Homeಅಂಕಣಗಳುಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ

ಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ‘ಅಟ್ಯಾಕ್ ಹನ್ಮಂತ’. ಇದೀಗ ದೊಡ್ ಸುದ್ದಿಗಳು.
ಪರದೇಶಿ ದುಡ್ಡಿಗೆ ಆಸೆಪಟ್ಟು ಬ್ಲೂಜೆಪಿ ಮಾಡ್ತು ಎಡವಟ್ಟು: ಕಾನೂನಿಗೆ ತಂದ್ರು ತಿದ್ದುಪಡಿ, ಕೋರ್ಟ್ ಇಡ್ತು ದೊಡ್ಡ ಧಡಿ.
ಪೊಲಿಟಿಕಲ್ ಪಾರ್ಟಿಗಳು ವಿದೇಶದಿಂದ ಯಾವುದೇ ಬಗೆಯ ದೇಣಿಗೆ ಪಡೆಯುವುದು ಅಪರಾಧ ಎಂದಿದ್ದ ಹಿಂದಿನ ಕಾನೂನನ್ನು ಬದಲಾಯಿಸಿ, ದೇಶದೊಳಗಿನ ಪಕ್ಷಗಳು ಯಾವ ದೇಶದ ಶ್ರೀಮಂತರಿಂದ ಬೇಕಾದರೂ ಕೋಟಿಗಟ್ಟಲೆ ತಿರುಪೆ ಎತ್ತಬಹುದು ಎಂದು ತಿದ್ದುಪಡಿ ಮಾಡಿಕೊಂಡಿದ್ದ ಬ್ಲೂಜೆಪಿ ಪಕ್ಷದ ಮುಖಕ್ಕೆ ಖಡಕ್ ನೊಟೀಸ್ ಕಳಿಸಿರುವ ದೆಹಲಿ ಹೈಕೋರ್ಟ್, ಇಷ್ಟ ಬಂದಂತೆ ಕಾನೂನನ್ನು ಬದಲಿಸಲು, ಕೋರ್ಟ್‍ನ ತೀರ್ಪುಗಳನ್ನು ತಿರುಚಲು ಕಾನೂನು ನಿಮ್ಮಪ್ಪನ ಮನೆಯ ಆಸ್ತಿಯಲ್ಲ ಎಂದು ಕ್ಯಾಕರಿಸಿ ಉಗಿದಿದೆ. ಅಕ್ರಮವಾಗಿ ಅಘೋಷಿತ ಮೂಲಗಳಿಂದ ಪಕ್ಷಕ್ಕೆ ದೇಣಿಗೆ ಪಡೆದು ಜೇಬು ತುಂಬಿಸಿಕೊಂಡಿದ್ದ ಕಮಲ ಪಕ್ಷ ಕಾನೂನಿನ ಕುಣಿಕೆಗೆ ಸಿಲುಕಿ ಮುಖ ಕೆತ್ತಿಸಿಕೊಳ್ಳುವ ಸಂದರ್ಭ ಎದುರಾಗಿದೆ. ಕೈ ಪಕ್ಷ ಕೂಡ ಈ ದಂಧೆಯಲ್ಲಿ ಕಮಲ ಪಕ್ಷಕ್ಕೆ ಸಾಥ್ ಕೊಟ್ಟಿರುವುದೂ ಕೂಡ ಜಗಜ್ಜಾಹೀರಾಗಿದೆ. ಕಾನೂನು ಕುಣಿಕೆಯಿಂದ ಬಚಾವಾಗಲು ಎಫ್.ಸಿ.ಆರ್.ಎ ಕಾಯ್ದೆಗೇ ತಿದ್ದುಪಡಿ ತಂದು ಎಸ್ಕೇಪ್ ರೂಟ್ ಹುಡುಕಿದ್ದ ಊಸರವಳ್ಳಿ ಪಕ್ಷ ಈಗ ಹೆಗ್ಗಣ ಹಿಡಿಯಲು ಇಟ್ಟಿದ್ದ ಇಕ್ಕಳದೊಳಗೆ ಮುಖ ಸಿಗಿಸಿಕೊಂಡು ತಪ್ಪಿಸಿಕೊಳ್ಳಲಾರದೆ ಕುಯ್ಯೋ ಮರ್ರೋ ಎಂದು ನರಳಾಡುತ್ತಿರುವುದು ದೇಶದ ಜನತೆಗೆ ಸಂತಸವುಂಟು ಮಾಡಿದೆ.

*****

ಲಾಚಾರ್ ಸಾಹಿತಿ ‘ಬೊಯ್ರಪ್ಪ’ನ ‘ಮಕ್ಕನ್ ಮಾರ್’ ಅವಾಂತರ: ಈ ಸಲ ಗ್ಯಾರಂಟಿ ವಕ್ಕರಿಸುತ್ತಂತೆ ಜ್ಞಾನಪೀಠಕ್ಕೇ ಗಂಡಾಂತರ
ದೇಶದ ಅತ್ಯುನ್ನತ ಪ್ರಶಸ್ತಿಗಳು ಘೋಷಣೆಯಾಗಲು ಒಂದೆರಡು ತಿಂಗಳು ಇರುವಂತೆಯೇ ಗರ್ಭಧರಿಸಿದ ಬೆಕ್ಕಿನಂತೆ ಕಯೋವ್, ಮಿಯೋವ್ ಎಂದು ಎದ್ದು ಕೂರುವ ಕುಖ್ಯಾತ ಸಾಹಿತಿ ‘ಬೊಯ್ರಪ್ಪ’ನವರು ಪ್ರತೀವರ್ಷದಂತೆ ಈ ವರ್ಷವೂ ತಮ್ಮ ಮನೆಯಿಂದ ಹೊರಗೆ ಬಂದು ನರಳಾಡಲು ಶುರು ಮಾಡಿದ್ದಾರೆ. ದೇಶವನ್ನು ಅಭಿವೃದ್ಧಿಪಡಿಸಲು ಪಕೋಡೇಂದ್ರ ಫಕೀರಪ್ಪನಿಗೆ 5 ವರ್ಷಗಳು ಜುಜುಬಿ, ಕನಿಷ್ಟಪಕ್ಷ ಎರಡು ಶತಮಾನವಾದರೂ ಪಕೋಡಯ್ಯನು ದೇಶದ ಪ್ರಧಾನಿಯಾದರೆ ದೇಶ ಉದ್ದಾರವಾಗುತ್ತದೆ ಎಂಬ ಸುಸ್ಸು ಸ್ಟೇಟ್‍ಮೆಂಟನ್ನು ಮನೆಯೆದುರಿನ ಲೈಟುಕಂಬಕ್ಕೆ ಕಾಲೆತ್ತಿ ಹುಯ್ದು ವಾಪಸ್ ಮನೆಯೊಳಗೆ ಬುಡುಬುಡನೆ ಓಡಿಹೋಗಿ ಹೊಟ್ಟೆ ಮಕಾಡೆ ಮಲಗಿಬಿಟ್ಟರೆಂದು ನಂಬಲರ್ಹ ಗಾಳಿಸುದ್ದಿಗಳು ತಿಳಿಸಿವೆ.

*****

ದೆಹಲಿ ಲೆಫ್ಟಿನೆಂಟ್ ಗೌರ್ನರ್ ಮುಸುಡಿಗೆ ಬಿತ್ತು ಕೋರ್ಟ್ ತಪರಾಕಿ: ಕೇಜ್ರಿವಾಲ್ ಎದುರು ಮಕಾಡೆಬಿದ್ದ ಬ್ಲೂಜೆಪಿ ಬಾಯಿಗೆ ಆನೆಪಟಾಕಿ.
ದೆಹಲಿಯಲ್ಲಿ ಕೇಜ್ರಿವಾಲ್ ಕೈಲಿ ಸಮಾ ಇಕ್ಕಿಸಿಕೊಂಡು ಚರಂಡಿಪಾಲಾಗಿದ್ದ ದ್ವೇಷಭಕ್ತ ಬ್ಲೂಜೆಪಿಗಳು ಮರ್ಮಸ್ಥಳಕ್ಕೆ ಬಿದ್ದ ಸುತ್ತಿಗೆ ಏಟಿಗೂ ಜಗ್ಗದೆ ಕೇಜ್ರಿವಾಲ್ ತಲೆಯ ಮೇಲೆ ಲೆಫ್ಟಿನೆಂಟ್ ಗೌರ್ನರ್ ಎಂಬ ಗಢವಗೂಬೆಯೊಂದನ್ನು ಕೂರಿಸಿ ಬ್ಯಾಕ್‍ಡೋರ್ ಪಾಲಿಟಿಕ್ಸಿಗೆ ಇಳಿದಿದ್ದರು. ಈ ಬಗ್ಗೆ ಸುಪ್ರೀಂಕೋರ್ಟಿಗೆ ಕೇಸು ಜಡಾಯಿಸಿದ್ದ ಕೇಜ್ರಿವಾಲ್ ಈ ವನ್ಯಜೀವಿ ಗಢವಗೂಬೆಯನ್ನು ಯಾವುದಾದರೂ ಅಭಯಾರಣ್ಯಕ್ಕೆ ಎಸೆಯಬೇಕೆಂದು ಹೋರಾಟ ನಡೆಸುತ್ತಿದ್ದರು. ಈ ಕೇಸಿನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ಲೆಫ್ಟಿನೆಂಟ್ ಗೌರ್ನರ್’ ಎಂಬ ಹುದ್ದೆಯೇ ಮೂರುಕಾಸಿನದ್ದು, ಅದಕ್ಕೆ ಯಾರೂ ಬೆಲೆ ಕೊಡುವ ಅಗತ್ಯವಿಲ್ಲ, ಬ್ಲೂಜೆಪಿಯ ಈ ಲಡಕಾಸಿ ಗೌರ್ನರ್ ಜನಪ್ರತಿನಿಧಿಗಳ ಅಧಿಕಾರದಲ್ಲಿ ಮೂಗುತೂರಿಸದೆ ಸರ್ವಾಂಗಗಳನ್ನೂ ಮುಚ್ಚಿಕೊಂಡು ತೆಪ್ಪಗಿರಬೇಕೆಂದು ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಕೇಜ್ರಿವಾಲ್ ಕೈ ಮೇಲಾಗಿ, ಬ್ಲೂಜೆಪಿಯ ವಯೋವೃದ್ಧ ಪಾಖಂಡಿಗಳು ತಾವು ಬಿದ್ದಿದ್ದ ಚರಂಡಿಯೊಳಗಿಂದ ಎದ್ದುಬರಲು ಯತ್ನಿಸುತ್ತಿರುವಾಗಲೇ ಮತ್ತೊಂದು ಮ್ಯಾನ್‍ಹೋಲ್ ಒಳಕ್ಕೆ ತಲೆಕೆಳಗಾಗಿ ಬಿದ್ದಂತಾಗಿದೆಯೆಂಬ ವಿಶ್ಲೇಷಣೆ ಹೊರಬಿದ್ದಿದೆ. ಈ ಕಿತಾಪತಿ ಪಿತೂರಿಯಲ್ಲಿ ಕೈ ಪಕ್ಷದ ಹಾಸ್ಯನಟರೂ ಸೇರಿಕೊಂಡು ಕೇಜ್ರಿವಾಲರನ್ನು ಈ ಸಲ ಕೆಡವಲು ನಡೆಸುತ್ತಿದ್ದ ಸಂಚು ಈ ಮೂಲಕ ವಿಫಲವಾಗಿದ್ದು, ಸದ್ಯಕ್ಕೆ ರಾಜಧಾನಿಯ ಗೋಶಾಲೆಯಲ್ಲಿ ಹಿಂಡಿಬೂಸಾ ಮೆಲ್ಲುತ್ತ ಪೊಗದಸ್ತಾಗಿದ್ದ ಕೈ ಪಕ್ಷದ ದೆಹಲಿ ನಾಯಕರು ಈ ಕೋರ್ಟ್ ತೀರ್ಪು ಕೇಳಿದ ಕೂಡಲೇ ಅಂಬಾ ಎಂದು ಅರಚಿ, ನಾಲಿಗೆ ಹೊರಚಾಚಿ ಮೂರ್ಛೆ ಹೋಗಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

*****

ಕ್ಯಾನ್ಸರ್‍ಗೆ ದನದ ಮೂತ್ರದಲ್ಲಿ ಔಷಧಿ ಕಂಡುಹಿಡಿದ್ರು ಗುಜರಾತಿಗರು: ಫ್ರಥಮ ದರ್ಜೆ ಮುಠ್ಠಾಳರ ಸಂಶೋಧನೆಯಾಯ್ತು ಜಗಜ್ಜಾಹೀರು
‘ಆಧುನಿಕ ವೈದ್ಯಶಾಸ್ತ್ರ’ ಅಂದರೆ ಕೇಜಿಗೆಷ್ಟು, ಅದು ನೋಡಲಿಕ್ಕೆ ಕರ್ರಗಿರುತ್ತೋ ಬೆಳ್ಳಗಿರುತ್ತೋ ಎಂದು ಕೇಳುವ ಪ್ರಥಮದರ್ಜೆ ಮುಠ್ಠಾಳರ ಗುಜರಾತಿನ ಪಡೆಯೊಂದು, ದನದ ಮೂತ್ರದಲ್ಲಿ ಕ್ಯಾನ್ಸರ್‍ಗೆ ಔಷಧಿ ಇದೆಯೆಂಬ ಎದೆಯೊಡೆಯುವ ಹಾಸ್ಯಾಸ್ಪದ ಸಂಶೋಧನೆಯನ್ನು ಮಾಡಿ ಮುಗಿಸಿದ್ದಾರೆ. ಗುಜರಾತಿನ ಜುನಾಗಢ್ ಯೂನಿವರ್ಸಿಟಿಯ ಪ್ರಾಧ್ಯಾಪಕರು ಈ ಕಿಸಲಗೇಡಿ ಕ್ರಿಸ್ತಪೂರ್ವ ಕಾಲದ ತಾಳೆಗರಿ ಸಂಶೋಧನೆ ನಡೆಸಿದ್ದಾರೆ. ಈ ಸುದ್ದಿ ತಿಳಿದ ವಿದೇಶದ ಯೂನಿವರ್ಸಿಟಿಗಳು ಈ ನಾಲ್ಕನೇ ದರ್ಜೆ ಸಂಶೋಧನೆ ನಡೆಸಿದ ಆದಿಮಾನವರು ಶಿಲಾಯುಗ ಕಾಲದಿಂದ 21ನೇ ಶತಮಾನಕ್ಕೆ ಟೈಂಟ್ರಾವೆಲ್ ಮಾಡಿಕೊಂಡು ಬಂದದ್ದಾದರೂ ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸಲು ಅನುಮತಿ ಕೋರಿ ದ್ವೇಷಭಕ್ತರ ಸರ್ಕಾರದ ಅನುಮತಿ ಕೋರಿದ್ದಾರಂತೆ. ಈ ಅರ್ಜಿಯನ್ನು ಓದಿದ ಸನ್ಮಾನ್ಯ ಕೌಡಂಗ್‍ಪ್ರಿಯ ಪಕೋಡೇಂದ್ರ ಅವರು ಆ ಸಂಶೋಧನೆಗಿಂತಲೂ ಮುಂಚೆ ತನ್ನ ತಲೆಯನ್ನೇ ಮೊದಲು ಆಪರೇಷನ್ ಮಾಡಿ ಒಳಗಿರುವುದು ಮಾಂಸಮಜ್ಜೆಯಿಂದಾದ ಮಿದುಳೋ, ಇಲ್ಲಾ.. ದನದ ಸೆಗಣಿಯಿಂದ ತಯಾರಾದ ಮಿದುಳೋ ಎಂದು ಪತ್ತೆ ಮಾಡಿಕೊಡಲು ವಿದೇಶಿ ಸಂಶೋಧಕರನ್ನು ಅಂಗಲಾಚಿದ್ದಾರಂತೆ.

*****

ಹೊಲದಲ್ಲಿ ನಿಂತು ಮಂತ್ರ ಹೇಳಿದ್ರೆ ಬೆಳೆ ಬರುತ್ತಂತೆ
ಗೋವಾ ಬ್ಲೂಜೆಪಿ ಸಚಿವನ ತಲೆಕೆಟ್ಟ ಅಂತೆಕಂತೆ
ರೈತರ ಹೊಲದಲ್ಲಿ ಸರಿಯಾಗಿ ಬೆಳೆ ಬರದೇ ಇದ್ರೆ ರೈತರು ಹೊಲದಲ್ಲಿ ನಿಂತು “ಓಂ ರುಂ ಜುಂ ಸ್ವಾಹಾ, ಓಂ ರುಂ ಜುಂ ಸ್ವಾಹಾ” ಎಂದು ಮಂತ್ರ ಪಠಿಸಿದರೆ ಬೆಳೆ ಚೆನ್ನಾಗಿ ಬರುತ್ತದೆಂದು ಗೋವಾದ ಬ್ಲೂಜೆಪಿ ಪಕ್ಷದ ಕೃಷಿಸಚಿವ ಹೊಸ ಸಂಶೋಧನೆ ಮಾಡಿದ್ದಾನೆ. ಹೀಗೆ ಮಂತ್ರ ಪಠಿಸುವಾಗ ಹಿಂದಿನಿಂದ ಯಾವುದಾದರೂ ಕೊಳಕುಮಂಡಲದ ಹಾವು ಬಂದು ತೊಡೆಗೆ ಕಡಿದರೆ ಓಡಿ ಹೋಗುವುದೋ, ಕಚ್ಚಿಸಿಕೊಂಡು ಅಲ್ಲೇ ನಿಂತು “ಓಂ ರುಂ ಜುಂ ಸ್ವಾಹಾ” ಮಂತ್ರ ಪಠಿಸುವುದೋ ಎಂದು ವದರಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಕೆಂಡಾಮಂಡಲರಾಗಿ ಕೈಲಿ ಹಿಡಿದಿದ್ದ ಮೈಕನ್ನೇ ಕಚಪಚನೆ ಅಗಿದು ‘ಪ್ಯಾಕಪ್’ ಎಂದು ಕಿರುಚಿ ಓಡಿಹೋದರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಎಲ್ಲ ಬಿಟ್ಟು ಈ ಬ್ಲೂಜೆಪಿಯವರಿಗೇ ಈ ಕಜ್ಜಿ ಐಡಿಯಾಗಳು ಹೇಗೆ ಬರುತ್ತವೆ? ಯಾವ ಫ್ಯಾಕ್ಟರಿಯಲ್ಲಿ ಇವರ ಮೆದುಳುಗಳನ್ನು ಪ್ರೊಡಕ್ಷನ್ ಮಾಡಲಾಗುತ್ತದೆ ಎಂದು ಕಕ್ಕಾಬಿಕ್ಕಿಯಾಗಿರುವ ಕೃಷಿ ವಿಜ್ಞಾನಿಗಳು ಸದರಿ ಬ್ಲೂಜೆಪಿ ಕೃಷಿ ಸಚಿವನನ್ನು ಗುಂಪುಗಲಭೆಯಲ್ಲಿ ಹೊಡೆದು ರೈತರ ಹೊಲಗಳಿಂದ ಒದ್ದೋಡಿಸಲು ತಯಾರಾಗಿದ್ದಾರೆಂದು ವರದಿಯಾಗಿದೆ. ಈ ಮನೆಹಾಳು ಐಡಿಯಾ ಮಾಡಿದ ಕೃಷಿಸಚಿವನ ಎಬಡೇಶಿ ಹೇಳಿಕೆಯ ದೆಸೆಯಿಂದ ಕಂಗಾಲಾಗಿರುವ ಗೋವಾದ ರೈತರು, ಹಂದಿ ಆಹಾರವನ್ನು ಪ್ಯಾಕ್ ಮಾಡಿ ವಿದೇಶಗಳಿಗೆ ಸಾಗಿಸುವ ಹಡಗಿನಲ್ಲಿ ಈ ಸಚಿವನನ್ನು ಹಾಕಿ ಯಾವುದಾದರೂ ಆಫ್ರಿಕನ್ ದೇಶಕ್ಕೆ ಆದಷ್ಟು ಬೇಗ ರಫ್ತು ಮಾಡಬೇಕೆಂದು ಒಕ್ಕೊರಲಿನಿಂದ ಸರ್ಕಾರವನ್ನು ಇನ್ನೂ ಆಗ್ರಹಿಸಿಲ್ಲದಿರುವುದು ಆಶ್ಚರ್ಯ ಹುಟ್ಟಿಸಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಇನ್ನಷ್ಟು ಮತ್ತಷ್ಟು ಆಘಾತ ಹುಟ್ಟಿಸುವ ವಾರ್ತೆಗಳಿಗಾಗಿ ಮುಂದಿನವಾರ ಸಿಗೋಣ. ಧನ್ಯವಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...