Homeಮುಖಪುಟಮತ್ತೆ ಕಾಂಗ್ರೆಸ್ ಕೈಹಿಡಿಯಲಿದೆ ಸಿಂಪಲ್ ಮೆಜಾರಿಟಿ

ಮತ್ತೆ ಕಾಂಗ್ರೆಸ್ ಕೈಹಿಡಿಯಲಿದೆ ಸಿಂಪಲ್ ಮೆಜಾರಿಟಿ

- Advertisement -
- Advertisement -

ಕರ್ನಾಟಕದಲ್ಲಿ ಸದ್ಯಕ್ಕಿರುವ ರಾಜಕೀಯ ಪರಿಸ್ಥಿತಿಯನ್ನಾಧರಿಸಿ ಆಯಾ ವಿಧಾನಸಭಾ ಕ್ಷೇತ್ರಗಳ ಜಿದ್ದಾಜಿದ್ದಿ, ಚುನಾವಣಾ ಟ್ರಂಡ್‍ಗಳನ್ನು ಅಧ್ಯಯನ ನಡೆಸಿ, ನಮ್ಮ ಪತ್ರಿಕಾ ತಂಡ ಕ್ಷೇತ್ರವಾರು ನಡೆಸಿದ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‍ಗೆ 117-122, ಬಿಜೆಪಿಗೆ 55-60, ಜೆಡಿಎಸ್‍ಗೆ 34-37 ಮತ್ತು ಇತರರಿಗೆ 3-5 ಸ್ಥಾನಗಳು ಲಭಿಸಬಹುದು.

ನಾನು ಗೌರಿ ತಂಡದ ಸಮೀಕ್ಷೆ

ಮುಖ್ಯವಾಗಿ ತನ್ನ ಪಾರಂಪರಿಕ ಪಾರುಪತ್ಯದ ಹೈದ್ರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿರುವುದಲ್ಲದೇ ಬಿಜೆಪಿಯ ಭದ್ರ ನೆಲೆ ಎಂದು ಪರಿಗಣಿತವಾಗಿದ್ದ, ಲಿಂಗಾಯತ ಪ್ರಾಬಲ್ಯದ ಮುಂಬೈ ಕರ್ನಾಟಕದಲ್ಲೂ ಕೈ ಪಡೆ ಮುಂದಿರುವುದು ಸರಳ ಬಹುಮತಕ್ಕೆ ಸನಿಹವಾಗಿಸಿದೆ. ಕಳೆದ ಬಾರಿಯೂ ಕೈ ಪಾರ್ಟಿ ಈ ಎರಡು ಪ್ರಾಂತ್ಯಗಳಲ್ಲಿ ಗಣನೀಯ ಸಾಧನೆ ಮಾಡಿದ್ದು ಅಧಿಕಾರಕ್ಕೆ ಹತ್ತಿರವಾಗಿಸಿತ್ತು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕಾಂಗ್ರೆಸ್‍ಗೆ ಅದ್ಭುತ ಮೈಲೇಜ್ ತಂದುಕೊಡದೆ ಹೋದರೂ ಯಡಿಯೂರಪ್ಪನವರಿಂದ ಲಿಂಗಾಯತ ಲೀಡರಿಕೆಯನ್ನು ವಿಮುಖಗೊಳಿಸಿರುವುದು ಬಿಜೆಪಿಗೆ ಏಟು ನೀಡುತ್ತಿದೆ. ಅದು ಗಣನೀಯವಲ್ಲ, ಆದರೂ ಕೆಜೆಪಿ-ಬಿಜೆಪಿ-ಬಿಎಸ್‍ಆರ್ ಸಮಾಗಮದ ಆಘಾತವನ್ನು ತಡೆದುಕೊಳ್ಳಬಹುದಾದಷ್ಟು ಶಕ್ತಿಯನ್ನು ಅದು ಕಾಂಗ್ರೆಸ್‍ಗೆ ತುಂಬಿದೆ. ಇನ್ನು ಕರಾವಳಿ ಪ್ರಾಂತ್ಯದಲ್ಲಿ ಕಳೆದ ಆಘಾತವೇ ಬಿಜೆಪಿಗೆ ಈ ಸಲವೂ ಮುಂದುವರೆಯುವ ಲಕ್ಷಣಗಳಿವೆ. ಇನ್ನು ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಅತ್ಯದ್ಭುತವಾಗಿ ಚೇತರಿಸಿಕೊಳ್ಳುವ ಪರಿಸ್ಥಿತಿ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳು ಹಿಂದೆಂದಿಗಿಂತಲೂ ಹೆಚ್ಚು ದೃವೀಕರಣಗೊಂಡ ದೇವೇಗೌಡರ ಬೆನ್ನಿಗೆ ನಿಂತಿರುವುದರಿಂದ ಇಲ್ಲಿ ಕೈಗೆ ಕಳೆದ ಬಾರಿಗಿಂತ ಅಲ್ಪ ಹಿನ್ನಡೆಯಾಗಬಹುದು. ಆದರೂ ಅದು ಸರಳ ಬಹುಮತದಿಂದ ಕಾಂಗ್ರೆಸ್ಸನ್ನು ದೂರಕ್ಕೆ ತಳ್ಳಲಾರದು. ಬೆಂಗಳೂರು ಸಿಟಿ ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಮಿಶ್ರ ಪ್ರತಿಫಲ ಕೊಡಲಿದೆ. ಇಲ್ಲಿ ಬಿಜೆಪಿ ಕಾಂಗ್ರೆಸ್‍ಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋದರೂ ಅಚ್ಚರಿಯಿಲ್ಲ.

ಒಟ್ಟಾರೆ ಹೇಳಬೇಕೆಂದರೆ ಬಿಜೆಪಿಯೊಳಗಿನ ನಾಯಕತ್ವದ ಗೊಂದಲಗಳು, ಮೋದಿಯ ಎಂಪಿ ಎಲೆಕ್ಷನ್ ಭರವಸೆಗಳು ಜನರನ್ನು ಭ್ರಮಾ ನಿರಸನಗೊಳಿಸಿರುವುದು, ಕೇಂದ್ರ ಸರ್ಕಾರ ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲವಾಗಿರೋದು, ಕರ್ನಾಟಕದ ಪ್ರಾದೇಶಿಕ ಸವಾಲುಗಳಿಗೆ ಬಿಜೆಪಿ ಸ್ಪಂದಿಸಿದ ನಿರಾಶದಾಯಕ ರೀತಿ, ಕಾಂಗ್ರೆಸ್‍ನೊಳಗೆ ಮಡುಗಟ್ಟಿರುವ ಅಪರೂಪದ ಒಗ್ಗಟ್ಟು, ರಾಜ್ಯ ಸರ್ಕಾರದ ಜನಪ್ರಿಯತೆ, ಪ್ರಧಾನ ಹಗರಣ-ಭ್ರಷ್ಟಾಚಾರ ಮುಕ್ತ ಆಡಳಿತಗಳು ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರುವ ಸಾಧ್ಯತೆಗಳೇ ದಟ್ಟವಾಗಿ ಕಾಣುತ್ತಿವೆ.

ದೇವರಾಜ ಅರಸು

ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಆಡಳಿತ ನಡೆಸಿದ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಪರದಾಡುತ್ತ ಬಂದಿದ್ದವು. ಪ್ರಭುತ್ವ ವಿರೋಧಿ ಅಲೆಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷ ತೇಲಿ ಹೋಗುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. 1978ರ ವಿಧಾನಸಭಾ ಚುನಾವಣೆಯಲ್ಲಿ ಆಗ ಐದು ವರ್ಷಗಳ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿದ್ದ ಮುಖ್ಯಮಂತ್ರಿ ದೇವರಾಜ ಅರಸು ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿತ್ತು. ಅದಾದ ನಂತರದ ದಿನಗಳಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷವೂ ಪುನರಾಯ್ಕೆ ಆಗಿಲ್ಲ. ದೇವರಾಜ ಅರಸು ನಂತರ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದ ಹೆಗ್ಗಳಿಕೆ ಸಿದ್ಧರಾಮಯ್ಯನವರದು. 1978ರಲ್ಲಿ ಅರಸು ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 149 ಸ್ಥಾನ ಪಡೆದಿತ್ತು. ಈಗ ಐದು ವರ್ಷ ಪೂರೈಸಿದ ಸಿದ್ಧರಾಮಯ್ಯ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಹೌದು. ಇತಿಹಾಸ ಮರುಕಳಿಸಲಿದೆ. ಎಷ್ಟೇ ಅಳೆದು ತೂಗಿ ನೋಡಿದರು. ಕಾಂಗ್ರೆಸ್‍ಗೆ ಸರಳ ಬಹುಮತ ಬರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ದುರ್ಬಲ ಹೈಕಮಾಂಡ್‍ಗೆ ಪ್ರತಿಕ್ರಿಯೆಯಾಗಿ ಸ್ಥಳೀಯ ಪ್ರಬಲ ನಾಯಕತ್ವ ರಾಜ್ಯಕ್ಕೆ ಪರ್ಯಾಯ ಎನ್ನುವ ಸಂದೇಶ ಕರ್ನಾಟಕ ಮತ್ತೊಮ್ಮೆ ನೀಡುವ ಸಾಧ್ಯತೆಗಳು ನಿಚ್ಚಳವಾಗಿವೆ. ಸಿದ್ಧರಾಮಯ್ಯನವರ ಅಲೆಯು ‘ಮಾತುಗಾರ’ರ ಮೋಡಿಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಲಿದೆ. ದೆಹಲಿಯಿಂದ ಅಧಿಕಾರ ನಡೆಸುವ ಕೇಂದ್ರದ ನಿಲುವಿಗೆ ಕರ್ನಾಟಕ ಯಾವತ್ತೂ ಸೊಪ್ಪು ಹಾಕಿಲ್ಲ. ದೆಹಲಿ ದೊರೆಗಳಿಗೆ ಕರ್ನಾಟಕ ಖಚಿತ ಉತ್ತರ ನೀಡುತ್ತಲೇ ಬಂದಿದೆ. ಅದೇ ಈ ಬಾರಿಯೂ ಪುನರಾವರ್ತನೆ ಆಗಲಿದೆ. ಕಳೆದ ಸಲಕ್ಕಿಂತ ಮತ ಗಳಿಕೆಯ ಪ್ರಮಾಣದಲ್ಲಿ ಉತ್ತಮ ಪ್ರಗತಿ ತೋರಿಸುವ ಸಾಧ್ಯತೆಗಳಿವೆ. ಆಡಳಿತಾರೂಢ ಕಾಂಗ್ರೆಸ್ ಶೇ. 40ರಷ್ಟು ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗುತ್ತದೆ. ಕೇಂದ್ರ ಗುಪ್ತಚರ ಇಲಾಖೆಯ ವರದಿಯೂ ಸರಳ ಬಹುಮತದ ಸೂಚನೆ ಒದಗಿಸಿದೆ ಎನ್ನಲಾಗುತ್ತಿದೆ. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಸೇರಿದಂತೆ ಹಳೆ ಮೈಸೂರು ಮತ್ತು ಕರಾವಳಿಗಳಲ್ಲಿಯೂ ಕಾಂಗ್ರೆಸ್‍ನ ಸಾಧನೆಯು ಕಳೆದ ಬಾರಿಗಿಂತ ಉತ್ತಮವಾಗಿರಲಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದ ದುರ್ದಿನಗಳನ್ನು ಜನತೆ ಇನ್ನೂ ಮರೆತಿಲ್ಲ. ಕಳೆದ ಬಾರಿ ಸೋಲಿಸಿ ಪಾಠ ಕಲಿಸಿದ್ದ ಮತದಾರ ಈಗ ಮತ್ತೊಮ್ಮೆ ಬಿಜೆಪಿಗೆ ಅದರ ಸ್ಥಾನ ಸೂಚಿಸಲಿದ್ದಾನೆ. ರಾಜ್ಯದಾದ್ಯಂತ ಕಾಂಗ್ರೆಸ್ ಪರವಾಗಿರುವ ಅಭಿಪ್ರಾಯವು ಸರಳ ಬಹುಮತ ತಂದು ಕೊಡುವುದಕ್ಕೆ ಕಾರಣವಾಗಲಿದೆ. ‘ಸುಳ್ಳು’ಗಳ ಮೂಲಕ ಮಾತಿನ ಅರಮನೆ ಕಟ್ಟಲು ಹೊರಟ ‘ಮೋಜು’ಗಾರನಿಗೆ ಕರ್ನಾಟಕ ಸೂಕ್ತ ಉತ್ತರ ನೀಡಲಿದೆ. ಕರ್ನಾಟಕದ ಆಡಳಿತದ ಕೇಂದ್ರ ಬೆಂಗಳೂರೇ ಹೊರತು ದೆಹಲಿ ಅಲ್ಲ ಎಂಬುದು ಮತ್ತೇ ಸಾಬೀತಾಗಲಿದೆ.

ಯಡಿಯೂರಪ್ಪ
ಕುಮಾರಸ್ವಾಮಿ

ವಿರೋಧ ಪಕ್ಷದ ಸ್ಥಾನವನ್ನು ಸರಿಯಾಗಿ ನಿಭಾಯಿಸಲಾಗದ ಬಿಜೆಪಿಯು ನಾಯಕತ್ವದ ಕೊರತೆಯಿಂದ ಬಳಲಿತು. ಮೋದಿಯಂತಹ ಮಾತುಗಾರ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿದರೂ ಸುಸ್ತಾಗುವಷ್ಟು ರ್ಯಾಲಿಗಳನ್ನು ಮಾಡಿದರೂ ಫಲ ನೀಡಲಿಲ್ಲ. ಸಿದ್ಧರಾಮಯ್ಯನವರ ಪರವಾಗಿ ರಾಜ್ಯದಾದ್ಯಂತ ಇರುವ ‘ಅಲೆ’ಯ ಪ್ರಮಾಣ ಕಡಿಮೆ ಮಾಡುವದು ಸಾಧ್ಯವಾಗಲೇ ಇಲ್ಲ. ಬಿಜೆಪಿ ಪಕ್ಷದೊಳಗಿನ ಭಿನ್ನಮತ ಮತ್ತು ದೆಹಲಿ ಹೈಕಮಾಂಡ್ ಅಣತಿಯಂತೆ ನಡೆಯಬೇಕಾದ ಅನಿವಾರ್ಯತೆ ಸಿಲುಕಿದ ಯಡಿಯೂರಪ್ಪ ಅವರು ‘ಪ್ರಮಾಣವಚನ’ ಸ್ವೀಕರಿಸುವ ಭ್ರಮಾತ್ಮಕ ಹೇಳಿಕೆ ನೀಡುವುದಕ್ಕ್ಕೆ ಮಾತ್ರ ಸೀಮಿತವಾಯಿತು. ಚುನಾವಣೆಯ ಪ್ರಚಾರ ಭಾಷಣದಲ್ಲಿಯೇ ‘ಬಜೆಟ್’ ಮಂಡಿಸುವ ಮತ್ತು ಸಂಪುಟದ ಸ್ಥಾನ ಹಂಚುವ ತಮಾಷೆಯ ಪ್ರಸಂಗಗಳು ಯಡಿಯೂರಪ್ಪ ಅವರು ತಲುಪಿದ್ದ ಹತಾಶೆಯ ಸ್ಥಿತಿಯನ್ನು ಬಿಂಬಿಸುವಂತಿತ್ತು. ದೆಹಲಿಯ ನಾಯಕರುಗಳ ಚರಿಸ್ಮಾ ತಮಗೆ ಸಹಾಯವಾಗಬಹುದು ಎಂದು ಕಾದು ಕುಳಿತಿದ್ದ ಬಿಜೆಪಿಯ ರಾಜ್ಯ ಮುಖಂಡರಿಗೆ ಕೇವಲ ಕಾದದ್ದಷ್ಟೇ ಲಾಭವಾಯಿತು. ಯಡಿಯೂರಪ್ಪ ಹೊರತು ಪಡಿಸಿದ ಎರಡನೇ ಸಾಲಿನ ನಾಯಕರೇ ಇಲ್ಲದ ಬಿಜೆಪಿಯ ಸ್ಥಿತಿ ಚಿಂತಾಜನಕವಾಗಿತ್ತು. ಮುಂಚೂಣಿಯಲ್ಲಿದ್ದ ನಾಯಕ ಕೂಡ ಎದೆಗುಂದುವಂತಹ ಬೆಳವಣಿಗೆಗಳನ್ನು ಎದುರಿಸಬೇಕಾಯಿತು. ಆಪ್ತರಿಗೇ ಟಿಕೆಟ್ ಕೊಡಿಸಲಾಗದ ಹತಾಶೆ ಒಂದೆಡೆಯಾದರೆ, ಮತದಾನದ ದಿನ ಹತ್ತಿರವಾದಂತೆ ಹೆಚ್ಚುತ್ತ ಹೋದ ಸಿದ್ಧರಾಮಯ್ಯನವರ ಜನಪ್ರಿಯತೆಯು ಕಾಂಗ್ರೆಸ್ ಪಕ್ಷವನ್ನು ಸರಳ ಬಹುಮತದ ಹಂತಕ್ಕೆ ತಂದು ನಿಲ್ಲಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...