಭಾರತವಿಡೀ ತಿರುಗಾಡಿ ಜನರನ್ನು ಭೇಟಿ ಮಾಡಲು ಬಳಸಿದೆ. ನಾನವರಲ್ಲಿ ಒಂದೇ ಪ್ರಶ್ನೆಯನ್ನು ಕೇಳಿದೆ. ಅದೆಂದರೆ, ನಿಮ್ಮ ಸರಕಾರದಿಂದ ನಿಮ್ಮ ನಿರೀಕ್ಷೆ ಏನು ಎಂಬುದು. ಹೆಚ್ಚಿನವರ ಉತ್ತರ ಉತ್ತಮ ಆರೋಗ್ಯ ಸೌಲಭ್ಯಗಳು, ಉತ್ತಮ ಶಾಲೆಗಳು ಮತ್ತು ಉದ್ಯೋಗ ಎಂಬುದಾಗಿತ್ತು. ಆದರೆ, ಇಂದಿನ ದಿನಗಳಲ್ಲಿ ಸರಕಾರವು ಪಾಕಿಸ್ತಾನ, ವಲಸಿಗರು, ಕಾಶ್ಮೀರ, ತ್ರಿವಳಿ ತಲಾಖ್ ಕುರಿತು ಮಾತನಾಡುತ್ತಿದೆ. ಹುಸಿ ರಾಷ್ಟ್ರೀಯತೆ ಮತ್ತು ಹುಸಿ ಹಿಂದೂತ್ವದ ಈ ಓವರ್‍ಡೋಸ್ ಯುವಪೀಳಿಗೆಯ ಮನಸ್ಸುಗಳಿಗೆ ಎಷ್ಟು ವಿಷ ತುಂಬಿದೆ ಎಂದರೆ, ಅವರು ವಾಸ್ತವವನ್ನು ತಿಳಿಯಲು ವಿಫಲರಾಗುತ್ತಿದ್ದಾರೆ ಮತ್ತು ಭವ್ಯತೆಯ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಮಾಧ್ಯಮವು ಸರಕಾರದ ಕೈಗೊಂಬೆಯಾಗಿದ್ದು, ನಿರ್ದಿಷ್ಟ ಸಮುದಾಯವನ್ನು ಮತಾಂಧವೆಂದು ಬಿಂಬಿಸುತ್ತಿದೆ. ಇಂದು ದೇಶವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಈ ಸಮುದಾಯವನ್ನು ಹೊಣೆ ಮಾಡುತ್ತಿದೆ ಮತ್ತು ಆ ಮೂಲಕ ನಿರ್ದಿಷ್ಟ ಜನವರ್ಗದ ವಿರುದ್ಧ ಭಾವನೆಗಳನ್ನು ಉದ್ರೇಕಿಸುತ್ತಿದೆ. ಪ್ರತಿಪಕ್ಷಗಳು ತಳಮಟ್ಟದಲ್ಲಿ ಇದನ್ನು ಪ್ರತಿಭಟಿಸುವ ಬದಲು ಮೃದು ಹಿಂದೂತ್ವದ ಹಿಂದೆ ಅಡಗಲು ಯತ್ನಿಸುತ್ತಿವೆ. ಅತ್ಯಂತ ಅಪಾಯಕಾರಿ ಎಂದರೆ, ಕೇಸರಿ ಪಡೆಯ ಅಭಿಪ್ರಾಯವನ್ನು ಒಪ್ಪದ ಯಾವುದೇ ಧ್ವನಿಯನ್ನು- ಅದು ಎಡಪಂಥೀಯರಾಗಿರಲಿ, ಜಾತ್ಯತೀತರಾಗಿರಲಿ, ಲೇಖಕರು, ಚಿತ್ರರಂಗದವರು ಅಥವಾ ಇತಿಹಾಸಜ್ಞರೇ ಆಗಿರಲಿ- ಅವರನ್ನು ಹಿಂದೂ ವಿರೋಧಿ, ರಾಷ್ಟ್ರ ವಿರೋಧಿಗಳು ಎಂದು ಆರೋಪಿಸುತ್ತಿರುವುದು.

ಗುಂಪುಹತ್ಯೆಗಳು ಮಾಮೂಲಿಯಾಗುತ್ತಿದ್ದು, ಸಂಘಟಿತ ಅಪರಾಧಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಕೊಲೆಗಡುಕನೇ ವಿಡಿಯೋ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ, ಒಂದು ಸಮುದಾಯದಲ್ಲಿ ಭಯದ ವಾತಾವರಣವನ್ನೂ, ಇನ್ನೊಂದು ಸಮುದಾಯದಲ್ಲಿ ಹುಸಿ ವಿಜಯೋನ್ಮಾದವನ್ನೂ ಉಂಟುಮಾಡಲಾಗುತ್ತದೆ.

ದಿವಂಗತ ಗೌರಿ ಲಂಕೇಶ್ ಅವರು ತನ್ನ ಕೊನೆಯ ವಾರದ ಅಂಕಣದಲ್ಲಿ ಗೋರಖ್‍ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸಾವಿನ ಬಗ್ಗೆ ಬರೆದು, ನನ್ನನ್ನು ವಜಾಗೊಳಿಸಿದುದನ್ನು ಟೀಕಿಸಿದ್ದರು. ಇವತ್ತು ನಾನು ಅವರ ಸಾವಿನ ಎರಡನೇ ವಾರ್ಷಿಕ ದಿನದಂದು ಈ ಲೇಖನ ಬರೆಯುತ್ತಿದ್ದೇನೆ. ನಾನು ಆರೆಸ್ಸೆಸ್ ಸೃಷ್ಟಿಸಿರುವ ವಿಭಜನಕಾರಿ ತತ್ವಗಳನ್ನು ಎದುರಿಸಲು ಹೆಚ್ಚು ಧನಾತ್ಮಕ, ಹೆಚ್ಚು ದಾರ್ಶನಿಕ ಮತ್ತು ಹೆಚ್ಚು ಭಾರತೀಯನಾಗಲು ಬಯಸುತ್ತೇನೆ. ಎಷ್ಟೊಂದು ಋಣಾತ್ಮಕತೆಯನ್ನು ಹರಡಲಾಗಿದೆಯೆಂದರೆ, ಅದನ್ನು ಎದುರಿಸಲು ನಾವು ಧನಾತ್ಮಕ ವಿಷಯಗಳ ಬಗ್ಗೆ ಮಾತನಾಡಬೇಕಾಗಿದೆ- ನಾನು ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುವ ಮೂಲಕ, ನನ್ನ ಪುಸ್ತಕ ಬಿಡುಗಡೆಯ ಮೂಲಕ, ಎಲ್ಲವೂ ಇನ್ನೂ ಮುಗಿದಿಲ್ಲ ಎಂದು ಜನರಿಗೆ ಹೇಳುವ ಮೂಲಕ ಮಾಡಲು ಯತ್ನಿಸುತ್ತಿರುವಂತೆ.

ಆರೋಗ್ಯ/ ಶಿಕ್ಷಣ/ ಉದ್ಯೋಗ ಇನ್ನೂ ಪ್ರಮುಖ ವಿಷಯಗಳು. ಆದರೆ, ಇವುಗಳನ್ನು ಧಾರ್ಮಿಕ ಅಥವಾ ರಾಷ್ಟ್ರೀಯತೆಯ ಹೆಸರಿನಲ್ಲಿ ಹುಗಿದುಹಾಕಲಾಗಿದೆ. ನಾವು ಬೇಡಿಕೆಯನ್ನು ಸೃಷ್ಟಿಸಬೇಕಾಗಿದೆ- ಜನರಿಗೆ ತಿಳಿಸಿ, ಮನವರಿಕೆ ಮಾಡಬೇಕಾಗಿದೆ. “ನೀವು ಮೋದೀಜಿ ಮತ್ತು ಯೋಗೀಜಿಯವರನ್ನು ಯಾಕೆ ಅಷ್ಟೊಂದು ವಿರೋಧಿಸುತ್ತೀರಿ?” ಎಂದು ನನ್ನಲ್ಲಿ ಕೇಳಲಾದಾಗಲೆಲ್ಲ ನಾನು ಪ್ರತೀ ಸಲವೂ ಅದೇ ಉತ್ಸಾಹದಿಂದ “ನಾನು ವಿರೋಧಿಸುತ್ತಿರುವುದು ಮೋದೀಜಿ ಅಥವಾ ಯೋಗೀಜಿಯವರನ್ನು ಅಲ್ಲ” ಎಂದು ಉತ್ತರಿಸಿದ್ದೇನೆ. ದ್ವೇಷ ಮತ್ತು ಹಿಂಸೆಯನ್ನು ಆಧರಿಸಿದ ಅವರ ಸಿದ್ಧಾಂತವನ್ನು ನಾನು ವಿರೋಧಿಸುತ್ತೇನೆ. ತನ್ನ ಸ್ಥಾಪನೆಯಾದಂದಿನಿಂದಲೂ (1925) ಜಾತಿ ಮತ್ತು ಧರ್ಮದ ಆಧಾರದಲ್ಲಿ ಜನರನ್ನು ಒಡೆಯಲು ಯತ್ನಿಸುತ್ತಿರುವ ಆರೆಸ್ಸೆಸ್‍ನ ವಿಭಜನಕಾರಿ ನೀತಿಯನ್ನು ನಾನು ವಿರೋಧಿಸುತ್ತೇನೆ. ಭಾರತವು ಬಹುತ್ವ, ವಿವಿಧತೆ, ಮಾನವೀಯತೆ, ಕೋಮುಸಾಮರಸ್ಯ ಮತ್ತು ಸಮಾನತೆಯ ತಳಹದಿಯ ಮೇಲೆ ನಿಂತಿದೆ. ಆದುದರಿಂದ ನಾವು ಪ್ರೀತಿ ಮತ್ತು ಶಾಂತಿಯನ್ನು ಹರಡೋಣ.

ಕೊನೆಯದಾಗಿ ನಾನು ನನಗೆ ಮತ್ತು ನನಗಾಗಿ ಪ್ರಾರ್ಥಿಸುವವರಿಗೆ ಈ ಭರವಸೆ ನೀಡುತ್ತೇನೆ- ಈ ಆಡಳಿತವು ಒಡ್ಡುತ್ತಿರುವ ಅಡಚಣೆಗಳ ಹೊರತಾಗಿಯೂ ನನ್ನ ದೇಶದ ಜನರಿಗೆ ಸೇವೆ ಸಲ್ಲಿಸುವಲ್ಲಿನ ಪಾವಿತ್ರ್ಯ, ನಿಷ್ಠೆ ಮತ್ತು ದೃಢ ಸಂಕಲ್ಪ ಮುಂದುವರಿಯಲಿದೆ. ನನ್ನನ್ನು ಬಲಿಪಶು ಮಾಡುವ ಸರಕಾರಿ ಪ್ರಾಯೋಜಿತ ಪ್ರಯತ್ನವು ನನ್ನ ಸಂಕಲ್ಪ, ಉತ್ಸಾಹ ಮತ್ತು ಸಮಾಜದ ಕುರಿತ ನನ್ನ ನಿಷ್ಠೆಯನ್ನು ಮುರಿಯದು. ಈ ಸಂಕಷ್ಟಗಳು ನನ್ನ ಗುರಿಗಳನ್ನು ಸಾಧಿಸುವ ಮತ್ತು ಎಲ್ಲಾ ಅಡೆತಡೆಗಳು ವಿರುದ್ಧ ಜಯಿಸುವ ನನ್ನ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಜೈ ಹಿಂದ್ ಜೈ ಭಾರತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಗಾಜಿಯಾಬಾದ್ ಮೂವರು ಸಹೋದರಿಯರ ಆತ್ಮಹತ್ಯೆ’: ಕೊರಿಯನ್ ಮೂಲದ ಆನ್ ಲೈನ್ ಆಟದಿಂದ ಸಾವನ್ನಪ್ಪಿರುವ ಶಂಕೆ 

ಗಾಜಿಯಾಬಾದ್‌ನಲ್ಲಿ ಬುಧವಾರ ತಡರಾತ್ರಿ 12, 14 ಮತ್ತು 16 ವರ್ಷ ವಯಸ್ಸಿನ ಮೂವರು ಸಹೋದರಿಯರು ತಮ್ಮ ವಸತಿ ಕಟ್ಟಡದ ಟೆರೇಸ್‌ನಿಂದ ಹಾರಿ ಸಾವನ್ನಪ್ಪಿದ್ದಾರೆ. ಈ ಕೃತ್ಯವು ಕೊರಿಯನ್ ಮೂಲದ ಆನ್‌ಲೈನ್ ಆಟಕ್ಕೆ ಸಂಬಂಧಿಸಿರಬಹುದು...

‘ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟು’: ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಮನವಿ ಪತ್ರ ಸಲ್ಲಿಸಿದ ಲಕ್ಷದ್ವೀಪ ವಿದ್ಯಾರ್ಥಿಗಳ  ಸಂಘ 

ಲಕ್ಷದ್ವೀಪ ವಿದ್ಯಾರ್ಥಿ ಸಂಘವು, ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಮಧ್ಯಪ್ರವೇಶಿಸುವಂತೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಒತ್ತಾಯಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ...

ಪ.ಬಂಗಾಳವನ್ನು ಗುರಿಯಾಗಿಸಲಾಗುತ್ತಿದೆ, ಅಸ್ಸಾಂನಲ್ಲಿ ಎಸ್‌ಐಆರ್‌ ಏಕಿಲ್ಲ? : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಫೆ.4) ಆರೋಪಿಸಿದ್ದು, ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಏಕೆ ಎಸ್‌ಐಆರ್ ನಡೆಸುತ್ತಿಲ್ಲ ಎಂಬುವುದಾಗಿ...

ತಮಿಳುನಾಡು| ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಅನುಮಾನಾಸ್ಪದ ಸಾವು; ಮರ್ಯಾದೆಗೇಡು ಹತ್ಯೆ ಶಂಕೆ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಸಾವು ಮರ್ಯಾದಾ ಹತ್ಯೆಯ ಗಂಭೀರ ಆರೋಪಗಳನ್ನು ಹುಟ್ಟುಹಾಕಿದೆ. ಸಾವಿನ ಆರಂಭಿಕ ತನಿಖೆಯು ಆತ್ಮಹತ್ಯೆಯತ್ತ ಬೊಟ್ಟು ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿಗೆ ಅಂತಿಮ ಕಾರಣ...

‘ರಾಜ್ಯವನ್ನು ನಿರ್ಲಕ್ಷಿಸಲಾಗಿದೆ’ : ಕೇಂದ್ರ ಬಜೆಟ್‌ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್ ವಿರುದ್ದ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದ್ದು, ರಾಜ್ಯವನ್ನು 'ನಿರ್ಲಕ್ಷಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಜೆಟ್‌ನಲ್ಲಿ ಕೇರಳದ ದೀರ್ಘಕಾಲದ ಬೇಡಿಕೆಗಳನ್ನು ಪರಿಗಣಿಸದೆ ಇರುವುದು ಮತ್ತು ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ...

ದೇವಾಲಯ-ಶಾಲೆಗಳ ಬಳಿ ಇರುವ ಮಾಂಸ ಮಳಿಗೆಗಳ ಕುರಿತು ಏಕರೂಪ ನೀತಿ ರೂಪಿಸಿ: ತೆಲಂಗಾಣ ಹೈಕೋರ್ಟ್

ಸಾರ್ವಜನಿಕ ಭಾವನೆ, ನೈರ್ಮಲ್ಯ, ಸಂಚಾರ ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಕಳವಳಗಳನ್ನು ಉಲ್ಲೇಖಿಸಿ, ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಂದ 100 ಮೀಟರ್ ಒಳಗೆ ಮಾಂಸ ಮತ್ತು ಮಾಂಸಾಹಾರಿ ಆಹಾರ ಮಾರಾಟವನ್ನು...

ಎಸ್‌ಐಆರ್ ಅರ್ಜಿ ವಿಚಾರಣೆ : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಂಡನೆ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ದ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ (ಫೆ.4) ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಂಡನೆ ಮಾಡುತ್ತಿದ್ದಾರೆ....

ಆರ್‌ಕಾಮ್ ಬ್ಯಾಂಕ್ ವಂಚನೆ ತನಿಖೆ: ಇಡಿ, ಸಿಬಿಐಗೆ ಸುಪ್ರೀಂ ಕೋರ್ಟ್ ಛೀಮಾರಿ; ದೇಶ ಬಿಟ್ಟು ಹೋಗದಂತೆ ಅನಿಲ್ ಅಂಬಾನಿಗೆ ತಾಕೀತು 

ರಿಲಯನ್ಸ್ ಕಮ್ಯುನಿಕೇಷನ್ಸ್, ಅದರ ಸಮೂಹ ಕಂಪನಿಗಳು ಮತ್ತು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಒಳಗೊಂಡ ಬೃಹತ್ ಪ್ರಮಾಣದ ಬ್ಯಾಂಕ್ ವಂಚನೆ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಜಾರಿ...

ಅಸ್ಸಾಂ ಮುಖ್ಯಮಂತ್ರಿಯಿಂದ ‘100 ಪ್ರಕರಣಗಳ ಬೆದರಿಕೆ’: ‘ಇದು ಮಾನವ ಹಕ್ಕುಗಳ ರಕ್ಷಕರನ್ನು ಮೌನಗೊಳಿಸುವ ಪ್ರಯತ್ನ’ ಎಂದ ಹರ್ಷ್ ಮಂದರ್ 

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾನವ ಹಕ್ಕುಗಳ ಹೋರಾಟಗಾರ ಹರ್ಷ್ ಮಂದರ್ ಅವರ ವಿರುದ್ಧ "ಕನಿಷ್ಠ 100 ಪ್ರಕರಣಗಳು" ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾನವ ಹಕ್ಕುಗಳ...

ಅದಾನಿ–ಲಿಯೊನಾರ್ಡೊ ಒಪ್ಪಂದ| ಹೊಸ ರೂಪದಲ್ಲಿ ಭಾರತಕ್ಕೆ ಮರಳಿದ ಕಪ್ಪುಪಟ್ಟಿಗೆ ಸೇರಿದ್ದ ಅಗಸ್ಟಾ ವೆಸ್ಟ್‌ಲ್ಯಾಂಡ್!

ಅದಾನಿ ಡಿಫೆನ್ಸ್ ಆಂಡ್ ಏರೋಸ್ಪೇಸ್ ಮತ್ತು ಇಟಲಿಯ ಲಿಯೊನಾರ್ಡೊ ಕಂಪನಿಗಳು ಮಂಗಳವಾರ (ಫೆ.3) ಕಾರ್ಯತಂತ್ರದ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಭಾರತದ ಹೆಲಿಕಾಪ್ಟರ್ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅಭಿವೃದ್ಧಿಪಡಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ...