Homeರಾಜಕೀಯಈ ಚುನಾವಣೆ ಮತ್ತು ಪರ್ಯಾಯ ರಾಜಕಾರಣ

ಈ ಚುನಾವಣೆ ಮತ್ತು ಪರ್ಯಾಯ ರಾಜಕಾರಣ

- Advertisement -
- Advertisement -

ಸಾವಂತ್ರಿ |

ಬಿಎಸ್ಪಿ ಎನ್.ಮಹೇಶ್

ಈ ಸಾರಿಯ ಚುನಾವಣೆಯ ಫಲಿತಾಂಶವು ಹಣ, ಜಾತಿ, ಧರ್ಮಗಳ ರಾಜಕಾರಣ ಮಾಡುವವರಲ್ಲೇ ಅತ್ಯಂತ ದುಷ್ಟರೂ ಪ್ರತಿಗಾಮಿಗಳು ಯಾರೋ ಅವರ ಪಾಲಾಗಿದೆ. ಮೂರು ಮುಖ್ಯ ರಾಜಕೀಯ ಪಕ್ಷಗಳ ನಡುವಿನ ಸ್ಪರ್ಧೆಯೇ ಪ್ರಧಾನವಾಗಿತ್ತು ಮತ್ತು ಅದರ ಫಲಿತಾಂಶ ಇದನ್ನು ಸಾಬೀತುಪಡಿಸಿದೆ. ಜನಪರ ಚಳವಳಿಗಳ ಪ್ರತಿನಿಧಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಅನುಭವ ಈ ವಿಚಾರದಲ್ಲಿ ಇನ್ನಷ್ಟು ಢಾಳಾಗಿದೆ. ಈ ಬಾರಿ ಹಿರಿಯ ಅನುಭವಿ ಹೋರಾಟಗಾರರ ಜೊತೆಗೆ ಹೊಸ ತಲೆಮಾರಿನ ಯುವಕರೂ ಕೂಡಾ ಚಳವಳಿಯ ಹಿನ್ನೆಲೆಯ ಪಕ್ಷಗಳಿಂದ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಬಹುಜನ ಸಮಾಜ ಪಕ್ಷದ ಪ್ರಮುಖ ನೇತಾರರಾದ ಎನ್.ಮಹೇಶ್‍ರವರು ಕೊಳ್ಳೇಗಾಲದಲ್ಲಿ, ಸ್ವರಾಜ್ ಇಂಡಿಯಾದ ವತಿಯಿಂದ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆಯಲ್ಲಿ, ಬಾಗೇಪಲ್ಲಿಯಲ್ಲಿ ಮಾಜಿ ಶಾಸಕರು ಮತ್ತು ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿಯವರು ಒಂದೋ ಗೆಲ್ಲುತ್ತಾರೆ ಅಥವಾ ಎರಡನೇ ಸ್ಥಾನಕ್ಕೆ ಬರುತ್ತಾರೆ ಎಂದು ಭಾವಿಸಲಾಗಿತ್ತು. ಇವರಲ್ಲಿ ಎನ್.ಮಹೇಶ್ ಅವರು ಗೆದ್ದಿದ್ದಾರೆ ಮತ್ತು ಉಳಿದಿಬ್ಬರು ಎರಡನೇ ಸ್ಥಾನಕ್ಕೆ ಬಂದಿದ್ದಾರೆ.

ಶ್ರೀರಾಮ ರೆಡ್ಡಿ

ಇವರಲ್ಲದೇ ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣಾರೆಡ್ಡಿಯವರು ಸ್ಪರ್ಧಿಸಿದ್ದ ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿಯ ಸಾವಿನಿಂದಾಗಿ ಚುನಾವಣೆ ಮುಂದಕ್ಕೆ ಹೋಗಿದೆ. ಸಿಪಿಐಎಂನ ಮುನೀರ್ ಕಾಟಿಪಳ್ಳ (ಮಂಗಳೂರು ಉತ್ತರ) ಮತ್ತಿತರರು, ಆಮ್ ಆದ್ಮಿ ಪಕ್ಷದಿಂದ ಪೃಥ್ವಿರೆಡ್ಡಿ (ಸರ್ವಜ್ಞನಗರ), ಮೋಹನ್‍ದಾಸರಿ (ಸಿ.ವಿ.ರಾಮನ್ ನಗರ), ಭಾಸ್ಕರ್ ಪ್ರಸಾದ್ (ಮಹದೇವಪುರ) ಮತ್ತಿತರರು ಸ್ಪರ್ಧಿಸಿದ್ದರು. ಸಿಪಿಐಎಂಎಲ್ ರೆಡ್‍ಸ್ಟಾರ್‍ನ ಮಾನಸಯ್ಯನವರು ಲಿಂಗಸುಗೂರಿನಿಂದ, ಎಸ್‍ಯುಸಿಐ ಪಕ್ಷದ ರಾಮಾಂಜಿನಪ್ಪನವರು ಸಂಡೂರಿನಿಂದ, ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾದ ಅಬ್ದುಲ್ ಬಾರಿಯವರು ಕಲಬುರಗಿ ದಕ್ಷಿಣದಿಂದ ಸ್ಪರ್ಧಿಸಿದ್ದು ಇವರಲ್ಲಿ ಕೆಲವರಿಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಇವರುಗಳ ಜೊತೆಗೆ ರಾಜ್ಯದೆಲ್ಲೆಡೆ ಇನ್ನೂ ಹಲವಾರು ಜನ ಚಳವಳಿಯ ಹಿನ್ನೆಲೆಯ ವ್ಯಕ್ತಿಗಳು ಸ್ಪರ್ಧಿಸಿದ್ದರು.

ದರ್ಶನ್ ಪುಟ್ಟಣ್ಣಯ್ಯ

ಇಂತಹವರ ಪೈಕಿ ಇಡೀ ರಾಜ್ಯದಲ್ಲಿ ಗೆದ್ದ ಏಕೈಕ ಅಭ್ಯರ್ಥಿ ಎನ್.ಮಹೇಶ್ ಅವರಾಗಿದ್ದಾರೆ. ಮೇಲುಕೋಟೆಯಲ್ಲಿ ದರ್ಶನ್ ಅವರು 73,779 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು ಮತ್ತು ಶ್ರೀರಾಮರೆಡ್ಡಿಯವರು 51,697 ಮತಗಳನ್ನು ಪಡೆದಿದ್ದಾರೆ. ಉಳಿದಂತೆ ಯಾವ ಅಭ್ಯರ್ಥಿಗಳೂ 2,500 ಮತಗಳನ್ನೂ ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ. ಇದು ಪರ್ಯಾಯ ರಾಜಕಾರಣದ ಕುರಿತು ಗಂಭೀರವಾದ ಪ್ರಯೋಗಗಳಲ್ಲಿ ತೊಡಗಿರುವ ಪಕ್ಷಗಳು ಮತ್ತು ಅವರನ್ನು ಬೆಂಬಲಿಸುತ್ತಿರುವ ಚಳವಳಿಗಳನ್ನು ಖಂಡಿತಾ ಚಿಂತನೆಗೆ ದೂಡಬೇಕಿದೆ. ಇಂದಿನ ರಾಜಕೀಯ ಸಂದರ್ಭದಲ್ಲಿ ಜನಪರವಾದ ಅಭ್ಯರ್ಥಿಗಳು ಸ್ಪರ್ಧಿಸುವುದರಿಂದ ಬಿಜೆಪಿಗೆ ಅನುಕೂಲವಾಗಬಹುದು ಎಂಬ ಆತಂಕ ಹಲವರಿಗಿತ್ತು. ವಾಸ್ತವದಲ್ಲಿ ಈ ಎಲ್ಲಾ ಕ್ಷೇತ್ರಗಳಲ್ಲಿ ಯಾರಿಗೂ ಅನುಕೂಲ ಅಥವಾ ಅನಾನುಕೂಲವಾಗದಷ್ಟು ನಗಣ್ಯವಾಗಿ ಇವರುಗಳ ಸ್ಪರ್ಧೆ ಇದ್ದುದು ಏಕೆ ಎಂಬುದು ಗಂಭೀರವಾದ ಸಂಗತಿಯೇ.

ಅದೇ ಸಂದರ್ಭದಲ್ಲಿ ಗೆದ್ದ ಅಥವಾ ಗೆಲುವಿನ ಸಮೀಪ ಬಂದಿರುವ ಈ ಮೂರು ಕ್ಷೇತ್ರಗಳಲ್ಲಿ ಆ ಸಾಧನೆಗೆ ಏನು ಕಾರಣ ಎಂಬುದನ್ನೂ ನೋಡಬೇಕು. ಈ ಕ್ಷೇತ್ರಗಳಲ್ಲಿ ಆಯಾ ಪಕ್ಷಗಳು/ಸಂಘಟನೆಗಳು ಕನಿಷ್ಠ 20 ವರ್ಷಗಳಿಂದ 50 ವರ್ಷಗಳವರೆಗೆ ಅಸ್ತಿತ್ವದಲ್ಲಿವೆ. ನಿರಂತರವಾಗಿ ಅಲ್ಲಿ ಕ್ಷೇತ್ರಗಳನ್ನು ಮ್ಯಾನೇಜ್ ಮಾಡುತ್ತಿರಲಾಗುತ್ತದೆ. ಉಳಿದವರೆಲ್ಲರೂ ಚುನಾವಣೆಗೆ ಮುಂಚೆ ಅಲ್ಲಿ ಹೋಗಿ ಅಥವಾ ಕೆಲವು ತಿಂಗಳುಗಳ ಪ್ರಚಾರ ನಡೆಸಿದ ಮ್ಯಾಜಿಕ್ ನಿರೀಕ್ಷಿಸಿದವರು. ಈ ಸಾರಿ ಪ್ರಯೋಗಾತ್ಮಕವಾಗಿ ಸ್ಪರ್ಧಿಸಿದ್ದೇವೆಂದು ಹೇಳಿದರೆ ತೊಂದರೆಯಿಲ್ಲ. ಈ ಅನುಭವವೂ ಕೆಲಸಕ್ಕೆ ಬರುತ್ತದೆ. ಆದರೆ, ಚುನಾವಣೆ ನಡೆದ ಮರುದಿನದಿಂದ ಅಲ್ಲಿ ಏನು ಮಾಡುತ್ತಾರೆಂಬುದು ಮುಖ್ಯ. ಅದನ್ನು ಮಾಡದೇ, ತಾವು ನಡೆಸಿದ ಒಂದು ಸಣ್ಣ ಜನವಿಭಾಗಕ್ಕೆ ಸೀಮಿತವಾದ ಚಳವಳಿಯ ಕಾರಣದಿಂದ ತಮ್ಮನ್ನು ಗೆಲ್ಲಿಸಬೇಕೆಂದು ಬಯಸಿದರೆ, ಇತರ ರಾಜಕಾರಣಿಗಳಿಗಿಂತ ಉಡಾಫೆಯಿಂದ ರಾಜಕಾರಣವನ್ನು ತೆಗೆದುಕೊಂಡಿದ್ದಾರೆಂದು ಅರ್ಥವಾಗುತ್ತದೆ.

ಆದರೆ, ನಿರಂತರವಾಗಿ ಜನಪರವಾಗಿದ್ದು ಸರಳವಾಗಿ ಸ್ವಚ್ಛವಾಗಿ ಬದುಕುತ್ತಿರುವ ವೈ.ಎಸ್.ವಿ.ದತ್ತಾರನ್ನೂ ಜನರು ಸೋಲಿಸಿದ್ದಾರೆ. ದತ್ತಾ ಕೆಲಸ ಮಾಡಿಲ್ಲ ಎಂದು ಸ್ಥಳೀಯರು ಹೇಳುತ್ತಾರಂತೆ. ನಿರಂತರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದ ರೈತಸಂಘದ ಕೆ.ಎಸ್.ನಂಜುಂಡೇಗೌಡರು ಸತತವಾಗಿ 6 ಚುನಾವಣೆಗಳಲ್ಲಿ ಸೋತರು. ಸೋತ ಮರುದಿನದಿಂದಲೇ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಕಚೇರಿಗಳಿಗೆ ಅಲೆಯುತ್ತಿದ್ದರು. ಆದರೂ ಸತತವಾಗಿ ಸೋಲಬೇಕಾಗಿ ಬಂದುದು ಅವರನ್ನು ಕಂಗೆಡಿಸಿತ್ತು. ಜೆಡಿಎಸ್ ಎಂಎಲ್‍ಎ ಕಾಂಗ್ರೆಸ್‍ಗೆ ಪಕ್ಷಾಂತರ ಮಾಡುವುದು ಖಾತರಿಯಾದಾಗ, ಜೆಡಿಎಸ್ ಸೇರಿದರು. ಅಲ್ಲಿ ಟಿಕೆಟ್ ದೊರಕುವುದಿಲ್ಲ ಎಂಬುದು ಖಾತ್ರಿಯಾದಾಗ ಬಿಜೆಪಿಗೂ ಹೋಗಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಹಿಂದೊಮ್ಮೆ 2-3 ಸಾವಿರ ಮತಗಳ ಅಂತರದಿಂದ ಸ್ಪರ್ಧಿಸಿ ಸೋಲುಂಡಿದ್ದ ನಂಜುಂಡೇಗೌಡರಿಗೆ ಬೀಳುವ ಮತಗಳ ಪ್ರಮಾಣ ಚುನಾವಣೆಯಿಂದ ಚುನಾವಣೆಗೆ ಕಡಿಮೆಯಾಗುತ್ತಾ ಬಂದಿತ್ತು. ಈ ಸಾರಿ ಬಿಜೆಪಿ ಅಭ್ಯರ್ಥಿಯಾದರೂ 11,326 ಮತಗಳಷ್ಟೇ ಬಿದ್ದವು. ಕೊಳ್ಳೇಗಾಲದಲ್ಲೂ ಯಾವ್ಯಾವ ಅಂಶಗಳು ಗೆಲುವಿಗೆ ಕಾರಣವಾಗಿವೆ ಮತ್ತು ಹಣ ಎಷ್ಟು ಖರ್ಚಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಖಾಸಗಿಯಾಗಿ ಎನ್.ಮಹೇಶ್ ಅವರ ಜೊತೆ ಚರ್ಚಿಸಿಕೊಳ್ಳಬೇಕಿದೆ.

ಆಗ ಪರ್ಯಾಯ ರಾಜಕಾರಣಕ್ಕೆ ಬೇಕಾದ ಪಾಠಗಳು ಸಿಗುತ್ತವೆ ಮತ್ತು ಇಂದಿನ ಕಾಲಮಾನದಲ್ಲಿ ಪರ್ಯಾಯ ರಾಜಕಾರಣ ಸಾಧ್ಯವೇ? ಇಲ್ಲವೇ? ಎಂಬುದು ತಿಳಿಯುತ್ತದೆ. ಈ ಚುನಾವಣಾ ಮಾದರಿಯಲ್ಲಿಯೇ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೇ ಪರ್ಯಾಯ ಸಾಧ್ಯವೇ ಎಂಬುದು ಚರ್ಚೆಯ ಒಂದು ಸಂಗತಿಯಾಗಿದ್ದರೆ, ಪರ್ಯಾಯ ಜನಾಂದೋಲನವಿಲ್ಲದೇ ಪರ್ಯಾಯ ರಾಜಕಾರಣ ಸಾಧ್ಯವೇ ಎಂಬುದು ಇನ್ನೊಂದು ಚರ್ಚಾಸ್ಪದ ಸಂಗತಿಯಾಗಿದೆ. ಇದನ್ನು ಈ ಸಾರಿಯ ಚುನಾವಣೆಯೂ ಸಾಬೀತುಪಡಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...