Homeಅಂಕಣಗಳುದೇಶವನ್ನು ಕಾಡುತ್ತಿರುವ ಎರಡನೇ ಅತಿ ಪ್ರಮುಖ ಸಮಸ್ಯೆಗೆ ಗಮನ ಹರಿಸದಿದ್ದರೆ ಮೊದಲನೇ ಸಮಸ್ಯೆಯು ಪರಿಹಾರವೂ ನಿಷ್ಫಲವಾದೀತು

ದೇಶವನ್ನು ಕಾಡುತ್ತಿರುವ ಎರಡನೇ ಅತಿ ಪ್ರಮುಖ ಸಮಸ್ಯೆಗೆ ಗಮನ ಹರಿಸದಿದ್ದರೆ ಮೊದಲನೇ ಸಮಸ್ಯೆಯು ಪರಿಹಾರವೂ ನಿಷ್ಫಲವಾದೀತು

ಬೆಂಗಳೂರಿನಲ್ಲಿ ಬೀಳುತ್ತಿರುವ ಮಳೆ-ಗಾಳಿಗೆ ಮರಗಳು ಉರುಳಿ ಬೀಳುತ್ತಿವೆ. ಅಷ್ಟೆಲ್ಲಾ ಮಳೆ ಬಿದ್ದರೂ ಧಗೆ ಆರದೇ ಜನರು ಕೂಲರ್‍ಗಳ ಮೊರೆ ಹೋಗುತ್ತಿದ್ದಾರೆ.

- Advertisement -
- Advertisement -

ಬೆಂಗಳೂರಿನಲ್ಲಿ ಬೀಳುತ್ತಿರುವ ಮಳೆ-ಗಾಳಿಗೆ ಮರಗಳು ಉರುಳಿ ಬೀಳುತ್ತಿವೆ. ಅಷ್ಟೆಲ್ಲಾ ಮಳೆ ಬಿದ್ದರೂ ಧಗೆ ಆರದೇ ಜನರು ಕೂಲರ್‍ಗಳ ಮೊರೆ ಹೋಗುತ್ತಿದ್ದಾರೆ. ನಿನ್ನೆ ಸಂಜೆ (ಏ.27), ಬೆಂಗಳೂರಿನ ಉಷ್ಣತೆ 30 ಡಿಗ್ರಿ ಇದ್ದರೆ, ಮೈಸೂರಿನದ್ದು 29 ಡಿಗ್ರಿ ಇತ್ತು. ಆದರೆ, ಮೈಸೂರಿನ ಉಷ್ಣತೆ ತೋರಿದ ಗೂಗಲ್ (But it feels like 31 degree) 31 ಡಿಗ್ರಿ ಥರ ಭಾಸವಾಗುತ್ತದೆ ಎಂದಿತ್ತು. ಹೈದ್ರಾಬಾದ್ ಕರ್ನಾಟಕದಲ್ಲಿ 40ರ ಆಸುಪಾಸು ಇರುತ್ತದೆ. ಶಿವಮೊಗ್ಗವು ಬಳ್ಳಾರಿಯನ್ನು ಮೀರಿಸುವಷ್ಟು ಬಿಸಿಯಾಗಿ ಎಷ್ಟೋ ವರ್ಷಗಳಾಗಿವೆ.

ಇವೆಲ್ಲವೂ ಮಳೆ ಮತ್ತು ಉಷ್ಣಾಂಶದ ವಿಚಾರವಾಯಿತು.

ಬೆಂಗಳೂರಿನಲ್ಲಿ 1990ರ ಹೊತ್ತಿಗೆ ಬೋರ್‍ವೆಲ್ ಹಾಕಿಸಿದವರಲ್ಲಿ 100 ಅಡಿಗಳೊಳಗೇ ಎಲ್ಲರಿಗೂ ನೀರು ಸಿಗುತ್ತಿತ್ತು. ಈಗ ಕತ್ರಿಗುಪ್ಪೆಯ ಸುತ್ತ 1000 ಅಡಿಯವರೆಗೆ ಕೊರೆಸುತ್ತಿದ್ದಾರೆ. ಇನ್ನು ಒಣ ಬಯಲುಸೀಮೆಯ ಗತಿ ಏನೇನಾಗಿರಬಹುದು?

ಬೆಂಗಳೂರಿನ ದಾಹ ತೀರಿಸುವ ಮತ್ತು ಅದರೊಂದಿಗೆ ಅಕ್ಕಪಕ್ಕದ ಜಿಲ್ಲೆಗಳಿಗೂ ನೀರು ಹರಿಸುವ (ಗಮನಿಸಿ ಅಕ್ಕಪಕ್ಕದ ಜಿಲ್ಲೆಗಳು ಮೊದಲ ಆದ್ಯತೆಯಲ್ಲ) ಉದ್ದೇಶದೊಂದಿಗೆ ಎತ್ತಿನಹೊಳೆ, ಲಿಂಗನಮಕ್ಕಿಯಿಂದ ನೀರು ಇತ್ಯಾದಿ ಪ್ರಸ್ತಾಪಗಳು ಸರ್ಕಾರದ ಮುಂದೆ ಬಂದವು. ಇದೀಗ ಎತ್ತಿನಹೊಳೆ ಇನ್ನೇನು ಬಂದೇ ಬಿಟ್ಟಿತು ಎನ್ನುತ್ತಿದ್ದಾರೆ. ಎಲ್ಲರಿಗೂ ಗೊತ್ತಿದೆ. ಅದು ಸಮಸ್ಯೆಯ ಸಣ್ಣ ತುಣುಕನ್ನಷ್ಟೇ ಬಗೆಹರಿಸಲು ಹೋಗಿ, ಬೇರೆ ಬೇರೆ ರೀತಿಯ ಬಿಕ್ಕಟ್ಟುಗಳಿಗೆ ದಾರಿ ಮಾಡಿಕೊಡಲಿದೆ.

ಇದನ್ನು ಅತ್ಯಂತ ದೊಡ್ಡ ಸಮಸ್ಯೆ ಎಂದು ಹೇಳಬಾರದೇಕೆ ಎಂದು ಜಲಕಾರ್ಯಕರ್ತರು ಕೇಳಬಹುದು. ಆದರೆ, ಇಂತಹ ಹಲವು ಬೃಹತ್ ಸಮಸ್ಯೆಗಳಿಗೆ ಕಾರಣವಾದ ಸರ್ಕಾರದ ನೀತಿ ಮತ್ತು ಸಮಾಜದ ರೀತಿಗಳೇ ಪ್ರಧಾನ ಕಾರಣ ಎಂದು ಹೇಳುವವರೂ ಇರುತ್ತಾರೆ. ಇಂದು ದೇಶದಲ್ಲಿ ಮನುಷ್ಯ ಸಮುದಾಯವನ್ನೇ ಸೀಳಲು ಹೊರಟಿರುವ ಬಲಪಂಥೀಯ ಪಡೆಯೇ ಪ್ರಧಾನ ಸಮಸ್ಯೆ, ಮಿಕ್ಕಿದ್ದೆಲ್ಲಾ ನಂತರ ನೋಡೋಣ ಎಂದು ಹೇಳುವವರು ಇರಬಹುದು. ಹೀಗಾಗಿ ಇದನ್ನು ಎರಡನೇ ಅತೀ ದೊಡ್ಡ ಸಮಸ್ಯೆ ಎಂದು ಹೇಳಲಾಗಿದೆ.

ಒಂದಂತೂ ಸ್ಪಷ್ಟ ಇತರ ಬೃಹತ್ ಸಮಸ್ಯೆಗಳನ್ನು ಪರಿಹರಿಸಿಕೊಂಡು ಇದಕ್ಕೆ ಬರೋಣ ಎನ್ನುವವರೆಗೆ ನೀರು ಚಿಮ್ಮುತ್ತಲೇ ಇರುವುದಿಲ್ಲ. ಮತ್ತಷ್ಟು ಪಾತಾಳಕ್ಕೆ ಇಳಿಯುವ ನೀರು ಮತ್ತು ಮೇಲೇರಲಿರುವ ಉಷ್ಣತೆ ಎಲ್ಲಾ ಪಂಥೀಯರನ್ನೂ ಸುಡದೇ ಬಿಡುವುದಿಲ್ಲ. ಇದುವರೆಗೆ ನಮ್ಮ ನಾಡು ಕಂಡರಿಯದ ರೀತಿಯ ಸಮಸ್ಯೆಗಳಿಗೆ ಅದು ದೂಡಲಿದೆ. ಮೊಟ್ಟ ಮೊದಲ ಬಾರಿಗೆ ಈ ಪರಿಯಾಗಿ ಬೆಳೆದು ನಿಂತಿರುವ ಬಲಪಂಥೀಯ ವಿಷ ದೇಶವನ್ನು ಹೇಗೆಲ್ಲಾ ಕಾಡಲಿದೆ ಎಂಬುದನ್ನು, ಅನುಭವಿಸಿಯೇ ಅರಿತುಕೊಳ್ಳಬೇಕೋ ಇದೂ ಸಹಾ ಹಾಗೆಯೇ ಇರುತ್ತದೆ.

ಒಂದೇ ವ್ಯತ್ಯಾಸವೆಂದರೆ, ಬಿಜೆಪಿಗೆ ವೋಟು ಹಾಕಿರುವವರು, ಕಾಂಗ್ರೆಸ್‍ಗೆ, ಕಮ್ಯುನಿಸ್ಟರಿಗೆ ಓಟು ಹಾಕಿರುವವರು, ಓಟೇ ಹಾಕದವರು ಎಲ್ಲರನ್ನೂ ಇದು ಸಮಾನವಾಗಿ ಕಾಡಲಿದೆ. ಧಾರ್ಮಿಕರು, ನಾಸ್ತಿಕರು ಎಲ್ಲರನ್ನೂ ಪ್ರಕೃತಿಯ ಈ ಪ್ರಕೋಪ ಆತಂಕಕ್ಕೆ ದೂಡಲಿದೆ. ಧರ್ಮಸ್ಥಳದ ಕಡೆಯಿಂದ ನೀರನ್ನು ಪೂರ್ವಕ್ಕೆ ಹರಿಸಿಬಿಡಬಹುದು ಎಂಬ ಆತಂಕ ಅಲ್ಲಿನ ಜನರನ್ನು ಕಾಡಿತ್ತು. ಹಾಗಾಗಿ ನೇತ್ರಾವತಿ ತಿರುವಿಗೆ ಅಥವಾ ಎತ್ತಿನಹೊಳೆಗೆ ಧರ್ಮಸ್ಥಳದ ವೀರೇಂದ್ರ ಹೆಗಡೆಯವರದ್ದೂ ವಿರೋಧವಿತ್ತು. ಹೀಗಾಗಿ ಅವರ ಮನವೊಲಿಸಲು, ಸಾಧ್ಯವಾಗದಿದ್ದರೆ ಅವರನ್ನೂ ಧಿಕ್ಕರಿಸಲು ಬಯಲುಸೀಮೆಯಲ್ಲಿ ಭಾಷಣಗಳಾಗಿವೆ.

ವಿಪರ್ಯಾಸವೆಂದರೆ, ಈ ಬೇಸಿಗೆಯಲ್ಲಿ ಬೆಂಗಳೂರಿನಿಂದ ಕ್ಯಾನ್‍ಗಟ್ಟಲೇ ನೀರನ್ನು ಧರ್ಮಸ್ಥಳಕ್ಕೇ ಕೊಂಡೊಯ್ದು ಕೊಟ್ಟ ಭಕ್ತರಿದ್ದಾರೆ. ಈ ನೀರು ಬೆಂಗಳೂರಿಗೆ ಎಲ್ಲಿಂದ ಬರುತ್ತದೆ? ಎಲ್ಲೆಲ್ಲಿಂದ ಬರುತ್ತದೋ ಅಲ್ಲಿನ ಜನರು, ರೈತರು, ಜಾನುವಾರುಗಳ ಪರಿಸ್ಥಿತಿ ಏನಿದೆ? ಅಂತಿಮವಾಗಿ ರಾಜ್ಯದೆಲ್ಲೆಡೆಗೂ ನೀರು ಪಶ್ಚಿಮ ಘಟ್ಟದಿಂದ ಸಿಗುತ್ತದಾ? ಎಲ್ಲಿಯೂ ಸಿಗದೇ ಇದ್ದರೆ ಏನು ಮಾಡುವುದು? ಈ ಪ್ರಶ್ನೆಗಳನ್ನು ಯಾರು ಯಾರಿಗೆ ಹಾಕಬೇಕು? ನೀರು ಸಿಗಬೇಕೆಂದರೆ ಈ ಪ್ರಶ್ನೆಗಳೂ ಮತ್ತು ಅವುಗಳಿಗೆ ಉತ್ತರಗಳು ಎರಡೂ ಬೇಕು.

ಸರ್ಕಾರದ ಮಟ್ಟದಲ್ಲಿ ದೊಡ್ಡದಾಗಿ ಏನೂ ಆಗದು ಎಂದು ಖಚಿತವಾಗಿರುವವರು ತಮ್ಮದೇ ರೀತಿಯ ಪ್ರಯತ್ನವನ್ನು ನಡೆಸಿದ್ದಾರೆ. ಹಿಂದೇ ಇಲ್ಲೇ ಬರೆದಿದ್ದಂತೆ, ಅಂತಹದೊಂದು ಪ್ರಯತ್ನವು ತುಮಕೂರು ಜಿಲ್ಲೆಯಲ್ಲಿ ನಡೆಸಲಾಯಿತು.
ಚುನಾವಣೆ ಮುಗಿದು ಫಲಿತಾಂಶ ಬರುವ ಮುಂಚೆ ಸಿರಾದ ಸಮತಾ ವಿದ್ಯಾಲಯದಲ್ಲಿ (ಅಂದರೆ ಮೇ 17, 18 & 19ರಂದು) ಜಲಕಾರ್ಯಕರ್ತರ ತರಬೇತಿಗೆ ರಾಜೇಂದ್ರ ಸಿಂಗ್ ಬಂದು ಹೋದರು. ಜೂನ್ 8ರಂದು ಪರಿಸರದ ಕುರಿತ ಕಾಳಜಿಯಿಂದ ಹಳೇಬೀಡಿನಲ್ಲೊಂದು ಸಮಾವೇಶ ಆಯೋಜನೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಈಗಾಗಲೇ ಅತ್ಯುತ್ತಮ ಕೆಲಸ ಮಾಡುತ್ತಿರುವವರು ಸೇರಿಕೊಂಡು ಅದನ್ನು ಸಂಘಟನೆ ಮಾಡುತ್ತಿದ್ದಾರೆ.

ಇಂತಹ ಎಲ್ಲಾ ಪ್ರಯತ್ನಗಳಿಗೂ ನಮಗೆ ಸಾಧ್ಯವಾದ ರೀತಿಯಲ್ಲಿ ಕೈ ಜೋಡಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ಪತ್ರಿಕೆ ಬಯಸುತ್ತದೆ. ಅದರ ಜೊತೆ ಜೊತೆಗೇ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನವೂ ಸಾಗಬೇಕು. ಬಯಲುಸೀಮೆಯವರು ಮತ್ತು ಘಟ್ಟದ ಆಸುಪಾಸಿನಲ್ಲಿರುವವರು ಸಮಾನ ಆಶಯ ಕಾಳಜಿಗಳಿಂದ ಚರ್ಚಿಸಿ ಒಂದೇ ನಿಲುವಿಗೆ ತಲುಪಬೇಕು. ಅದಾಗದಿದ್ದಲ್ಲಿ ಕ್ಯಾನ್‍ನಲ್ಲಿ ನೀರು ತೆಗೆದುಕೊಂಡು ಹೋಗಲೂ ನೀರು ಸಿಗದೇ ಹೋಗುವ ಸಾಧ್ಯತೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Here you have not taught about uneven and unscientific development of industrial pollution in term’s of water, smoke, notice, and waist, at the same time vehicles pollution effects on environment, it is to viewed universally.

LEAVE A REPLY

Please enter your comment!
Please enter your name here

- Advertisment -

ಸಾರ್ವತ್ರಿಕ ಮುಷ್ಕರ | ಕೆಲ ರಾಜ್ಯಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತ; ಬ್ಯಾಂಕಿಂಗ್, ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ 'ಕಾರ್ಮಿಕ, ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ನೀತಿಗಳ' ವಿರುದ್ಧ ಕಾರ್ಮಿಕ ಸಂಘಟನೆಗಳು ಗುರುವಾರ (ಫೆ.12) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದಿಂದ ವಿವಿಧ ರಾಜ್ಯಗಳಲ್ಲಿ ಜನ ಜೀವನ...

ಅದಾನಿ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತ ರವಿ ನಾಯರ್‌ಗೆ ಶಿಕ್ಷೆ: ‘ಇದು ಪತ್ರಿಕಾ ಸ್ವಾತಂತ್ರ್ಯಕ್ಕೆ ಹೊಡೆತ’ ಎಂದ ಪತ್ರಕರ್ತರ ಸಂಘಟನೆಗಳು

ಅದಾನಿ ಎಂಟರ್‌ಪ್ರೈಸಸ್ ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತನಿಖಾ ಪತ್ರಕರ್ತ ರವಿ ನಾಯರ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಮತ್ತು ಹಲವಾರು ಪತ್ರಿಕಾ ಸಂಸ್ಥೆಗಳು...

‘ನಾವು ಯಾರನ್ನೂ ನಿಂದಿಸಿಲ್ಲ’: ಚೇಂಬರ್ ‘ದುರ್ವರ್ತನೆ’ ಆರೋಪಕ್ಕೆ ಪ್ರಿಯಾಂಕಾ ಗಾಂಧಿ ಸ್ಪಷ್ಟನೆ 

ನವದೆಹಲಿ: ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ತಮ್ಮ ಪಕ್ಷದ ಸಂಸದರು "ಅನುಚಿತವಾಗಿ ವರ್ತಿಸಿದ್ದಾರೆ" ಎಂದು ಆರೋಪಿಸಿದಾಗ, ಅವರನ್ನು ಬೆಂಬಲಿಸಿದ್ದೇನೆ ಎಂದು ಹೇಳಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸದೀಯ ವ್ಯವಹಾರಗಳ...

‘ಭಾರತಕ್ಕೆ ಮರಳಲು ಇದು ಕೊನೆಯ ಅವಕಾಶ’: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್‌ ಎಚ್ಚರಿಕೆ

ಭಾರತದ ಹೊರಗೆ ಇರುವ ಉದ್ಯಮಿ ವಿಜಯ್ ಮಲ್ಯ ನ್ಯಾಯಾಲಯದ ಪ್ರಕ್ರಿಯೆಗಳಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ಪರಿಗಣಿಸಿರುವ ಬಾಂಬೆ ಹೈಕೋರ್ಟ್, ಅವರಿಗೆ ಭಾರತಕ್ಕೆ ಮರಳಲು “ಒಂದು ಕೊನೆಯ ಅವಕಾಶ” ನೀಡಿದೆ. ಒಂದು ವೇಳೆ...

ಕೆಲಸದ ಸ್ಥಳದಲ್ಲಿ ಜಾತಿ ತಾರತಮ್ಯದ ಬಗ್ಗೆ ರಾಜ್ಯಸಭೆಯಲ್ಲಿ ಖರ್ಗೆ ಕಳವಳ; ಒಡಿಶಾ ಅಂಗನವಾಡಿ ಘಟನೆ ಉಲ್ಲೇಖ

ಕೆಲಸದ ಸ್ಥಳಗಳಲ್ಲಿ ಆಗುತ್ತಿರುವ ಜಾತಿ ತಾರತಮ್ಯದ ಕುರಿತು ರಾಜ್ಯಸಭೆಯಲ್ಲಿ ಗುರುವಾರ (ಫೆ.12) ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು. ಒಡಿಶಾದ ಅಂಗನವಾಡಿಯೊಂದರಲ್ಲಿ ದಲಿತ ಮಹಿಳೆ ತಯಾರಿಸಿದ ಆಹಾರವನ್ನು...

ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ...

‘ಆಕೆಯ ಜೀವ ಮುಖ್ಯ’: ಅಮೆರಿಕದ ಪೊಲೀಸ್ ಅಧಿಕಾರಿ ವೇಗದ ಚಾಲನೆಯಿಂದ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿನಿಯ ಕುಟುಂಬಕ್ಕೆ 260 ಕೋಟಿ ಪರಿಹಾರ

2023 ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಚಾಲನೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಡಿಕ್ಕಿ ಹೊಡೆದ ಕಾರಣ ಸಾವನ್ನಪ್ಪಿದ ಭಾರತದ 23 ವರ್ಷದ ಪದವೀಧರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ ಸಿಯಾಟಲ್ ನಗರವು...

ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

ಲೋಕಸಭೆ ಅಧಿವೇಶನದಲ್ಲಿ ಗುರುವಾರ (ಫೆ.12) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಿಲುವಳಿ ಸೂಚನೆ ಸಲ್ಲಿಸಿದ್ದು, ಅವರ ಸಂಸತ್ತಿನ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್...

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ಶಿವಂ ಮಿಶ್ರಾ ಬಂಧನ

2026 ಫೆಬ್ರವರಿ 8, ಭಾನುವಾರದಂದು ವಿಐಪಿ ರಸ್ತೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದ ಹೈ ಪ್ರೊಫೈಲ್ ಲ್ಯಾಂಬೋರ್ಗಿನಿ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು...

ಫೆಬ್ರವರಿ 12 ರಂದು ಭಾರತ್ ಬಂದ್| ಹಲವು ರಾಜ್ಯಗಳಲ್ಲಿ ಬಂದ್ ಗೆ ಪೂರ್ಣ ಬೆಂಬಲ: ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12, ಗುರುವಾರ ಸಾರ್ವತ್ರಿಕ ಮುಷ್ಕರಕ್ಕೆ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿದೆ. ಕರ್ನಾಟಕದಲ್ಲಿಯೂ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರದ 4...