Homeಅಂಕಣಗಳುಸ್ವಾತಂತ್ರ್ಯ ಚಳವಳಿ ಜಲಪಾತದ ಹಳ್ಳಿ ತೊರೆಗಳು

ಸ್ವಾತಂತ್ರ್ಯ ಚಳವಳಿ ಜಲಪಾತದ ಹಳ್ಳಿ ತೊರೆಗಳು

- Advertisement -
- Advertisement -

ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡದೊಡ್ಡ ನಾಯಕರು ಪಾಲ್ಗೊಂಡಂತೆಯೇ ಜನಸಾಮಾನ್ಯರೂ ಭಾಗವಹಿಸುತ್ತಿದ್ದರು. ಆ ಪೈಕಿ ಕೆಲ ಸಾಮಾನ್ಯರ ಪಾತ್ರ ಬಹಳ ರೋಚಕವಾಗಿದೆ.
1932ರಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಎರಡು ಪ್ರಮುಖ ಹೋರಾಟಗಳು ನಡೆದವು. ಅವುಗಳೆಂದರೆ ಕಾರವಾರದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಜಿಲ್ಲೆಯ ಪೂರ್ತಿ ನಡೆದ ಕರ ನಿರಾಕರಣ ಚಳವಳಿ. ಈ ಎರಡೂ ಹೋರಾಟಗಳು ಗುಜರಾತಿನ ದಂಡಿಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಮತ್ತು ಕರನಿರಾಕರÀಣ ಚಳವಳಿಯಷ್ಟೇ ಪ್ರಖರವಾಗಿತ್ತು.
ಕರನಿರಾಕರಣ ಚಳುವಳಿಯಲ್ಲಿ ದೊಡ್ಮನೆಯ ನಾಗೇಶರಾಯರ ಪಾತ್ರ ಮಹತ್ವದ್ದು. ನಾಗೇಶರಾಯರು ರಾಮಕೃಷ್ಣ ಹೆಗ್ಡೆಯವರ ದೊಡ್ಡಪ್ಪ. ಅವರ ಅಣ್ಣ ತಮ್ಮಂದಿರು, ಅವರ ಹೆಂಡತಿಯರು, ಮಕ್ಕಳು ಎಲ್ಲರೂ ಸೆರೆಮನೆ ಕಂಡರು. ಅವರ ಮನೆಗೆÉಲಸಕ್ಕೆ ಖಾಯಂ ಆಗಿ ಇದ್ದ ದೇವಿ ಮತ್ತು ಅವಳ ಗಂಡ ಬಹಳ ಪ್ರಾಮಾಣಿಕ ವ್ಯಕ್ತಿಗಳು. ಎಲ್ಲರೂ ಸೆರೆಮನೆಗೆ ಹೋಗುವುದೆಂದು ತೀರ್ಮಾನ ಮಾಡಿದ ಮೇಲೆ ನಾಗೇಶ ಹೆಗ್ಡೆಯವರು ತಮ್ಮ ಮನೆಯಲ್ಲಿದ್ದ ಎಲ್ಲ ಬೆಳ್ಳಿ ಪಾತ್ರೆಗಳನ್ನು, ಚಿನ್ನದ ಒಡವೆಗಳನ್ನು ದೇವಿಯ ಕೈಗೆ ಒಪ್ಪಿಸಿ ಭದ್ರವಾಗಿ ಇರಿಸಿಕೊಂಡು ತಾವೆಲ್ಲ ಸೆರೆಮನೆಯಿಂದ ಬಂದ ಮೇಲೆ ಹಿಂತಿರುಗಿಸಲು ಹೇಳಿ ಅಂದು ಗಂಟುಕಟ್ಟಿ ದೇವಿ ಕೈಗೆ ಕೊಟ್ಟರು. ನಾಗೇಶ ಹೆಗ್ಡೆಯವರ ಮನೆಮುಂದೆ ಇದ್ದ ಒಂದು ಗುಡಿಸಲಲ್ಲಿ ದೇವಿ ದಂಪತಿಗಳು ವಾಸಿಸುತ್ತಿದ್ದರು. ದೇವಿ, ಅವಳ ಗಂಡ ಹೊರಗೆ ಹೋಗಿದ್ದಾಗ ಗುಡಿಸಲಿನಲ್ಲಿ ಒಂದು ಗುಂಡಿತೋಡಿ ಆ ಒಡವೆ ವಸ್ತುಗಳನ್ನೆಲ್ಲ ಅದರಲ್ಲಿ ಹಾಕಿ ಮುಚ್ಚಿ ಅದರ ಮೇಲೆ ಚಾಪೆ ಹಾಕಿಕೊಂಡು ಆಕೆ ಮಲಗುತ್ತಿದ್ದಳು. ದೊಡ್ಮನೆಯವರೆಲ್ಲರ ಬಂಧನವಾಯಿತು. ಅವಳು ಒಡವೆಗಳ ಸುರಕ್ಷತೆಗಾಗಿ ಸರ್ಪಗಾವಲು ಕಾದಳು. ಅದರೂ ಅವಳಿಗೆ ಒಂದು ಅಳುಕು ಇತ್ತು. ಗಂಡ ಕುಡುಕ ಅವನ ಕಣ್ಣೇನಾದರೂ ಈ ಒಡವೆಗಳ ಮೇಲೆ ಬಿದ್ದರೆ ಎಲ್ಲಿ ತೆಗೆದುಕೊಂಡು ಹೋಗಿ ಮಾರಿಬಿಡುವನೋ ಎಂಬ ಭಯ. ಅದರಿಂದ ದೇವಿ ಅವನಿಲ್ಲದ ವೇಳೆಯಲ್ಲಿ ಗುಡಿಸಲಿನ ಹೊರಗಿದ್ದ ಅರಣ್ಯದಲ್ಲಿ ಒಂದು ಮರದ ಕೆಳಗೆ ಹಳ್ಳತೋಡಿ ಈ ಒಡವೆಗಳನ್ನು ಅದರಲ್ಲಿ ಹಾಕಿ ಮುಚ್ಚಿ ಅದರ ಮೇಲೆ ಹಾಸುಗಲ್ಲು ಇಟ್ಟು ಎಚ್ಚರದಿಂದ ನೋಡಿಕೊಳ್ಳುತ್ತಿದ್ದಳು.
ನಾಗೇಶ ಹೆಗ್ಡೆಯವರ ಮನೆಯವರು ಸೆರೆಮನೆಯಲ್ಲಿ ಒಂದು ವರ್ಷ ಇದ್ದು ಹೋರಬಂದ ಮೇಲೆ ಅವರಿಗೆ ಜೋಪಾನವಾಗಿ ಇರಿಸಿದ್ದ ಒಡವೆ ವಸ್ತುಗಳನ್ನು ಹಿಂದಿರುಗಿಸಿ ದೊಡ್ಮನೆಯವರ ಪ್ರೀತಿ ಆದರಗಳಿಗೆ ಪಾತ್ರಳಾದಳು.
ಅದೇ ಸಮಯದಲ್ಲಿ ಚಳುವಳಿಗೆ ಸಂಬಂಧಪಟ್ಟಂತೆ ಕರಪತ್ರಗಳನ್ನು ಹೊರಡಿಸಲಾಗುತ್ತಿತ್ತು. ಸೈಕ್ಲೋಸ್ಟೈಲ್ ಮಾಡಿ ಕರಪತ್ರಗಳನ್ನು ಸ್ವಯಂಸೇವಕರು ಹಳ್ಳಿಗರ ಮನೆಗಳಿಗೆ ಕಿಟಕಿ ಮೂಲಕ ನಸುಕಿನಲ್ಲಿ ಹಾಕುತ್ತಿದ್ದರು. ಈ ಸೈಕ್ಲೋಸ್ಟೈಲ್ ಮಾಡಿದ ಕರಪತ್ರಗಳನ್ನು ದೊಡ್ಮನೆಯ ನಾಲ್ಕೂ ಕಡೆ ಇರುವ ಸೇತುವೆಗಳ ಕಣ್ಣಲ್ಲಿ ಇಡಲಾಗುತ್ತಿತ್ತು. ಸ್ವಯಂ ಸೇವಕರು ಅದನ್ನು ತೆಗೆದುಕೊಂಡು ಹೋಗಿ ವಿವಿಧ ಗ್ರಾಮಗಳ ಮನೆಗೆ ಹಾಕುತ್ತಿದ್ದರು.
ಕಾಳಿ ಎಂಬುವವಳು ದಿನವೂ ಅರಣ್ಯಕ್ಕೆ ಹೋಗಿ ಸೌದೆ ತಂದು ಮಾರಾಟ ಮಾಡಿ ಹೊಟ್ಟೆ ಹೊರೆಯುತ್ತಿದ್ದಳು. ಕಾಳಿ ಕಾಡಿಗೆ ಹೋಗುವಾಗ ಈ ಸುದ್ದಿ ಪತ್ರಗಳ ಬಂಡಲ್ ತೆಗೆದುಕೊಂಡು ಹೋಗಿ ಸೇತುವೆಯ ಕಣ್ಣಿನಲ್ಲಿ ದಿನಾ ಇಟ್ಟು ಹೋಗುತ್ತಿದ್ದಳು. ಇದು ಅವಳ ದೇಶಸೇವೆ. ಒಂದು ದಿನ ಕಾಳಿ ಈ ಕರಪತ್ರದ ಕಟ್ಟನ್ನು ಸೇತುವೆಯ ಕಣ್ಣಿನಲ್ಲಿ ಇಡುವಾಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಳು. ಈ ಕರಪತ್ರ ಯಾರು ಕೊಟ್ಟರು ಎಲ್ಲಿ ತಯಾರಿಸುತ್ತಾರೆ ಎಂದು ಆಕೆಯನ್ನು ಪೊಲೀಸರು ವಿಚಾರಿಸಿದರು. ಆಕೆ ಬಾಯಿ ಬಿಡಲಿಲ್ಲ. ಆಕೆಯನ್ನು ಹೊಡೆದು ಚಿತ್ರಹಿಂಸೆ ಕೊಟ್ಟರು. ಕಾಳಿ ಮಾತ್ರ ಅವರ ಪ್ರಶ್ನೆಗಳಿಗೆ ಉತ್ತರ ಕೊಡಲೇ ಇಲ್ಲ. ಈ ರೀತಿ ಗಾಂಧೀಜಿಯ ಸ್ವಾತಂತ್ರ್ಯ ಹೋರಾಟಕ್ಕೆ ಮುಗ್ಧ ಹೆಣ್ಣುಮಕ್ಕಳು ಸಹಾಯ ಮಾಡಿದ್ದೂ ಉಂಟು.
ಧಾರವಾಡದಲ್ಲಿ 1942ರಲ್ಲಿ ಬಸಮ್ಮ ಎಂಬ ಹೆಣ್ಣುಮಗಳಿದ್ದಳು. ಅವಳ ಗಂಡ ನಿಧನರಾಗಿದ್ದರು. ಆಕೆ ಕಾಂಗ್ರೆಸ್ ನಾಯಕರೊಬ್ಬರ ಮನೆಯ ಹೊರ ಕೋಣೆಯಲ್ಲಿದ್ದುಕೊಂಡು ಅವರಿವರ ಮನೆಯಲ್ಲಿ ಕಸಮುಸುರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಕಾಂಗ್ರೆಸ್‍ನವರು ಪ್ರಭಾತ್‍ಫೇರಿ ನಡೆಸುತ್ತಿದ್ದ ಕಾಲ ಅದು. ಬಸಮ್ಮ ಧ್ವಜ ಹಿಡಿದುಕೊಂಡು ಘೋಷಣೆ ಕೂಗುತ್ತ ಪ್ರಭಾತ್‍ಪೇರಿಯಲ್ಲಿ ಭಾಗವಹಿಸುತ್ತಿದ್ದಳು. ಲಿಂಗಾಯತ ಸಮುದಾಯದ ಸಾಹುಕಾರರೊಬ್ಬರು ಬಸಮ್ಮನಿಗೆ ಹೇಳಿದರು ‘ಬಸಮ್ಮ ನೀನು ಚಳವಳಿಗೆ ಹೋಗ್ತಾ ಇದ್ದೀಯ ನೀನು ಸತ್ತರೆ ನಿನಗೆ ಮಣ್ಣು ಮಾಡುವುದಕ್ಕೆ ಯಾರು ಬರುವುದಿಲ್ಲ. ನಾಯಿ ನರಿ ತಿಂದು ಹೋಗ್ತದೆ ನಿನ್ನ ಹೆಣವನ್ನು’.
`ಸಾವುಕಾರ್ರೇ ನಾನು ಸತ್ತರೆ ನೀವೇನೂ ಚಿಂತೆ ಮಾಡಬ್ಯಾಡ್ರಿ, ನಾಯಿ ನರಿ ತಿಂದು ಹೋಗಲಿ’ ಎಂದು ಮರುತ್ತರ ನೀಡಿದಳು.
ಆಕೆ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕೆ ಅವಳ ದಸ್ತಗಿರಿ ಆಯಿತು. ನ್ಯಾಯಾಲಯಕ್ಕೆ ಪೊಲೀಸರು ಕರೆದೊಯ್ದರು, ವಿಚಾರಣೆಯಾಯಿತು. ತಪ್ಪೊಪ್ಪಿಕೊಂಡಳು. ನ್ಯಾಯಾಧೀಶ ಈ ಖಟ್ಲೆಯಲ್ಲಿ ಅಪರಾಧಿಗಳಾಗಿದ್ದ ಗಂಡಸರಿಗೆಲ್ಲ ಆರಾರು ತಿಂಗಳು ಶಿಕ್ಷೆ ವಿಧಿಸಿದರು ಬಸಮ್ಮನಿಗೆ ಹೇಳಿದರು:- ‘ನೀನು ಹೆಂಗಸು ಎಂದು 3 ತಿಂಗಳ ಶಿಕ್ಷೆ ವಿಧಿಸಿದ್ದೇನೆ’. ಬಸಮ್ಮ ‘ಸಾಹೇಬ್ರೆ ನಿಮ್ಮ ದಯೆ ದಾಕ್ಷಿಣ್ಯ ಏನೂ ಬೇಡ ಗಂಡಸರಿಗೆ ಕೊಟ್ಟ ಹಾಗೇ ನನಗೂ 6 ತಿಂಗಳು ಶಿಕ್ಷೆ ಕೊಡಿ’ ಎಂದಳು!
ಶ್ರೀನಿವಾಸಯ್ಯ ಎಂಬ ಒಬ್ಬ ಪದವೀಧರರಿದ್ದರು. ನಂಜನಗೂಡಿನಲ್ಲಿ ಅವರು 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಒಂದು ದಿನ ಬೆಂಗಳೂರಿಗೆ ಬಂದು ಜಿಲ್ಲಾ ನ್ಯಾಯಾಧೀಶರ ಕೋರ್ಟ್ ಪ್ರವೇಶ ಮಾಡಿದರು. ಕಕ್ಷಿದಾರರೂ ವಕೀಲರು ಕಿಕ್ಕಿರಿದು ನೆರೆದಿದ್ದರು. ನ್ಯಾಯಾಧೀಶರು ಇನ್ನೂ ತಮ್ಮ ಪೀಠಕ್ಕೆ ಬಂದಿರಲಿಲ್ಲ.
ಶ್ರೀನಿವಾಸಯ್ಯ ನೇರವಾಗಿ ಹೋಗಿ ಜಿಲ್ಲಾಧಿಕಾರಿಗಳ ಕುರ್ಚಿಯಲ್ಲಿ ಕುಳಿತುಬಿಟ್ಟರು. ನ್ಯಾಯಾಧೀಶರು ಬಂದವರು ಶ್ರೀನಿವಾಸಯ್ಯನವರು ತಮ್ಮ ಆಸನದಲ್ಲಿ ಕುಳಿತಿರುವುದನ್ನು ನೋಡಿ ಹಿಂದಕ್ಕೆ ಹೊರಟುಹೋದರು.
ಶ್ರೀನಿವಾಸಯ್ಯ ‘ನಾನು ಸ್ವತಂತ್ರ ಭಾರತದ ಪ್ರಜೆ. ಈ ಕೋರ್ಟನ್ನು ರದ್ದು ಮಾಡಿದ್ದೇನೆ. ಈ ನ್ಯಾಯಾಧೀಶರನ್ನೂ ಡಿಸ್‍ಮಿಸ್ ಮಾಡಿದ್ದೇನೆ’ ಎಂದು ಕೂಗಿದರು.
ಪೊಲೀಸಿನವರು ಬಂದು ಶ್ರೀನಿವಾಸಯ್ಯನವರನ್ನೂ ಬಂಧಿಸಿ ಸೆಂಟ್ರಲ್ ಜೈಲಿಗೆ ಕರೆದುಕೊಂಡು ಹೋದರು.
ಆಗ ಶ್ರೀನಿವಾಸಯ್ಯ ನಾವಿದ್ದ ಬ್ಯಾರಕ್ಕಿನಲ್ಲೇ ಇದ್ದರು. ಕೋರ್ಟಿಗೆ ಹೋಗುವ ದಿನ ಅವರು ಮಲಗಿಬಿಡುತ್ತಿದ್ದರು. ಜಪ್ಪಯ್ಯ ಎಂದರೂ ಮೇಲಕ್ಕೆ ಏಳುತ್ತಿರಲಿಲ್ಲ. ಅದು ಅವರ ಪ್ರತಿಭಟನೆಯ ಶೈಲಿ. ಕೊನೆಗೆ ನಾಲ್ಕೈದು ಮಂದಿ ಪೊಲೀಸರೆ ಅವರನ್ನು ಹೆಗಲಮೇಲೆ ಹೊತ್ತುಕೊಂಡು ಕರೆದೊಯ್ಯುತ್ತಿದ್ದರು. ಕೋರ್ಟ್ ಹಾಲನಲ್ಲೂ ಹಾಗೇ ಕೆಳಗೆ ಮಲಗಿಬಿಡುತ್ತಿದ್ದರು. ವಿಚಾರಣೆಗೆಂದು ಅವರನ್ನು ಕಟಕಟೆಗೆ ಎತ್ತಿ ತಂದು ನಿಲ್ಲಿಸಿದರೆ, ಕಟಕಟೆಯಲ್ಲೇ ಮಲಗಿಬಿಡುತ್ತಿದ್ದರು. ನ್ಯಾಯಾಧೀಶ ಕೂಗಿಕೊಂಡರು ಮಿಸುಗಾಡುತ್ತಿರಲಿಲ್ಲ. ನ್ಯಾಯಾಧೀಶರಾಗಲಿ, ವಕೀಲರಾಗಲಿ ಪ್ರಶ್ನೆ ಕೇಳಿದರೆ `I ಜoಟಿ’ಣ ಚಿಟಿsತಿeಡಿ ಥಿou. ನಾನು ಸ್ವತಂತ್ರ ಭಾರತದ ಪ್ರಜೆ. ನೀವು ನನ್ನ ಸ್ವತಂತ್ರ ದೇಶದ ಜಡ್ಜ್ ಅಲ್ಲ’ ಎಂದುಬಿಡುತ್ತಿದ್ದರು. ಶ್ರೀನಿವಾಸಯ್ಯರಿಗೆ ಪಾಠ ಕಲಿಸಬೇಕೆಂದು ಪೊಲೀಸರು ಕೆಂಪಿರುವೆಯ ಹುತ್ತದ ಗೂಡಿನ ಮೇಲೆ ಅವರನ್ನು ಮಲಗಿಸಿಬಿಡುತ್ತಿದ್ದರು. ಆಶ್ಚರ್ಯವೆಂದರೆ, ಆ ವ್ಯಕ್ತಿ ಅಲ್ಲಿಯೂ ಮಿಸುಗಾಡದೆ ಮಲಗಿ ತನ್ನ ಪ್ರತಿಭಟನೆ ಮುಂದುವರೆಸುತ್ತಿದ್ದರು. ಪೊಲೀಸರಿಗೇ ಸಾಕುಸಾಕೆನಿಸಿದ್ದರು. ಕೊನೆಗೆ ಒಂದು ವರ್ಷದ ನಂತರ ಎಲ್ಲಾ ರಾಜಕೀಯ ಕೈದಿಗಳ ಜೊತೆಗೆ ಅವರನ್ನೂ ಬಿಡುಗಡೆ ಮಾಡಲಾಯ್ತು. ನನ್ನನ್ನೂ ಸಹಾ.
ಹೀಗೆ ಸ್ವಾತಂತ್ರ್ಯ ಚಳವಳಿ ಎನ್ನುವುದು ಲಕ್ಷಾಂತರ ತೊರೆಗಳಿಂದ ಧುಮ್ಮಿಕ್ಕಿದ ಜೋರು ಜಲಪಾತ. ಯಾವುದೋ ಕುಗ್ರಾಮದಲ್ಲಿ, ಮತ್ತೆಲ್ಲೋ ಕಗ್ಗಾಡಿನಲ್ಲಿ ಇಂತಹ ಸಾಕಷ್ಟು ತೊರೆಗಳು ತಮ್ಮದೇ ರೀತಿಯಲ್ಲಿ ಆ ಭೋರ್ಗರೆತಕ್ಕೆ ಕಾಣ್ಕೆ ನೀಡಿವೆ. ಅವರೆಲ್ಲರ ತ್ಯಾಗದ ಒಟ್ಟು ಮೊತ್ತವೇ ಇವತ್ತು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...