Homeಅಂಕಣಗಳುಕನ್ನಡ ಸಾಹಿತ್ಯ ಪರಿಷತ್ ನಲ್ಲೊಬ್ಬ ಚೌಕಿದಾರ

ಕನ್ನಡ ಸಾಹಿತ್ಯ ಪರಿಷತ್ ನಲ್ಲೊಬ್ಬ ಚೌಕಿದಾರ

- Advertisement -
- Advertisement -

| ಹನುಮಂತ ಹಾಲಿಗೇರಿ |

ಕೊಳ್ಳೆಹೊಡೆಯುವವರ ಕೈಗೆ ದೇಶವನ್ನು ಕೊಟ್ಟುಬಿಟ್ಟು ನಾನು ದೇಶ ಕಾಯುವ ಚೌಕಿದಾರ ಅಂತ ಹೇಳ್ಕೊಂಡವನ ಟ್ರೋಲ್‍ಗಳನ್ನು ನಾವು ಕಳೆದ ಒಂದು ವಾರದಿಂದ ಗಮನಿಸುತ್ತಿದ್ದೇವೆ. ಅಂಥವನೇ ಇನ್ನೊಬ್ಬ ಚೌಕಿದಾರರಾದ ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿ ಖುರ್ಚಿಯಲ್ಲಿ ಕುಳಿತಿದ್ದಾರೆ. ಬಳಿಗಾರರು ಅಧ್ಯಕ್ಷರಾದ ಮೇಲೆ ಅವರ ಸರ್ವಾಧಿಕಾರದ ಸ್ವಯಂಕೃತ ತಪ್ಪುಗಳು ಒಂದೆರಡಲ್ಲ. ಈಗ ಸೂಕ್ಷ್ಮ ಸಂವೇದನೆಯ ಕವಯತ್ರಿ ರೂಪಾ ಹಾಸನ ಅವರು ಪರಿಷತ್ತಿನ ಅಜೀವ ಸದಸ್ಯತ್ವಕ್ಕೆ ನೀಡಿರುವ ರಾಜಿನಾಮೆ ಪಡೆದುಕೊಂಡು ಮತ್ತೊಮ್ಮೆ ಕನ್ನಡ ಸಾಂಸ್ಕೃತಿಕ ಜೀವಿಗಳಿಂದ ಗೇಲಿಗೊಳಗಾಗಿದ್ದಾರೆ.

ರೂಪಾ ಅವರು ರಾಜಿನಾಮೆ ನೀಡಿದರೆ ನಾನೇನು ಮಾಡಲಿ ಎಂದು ಅವರ ಆಪ್ತರ ಹತ್ತಿರ ಸಮರ್ಥಿಸಿಕೊಳ್ಳುತ್ತಿದ್ದಾರಂತೆ. `ಅವರೇನೋ ರಾಜಿನಾಮೆ ನೀಡಿದರು. ನೀವು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷ, ಯಾವುದನ್ನು ಸ್ವೀಕರಿಸಬೇಕು. ಯಾವುದನ್ನು ಸ್ವೀಕರಿಸಿಬಾರದು ಎಂಬ ಕಾಮನ್ ಸೆನ್ಸ್ ನಿನಗೆ ಇರಬೇಕಲ್ಲವೇ?’ ಎಂದು ಬಳಿಗಾರರ ಆಪ್ತರೇ ಹಿಂದೆಮುಂದೆ ಆಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ರೂಪಾ ಅವರೇನು ತಮ್ಮ ಸ್ವಾರ್ಥ ಸಾಧನೆಗಾಗಿ ರಾಜೀನಾಮೆ ನೀಡಿದವರಲ್ಲ. ಅವರ ರಾಜೀನಾಮೆಯ ಹಿಂದೆ ಕನ್ನಡ ಶಾಲೆಗಳ ಏಳ್ಗೆಯ ಕುರಿತು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತುಗಳ ನಿರ್ಲಕ್ಷ್ಯದ ವಿರುದ್ಧದ ಪ್ರತಿರೋಧದ ದನಿ ಇತ್ತು. ಮನೆಯ ಯಜಮಾನ ದಾರಿ ತಪ್ಪಿದಾಗ ಅವನ ತಪ್ಪನ್ನು ಸರಿಪಡಿಸಿ ಸರಿ ದಾರಿಗೆ ತರುವ ಉದ್ದೇಶದಿಂದ ಕನ್ನಡ ಮನೆಯ ಹಿರಿಮಗಳಾಗಿ ರೂಪಾ ಅವರು ಈ ಪತ್ರವನ್ನು ಬರೆದಿದ್ದರೇನೋ, ರಾಜಿನಾಮೆಯನ್ನು ನೀಡಲೇಬೇಕೆಂಬ ಹಟವೇನು ಅವರಲ್ಲಿ ಇದ್ದಂತಿರಲಿಲ್ಲ. ಆದರೆ, ಬಳಿಗಾರರು ರೂಪಾ ಅವರ ಎತ್ತಿರುವ ಮುಖ್ಯ ಪ್ರಶ್ನೆಗಳಾವುದರ ಬಗ್ಗೆಯೂ ಕಿಂಚಿತ್ ಗಮನ ನೀಡದೇ ಆಯ್ತು ಬೀಡಮ್ಮ ಎನ್ನುವ ದುರಹಂಕಾರಿಯಂತೆ ರಾಜೀನಾಮೆ ಪತ್ರಕ್ಕೆ ಅಂಗೀಕಾರದ ಮುದ್ರೆ ಒತ್ತಿ ತಮ್ಮ ಉದ್ದಟತನ ಮೆರೆದಿದ್ದಾರೆ.

ರೂಪಾ ಹಾಸನ ಅವರು ಕಸಾಪದ ದುಂದುವೆಚ್ಚವನ್ನು ಮತ್ತು ಕನ್ನಡಪರ ನಿಷ್ಕಾಳಜಿಯನ್ನು ಪ್ರಶ್ನಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಚಂಪಾ ಅವರು ಅಧ್ಯಕ್ಷರಾಗಿದ್ದಾಗಲೂ ಹೀಗೆಯೇ ಅಜೀವ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಕಳಿಸಿದ್ದರು. ಆದರೆ, ಒಬ್ಬ ಹಿರಿಯ ಜೀವಪರ ಕಾಳಜಿಯ ಸಾಹಿತಿಯೂ ಆಗಿರುವ ಚಂಪಾ ಅವರು ರೂಪಾ ಅವರನ್ನು ಕರೆಸಿಕೊಂಡು “ನಿನ್ನ ಅಜೀವ ಸದಸ್ಯತ್ವದ ರಾಜೀನಾಮೆಯನ್ನು ಸ್ವೀಕರಿಸಲು ನಾನೇನು ಅಜೀವ ಅಧ್ಯಕ್ಷನೇ. ಇನ್ನೆರಡು ವರ್ಷ ಅಷ್ಟೆ ನನ್ನ ಆಟ. ನಾನೆ ಅಜೀವ ಅಧ್ಯಕ್ಷನಲ್ಲವೆಂದ ಮೇಲೆ ನಾನ್ಹೇಗೆ ನಿನ್ನ ರಾಜೀನಾಮೆ ತೆಗೆದುಕೊಳ್ಳಲಿಕ್ಕಾಗುತ್ತೆ, ಆಗೂದಿಲ್ಲ. ಆದ್ರೆ ನೀನು ಎತ್ತಿರುವ ಪ್ರಶ್ನೆಗಳೆಲ್ಲವೂ ಮೌಲಿಕವಾದವು. ಕನ್ನಡ ಶಾಲೆಗಳ ಮುಚ್ಚುತ್ತಿರುವುದನ್ನು ನಾನು ವಿರೋಧಿಸುತ್ತೇನೆ. ಸರಕಾರದೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ” ಎಂದು ಸಮಾಧಾನ ಮಾಡಿ ಕಳಿಸಿದ್ದರಂತೆ. ಆದರೆ, ಬಳಿಗಾರರು ಮಾತ್ರ ರೂಪಾ ಅವರ ಯಾವ ಪ್ರಶ್ನೆಗಳಿಗೂ ತಲೆ ಕೆಡಿಸಿಕೊಳ್ಳದೆ ರಾಜೀನಾಮೆಯನ್ನು ಸ್ವೀಕರಿಸುವ ಮೂಲಕ ಕಸಾಪದ ಅಜೀವ ಅಧ್ಯಕ್ಷರಾದವರಂತೆ ವರ್ತಿಸಿದ್ದಾರೆ. ಅವರ ಅಧಿಕಾರ ದಾಹದ ಬಗ್ಗೆ ಗೊತ್ತಿರದ್ದೇನಿಲ್ಲ. ಮೂರು ವರ್ಷದ ಅವಧಿಯನ್ನು ಬೈಲಾ ತಿದ್ದುಪಡಿ ಮಾಡಿಸಿಕೊಂಡು ಐದು ವರ್ಷಕ್ಕೆ ಏರಿಸಿಕೊಂಡಿರುವ ಅವರು ಅಜೀವ ಅಧ್ಯಕ್ಷಗಿರಿಗೂ ಏನಾದ್ರೂ ಹುನ್ನಾರ ಮಾಡಿದ್ರೂ ಮಾಡುವವರೇ ಎಂದು ಅವರ ಪಟಾಲಮ್ಮಿನ ಬಳಗದವರೇ ಮಾತಾಡಿಕೊಳ್ಳುತ್ತಿದ್ದಾರೆ.

ಮನು ಬಳಿಗಾರರ ಸರ್ವಾಧಿಕಾರಿ ಉದ್ದಟತನಗಳು ಒಂದೆರಡಲ್ಲ ಮತ್ತು ಇದೇ ಮೊದಲಲ್ಲ. ಈ ಹಿಂದೆ ಹಿರಿಯರಾದ ಎಂ.ಎಂ.ಕಲ್ಬುರ್ಗಿಯವರು ಹತ್ಯೆಯಾದಾಗ, ಆ ಹತ್ಯೆಯನ್ನು ವಿರೋಧಿಸಿ ಯುವ ಬರಹಗಾರರು ಕಸಾಪದ ಅರಳು ಪ್ರಶಸ್ತಿಯನ್ನು ವಾಪಸ್ ಮಾಡಿ ಪ್ರತಿಭಟನೆ ಮಾಡಿದ್ದರು. ಆಗ ಇದೇ ಬಳಿಗಾರರು “ಈ ಹುಡುಗರು ಪ್ರಚಾರಕ್ಕಾಗಿ ಇಂಥ ಅಗ್ಗದ ಗಿಮಿಕ್ ಮಾಡುತ್ತಿದ್ದಾರೆ” ಎಂದು ಲೂಜುಲೂಜಾಗಿ ಮಾತನಾಡುವ ಮೂಲಕ ತಮ್ಮ ಮರ್ಯಾದೆ ಕಳೆದುಕೊಂಡಿದ್ದರು. ತಮ್ಮ ಅಧಿಕಾರದ ಅವಧಿ ಮುಗಿಯಲು ಬಂದಾಗ ಕಸಾಪದ ಬೈಲಾವನ್ನೇ ಬದಲಾಯಿಸಿ ಮೂರು ವರ್ಷದ ಅವಧಿಯನ್ನು ಐದು ವರ್ಷಕ್ಕೆ ಏರಿಸಿಕೊಂಡರು. ಬೈಲಾ ಬದಲಾಯಿಸಿ ಐದು ವರ್ಷ ಮಾಡಿದ್ದು ಕಾನೂನು ಪ್ರಕಾರ ತಪ್ಪೇನೂ ಅಲ್ಲ, ಆದರೆ, ನಿಮಗೆ ಆತ್ಮಸಾಕ್ಷಿ ಅನ್ನೋದಿದ್ರೆ ಈಗ ಖುರ್ಚಿಯಿಂದ ಕೆಳಗಿಳಿಯಿರಿ. ಮುಂದಿನ ಅಧಿಕಾರಾವಧಿಯ ಅಧ್ಯಕ್ಷರು ಬೇಕಾದರೆ ಐದು ವರ್ಷ ಖುರ್ಚಿಯಲ್ಲಿರಲಿ ಎಂಬ ಪ್ರಜ್ಞಾವಂತರ ಕೂಗಿಗೆ ಬಳಿಗಾರರು ಕಿವಿಗೊಡುತ್ತಲೇ ಇಲ್ಲ.

ಇನ್ನು ಇತ್ತೀಚೆಗೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ವಾನಗಳಂತೂ ಒಂದೆರಡಲ್ಲ. ಆರಂಭದಲ್ಲೇ ಸುಮಂಗಲಿಯರಿಂದ ಪೂರ್ಣಕುಂಭ ಮೆರವಣಿಗೆ ಎಂಬ ಕಂದಾಚಾರದ ವಿರುದ್ಧ ರಾಜ್ಯಾದ್ಯಂತ ಪ್ರತಿರೋಧ ಬುಗಿಲೆದ್ದರೂ ತಮ್ಮ ನವರಂದ್ರಗಳನ್ನೆಲ್ಲ ಮುಚ್ಚಿಕೊಂಡಿದ್ದ ಈ ಬಳಿಗಾರ ಸಾಹೇಬರು ಕೊನೆ ಕ್ಷಣದಲ್ಲಿ  ತಾವು ಅಂದುಕೊಂಡು ಸುಮಂಗಲಿಯರ ಕುಂಭ ಮೆರವಣಿಗೆಯನ್ನು ನಡೆಸಿ ತಮ್ಮ ಹಟವನ್ನೇ ಸಾಧಿಸಿದರು.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶೀಗ್ಲಿಯವರಾದ ಈ ಬಳಿಗಾರರ ಮೂಲತಃ ಗೌಡ್ಕಿ ಮನೆತನದಿಂದ ಬಂದವರು. ಆ ಜಮೀನ್ದಾರಿಕೆಯ ಪಳಿಯುಳಿಕೆಯೂ ಅವರ ನಡೆನುಡಿಗಳಲ್ಲಿ ಈಗಲೂ ಜೀವಂತವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಉನ್ನತ ಅಧಿಕಾರದ ಹುದ್ದೆಗಳನ್ನು ಕೂಡ ಅದೇ ಗೌಡ್ಕಿ ಗತ್ತಿನಲ್ಲಿಯೇ ನಿಭಾಯಿಸಿದ್ದರು. ಕುಂತರೂ, ನಿಂತರೂ ಭಲೆ, ಭಲೆ ಎನ್ನುವ, ಬಹುಫರಾಕ್ ಹೇಳುವ ಬಾಲಬಡುಕರಿಗೆ ಮಾತ್ರ ಬಹುತೇಕ ಅನುದಾನ ಮತ್ತು ಅವಕಾಶಗಳನ್ನು ನೀಡಿದವರು. ಮುಂದೆ ಈ ಬಾಲಬಡುಕರೇ ಇವರನ್ನು ಕಸಾಪ ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ನೆರವಾದರು. ಕೆಲವು ಪ್ರಜ್ಞಾವಂತ ಹಿರಿಯರು ಕೂಡ ಬಳಿಗಾರರನ್ನು ಚುನಾವಣೆಯ ಸಂದರ್ಭದಲ್ಲಿ ಬೆಂಬಲಿಸಿದ್ದು ವಿಷಾದನೀಯ. ಯಾಕಾದ್ರೂ ಈ ಪುಣ್ಯಾತ್ಮನನ್ನು ಗೆಲ್ಲಿಸಿದೆವೋ ಎಂದು ಈಗ ಅವರೆಲ್ಲ ಮುಖ ಕಿವುಚಿತ್ತಿದ್ದಾರಂತೆ.

ಒಟ್ನಲ್ಲಿ ಈ ಮನುಷ್ಯ ಮನು`ಸ್ಮತಿ’ ಬಳಿಗಾರ್ ಕಸಾಪವವನ್ನು ವಸಾಹತು ಮಾಡಿಕೊಂಡಿದ್ದು ಮತ್ತೊಮ್ಮೆ ಸಾಬೀತಾಗಿದೆ. ಒಂಚೂರು ಸಾಹಿತ್ಯಿಕ ಸಂವೇದನೆ ಇದ್ದಿದ್ದರೆ, ಒಂದಿಷ್ಟು ಕನ್ನಡ ಪುಸ್ತಕಗಳನ್ನು ಓದಿಕೊಂಡಿದ್ದರೆ, ಬಹುಶಃ ಬಳಿಗಾರರು ಹೀಗೆ ಮಾಡುತ್ತಿರಲಿಲ್ಲವೇನೋ. ಈಗಲೂ ಕಾಲ ಮಿಂಚಿಲ್ಲ. ಸಾಂಸ್ಕೃತಿಕ ವಲಯದ ಪ್ರಜ್ಞಾವಂತರೆಲ್ಲರೂ ಒಟ್ಟಾಗಿ ನೀನು ನಿನ್ನ ದುರಾಡಳಿತವನ್ನು ಬಿಡದಿದ್ದರೆ ನಾವೆಲ್ಲರೂ ಸೇರಿ ಅಜೀವ ಸದಸ್ಯತ್ವಕ್ಕೆ ರಾಜಿನಾಮೆಯನ್ನು ನೀಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿ ತಿದ್ದಬೇಕಿದೆ. ಇಲ್ಲದಿದ್ದರೆ ರೂಪಾ ಅವರ ರಾಜೀನಾಮೆ ಅರ್ಥ ಕಳೆದುಕೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...